From Wikipedia, the free encyclopedia
ಬೀಜ ಒಡೆಯುವಿಕೆ ಎಂದರೆ ಒಬ್ಬ ವ್ಯಕ್ತಿ ಅಥವಾ ಪ್ರಾಣಿಯು ವೃಷಣಗಳ ಬಳಕೆಯನ್ನು ಕಳೆದುಕೊಳ್ಳುವ ಯಾವುದೇ ಶಸ್ತ್ರಚಿಕಿತ್ಸಾ ಸಂಬಂಧಿ, ರಾಸಾಯನಿಕ ಅಥವಾ ಇತರ ಕ್ರಿಯೆ. ಬೀಜ ಒಡೆಯುವಿಕೆಯು ಸಂತಾನ ಶಕ್ತಿಹರಣಕ್ಕೆ ಕಾರಣವಾಗುತ್ತದೆ (ಸಂತಾನೋತ್ಪತ್ತಿಯನ್ನು ತಡೆಯುತ್ತದೆ); ಇದು ನಿರ್ದಿಷ್ಟ ಹಾರ್ಮೋನುಗಳ ಉತ್ಪತ್ತಿಯನ್ನು ಬಹಳವಾಗಿ ಕಡಿಮೆಮಾಡುತ್ತದೆ, ಉದಾಹರಣೆಗೆ ಟೆಸ್ಟಾಸ್ಟೆರೋನ್.
ಮಾನವರು ಸಾಮಾನ್ಯವಾಗಿ ಸಂತಾನೋತ್ಪತ್ತಿಗೆ ಉದ್ದೇಶಿತವಾಗಿರದ ಸಾಕು ಪ್ರಾಣಿಗಳ ಬೀಜ ಒಡೆಯುತ್ತಾರೆ. ಸಾಮಾನ್ಯವಾಗಿ ಅನಗತ್ಯ ಅಥವಾ ಅನಿಯಂತ್ರಿತ ಸಂತಾನೋತ್ಪತ್ತಿಯನ್ನು ತಪ್ಪಿಸಲು; ಮಾನವರಿಂದ ಮತ್ತು ಇತರ ಬೆದರಿಕೆಗಳಿಂದ ಹಿಂಡನ್ನು ರಕ್ಷಿಸುವುದು, ಅಥವಾ ಹಿಂಡಿನೊಳಗಿನ ಆಕ್ರಮಣಶೀಲತೆಯಂತಹ (ಉದಾ. ಒಂದು ಜೀವಜಾತಿಯ ಬೀಜ ಒಡೆಯದ ಗಂಡುಗಳ ಗುಂಪುಗಳ ನಡುವಿನ ಕಾದಾಟ) ಲೈಂಗಿಕ ವರ್ತನೆಯ ಇತರ ಅಭಿವ್ಯಕ್ತಿಗಳನ್ನು ಕಡಿಮೆಮಾಡಲು ಅಥವಾ ತಡೆಯಲು; ಅಥವಾ ಪಶುಸಂಗೋಪನೆಯನ್ನು ಹೆಚ್ಚು ಕಷ್ಟಕರ ಮಾಡಬಹುದಾದ ಲೈಂಗಿಕ ವರ್ತನೆಯ ಇತರ ಪರಿಣಾಮಗಳನ್ನು, ಉದಾಹರಣೆಗೆ ಆ ಜಾತಿಯ ಹತ್ತಿರದ ಹೆಣ್ಣುಗಳತ್ತ ಹೋಗಲು ಪ್ರಯತ್ನಿಸುವಾಗ ಗಡಿ/ಬೇಲಿ/ಆವರಣದ ನಾಶವನ್ನು ಕಡಿಮೆಮಾಡಲು ಸಾಕು ಪ್ರಾಣಿಗಳ ಬೀಜ ಒಡೆಯಲಾಗುತ್ತದೆ.
ಸಾಮಾನ್ಯವಾಗಿ ಗಂಡು ಕುದುರೆಗಳ ಬೀಜವನ್ನು ಎಮ್ಯಾಸ್ಕ್ಯುಲೇಟರ್‌ಗಳನ್ನು ಬಳಸಿ ಒಡೆಯಲಾಗುತ್ತದೆ, ಏಕೆಂದರೆ ಬೀಜದ ಗಂಡು ಕುದುರೆಗಳು ಸಾಕಷ್ಟು ಆಕ್ರಮಣಕಾರಿ ಮತ್ತು ತೊಂದರೆದಾಯಕವಾಗಿರುತ್ತವೆ. ಇದೇ ವಿಷಯವು ಗಂಡು ಹೇಸರಗತ್ತೆಗಳಿಗೆ ಅನ್ವಯಿಸುತ್ತದೆ, ಆದರೆ ಅವು ಸಂತಾನಶಕ್ತಿಯನ್ನು ಹೊಂದಿರುವುದಿಲ್ಲ. ತೂಕ ಹೆಚ್ಚಳವನ್ನು ಮತ್ತು ಗೋಮಾಳಗಳಲ್ಲಿ ನಮ್ರತೆಯನ್ನು ಸುಧಾರಿಸಲು ಅಥವಾ ಎತ್ತುಗಳಾಗಿ ಬಳಸಲು ಗಂಡು ದನಗಳ ಬೀಜ ಒಡೆಯಲಾಗುತ್ತದೆ. ಸಂತಾನೋತ್ಪತ್ತಿ ಮಾಡುವ ಪ್ರಾಣಿಗಳನ್ನು ಹಾಗೇ ಇಡಲಾಗುತ್ತದೆ ಮತ್ತು ಸಂತಾನೋತ್ಪತ್ತಿಗೆ ಬಳಸಲಾಗುತ್ತದೆ; ಮಾರಾಟ ಮಾಡಿದಾಗ ಅವು ಹೆಚ್ಚು ಬೆಲೆಗಳನ್ನು ತಂದುಕೊಡಬಹುದು.
ಆಹಾರಕ್ಕಾಗಿ ಬಳಸಲಾದಾಗ ಪ್ರತ್ಯೇಕ ಗಂಡು ಪ್ರಾಣಿಗಳ ಬೆಳವಣಿಗೆ ಅಥವಾ ತೂಕ ಅಥವಾ ಎರಡನ್ನೂ ಹೆಚ್ಚಿಸಲು ಮತ್ತು ಲೈಂಗಿಕವಾಗಿ ವಯಸ್ಕ ಗಂಡುಗಳ ಮಾಂಸದ ಅನಪೇಕ್ಷಣೀಯ ರುಚಿ ಹಾಗೂ ಗಂಧದ ಕಾರಣದಿಂದ ಜಾನುವಾರುಗಳ ಬೀಜ ಒಡೆಯಬಹುದು. ಸಾಕು ಹಂದಿಗಳಲ್ಲಿ ಈ ದೋಷವು ಲೈಂಗಿಕ ವಯಸ್ಕತೆಯ ನಂತರ ಪ್ರಾಣಿಯ ಕೊಬ್ಬು ಅಂಗಾಂಶಗಳಲ್ಲಿ ಸಂಗ್ರಹಿತವಾಗಿರುವ ಆ್ಯಂಡ್ರೊಸ್ಟೆನಾನ್ ಮತ್ತು ಸ್ಕ್ಯಾಟೋಲ್ ಪ್ರಮಾಣಗಳಿಂದ ಉಂಟಾಗುತ್ತದೆ.[1] ಈ ದೋಷವು ಕೇವಲ ಕೆಲವೇ ಸಂಖ್ಯೆಯ ಹಂದಿಗಳಲ್ಲಿ ಕಂಡುಬರುತ್ತದೆ ಮತ್ತು ಇದನ್ನು ತಳಿವರ್ಧನೆ ಆಯ್ಕೆ, ಆಹಾರ ಮತ್ತು ನಿರ್ವಹಣೆಯ ಮೂಲಕ ನಿಯಂತ್ರಿಸಬಹುದು. ಕೊಬ್ಬನ್ನು ಬಿಸಿಮಾಡಿದಾಗ ಇದು ಬಿಡುಗಡೆಯಾಗುತ್ತದೆ ಮತ್ತು ಗ್ರಾಹಕರಿಗೆ ಅಹಿತಕರವೆಂದು ವ್ಯಾಪಕವಾಗಿ ಪರಿಗಣಿಸಲಾಗಿರುವ ವಿಶಿಷ್ಟ ಗಂಧ ಹಾಗೂ ರುಚಿಯನ್ನು ಹೊಂದಿರುತ್ತದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.