ಮೀಟರ್
ಉದ್ದವನ್ನು ಅಳೆಯುವ ಮಾಪನ From Wikipedia, the free encyclopedia
ಉದ್ದವನ್ನು ಅಳೆಯುವ ಮಾಪನ From Wikipedia, the free encyclopedia
ಮೀಟರ್ ಎಂಬುದು ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಯಲ್ಲಿ (en:SI units) ಉದ್ದದ ಅಳತೆಯ ಮೂಲ ಪ್ರಮಾಣ. ಐತಿಹಾಸಿಕವಾಗಿ ಇದು ಭೂಮಿಯ ಸಮಭಾಜಕ ವೃತ್ತದಿಂದ ಉತ್ತರ ಧ್ರುವದ ವರೆಗಿನ ದೂರದ ೧೦ ಮಿಲಿಯನ್ರ ಒಂದು ಭಾಗವಾಗಿ ನಿರ್ಧಾರಿತವಾಯಿತು. ಈ ಅಳತೆಯನ್ನು ಫ್ರಾನ್ಸ್ನ ವಿಜ್ಞಾನ ಪರಿಷತ್ತಿನಲ್ಲಿ ಒಂದು ಪ್ಲಾಟಿನಮ್-ಇರಿಡಿಯಮ್ ಲೋಹದ ಪಟ್ಟಿಯ ಮೇಲೆ ಎರಡು ಗೆರೆಗಳಿಂದ ಸೂಚಿತವಾಗಿತ್ತು. ಈಗ ತೂಕ ಮತ್ತು ಅಳತೆಗಳ ಅಂತರರಾಷ್ಟ್ರೀಯ ಪ್ರಾಧಿಕಾರವು ಈ ಅಳತೆಯನ್ನು ಬೆಳಕು ಒಂದು ಕ್ಷಣದ (೨೯೯,೭೯೨,೪೫೮ನೇ) ಭಾಗದಲ್ಲಿ ಚಲಿಸುವ ದೂರವಾಗಿ ನಿರ್ದಿಷ್ಟ ಮಾಡಿದೆ. ಬೆಳಕಿನ ವೇಗ: ಅತ್ಯಂತ ಕರಾರುವಾಕ್ಕಾಗಿ ನಿರ್ವಾತ ಪ್ರದೇಶದಲ್ಲಿ 299,792,458 ಮೀ / ಸೆಕೆಂಡ್ (186,282.397 ಮೈಲಿ / ಸೆಕೆಂಡ್) (ಒಂದು ಸೆಕಂಡಿಗೆ) ಅಳೆಯಲಾಗಿದೆ, ಅದರ ಪ್ರಕಾರ 1ಮೀ = 1/299,792,458 (ಅಂದಾಜು 3ಲಕ್ಷ ಕಿ.ಮೀ.)[1]
SI ಪದ್ಧತಿಯ ಪ್ರಕಾರ ಮೂಲ ಮಾಪನಗಳ ದಶಕಾಂಶಗಳನ್ನು ಇತರ ಮಾಪನಗಳಾಗಿ ಉಪಯೋಗಿಸಲ್ಪಡುತ್ತವೆ. ಈ ರೀತಿಯ ಮಾಪನಗಳ ಪಟ್ಟಿ ಕೆಳಗಿದೆ. ಪ್ರಮುಖ ಮಾಪನಗಳನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸಲಾಗಿದೆ.[2]
ದಶಕಾಂಶ | ಹೆಸರು | ಚಿಹ್ನೆ | ದಶಕಾಂಶ | ಹೆಸರು | ಚಿಹ್ನೆ | |
10−1 | ಡೆಸಿಮೀಟರ್ | dm | 101 | ಡೆಸಿಮೀಟರ್ | dam | |
10−2 | ಸೆಂಟಿಮೀಟರ್ | cm | 102 | ಹೆಕ್ಟೋಮೀಟರ್ | hm | |
10−3 | ಮಿಲಿಮೀಟರ್' | mm | 103 | ಕಿಲೋಮೀಟರ್ | km | |
10−6 | ಮೈಕ್ರೋಮೀಟರ್ | µm | 106 | ಮೆಗಾಮೀಟರ್ | Mm | |
10−9 | ನ್ಯಾನೋಮೀಟರ್ | nm | 109 | ಗಿಗಾಮೀಟರ್ | Gm | |
10−12 | ಪಿಕೋಮೀಟರ್ | pm | 1012 | ಟೆರಾಮೀಟರ್ | Tm | |
10−15 | ಫೆಮ್ಟೋಮೀಟರ್ (fermi) | fm | 1015 | ಪೇಟಾಮೀಟರ್ | Pm | |
10−18 | ಅಟ್ಟೋಮೀಟರ್ | am | 1018 | ಎಕ್ಸಾಮೀಟರ್ | Em | |
10−21 | ಝೆಪ್ಟೋಮೀಟರ್ | zm | 1021 | ಜೆಟ್ಟಾಮೀಟರ್ | Zm | |
10−24 | ಯೊಕ್ಟೋಮೀಟರ್ | ym | 1024 | ಯೊಟ್ಟಾ ಮೀಟರ್ | Ym |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.