From Wikipedia, the free encyclopedia
ಗಣಕಯಂತ್ರ ಚಿತ್ರ ನಿರ್ಮಾಣ ಗಣಕ ವಿಜ್ಞಾನದ ಒಂದು ಉಪಕ್ಷೇತ್ರ. ಇಲ್ಲಿ ದೃಶ್ಯ ಮಾಹಿತಿಗಳನ್ನು ಹುಟ್ಟಿಸುವ ಹಾಗೂ ಸಂಸ್ಕರಿಸುವ ಪದ್ಧತಿಗಳ ಅಧ್ಯಯನ ಮಾಡಲಾಗುತ್ತದೆ. ಈ ಪದವನ್ನು ಹೆಚ್ಚಾಗಿ ತ್ರಿ-ಆಯಾಮ ಗಣಕ ಚಿತ್ರಾಭಿವ್ಯಕ್ತದ ಅಧ್ಯಯನಕ್ಕೆ ಬಳಸಿದರೂ ಇದು ದ್ವಿ-ಆಯಾಮ ಗಣಕ ಚಿತ್ರಾಭಿವ್ಯಕ್ತ ಮತ್ತು ಚಿತ್ರ ಸಂಸ್ಕರಣೆಗಳನ್ನೂ ಒಳಗೊಂಡಿದೆ.
ಈ ಕ್ಷೇತ್ರದ ಬೆಳವಣಿಗೆಯಿಂದ ಗಣಕಯಂತ್ರಗಳ ಸಂವಹನ ಇನ್ನೂ ಸರಳಗೊಂಡಿದೆ. ಅಷ್ಟೇ ಅಲ್ಲದೆ ಲಭ್ಯವಿರುವ ಮಾಹಿತಿಗಳನ್ನು ಇನ್ನೂ ಚೆನ್ನಾಗಿ ಅರ್ಥೈಸಿಕೊಳ್ಳಲು ಇದು ಸಹಕಾರಿಯಾಗಿದೆ. ಈ ಕ್ಷೇತ್ರದ ಅಭಿವೃಧ್ಧಿ ವಿವಿಧ ರೀತಿಯ ಮಾಧ್ಯಮಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ ಹಾಗು ಚಿತ್ರೋದ್ಯಮ, ದೃಶ್ಯಕ್ರೀಡೆ ಮತ್ತು ಆನಿಮೇಶನ್ ಉದ್ಯಮಗಳಲ್ಲಿ ಕ್ರಾಂತಿಯುಂಟುಮಾಡಿದೆ.
ಇಲ್ಲಿ ಗಣನಾತ್ಮಕ ತಂತ್ರಗಳಿಂದ ದೃಶ್ಯ ಹಾಗೂ ಜಾಮಿತಿಗೆ ಸಂಭಂದಿತ ಮಾಹಿತಿಗಳನ್ನು ಸಂಸ್ಕರಿಸಲಾಗುತ್ತದೆ. ಈ ಕ್ಷೇತ್ರವು ಚಿತ್ರದ ಕಲಾತ್ಮಕತೆ ಹಾಗೂ ಸೌಂದರ್ಯತೆಯ ಬದಲು ಚಿತ್ರ ನಿರ್ಮಾಣದ ಮತ್ತು ಸಂಸ್ಕರಣದ ಮೂಲ ಗಣನಾತ್ಮಕ ತತ್ವಗಳಿಗೆ ಕೇಂದ್ರೀಕೃತವಾಗಿದೆ.
ಸಂಭದಿತ ವಿಶಯಗಳು ಈ ಕೆಳಗಿನಂತಿವೆ:
ಈ ಕ್ಷೇತ್ರದ ಉಪಯೋಗಗಳು:
ಈ ಕ್ಷೇತ್ರದ ಪ್ರಮುಖ ಉಪ ಕ್ಷೇತ್ರಗಳನ್ನು ವಿಶಾಲವಾಗಿ ಹೀಗೆ ವರ್ಗೀಕರಿಸಬಹುದು:
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.