ಚಂದ್ರಪ್ರಭ
From Wikipedia, the free encyclopedia
ಚಂದ್ರಪ್ರಭ ಈ ಯುಗದ(ಅವಸರ್ಪಿನಿ) ೮ ನೇಯ ಜೈನ ತೀರ್ಥಂಕರ.[೧] ಜೈನರ ನಂಬಿಕೆಯಂತೆ ಇವರು ಸಿದ್ಧರಾಗಿ ತಮ್ಮ ಕರ್ಮಗಳನೆಲ್ಲ ನಾಶ ಮಾಡಿಕೊಂಡಿದಾರೆ. ಚಂದ್ರಪ್ರಭ (ಅಥವಾ ಚಂದ್ರಪ್ರಭು ಸ್ವಾಮಿ) ಚಂದ್ರಪುರಿಯಲ್ಲಿ ಇಕ್ಷ್ವಾಕು ವಂಶದ ಮಹಸೇನ ರಾಜ ಹಾಗು ರಾಣಿ ಲಕ್ಷ್ಮಣ ದೇವಿಗೆ ಹುಟ್ಟಿದರು.[೧] ಇವರ ಹುಟ್ಟಿದು ಕೃಷ್ಣ ಮಾಸದ ೧೨ನೇಯ ದಿನದ್ದಂದು.
ಪೂರ್ವ ಜನ್ಮ
ಭಾಗವನ್ ಚಂದ್ರಪ್ರಭರವರು ಪೂರ್ವ ಜನ್ಮದಲ್ಲಿ ಧತಕಿಖಂಡದ ಮಂಗಳವತಿಯಾ ರಾಜ ಪದ್ಮ ನಗಿದ್ದರು, ಇಲ್ಲಿ ಇವರಿಗೆ ತೀರ್ಥಂಕರ ನಮ ಗೋತ್ರ ಕರ್ಮ ದಕ್ಕಿತು. ಒಂದು ಜನ್ಮ ದೇವರಾಗಿ ಅನುತ್ತರ ವಿಜಯ ಲೋಕದಲ್ಲಿದು ನಂತರ ರಾಜ ಮಹಸೇನನ ಹೆಂಡತಿ ರಾಣಿಯ ಗರ್ಬಕಿಲಿದರು.[೨]
ತಿರ್ಥಂಕರರಾಗಿ ಜೀವನ
ರಾಣಿ ಗರ್ಭವತಿಯಾಗಿದಾಗ ಒಂದು ದಿನ ಪೂರ್ಣ ಚಂದ್ರನ ತೆಜಸನ್ನು ನೋಡುತ ನಿಂತ್ತಿದ್ದಳು. ಇದ್ದಕ್ಕಿದಂತೆ ಅವಳಿಗೆ ಚಂದ್ರನು ಬೀರುವ ತಂಪುಕಾಂತಿಯ ಕಿರಣವನ್ನು ಸವಿಯುವ ಇಚ್ಚೆಯಾಯಿತು. ರಾಜ ಈಕೆಯ ಬಸರಿ ಬಯಕೆಯನ್ನು ಚಾನಕ್ಯದಿಂದ ಪೂರ್ಣಗೊಳಿಸಿದನು. ಪೌಷ ಮಾಸದ ೧೩ನೇಯ ದಿನದಂದು ರಾಣಿಯು ಪುತ್ರನಿಗೆ ಜನ್ಮಕೊಟಳು, ಮೊಗುವು ಚಂದ್ರನಂತೆ ತೇಜಸ್ವಿ ಯಾಗಿತ್ತು. ಇವನಿಗೆ ಚಂದ್ರಪ್ರಭ(ಚಂದ್ರನ ತೇಜಸ್ಸುಳ್ಳ) ಯಂದು ನಾಮಕರಣ ಮಾಡಲಾಯಿತು. ಚಂದ್ರಪ್ರಭಾನಿಗೆ ಲೌಕಿಕ ಅನಂದಗಳಾಗಲಿ ಅಥವಾ ರಾಜ ವೈಭವಗಳಲಾಗಲಿ ಆಸಕ್ತಿ ಇರಲ್ಲಿಲ. ಸಿಂಹಾಸನವನ್ನೇರಿದರು ಇವರ ಶಾಸನ ಅಲ್ಪಕಳದಾಗಿತ್ತು. ತಮ್ಮ ಯವ್ವನದಲ್ಲಿಯೇ ಸ್ವಯಂ ಮುನಿದೀಕ್ಷೆ ಪಡೆದು ಕೇವಲ ಮೂರು ತಿಂಗಳ ತಪಸ್ಸಿನಿದಲೇ ಸರ್ವಜ್ಞ್ಯರಾದರು. ನಂತರ ದೀರ್ಗಕಾಲ ಜಗತಿನಲ್ಲಿ ನಿಜಧರ್ಮದ ಪ್ರಚಾರ ಮಾಡಿದರು. ಇವರು ಅಂತ್ಯಕಾಲ ಸಮೀಪಿಸಿದಾಗ ಇವರು ಸಮ್ಮೇದಶಿಖರಜಿ ಹೊರಟರು, ಒಂದು ತಿಂಗಳ ಉಪವಾಸದ ನಂತರ ನಿರ್ವಾಣಹೊಂದ್ದಿದರು.[೩]
ಇವನ್ನೂ ಗಮನಿಸಿ
- God in Jainism
- Arhat
- Jainism and non-creationism
ಆಕರಗಳು
Wikiwand - on
Seamless Wikipedia browsing. On steroids.