ಕನ್ನಡ ಸಾಹಿತ್ಯ ಪ್ರಕಾರಗಳು

From Wikipedia, the free encyclopedia

Remove ads

ಕನ್ನಡ ಸಾಹಿತ್ಯ ಅನೇಕ ಪ್ರಕಾರಗಳಿಂದ ಶ್ರೀಮಂತವಾಗಿದೆ. ಸಾಹಿತ್ಯ ಪ್ರಕಾರದ ಸ್ವರೂಪ(nature), ರಚನೆ(structure) ಆಧಾರದ ಮೇಲೆ ಈ ಕೆಳಕಂಡಂತೆ ವಿಂಗಡಿಸಬಹುದು. ಕನ್ನಡ ಸಾಹಿತ್ಯವೇ ಬೇರೆ -ಕನ್ನಡ ಸಾಹಿತ್ಯ ಪ್ರಕಾರಗಳೇ ಬೇರೆ ಆದ್ದರಿಂದ ಕನ್ನಡ ಸಾಹಿತ್ಯಕ್ಕೆ ಬೇರೆ ಶೀರ್ಷಿಕೆ ಕೊಡುವುದೇ ಉಚಿತ. ಸಾಹಿತ್ಯದ ವಿಷಯ ದೊಡ್ಡದು. ಅದರಲ್ಲಿ ಪ್ರಾಚೀನ ಸಾಹಿತ್ಯದಿಂದ ಅರ್ವಾಚೀನ ಸಾಹಿತ್ಯ ಎಲ್ಲಾ ವಿಷಯಗಳನ್ನು ಹಾಕಬಹುದು. ತಕ್ಕ ಮಟ್ಟಿಗೆ ಸಾಹಿತ್ಯದ -ಅದರ ಪ್ರಕಾರಗಳ ವಿವರಣೆ ಪೂರ್ವಾಗ್ರವಿಲ್ಲದ ವಿಮರ್ಶೆಯೂ ಇದರಲ್ಲಿ ಸೇರಬೇಕು.

Remove ads

ಕಾವ್ಯ

ವಚನ


ವಚನ ಎಂಬ ಪದಕ್ಕೆ ಮಾತು ಎಂಬ ಸಾಮಾನ್ಯ ಅರ್ಥವಿದೆ, ಶರಣನಾದವನು ಶಿವಾನುಭವದಿಂದ ಪರಿಪಕ್ವವಾದ ಮನದಿಂದ ನುಡಿಯುವ ಪ್ರತಿಮಾತುಗಳು, ಸಂಭಾಷಣೆಗಳು ಸಾಹಿತ್ಯದ ರೂಪತಳೆದಿವೆ. ಶರಣರ ದೃಷ್ಟಿಯಲ್ಲಿ ವಚನ ಎಂಬ ಪದಕ್ಕೆ ಮೀರಲಾಗದ ಮಾತು, ಭಾಷೆಯರೂಪದ ಮಾತು ಎಂಬ ಅರ್ಥವಿದೆ. ಕೆಲವು ಪ್ರಮುಖ ವಚನಕಾರರು-

  1. ಬಸವಣ್ಣ
  2. ಅಲ್ಲಮಪ್ರಭು
  3. ಜೇಡರ ದಾಸಿಮಯ್ಯ
  4. ಅಕ್ಕಮಹಾದೇವಿ

ಕಗ್ಗ


[[ಡಿ.ವಿ.ಜಿ ಯವರ "ಮಂಕುತಿಮ್ಮನ ಕಗ್ಗ "

ಹನಿಗವನ


ಕೀರ್ತನೆ

ದೇವರ ಹಾಡು ಮತ್ತು ವಚನಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ಹಾಡುವ ಒಂದು ಪ್ರಕಾರ. ಉದಾಹರಣೆ ಪುರಂದರದಾಸರ, ಕನಕದಾಸರ ಕೀರ್ತನೆಗಳು.

Remove ads

ಕಾದಂಬರಿ

ಒಂದು ವಸ್ತು ವಿಷಯವನ್ನು ಇಟ್ಟುಕೊಂಡು, ವಿಸ್ತಾರವಾಗಿ ಬರೆಯುತ್ತಾ ಹೋಗುವ ಪ್ರಕಾರ. ಇದು ಸಾಹಿತ್ಯದ ಬಹು ಮುಖ್ಯ ಪ್ರಕಾರ.

ಕಾದಂಬರಿಯ ವಿಧಗಳು

  1. ಪೌರಾಣಿಕ ಕಾದಂಬರಿ
  2. ಐತಿಹಾಸಿಕ ಕಾದಂಬರಿ
  3. ಸಾಮಾಜಿಕ ಕಾದಂಬರಿ
  4. ಧಾರ್ಮಿಕ ಕಾದಂಬರಿ

ಕಥೆ

ಸಣ್ಣಕಥೆ


  • Bulleted list item

ಒಂದು ಚಿಕ್ಕ ಘಟನೆ ಅಥವಾ ವಿಷಯವನ್ನು ವಿಸ್ತರಿಸಿ ಸ್ವಾರಸ್ಯವಾಗಿ ನಿರೂಪಿಸುವ, ಮುಕ್ತಾಯಗೊಳಿಸುವ ಸಾಹಿತ್ಯ ಪ್ರಕಾರ.

ನೀಳ್ಗಥೆ

ಸಣ್ಣ-ಪುಟ್ಟ ಘಟನೆಗಳಿಂದ ಅಥವಾ ಕಲ್ಪನೆಗಳಿಂದ ಆಧಾರಿತವಾದ ಉದ್ದವಾದ ಅಥವಾ ವಿಸ್ತಾರವಾದ ಕಥೆ.

ನಾಟಕ


  • ನಟನಾ ಪ್ರದಶನಕ್ಕಾಗಿ ರಚಿತವಾದ ಒಂದು ಸಾಹಿತ್ಯ ಪ್ರಕಾರ. (ಪ್ರಾಕಾರ ಎಂದರೆ ಗೋಡೆ)
  1. ಸುಖಾಂತ ನಾಟಕಗಳು
  2. ದುರಂತ ನಾಟಕಗಳು.-
  3. ಸಾಮಾಜಿಕ ನಾಟಕಗಳು;
  4. ಪೌರಾಣಿಕ ನಾಟಕಗಳು;
  5. ಐತಿಹಾಸಿಕ ನಾಟಕಗಳು.
  6. ಗೀತ ನಾಟಕಗಳು,
  7. ಗದ್ಯ ನಾಟಕಗಳು,
  8. ಗದ್ಯ ಪದ್ಯ ಮಿಶ್ರವಾದ ಸಂಗೀತ ನಾಟಕಗಳು.
  9. ಏಕಾಂಕ ನಾಟಕಗಳು ಮತ್ತು ಅನೇಕ ಅಂಕಗಳಿರುವ ನಾಟಕಗಳು ಹೀಗೆ ವಿಂಗಡಣೆಗಳಿವೆ

ಹಾಸ್ಯ

ಹಾಸ್ಯದಲ್ಲಿ ಅನೇಕ ಪ್ರಕಾರಗಳಿವೆ. ಉದಾಹರಣೆಗೆ :

  1. ಕಟಕಿ- ಬಿರುನುಡಿ, ಕಿರುನುಡಿ,
  2. ವ್ಯಂಗ್ಯ,
  3. ಲಘುಹಾಸ್ಯ,
  4. ಸರಸ,
  5. ವಕ್ರೋಕ್ತಿ,
  6. ಜಾಣ್ನುಡಿ,
  7. ಪರಿಹಾಸ ಎಂದು ವಿಂಗಡಿಸಬಹುದು.
  8. ವಿಡಂಬನ ಸಾಹಿತ್ಯ

ಇವುಗಳಲ್ಲಿ ಲಘು ಹಾಸ್ಯ ಪ್ರಬಂಧಗಳು ಅಥವಾ ಲಲಿತ ಪ್ರಬಂಧಗಳು ಕೂಡ ಹಾಸ್ಯದ ಪರಿಧಿಗೆ ಸೇರುತ್ತವೆ.[]

ಲಘು ಹಾಸ್ಯ ಪ್ರಬಂಧಗಳು


  1. ನಿದ್ದೆಯ ಬಹುರೂಪಗಳು ಮತ್ತು
  2. ಪುರುಷ ವಿಮೋಚನಾ ಚಳುವಳಿಯ ಆದಿ ಮತ್ತು ಅಂತ್ಯ.
Remove ads

ಪ್ರಬಂಧಗಳು

  1. ಲಲಿತ ಪ್ರಬಂಧಗಳು
  2. ಲಘು ಪ್ರಬಂಧಗಳು,
  3. ವಿಮರ್ಶಾತ್ಮಕ ಪ್ರಬಂಧಗಳು,
  4. ವೈಜ್ಞಾನಿಕ ಪ್ರಬಂಧಗಳು,
  5. ವೈಚಾರಿಕ ಪ್ರಬಂಧಗಳು
  6. ಹಾಸ್ಯ ಪ್ರಬಂಧಗಳು
  7. ನಿರೂಪಣಾ ಪ್ರಬಂಧ (ನ್ಯರೇಟಿವ್ ಎಸ್ಸೇಸ್) ಪ್ರಬಂಧ ರಚನೆ - ಪ್ರಬಂಧಗಳ ವಿಧಗಳು ಮತ್ತು ಅವುಗಳ ರಚನೆಯ ಕ್ರಮವನ್ನು ವಿವರಿಸುವುದು.

ವೈಜ್ಞಾನಿಕ ಗ್ರಂಥಗಳು

  • ವೈದ್ಯಕೀಯ ಗ್ರಂಥಗಳು
  • ವಿಜ್ಞಾನ ಕುರಿತ ಗ್ರಂಥಗಳು

ಹಾಸ್ಯ ಪ್ರಬಂಧಗಳು


  1. ಲಲಿತ ಪ್ರಬಂಧಗಳು
  2. ಮರೆಗುಳಿತನದ ಇತಿಹಾಸ

ಮಕ್ಕಳ ಸಾಹಿತ್ಯ

  1. ಚರ್ಚೆಪುಟ:ಮಕ್ಕಳ ಕಥೆ - ಕಾಗಕ್ಕ ಗುಬ್ಬಕ್ಕನ ಕಥೆ
  2. ಚುಟುಕು | ಚುಟುಕು ಕವನ
  3. ಮಕ್ಕಳ ಕವನ- ಊಟದ ಆಟ, ಹತ್ತು ಹತ್ತು ಇಪ್ಪತ್ತು, ಬಣ್ಣದ ತಗಡಿನ ತುತ್ತೂರಿ 'ನಾಗರ ಹಾವೆ, ನಮ್ಮ ಮನೆಲೊಂದು ಪಾಪನಿರುಉದು, ಕಂದನು ಬಂದ - ಗೋವಿನ ಹಾಡು (ಪುಣ್ಯಕೋಟಿ ಯ ಕಥೆ )
  4. ಮಕ್ಕಳ ನಾಟಕ
  5. ಒಗಟು

ಪ್ರವಾಸ ಸಾಹಿತ್ಯ

ಪ್ರವಾಸ ಲೇಖನಗಳು, ಪ್ರವಾಸ ಗ್ರಂಥಗಳು (ಅಪೂರ್ವ ಪಶ್ಚಿಮ- ಕೋಶಿ ಕಾರಂತ )

[೧] ಜಾನಪದ

  • ಜಾನಪದ ಹಾಡು

ಜೀವನ ಚರಿತ್ರೆ

ಆತ್ಮ ಚರಿತ್ರೆ, [[ಕನ್ನಡ ಸಾಹಿತ್ಯ ಅನೇಕ ಪ್ರಕಾರಗಳಿಂದ ಶ್ರೀಮಂತವಾಗಿದೆ. ಸಾಹಿತ್ಯ ಪ್ರಕಾರದ ಸ್ವರೂಪ, ರಚನೆ(structure) ಆಧಾರದ ಮೇಲೆ ಈ ಕೆಳಕಂಡಂತೆ ವಿಂಗಡಿಸಬಹುದು.ಕನ್ನಡ ಸಾಹಿತ್ಯವೇ ಬೇರೆ -ಕನ್ನಡ ಸಾಹಿತ್ಯ ಪ್ರಕಾರಗಳೇ ಬೇರೆ ಆದ್ದರಿಂದ ಕನ್ನಡ ಸಾಹಿತ್ಯಕ್ಕೆ ಬೇರೆ ಶೀರ್ಷಿಕೆ ಕೊಡುವುದೇ ಉಚಿತ. ಸಾಹಿತ್ಯದ ವಿಷಯ ದೊಡ್ಡದು. ಅದರಲ್ಲಿ ಪ್ರಾಚೀನ ಸಾಹಿತ್ಯದಿಂದ ಅರ್ವಾಚೀನ ಸಾಹಿತ್ಯ ಎಲ್ಲಾ ವಿಷಯಗಳನ್ನು ಹಾಕಬಹುದು. ತಕ್ಕ ಮಟ್ಟಿಗೆ ಸಾಹಿತ್ಯದ -ಅದರ ಪ್ರಕಾರಗಳ ವಿವರಣೆ ಪೂರ್ವಾಗ್ರವಿಲ್ಲದ ವಿಮರ್ಶೆಯೂ ಸೇರಬಹದು /ಸೇರಬೇಕು.

Remove ads

ದುರಂತ ಸಾಹಿತ್ಯ

ಅಂದರೆ ಒಂದು ಕೆಟ್ಟ ಘಟನೆಯನ್ನು, ಮನಕ್ಕೆ ನೋವು ಕೊಡುವಂತಹ ಘಟನೆಯನ್ನು ವಿವರಿಸುವ ಪ್ರಕಾರವೆ ದುರಂತ ಸಾಹಿತ್ಯ.[]

ವಿಮರ್ಶೆ/ಸಂಶೋಧನೆ

ವಿಮರ್ಶಾಸಾಹಿತ್ಯವು ಕನ್ನಡ ಸಾಹಿತ್ಯದ ಮತ್ತೊಂದು ಪ್ರಮುಖ ಪ್ರಕಾರ. ಸಾಹಿತ್ಯ ಉದ್ಭವವಾದ ಬಳಿಕ ಅದನ್ನು ಒರೆ ಹಚ್ಚಿ ನೋಡುವುದು; ಅದರ ಹಿರಿಮೆಯನ್ನು ಎತ್ತಿ ಹಿಡಿಯುವ ಜೊತೆಗೆ ಅದರ ಕೊರತೆಗಳನ್ನೂ, ಮಿತಿಯನ್ನೂ ಗುರುತಿಸುವುದು ವಿಮರ್ಶಾಸಾಹಿತ್ಯದ ಪ್ರಮುಖ ಲಕ್ಷ್ಮಣ. ಕನ್ನಡದ ಮಟ್ಟಿಗೆ ಹಲವಾರು ಸಾಹಿತಿಗಳು ಈ ಕ್ಷೇತ್ರದಲ್ಲಿ ಗಮನೀಯ ಕೆಲಸ ಮಾಡಿದ್ದಾರೆ. ಪ್ರಮುಖವಾಗಿ ಕೀರ್ತಿನಾಥ ಕುರ್ತಕೋಟಿ, ಸಿ. ಎನ್. ರಾಮಚಂದ್ರನ್, ನರಹಳ್ಳಿ ಬಾಲಸುಬ್ರಹ್ಮಣ್ಯಂ, ಚಂದ್ರಶೇಖರ ವಿ. ನಂಗಲಿ ಮುಂತಾದವರು ಪ್ರಮುಖರು.

ಸಂಶೋಧನಾ ಸಾಹಿತ್ಯವು ಜಾನಪದ, ಭಾಷೆ ಮತ್ತು ಶಾಸನಗಳನ್ನು ತನ್ನ ಪ್ರಮುಖ ಆಕರಗಳನ್ನಾಗಿಸಿಕೊಂಡ ಪ್ರಕಾರವಾಗಿದೆ. ಅಲ್ಲದೆ ಇದು ಆಧುನಿಕ ಸಾಹಿತ್ಯದ ವಿವಿಧ ಆಯಾಮಗಳನ್ನು ಶೋಧಿಸಿ ಮುನ್ನೆಲೆಗೆ ತರುವ ಪ್ರಕಾರವೂ ಆಗಿದೆ. ಜೀ. ಶಂ. ಪರಮಶಿವಯ್ಯ, ಟಿ. ವಿ. ವೆಂಕಟಾಚಲ ಶಾಸ್ತ್ರಿ, ಹಾ. ಮಾ. ನಾಯಕ, ದೇಜಗೌ, ಹಂ. ಪ. ನಾಗರಾಜಯ್ಯ ಮುಂತಾದವರು ಪರಿಪುಷ್ಟಿಗೊಳಿಸಿದ ಈ ಕ್ಷೇತ್ರದಲ್ಲಿ ಇಂದು ಕುಪ್ನಳ್ಳಿ ಎಂ. ಬೈರಪ್ಪ ಸೇರಿದಂತೆ ಹಲವಾರು ಹೊಸ ತಲೆಮಾರಿನ ಸಾಹಿತಿಗಳು ಗಮನಾರ್ಹ ಕೃಷಿ ಮಾಡುತ್ತಿದ್ದಾರೆ. ಪ್ರಮುಖ ವಿಮರ್ಶಾ ಕೃತಿಗಳು 1) ಎಂ.ಎಂ. ರಾಮಾನುಜ ಅಯ್ಯಂಗಾರ್ :- "ಕವಿ ಚಕ್ರವರ್ತಿ ರನ್ನನ ಜೀವನ ಚರಿತ್ರೆ " 2) ಬಿ. ಕೃಷ್ಣಪ್ಪ :-" ರಾಮಚಂದ್ರ ಚರಿತ ಪುರಾಣ "(1931) 3) ಜಿ ಪಿ ರಾಜರತ್ನಂ :- "ಶ್ರೀ ಕವಿ ಪಂಪ 1931" 4) ಮುಳಿಯ ತಿಮ್ಮಪ್ಪಯ್ಯ :-"ನಾಡೋಜ ಪಂಪ 1938" 5) ತೀ.ನಂ.ಶ್ರೀ :- "ಪಂಪ 1939" 6) ವಿ ಸೀತಾರಾಮಯ್ಯ :-"ಮಹಾಕವಿ ಪಂಪ 1975" ಮತ್ತು "ಅಭಿಜ್ಞಾನ ಶಾಕುಂತಲ 1943" 7) ಎಸ್ ವಿ ರಂಗಣ್ಣ :- "ಕುಮಾರವ್ಯಾಸ 1962"

ಇದನ್ನೂ ನೋಡಿ

ಉಲ್ಲೇಖಗಳು

Loading related searches...

Wikiwand - on

Seamless Wikipedia browsing. On steroids.

Remove ads