ಭಾರತೀಯ ಜಾನಪದ ವಿದ್ವಾಂಸೆ, ಲೇಖಕಿ From Wikipedia, the free encyclopedia
ಡಾ. ಟಿ. ಜಯಲಕ್ಷ್ಮಿ (ಹುಟ್ಟು: ೨೩ ಸೆಪ್ಟೆಂಬರ್, ೧೯೫೪), ಜಯಲಕ್ಷ್ಮಿ ಸೀತಾಪುರ (ಆಂಗ್ಲ:Jayalakshmi Seethapura) ಎಂದೇ ಹೆಸರಾದ, ಕನ್ನಡ ಭಾಷೆಯ ಪ್ರಮುಖ ಜಾನಪದ ವಿದ್ವಾಂಸರು.[1] ಜನಪದ ಸಾಹಿತ್ಯ, ಜನಪದ ವೈದ್ಯಪದ್ಧತಿ, ಜನಪದ ಆಚರಣೆಗಳ ಕುರಿತ ವೈಜ್ಞಾನಿಕ ಸಂಶೋಧನೆ ಅವರ ಕಾರ್ಯಕ್ಷೇತ್ರ. ಅವರ ಸೇವೆಯನ್ನು ಪರಿಗಣಿಸಿ, ಕರ್ನಾಟಕ ಜಾನಪದ ಅಕಾಡೆಮಿಯು ೨೦೧೬ನೇ ಸಾಲಿನ ಪ್ರತಿಷ್ಠಿತ ಜೀಶಂಪ ಪ್ರಶಸ್ತಿ ನೀಡಿದೆ.[2]
ಜಯಲಕ್ಷ್ಮಿ ಸೀತಾಪುರ | |
---|---|
ಜನನ | ವಿಶಾಲಾಕ್ಷಿ ಸೆಪ್ಟೆಂಬರ್ ೨೩, ೧೯೫೪ ಸೀತಾಪುರ, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ |
ವೃತ್ತಿ |
|
ಭಾಷೆ | ಕನ್ನಡ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮೈಸೂರು ವಿಶ್ವವಿದ್ಯಾಲಯ |
ಪ್ರಕಾರ/ಶೈಲಿ |
|
ಪ್ರಮುಖ ಪ್ರಶಸ್ತಿ(ಗಳು) | ಜಾನಪದ ಅಕಾಡೆಮಿ ಪ್ರಶಸ್ತಿ |
ಜಯಲಕ್ಷ್ಮಿ ಹುಟ್ಟಿದ್ದು ಮಂಡ್ಯ ಜಿಲ್ಲೆಯ, ಪಾಂಡವಪುರ ತಾಲ್ಲೂಕಿನ ಸೀತಾಪುರ ಎಂಬ ಊರಿನಲ್ಲಿ. ಹುಟ್ಟುಹೆಸರು ವಿಶಾಲಾಕ್ಷಿ. ಗರಡಿಮನೆಯಲ್ಲಿ ಪಳಗುತ್ತಲೇ ಬಾಲ್ಯ ಕಳೆದ ಜಯಲಕ್ಷ್ಮಿ ಉನ್ನತ ಶಿಕ್ಷಣಕ್ಕೆಂದು ಊರು ಬಿಟ್ಟು ಹೊರಬಂದ ಮೊದಲ ಹೆಣ್ಣುಮಗಳಾಗಿದ್ದರು. ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿ ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿದ್ದರು.
ಜೀಶಂಪ, ಪಿ. ಆರ್. ತಿಪ್ಪೇಸ್ವಾಮಿ ಮುಂತಾದವರ ಸ್ಫೂರ್ತಿಯಿಂದ ಜಾನಪದದ ಸೇವೆಗೆ ನಿಂತ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕರಾಗಿ ಸೇರಿದರು.
ಜಯಲಕ್ಷ್ಮಿ ಅವರು ಬರೆದಿರುವ ಜಾನಪದ ಸಂಬಂಧೀ ಕೃತಿಗಳು ಕನ್ನಡದ ಮಟ್ಟಿಗೆ ಗುರುತಾಗುವಂಥವು.[3] ನಮ್ಮ ಸುತ್ತಿನ ಜನಪದ ಕಥನಗೀತೆಗಳು ಕೃತಿಯನ್ನು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಕಟಿಸಿದೆ.[4] ಹಲವಾರು ಕೃತಿಗಳು ಮರೆಯಲ್ಲಿದ್ದ ಜಾನಪದ ಸೂಕ್ಷ್ಮಗಳನ್ನು ಮುನ್ನೆಲೆಗೆ ತಂದಿವೆ.
ಮುಂತಾದವು
ಜಯಲಕ್ಷ್ಮಿ ಸೀತಾಪುರ ರಸ್ತೆ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಹೃದಯಾಘಾತದಿಂದ ೧೬ ಜೂನ್ ೨೦೨೪ರಂದು ಸಾವನ್ನಪ್ಪಿದರು. ಅವರಿಗೆ ೭೦ ವರ್ಷ ವಯಸ್ಸಾಗಿತ್ತು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.