From Wikipedia, the free encyclopedia
ಮೈಸೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ಅಲ್ಲಿನ ಪುರಾತನ ಕಟ್ಟಡಗಳ ಪಟ್ಟಿಯಲ್ಲಿ ಒಂದಾದ ಜಗನ್ಮೋಹನ ಅರಮನೆಯನ್ನು ಹೋಗಿ ನೋಡಬಹುದು. ಈ ಸ್ಥಳವನ್ನು ಮೈಸೂರಿನ ಅರಸರು 1861ರಲ್ಲಿ ನಿರ್ಮಿಸಿದರು ಮತ್ತು 1897ರಲ್ಲಿ ಹಳೆಯ ಮರದ ಅರಮನೆಯೂ ಬೆಂಕಿಗಾಹುತಿಯಾದ ಸಂದರ್ಭದಲ್ಲಿ ಹೊಸ ಅರಮನೆಯನ್ನು ಕಟ್ಟುವವರೆಗೂ ಒಂದು ಅರಸ ಕುಟುಂಬದ ನಿವಾಸವಾಗಿತ್ತು.1902ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ರವರು ಈ ಅರಮನೆಯ ಅಧಿಕಾರವನ್ನು ತೆಗೆದುಕೊಂಡರು ಆ ಸಮಯದಲ್ಲಿ ಭಾರತದ ವೈಸ್ರಾಯ್ ಮತ್ತು ರಾಜ್ಯಪಾಲರಾಗಿದ್ದ ಲಾರ್ಡ್ ಕರ್ಜನ್ ರವರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರವಾಸಿಗರು ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕಲ್ಯಾಣ ಮಹೋತ್ಸವದ ಸಂದರ್ಭದಲ್ಲಿ ಸ್ಥಾಪಿಸಲಾದ ಬೃಹತ್ ಕಲ್ಯಾಣ ಮಂಟಪವನ್ನು ಕಾಣಬಹುದು. ಈ ಮಂಟಪವನ್ನು ದರ್ಬಾರ್ ಹಾಲ್ ಎಂದೂ ಪ್ರಸಿದ್ಧವಾಗಿದ್ದು ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದ ಸ್ಥಳವೆಂದು ಪ್ರಖ್ಯಾತಿಯಾಗಿದೆ.ಈ ಒಳಾಂಗಣವನ್ನು ವಿಶೇಷ ಸಂದರ್ಭಗಳಾದ ಸಂಗೀತ ಕಛೇರಿ, ನಾಟಕ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವಕ್ಕಾಗಿ ಬಳಸಲಾಗುತ್ತಿತ್ತು. ಪ್ರಸ್ತುತವಾಗಿ ಈ ಸ್ಥಳವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನ ಮತ್ತು ದಸರಾ ಹಬ್ಬದ ಸಂದರ್ಭದಲ್ಲಿ ನಡೆಯುವ ಸಮ್ಮೇಳನಗಳಿಗಾಗಿ ಬಳಸಲಾಗುತ್ತಿದೆ. ಇಲ್ಲಿ ಎರಡು ದೊಡ್ಡ ಮರದ ದ್ವಾರಗಳಿದ್ದು ಅವುಗಳ ಮೇಲೆ ವಿಷ್ಣುವಿನ ದಶಾವತಾರವನ್ನು ಕೊರೆಯಲಾಗಿದ್ದು, ಮುಖ್ಯ ನಿರ್ಮಾಣವು ಮೈಸೂರು ಅರಸರ ವಿವಿಧ ಕಲಾಕೃತಿ ಮತ್ತು ಕರಕುಶಲಗಳನ್ನು ಪ್ರದರ್ಶಿಸುತ್ತದೆ.[1]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.