ಕರಗುವ ತಾಪಮಾನ (melting point)ಎಂದರೆ ಒಂದು ಘನ ವಸ್ತುವು ತನ್ನ ಸ್ಥಿತಿಯನ್ನು ಬದಲಿಸಿ ದ್ರವರೂಪಕ್ಕೆ ತಿರುಗಲು ಬೇಕಾಗುವ ತಾಪಮಾನ.ಈ ತಾಪಮಾನದಲ್ಲಿ ವಸ್ತುವಿನ ಘನ ಮತ್ತು ದ್ರವರೂಪಗಳು ಸಮತೋಲನದಲ್ಲಿರುತ್ತವೆ.ಕರಗುವ ತಾಪಮಾನವು ಒತ್ತಡವನ್ನು ಅನುಸರಿಸಿರುತ್ತದೆ.ಆದುದರಿಂದ ಕರಗುವ ತಾಪಮಾನವನ್ನು ಸೂಚಿಸುವಾಗ ಪ್ರಮಾಣೀಕೃತ ಉಷ್ಣಾಂಶವನ್ನು ಪರಿಗಣಿಸುತ್ತಾರೆ.ಇದರ ವಿರುದ್ಧ ಕ್ರಿಯೆ ಎಂದರೆ ವಸ್ತುವು ದ್ರವರೂಪದಿಂದ ಘನರೂಪಕ್ಕೆ ತಿರುಗುವ ತಾಪಮಾನವನ್ನು ಸ್ಪಟಿಕೀಕರಣ ತಾಪಮಾನ ಎಂದು ಕರೆಯುತ್ತಾರೆ.ಸಾಮಾನ್ಯವಾಗಿ ಹೆಚ್ಚಿನ ಘನವಸ್ತುಗಳ ಕರಗುವ ತಾಪಮಾನ ಮತ್ತು ಸ್ಪಟಿಕೀಕರಣ ತಾಪಮಾನ ಒಂದೇ ಆಗಿರುತ್ತದೆಯಾದರೂ ಕೆಲವು ವಸ್ತುಗಳಲ್ಲಿ ಇದು ಬೇರೆ ಬೇರೆಯಾಗಿರುತ್ತದೆ. ಉದಾಹರಣೆಗೆ ಪಾದರಸದ ಕರಗುವ ತಾಪಮಾನ ಮತ್ತು ಸ್ಪಟಿಕೀಕರಣ ತಾಪಮಾನ 234.32 ಕೆಲ್ವಿನ್ (−38.83 °Cಅಥವಾ −37.89 °F) ಆದರೆ ಅಗರ್ 85 °C (185 °F)ರಲ್ಲಿ ಕರಗಿದರೆ 31 °C to 40 °C (89.6 °F to 104 °F);ಉಷ್ಣತೆಯಲ್ಲಿ ಘನರೂಪಕ್ಕೆ ಬರುತ್ತದೆ.
- Melting and boiling point tables vol. 1 by Thomas Carnelley (Harrison, London, 1885–1887)
- Melting and boiling point tables vol. 2 by Thomas Carnelley (Harrison, London, 1885–1887)
- ONS melting point explorer Archived 2011-12-14 ವೇಬ್ಯಾಕ್ ಮೆಷಿನ್ ನಲ್ಲಿ. Over 10,000 Open Data melting points.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.