From Wikipedia, the free encyclopedia
ಕಲ್ಪನಾ ಚಾವ್ಲ (ಮಾರ್ಚ್ ೧೭, ೧೯೬೨ - ಫೆಬ್ರವರಿ ೧, ೨೦೦೩) - ಮೊದಲ ಭಾರತ ಸಂಜಾತ ಮಹಿಳಾ ಗಗನಯಾತ್ರಿ ಹಾಗೂ ಅಮೆರಿಕನ್ ಪ್ರಜೆ. ಅಂತರಿಕ್ಷ ನೌಕೆ ಕೊಲಂಬಿಯಾ ಭೂವಾತಾವರಣದಲ್ಲಿ ಸುಟ್ಟು ಭಸ್ಮವಾದಾಗ ಮಡಿದ ಏಳು ಗಗನಯಾತ್ರಿಗಳಲ್ಲಿ ಒಬ್ಬರು.
ಕಲ್ಪನಾ ಚಾವ್ಲ | |
---|---|
Nationality | ಭಾರತೀಯ |
Born | ಕರ್ನಾಲ್ ಪಂಜಾಬ್ , ಭಾರತ | ೧೭ ಮಾರ್ಚ್ ೧೯೬೨
Died | February 1, 2003 40) Aboard Space Shuttle Columbia over Texas, U.S. | (aged
Alma mater | ಪಂಜಾಬ್ ಎಂಜಿನೆಯರಿಂಗ್ ಕಾಲೇಜು (ಬಿಇ) ಆರ್ಲಿಂಗ್ಟನ್ನಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯ (ಎಂ ಎಸ್) ಬೌಲ್ಡರ್ನಲ್ಲಿ ಕೊಲೊರಾಡೋ ವಿಶ್ವವಿದ್ಯಾಲಯ (MS, ಪಿ ಎಚ್ ಡಿ) |
Time in space | ೩೧ ದಿನಗಳು, ೧೪ ಗಂಟೆ, ೬೪ ನಿಮಿಷಗಳು[1] |
Selection | 1994 NASA Group |
Missions | STS-87, STS-107 |
Mission insignia | |
Awards | ಟೆಂಪ್ಲೇಟು:CS Medal of Honor |
೧೯೬೨ ಮಾರ್ಚ ೧೭ ರಂದು ಹರಿಯಾಣದಲ್ಲಿನ ಕರ್ನಾಲ್ ಎಂಬ ಊರಿನಲ್ಲಿ ಜನಿಸಿದ ಕಲ್ಪನಾ ಚಾವ್ಲ, ೧೯೮೨ರಲ್ಲಿ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ತಮ್ಮ ಪದವಿಯ ಶಿಕ್ಷಣ ಮುಗಿಸಿದರು. ನಂತರ ಸ್ನಾತಕೋತ್ತರ ಶಿಕ್ಷಣವನ್ನು ಅಮೇರಿಕಾ ದೇಶದಲ್ಲಿ ಅಧ್ಯಯನ ಮಾಡಿದರು.ಅಮೇರಿಕನ್ ಪ್ರಜೆ ಜಾನ್ ಪಿಯರೆ ಹಾರಿಸನ್ ಅವರನ್ನು ವಿವಾಹವಾದರು[2][3][4]
೧೯೯೫ ರಲ್ಲಿ ಕಲ್ಪನಾ, ಅಮೇರಿಕಾದಲ್ಲಿನ ನಾಸಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯನ್ನು ಸೇರಿದರು. ೧೯೯೭ ರ ನವೆಂಬರ್ ೧೯ ರಂದು ಇವರ ಮೊದಲ ಬಾಹ್ಯಾಕಾಶಯಾನ ಪ್ರಾರಂಭವಾಯಿತು. ನಂತರ ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದಂತೆ ಸುಮಾರು ೮೦ ಸಂಶೋಧನೆಗಳಲ್ಲಿ ಕಲ್ಪನಾ ನಿರತರಾಗಿದ್ದರು.
೨೦೦೩ರ ಫೆಬ್ರವರಿ ೧-ರಂದು ಕೊಲಂಬಿಯಾ ಆಕಾಶನೌಕೆ ಎಸ್.ಟಿ.ಎಸ್.-೮೭ರಲ್ಲಿ ಗಗನಯಾತ್ರೆ ಮುಗಿಸಿ ಭೂಮಿಗೆ ಮರಳುವಾಗ,ತಾಂತ್ರಿಕ ದೋಷದಿಂದಾಗಿ ಸಂಭವಿಸಿದ ಅಪಘಾತದಲ್ಲಿ ಮೃತರಾದರು.ಈ ನೌಕೆಯಲ್ಲಿ ಇವರೊಂದಿಗೆ ಇತರ ಆರು ಗಗನಯಾನಿಗಳಿದ್ದರು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.