ವಾರಣಾಸಿ, ಕಾಶಿ, ಬನಾರಸ್ ಎಂಬ ಹೆಸರಿನಿಂದ ಖ್ಯಾತವಾದ ಈ ನಗರವನ್ನು ಎಲ್ಲ ಹಿಂದೂಗಳು ಅತ್ಯಂತ ಪವಿತ್ರಸ್ಥಾನವನ್ನಾಗಿ ಪರಿಗಣಿಸುತ್ತಾರೆ. ಪ್ರಪಂಚದ ಅತ್ಯಂತ ಹಳೆಯ ಮತ್ತು ಇಂದಿಗೂ ಜನವಸತಿಯಿಂದ ಕೂಡಿದ ನಗರಗಳಲ್ಲಿ ಇದೂ ಒಂದು. ಗಂಗಾ ನದಿಯ ತಟದಲ್ಲಿರುವ ಈ ನಗರವನ್ನು ವರುಣಾ ಮತ್ತು ಅಸಿ ಎಂಬ ನದಿಗಳು ಸುತ್ತುವರೆದಿವೆ. ಈ ನಗರಕ್ಕೆ ಹಲವಾರು ಸಂತರು ಭೇಟಿನೀಡಿದ್ದಾರೆ.
ಕಾಶಿಯ ಮಣಿಕರ್ಣಿಕಾ ಘಾಟ್
Quick Facts ವಾರಾಣಸಿ ವಾರಣಾಸಿवाराणसीوارانسی, Government ...
ವಾರಾಣಸಿ
ವಾರಣಾಸಿ वाराणसी وارانسی
Government
•ಮೇಯರ್
ಕೌಶಲೇಂದ್ರ ಸಿಂಗ್
Population
(2001)
•Total
೩೧,೪೭,೯೨೭ (ಜಿಲ್ಲೆ)
Close
ಸ್ಕಂದ ಪುರಾಣ,ಉಪನಿಷತ್, ಹಾಗು ತಮಿಳಿನ 'ತೇವರಂ'ನಲ್ಲಿ ಇದರ ಉಲ್ಲೇಖ ಬರುತ್ತದೆ. ವಾರಣಾಸಿ ಪಾಲಿ ಆಡು ಭಾಷೆಯಲ್ಲಿ ಬಾರಣಾಸಿ ಆಗಿ ಮುಂದೆ ಬ್ರಟಿಷರ ನಾಲಗೆಯಲ್ಲಿ ಬನಾರಸ್ ಆಯಿತು. ಭಾರತದ ೧೨ ಜ್ಯೋತಿರ್ಲಿಂಗಗಳ ಪೈಕಿ ಇದು ಒಂದು. ಇಲ್ಲಿ ಮರಣಿಸಿದರೆ ಮುಕ್ತಿ ಎಂಬ ನಂಬಿಕೆಯಿದೆ. ವಿದೇಶಿ ಪ್ರವಾಸಿ ಹಗುಯಾನ್ ತ್ಸ್ಯಾಂಗನ ಪ್ರಕಾರ ಪಟ್ಟಣದ ನಡಡುವೆ ನೂರು ಅಡಿ ಎತ್ತರದ ಕಂಚಿನ ಶಿವ ವಿಗ್ರಹವಿತ್ತು. 1033ರಿಂದ 1669ವರರೆಗೆ ಈ ನಗರದ ಮೇಲೆ ಸತತ ದಾಳಿಗಳು ನಡೆದವು. ಸರಿ ಸುಮಾರು ಎಲ್ಲ ಮೊಘಲ ದೊರೆಗಳು ಈ ನಗರದ ಮೇಲೆ ಅನೇಕ ಬಾರಿ ದಾಳಿ ಮಾಡಿದರು.
3500 ವರ್ಷಗಳ ಲಿಖಿತ ಇತಿಹಾಸವಿರುವ ಏಕಮಾತ್ರ ಪಟ್ಟಣವಾಗಿದೆ.
ದೇಸಿ ಭಾಷೆಯಲ್ಲಿ ಮೊದಲ ಬಾರಿಗೆ ರಾಮಾಯಣವನ್ನು ರಚಿಸಿದ ರಾಮಚರಿತಮಾನಸದ ಲೇಖಕ ಗೋಸ್ವಾಮಿ ತುಲಸೀದಾಸರು ಈ ನಗರದಲ್ಲಿ ವಾಸಿಸುತ್ತಿದ್ದರು
ಮಧ್ಯಯುಗದಲ್ಲಿ ಸಮನ್ವಯದ ಸಂದೇಶವನ್ನು ಸಾರಿ, ಡಂಭಾಚಾರವನ್ನು ಖಂಡಿಸಿದ ರಾಮಭಕ್ತ ಸಂತ ಕಬೀರರು ಈ ನಗರದವರು
ಹಿಂದೂ ವಿಶ್ವವಿದ್ಯಾಲಯದ ಸ್ಥಾಪನೆಯನ್ನು ಆಚಾರ್ಯ ಮದನ ಮೋಹನ ಮಾಳವೀಯರು ಕಾಶಿಯಲ್ಲಿ ಮಾಡಿದರು
ಕಾಶಿಯಲ್ಲಿಯ ಪ್ರಸಿದ್ಧ ವಿಶ್ವನಾಥ ದೇವಾಲಯವನ್ನು ಮುಘಲ್ ದೊರೆ ಔರಂಗಜೇಬನು ಧ್ವಂಸ ಮಾಡಿಸಿದನು. ನಂತರದ ವರ್ಷಗಳಲ್ಲಿ ಮರಾಠ ರಾಣಿ ಅಹಲ್ಯಾಬಾಯಿ ಹೋಳ್ಕರ ಸಮೀಪದಲ್ಲಿ ಇದನ್ನು ಪುನಃ ನಿರ್ಮಿಸಿದಳು. ಮೂಲ ದೇವಸ್ಥಾನದ ಅವಶೇಷಗಳ ಮೇಲೆ ’ ಗ್ಯಾನವಾಪಿ ಮಸೀದಿಯನ್ನು’ ಔರಂಗಜೇಬನು ಕಟ್ಟಿಸಿದನು.
ಪ್ರಸಿದ್ಧ ಬಿಂದು ಮಾಧವ ದೇವಾಲಯವನ್ನು ಮುಘಲ್ ದೊರೆ ಔರಂಗಜೇಬನು ಧ್ವಂಸ ಮಾಡಿಸಿದನು.