From Wikipedia, the free encyclopedia
ಚೆಂಡು ವಿವಿಧ ಉಪಯೋಗಗಳನ್ನು ಹೊಂದಿರುವ ಒಂದು ದುಂಡನೆಯ ವಸ್ತು (ಸಾಮಾನ್ಯವಾಗಿ ಗೋಳಾಕಾರವಿರುತ್ತದೆ ಆದರೆ ಕೆಲವೊಮ್ಮೆ ಅಂಡಾಕಾರವಿರುತ್ತದೆ). ಇದನ್ನು ಚೆಂಡು ಆಟಗಳಲ್ಲಿ ಬಳಸಲಾಗುತ್ತದೆ. ಈ ಆಟಗಳಲ್ಲಿ ಆಟದ ವೈಖರಿಯು ಆಟಗಾರರು ಚೆಂಡನ್ನು ಹೊಡೆದಾಗ, ಒದ್ದಾಗ ಅಥವಾ ಎಸೆದಾಗ ಚೆಂಡಿನ ಸ್ಥಿತಿಯನ್ನು ಅನುಸರಿಸುತ್ತದೆ. ಚೆಂಡುಗಳನ್ನು ಹೆಚ್ಚು ಸುಲಭವಾದ ಚಟುವಟಿಕೆಗಳಿಗೆ ಕೂಡ ಬಳಸಬಹುದು, ಉದಾಹರಣೆಗೆ ಹಿಡಿಯುವುದು ಅಥವಾ ಜಗ್ಲಿಂಗ್. ಸುಲಭವಾಗಿ ಸವೆತವಾಗದ ವಸ್ತುಗಳಿಂದ ಮಾಡಲ್ಪಟ್ಟ ಚೆಂಡುಗಳನ್ನು ಗುಂಡುಮಣಿಗಳೆಂದು ಕರೆಯಲ್ಪಡುವ ಬಹಳ ಕಡಿಮೆ ತಿಕ್ಕಾಟದ ಬೇರಿಂಗುಗಳನ್ನು ಒದಗಿಸಲು ಶಿಲ್ಪಶಾಸ್ತ್ರದ ಅನ್ವಯಗಳಲ್ಲಿ ಬಳಸಲಾಗುತ್ತದೆ. ಕಪ್ಪು ಸಿಡಿಮದ್ದಿನ ಆಯುಧಗಳು ಉತ್ಕ್ಷೇಪಕಗಳಾಗಿ ಕಲ್ಲು ಮತ್ತು ಲೋಹದ ಚೆಂಡುಗಳನ್ನು ಬಳಸುತ್ತವೆ.
ಇಂದು ಅನೇಕ ಬಗೆಗಳ ಚೆಂಡುಗಳನ್ನು ರಬ್ಬರ್ನಿಂದ ತಯಾರಿಸಲಾಗುತ್ತದಾದರೂ, ಈ ರೂಪವು ಕೊಲಂಬಸ್ನ ಸಮುದ್ರಯಾನಗಳ ನಂತರದವರೆಗೆ ಅಮೇರಿಕ ಖಂಡಗಳ ಹೊರಗೆ ಅಪರಿಚಿತವಾಗಿತ್ತು. ಸ್ಪ್ಯಾನಿಷ್ ಜನರು ಪುಟಿಯುವ ರಬ್ಬರ್ ಚೆಂಡುಗಳನ್ನು (ಆದರೆ ಘನ ಚೆಂಡುಗಳು, ಉಬ್ಬಿಸದ ಚೆಂಡುಗಳಲ್ಲ) ನೋಡಿದ ಮೊದಲ ಯೂರೋಪಿಯನ್ನರಾಗಿದ್ದರು. ಇವನ್ನು ಹೆಚ್ಚು ಗಮನಾರ್ಹವಾಗಿ ಮೀಸೊಅಮೇರಿಕನ್ ಚೆಂಡು ಆಟಗಳಲ್ಲಿ ಬಳಸಲಾಗುತ್ತಿತ್ತು. ಕೊಲಂಬಸ್ಗಿಂತ ಮುಂಚೆ ವಿಶ್ವದ ಇತರ ಭಾಗಗಳಲ್ಲಿನ ವಿವಿಧ ಕ್ರೀಡೆಗಳಲ್ಲಿ ಬಳಸಲಾದ ಚೆಂಡುಗಳನ್ನು ವಿವಿಧ ವಸ್ತುಗಳಿಂದ ತುಂಬಲ್ಪಟ್ಟ ಪ್ರಾಣಿ ಚೀಲಗಳು ಅಥವಾ ಚರ್ಮಗಳಂತಹ ಇತರ ವಸ್ತುಗಳಿಂದ ತಯಾರಿಸಲಾಗುತ್ತಿತ್ತು.
ಪ್ರಾಚೀನ ಗ್ರೀಕರಲ್ಲಿ, ಚೆಂಡು ಆಟಗಳನ್ನು ಹೆಚ್ಚು ಹಿಂಸಕ, ಬಲ ಮತ್ತು ಕ್ರಿಯಾಶೀಲತೆ ಬೇಕಾದ ವ್ಯಾಯಾಮಗಳಿಗೆ ಉಪಯುಕ್ತ ಪೂರಕ ಆಟವೆಂದು ಪರಿಗಣಿಸಲಾಗಿತ್ತು. ಇವನ್ನು ದೇಹವನ್ನು ಬಾಗುವಂತಿಡುವ, ಮತ್ತು ಅದನ್ನು ಸುಲಲಿತವಾಗಿ ಪ್ರದರ್ಶಿಸುವ ಸಾಧನವಾಗಿ ಆಡಲಾಗುತ್ತಿತ್ತು, ಆದರೆ ಸಾಮಾನ್ಯವಾಗಿ ಇವನ್ನು ಹುಡುಗರು ಮತ್ತು ಹುಡುಗಿಯರಿಗೆ ಬಿಡಲಾಗಿತ್ತು. ಚೆಂಡು ಆಟಗಳ ಆಡುವಿಕೆಗೆ ಸಾಮಾನ್ಯ ನಿಯಮಗಳು ಇದ್ದಿದ್ದರೆ, ಅವುಗಳ ಬಗ್ಗೆ ಬಹಳ ಕಡಿಮೆ ಕುರುಹು ಉಳಿದಿದೆ. ಪಾಲಕ್ಸ್ ಎಪಿಸ್ಕೈರಾಸ್ ಎಂದು ಕರೆಯಲ್ಪಡುವ ಆಟವನ್ನು ಉಲ್ಲೇಖಿಸುತ್ತಾನೆ. ಈ ಆಟವನ್ನು ಹಲವುವೇಳೆ ಫುಟ್ಬಾಲ್ನ ಮೂಲವೆಂದು ನೋಡಲಾಗಿದೆ. ಇದನ್ನು ಸಾಲುಗಳಲ್ಲಿ ಇರುತ್ತಿದ್ದ ಎರಡು ತಂಡಗಳು ಆಡುತ್ತಿದ್ದರು ಎಂದು ತೋರುತ್ತದೆ; "ಗೋಲ್"ನ ಯಾವುದೇ ರೂಪವಿತ್ತೆ ಎನ್ನುವುದು ನಿರ್ದಿಷ್ಟವಿಲ್ಲ. ಸಂಪೂರ್ಣವಾಗಿ ಗೋಳಾಕಾರವಾದ ಚೆಂಡನ್ನು ಸೃಷ್ಟಿಸುವುದು ಅಸಾಧ್ಯವಾಗಿತ್ತು;[1] ಮಕ್ಕಳು ಸಾಮಾನ್ಯವಾಗಿ ಹಂದಿಯ ಕೋಶಗಳನ್ನು ಉಬ್ಬಿಸಿ, ಅವನ್ನು ಹೆಚ್ಚು ದುಂಡಗೆ ಮಾಡಲು ಬೆಂಕಿಯ ಬೂದಿಯಲ್ಲಿ ಅವನ್ನು ಸುಟ್ಟು ತಮ್ಮ ಸ್ವಂತ ಚೆಂಡುಗಳನ್ನು ತಯಾರಿಸಿಕೊಳ್ಳುತ್ತಿದ್ದರು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.