ಎಚ್.ಐ.ವಿ.
From Wikipedia, the free encyclopedia
ಮಾನವ ಪ್ರತಿರಕ್ಷಾ ರಾಹಿತ್ಯ ವೈರಾಣು (ಮಾ.ಪ್ರ.ರಾ.ವೈ) ಆಂಗ್ಲ ಭಾಷೆಯಲ್ಲಿ ಹ್ಯೂಮನ್ ಇಮ್ಯುನೋಡೆಫಿಷಿಯೆನ್ಸಿ ವೈರಸ್ (ಹೆಚ್ಐವಿ) ಒಂದು ಲೆಂಟಿವೈರಾಣು (ರೆಟ್ರೊವೈರಾಣು ಕುಟುಂಬದ ಸದಸ್ಯ) ಆಗಿದ್ದು ಅದು ಅರ್ಜಿತ ಪ್ರತಿರಕ್ಷಾ ರಾಹಿತ್ಯ ಸಹಲಕ್ಷಣ (ಅ.ಪ್ರ.ರಾ.ಸ) ಆಂಗ್ಲ ಭಾಷೆಯಲ್ಲಿ ಅಕ್ವೈಯರ್ಡ್ ಇಮ್ಯುನೋಡೆಫಿಷಿಯೆನ್ಸಿ ಸಿಂಡ್ರೋಮ್ (ಏಡ್ಸ್) ಗೆ ಕಾರಣವಾಗಿ, ಮಾನವರಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯು ವಿಫಲಗೊಳ್ಳುತ್ತದೆ ಮತ್ತು ಸಾವಿಗೆ ಕಾರಣವಾಗುವ ಅವಕಾಶವಾದಿ ಸೋಂಕುಗಳಿಗೆ ಕಾರಣವಾಗುತ್ತದೆ. ರಕ್ತ ವರ್ಗಾವಣೆ, ವೀರ್ಯ, ಯೋನಿ ದ್ರವ, ಸ್ಖಲನ ಪೂರ್ವ ದ್ರವ ಅಥವಾ ತಾಯಿಯ ಹಾಲಿನ ಮೂಲಕ ಎಚ್ಐವಿ ಸೋಂಕು ಸಂಭವಿಸುತ್ತದೆ. ಈ ದೇಹದ ದ್ರವಗಳಲ್ಲಿ, ಎಚ್ಐವಿ ಮುಕ್ತ ಬ್ಯಾಕ್ಟೀರಿಯ ಕಣಗಳಲ್ಲಿ ಮತ್ತು ಪ್ರತಿರಕ್ಷಣಾ ಕೋಶಗಳಲ್ಲಿ ಒಳಗೊಂಡಿರುವ ಬ್ಯಾಕ್ಟೀರಿಯಾಗಳೆರಡರಲ್ಲೂ ಇರುತ್ತದೆ. ಪ್ರಸರಣದ ನಾಲ್ಕು ಮುಖ್ಯ ಮಾರ್ಗಗಳೆಂದರೆ ಅಸುರಕ್ಷಿತ ಲೈಂಗಿಕತೆ, ಸೋಂಕಿತ ಸೂಜಿಗಳು, ತಾಯಿಯ ಹಾಲು ಮತ್ತು ಸೋಂಕಿತ ತಾಯಿಯಿಂದ ಹುಟ್ಟಿದ ಮಗುವಿಗೆ ಹರಡುವುದು (ಲಂಬ ಪ್ರಸರಣ). ಎಚ್‌ಐವಿ ಇರುವಿಕೆಗಾಗಿ ರಕ್ತದ ಉತ್ಪನ್ನಗಳ ಪರೀಕ್ಷೆಯಿಂದಾಗಿ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ರಕ್ತ ವರ್ಗಾವಣೆ ಅಥವಾ ಸೋಂಕಿತ ರಕ್ತದ ಉತ್ಪನ್ನಗಳ ಮೂಲಕ ಪ್ರಸರಣವು ಹೆಚ್ಚಾಗಿ ಕಡಿಮೆಯಾಗಿದೆ.
೧. ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಎಚ್.ಐ.ವಿ. ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ೨. ಹೆತ್ತವರಿಂದ, ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ, ಪ್ರಸವ ಸಮಯದಲ್ಲಿ ಮತ್ತು ಎದೆಹಾಲು ಉಣಿಸುವಿಕೆ ಸಂದರ್ಭದಲ್ಲಿ ಹರಡಬಹುದು. ೩. ರಕ್ತದ ಮೂಲಕ ಎಚ್.ಐ.ವಿ. ಸೋಂಕಿತ ರಕ್ತ ಮತ್ತು ರಕ್ತದ ಉತ್ಪನ್ನಗಳನ್ನು ಸ್ವೀಕರಿಸುವುದರಿಂದ ಹರಡಬಹುದು. ೪. ಸೋಂಕಿತ ವ್ಯಕ್ತಿಯೊಂದಿಗೆ ಸೂಜಿ, ಸಿರಿಂಜುಗಳನ್ನು ಹಂಚಿಕೊಳ್ಳುವುದರಿಂದ ಎಚ್.ಐ.ವಿ. ಹರಡಬಹುದು. ನಮ್ಮ ದೇಹದಲ್ಲಿ ಸಿ.ಡಿ. 4 ಎಂಬ ಒಂದು ರೀತಿಯ ಜೀವಕೋಶಗಳಿರುತ್ತವೆ. ಈ ರೀತಿಯ ಜೀವಕೋಶಗಳು ನಮ್ಮನ್ನು ವಿವಿಧ ಸೋಂಕುಗಳಿಂದ ಸಂರಕ್ಷಿಸುತ್ತವೆ ಮತ್ತು ಸ್ವಾಭಾವಿಕವಾದ ಇಮ್ಯೂನಿಟಿ ಅಥವಾ ರೋಗನಿರೋಧಕ ಶಕ್ತಿಯನ್ನು ಕೊಡುತ್ತವೆ. ಯಾವಾಗ ಎಚ್.ಐ.ವಿ. ನಮ್ಮ ದೇಹವನ್ನು ಪ್ರವೇಶಿಸುತ್ತವೆಯೋ, ಆಗ ಅದು ಸಿಡಿ 4 ಜೀವಕೋಶಗಳನ್ನು ನಾಶ ಪಡಿಸುತ್ತದೆ ಮತ್ತು ನಮ್ಮನ್ನು ಹೆಚ್ಚು ಸೋಂಕುಗಳ ಅಪಾಯಕ್ಕೆ ಗುರಿ ಮಾಡುತ್ತದೆ.
ದುಗ್ಧರಸ ಗ್ರಂಥಿಗಳ ಊತ, ತಲೆನೋವು, ಹಸಿವು ಆಗದಿರುವಿಕೆ, ಮುಖ್ಯವಾಗಿ ಬಹಳ ಕಾಲ ಮುಂದುವರಿದ ಜ್ವರ - ಒಂದು ತಿಂಗಳಿಗಿಂತಲೂ ಅಧಿಕ ದೀರ್ಘಕಾಲಿನ ಅತಿಸಾರ - ಭೇದಿ, ತೂಕದಲ್ಲಿ ಇಳಿಕೆಯಾಗುವುದು... ಇವು ಎಚ್.ಐ.ವಿ. ಸೋಂಕಿತ ವ್ಯಕ್ತಿಗಳಲ್ಲಿ ಕಾಣಬಹುದಾದ ಸಾಮಾನ್ಯ ಲಕ್ಷಣಗಳು. ಎಚ್.ಐ.ವಿ. ಇದೆಯೇ ಎಂದು ತಿಳಿದುಕೊಳ್ಳಲು ಕೇವಲ ರಕ್ತ ಪರೀಕ್ಷೆಯಿಂದ ಮಾತ್ರ ಸಾಧ್ಯ. ಸೋಂಕಿಗೆ ಒಳಗಾದಾಗ ನಮ್ಮ ಶರೀರವು ಎಚ್.ಐ.ವಿ.ಗೆ ನಿಗದಿಯಾದ ಪ್ರತಿಕಾಯಗಳನ್ನು ಉತ್ಪತ್ತಿ ಮಾಡುತ್ತದೆ. ರಕ್ತದಲ್ಲಿ ಇರುವ ಈ ಪ್ರತಿಕಾಯಗಳನ್ನು ಎಚ್.ಐ.ವಿ. ಪರೀಕ್ಷೆ ಪತ್ತೆ ಹಚ್ಚುತ್ತದೆ. ಎಚ್.ಐ.ವಿ. ಪರೀಕ್ಷೆಯನ್ನು ಮಾಡಲು ಎಲ್ಲಾ ಮೆಡಿಕಲ್ ಕಾಲೇಜು, ಸರಕಾರಿ ಆಸ್ಪತ್ರೆಗಳ ಐ.ಸಿ.ಟಿ.ಸಿ. ಕೇಂದ್ರಗಳಲ್ಲಿ ನುರಿತ ಕೌನ್ಸೆಲರ್ ಹಾಗೂ ಪ್ರಯೋಗ ಶಾಲಾ ತಂತ್ರಜ್ಞರು ಲಭ್ಯವಿರುತ್ತಾರೆ. ಈ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವವರ ವಿವರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ. ಐ.ಸಿ.ಟಿ.ಸಿ. ಕೇಂದ್ರಗಳಲ್ಲಿ ಪ್ರತಿಯೊಬ್ಬರು ಯಾವುದೇ ಭಯ, ಹಿಂಜರಿಕೆ ಇಲ್ಲದೆ ಎಚ್.ಐ.ವಿ. ಪರೀಕ್ಷೆಗಳನ್ನು ಮಾಡಿಸಿಕೊಂಡು ತಮ್ಮ ಅನುಮಾನ ನಿವಾರಿಸಿಕೊಳ್ಳಬಹುದು. ಇಲ್ಲಿ ಪರೀಕ್ಷೆಗೆ ಒಳಪಡುವ ಮೊದಲು ಕೌನ್ಸೆಲಿಂಗ್ ನೀಡಲಾಗುವುದು.
ಕೌನ್ಸೆಲಿಂಗ್ ಅಂದರೆ - ಆಪ್ತ ಸಮಾಲೋಚನೆ; ಇದು ಸಹಾಯ ಮಾಡುವ ಒಂದು ಪ್ರಕ್ರಿಯೆ. ಇಲ್ಲಿ ಒಬ್ಬ ವ್ಯಕ್ತಿಯು, ಸಹಾಯಾರ್ಥಿಯ ಸ್ಥಿತಿಯನ್ನು ಗುರುತಿಸಿಕೊಂಡು, ಸ್ಪಷ್ಟವಾಗಿ ಮತ್ತು ಉದ್ದೇಶಪೂರ್ವಕವಾಗಿ ತನ್ನ ಸಮಯ, ಗಮನ ಮತ್ತು ಕೌಶಲ್ಯಗಳು ಮತ್ತು ಪರಿಸರದ ಮಿತಿಯಲ್ಲಿ, ಸಹಾಯಾರ್ಥಿಯ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಸಹಕರಿಸುತ್ತಾನೆ. ಎಚ್.ಐ.ವಿ ಆಪ್ತ ಸಮಾಲೋಚನೆಯ ಉದ್ದೇಶವು ಪರೀಕ್ಷೆಗೆ ಶಿಫಾರಸು ಮಾಡಲ್ಪಟ್ಟ ಅಥವಾ ಸ್ವಯಂ ಪ್ರೇರಿತವಾಗಿ ಪರೀಕ್ಷೆಗೆ ಒಳಪಡಿಸಲು ಇಚ್ಛಿಸಿ ಬಂದ ರೋಗಿ ಅಥವಾ ಸಹಾಯಾರ್ಥಿಗಳಿಗೆ ಪರೀಕ್ಷೆ ಅವರಿಗೆ ಹೇಗೆ ಸಹಕಾರಿಯಾಗುತ್ತದೆ ಎಂದು ತಿಳಿಸುವುದು ಮತ್ತು ಪರೀಕ್ಷೆ ಮಾಡಿಸಿಕೊಳ್ಳಬೇಕೋ ಬೇಡವೋ ಎಂಬ ನಿರ್ಧಾರ ತೆಗೆದುಕೊಳ್ಳಲು ಅವರನ್ನು ಬೆಂಬಲಿಸುವುದು. ನೆಗೆಟಿವ್ ಪರೀಕ್ಷಾ ಫಲಿತಾಂಶ ಇದ್ದವರಿಗೆ ನೀಡುವ ಆಪ್ತ ಸಮಾಲೋಚನೆಯು ಭವಿಷ್ಯದಲ್ಲಿ ಸೋಂಕನ್ನು ಹೊಂದುವ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಅನುಸರಿಸಬೇಕಾದ ನಡವಳಿಕೆಯಲ್ಲಿನ ಬದಲಾವಣೆಗಳ ಬಗ್ಗೆ ಚರ್ಚಿಸುವುದು. ವ್ಯಕ್ತಿಯು ವಿಂಡೋ ಪಿರಿಯಡ್‌ನಲ್ಲಿ ಇದ್ದರೆ, ಪುನಃ ಮೂರು ತಿಂಗಳ ನಂತರ ಪರೀಕ್ಷಿಸಿಕೊಳ್ಳಲು ಹೇಳುವುದು. ಒಬ್ಬ ವ್ಯಕ್ತಿಯ ದೇಹದೊಳಗೆ ಎಚ್.ಐ.ವಿ. ವೈರಸ್ ಪ್ರವೇಶಿಸಿದ ದಿನದಿಂದ ಅಂಟಿಬಾಡಿ ಅಂದರೆ ಪ್ರತಿಕಾಯ ಉತ್ಪತ್ತಿಯಾಗುವ ಅವಧಿಯನ್ನು ವಿಂಡೋ ಪಿರಿಯಡ್ ಎನ್ನುತ್ತೇವೆ. ಪ್ರತಿಕಾಯವು ದೇಹದಲ್ಲಿ ಉತ್ಪತ್ತಿಯಾಗಲು ಸುಮಾರು 6 ವಾರಗಳಿಂದ 3 ತಿಂಗಳ ಸಮಯ ತೆಗೆದುಕೊಳ್ಳುತ್ತದೆ. ಎಚ್.ಐ.ವಿ. ಪರೀಕ್ಷೆ ಮಾಡಿಸಿಕೊಂಡಾಗ, ಅಕಸ್ಮಾತ್ ವ್ಯಕ್ತಿ ಸೋಂಕಿಗೆ ಒಳಗಾಗಿ ಇನ್ನೂ ಮೂರು ತಿಂಗಳು ಆಗಿಲ್ಲ ಎಂದಾದರೆ, ಪರೀಕ್ಷೆಯ ಫಲಿತಾಂಶದಲ್ಲಿ ಸೋಂಕು ಇಲ್ಲ ಎಂದೇ ಫಲಿತಾಂಶ ಬರಬಹುದು. ಇದನ್ನು ನಾವು "ಫಾಲ್ಸ್ ನೆಗೆಟಿವ್' ಫಲಿತಾಂಶ ಎಂದು ಕರೆಯುತ್ತೇವೆ. ಎಚ್.ಐ.ವಿ. ಪಾಸಿಟಿವ್, ಆದಲ್ಲಿ ವ್ಯಕ್ತಿಗೆ ಆತನ ರಕ್ತದ ಫಲಿತಾಂಶವನ್ನು ನಿಧಾನವಾಗಿ ಹೇಳುವುದು ಆವಶ್ಯಕ. ವ್ಯಕ್ತಿ ರಕ್ತ ಪರೀಕ್ಷಾ ಫಲಿತಾಂಶವನ್ನು ಹೇಗೆ ಸ್ವೀಕರಿಸುತ್ತಾನೆ ಎನ್ನುವುದರ ಮೇಲೆ ಇದು ನಿರ್ಧರಿತವಾಗುತ್ತದೆ. ಎಚ್.ಐ.ವಿ. ಪಾಸಿಟಿವ್ ಆದಂತಹ ವ್ಯಕ್ತಿಗಳಿಗೆ ಮಾನಸಿಕ ಬೆಂಬಲದ ಆವಶ್ಯಕತೆ ಇರುತ್ತದೆ. ತಮ್ಮ ಎಚ್.ಐ.ವಿ. ಸ್ಥಿತಿಯನ್ನು ಸ್ವೀಕರಿಸಲು ಅವರನ್ನು ಮಾನಸಿಕವಾಗಿ ಸಿದ್ಧ ಮಾಡುವುದು ಆವಶ್ಯಕವಾಗಿರುತ್ತದೆ. ಎಚ್.ಐ.ವಿ. ಪಾಸಿಟಿವ್ ಸ್ಥಿತಿಯನ್ನು ತಿಳಿದುಕೊಳ್ಳುವುದರಿಂದ ಆಗುವ ಅನುಕೂಲಗಳು ವ್ಯಕ್ತಿ ತನ್ನ ಸ್ಥಿತಿಯ ಬಗ್ಗೆ ಆರಂಭಿಕ ಹಂತದಲ್ಲಿ ತಿಳಿಯುವುದರಿಂದ ಬೇಗನೆ ಸೂಕ್ತ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದು.
ಚಿಕಿತ್ಸೆಗಳು[೧]
೧. ಅವಕಾಶವಾದಿ ಸೋಂಕುಗಳ ವಿರುದ್ಧ ರೋಗ ಪ್ರತಿಬಂಧಕ. ೨. ಅವಕಾಶವಾದಿ ಸೋಂಕುಗಳನ್ನು ಆರಂಭಿಕ ಹಂತದಲ್ಲೆ ಪತ್ತೆ ಹಚ್ಚುವಿಕೆ. ೩. ಎಚ್.ಐ.ವಿ. ಪ್ರಗತಿಯನ್ನು ಕಡಿಮೆ ಮಾಡಲು ಅವಕಾಶವಾದಿ ಸೋಂಕುಗಳಿಗೆ ಚಿಕಿತ್ಸೆ ನೀಡುವುದು ಅಥವಾ ಆಂಟಿ ವಿಟ್ರೋ ವೈರಲ್ ಚಿಕಿತ್ಸೆ ನೀಡುವುದು. ೪. ತಮ್ಮ ಲೈಂಗಿಕ ಸಂಗಾತಿಗಳಿಗೆ ಹರಡದಂತೆ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬಹುದು ಅಥವಾ ಗರ್ಭಿಣಿ ಸ್ತ್ರೀಯಾಗಿದ್ದರೆ ತಮ್ಮ ಮಗುವಿಗೆ ಹರಡುವುದನ್ನು ತಪ್ಪಿಸಬಹುದು. ೫. ಸೋಂಕಿತ ವ್ಯಕ್ತಿಗಳು ಪುನಃ ಎಚ್.ಐ.ವಿ. ಸೋಂಕಿಗೆ ಒಳಗಾಗುವುದನ್ನು ತಪ್ಪಿಸಬಹುದು.
ಎ.ಆರ್.ಟಿ. (ART Archived 2015-02-12 ವೇಬ್ಯಾಕ್ ಮೆಷಿನ್ ನಲ್ಲಿ.) ಔಷಧ
ಎಚ್.ಐ.ವಿ. ವೈರಸನ್ನು ತಡೆಗಟ್ಟಲು ಅಥವಾ ಸಂಪೂರ್ಣವಾಗಿ ಗುಣಪಡಿಸಲು ಈ ಔಷಧದಿಂದ ಸಾಧ್ಯವಿಲ್ಲ. ಆದರೆ ಎ.ಆರ್.ಟಿ. ಚಿಕಿತ್ಸೆಯು ವೈರಸ್ ಮೇಲೆ ನೇರವಾಗಿ ಪರಿಣಾಮ ಉಂಟು ಮಾಡುವುದರಿಂದ ರೋಗ ನಿರೋಧಕ ಶಕ್ತಿ ಕ್ಷೀಣಿಸುವುದನ್ನು ತಡವಾಗುವಂತೆ ಮಾಡುತ್ತದೆ. ಈ ಔಷಧ ತೆಗೆದುಕೊಳ್ಳುವುದರಿಂದ ಸುಧೀರ್ಘವಾದ ಉತ್ತಮ ಜೀವನ, ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಎಚ್.ಐ.ವಿ. ಸೋಂಕಿತರಿಂದ ಸೋಂಕು ಅವರ ಲೈಂಗಿಕ ಸಂಗಾತಿಗಳಿಗೆ ಅಥವಾ ರಕ್ತದಾನದ ಮೂಲಕ ಇತರರಿಗೆ ಹರಡುವುದನ್ನು ಈ ಎ.ಆರ್.ಟಿ. ಔಷಧಗಳು ತಡೆಯಲಾರವು ಎನ್ನುವುದು ಮುಖ್ಯವಾದ ಸಂಗತಿ.
Wikiwand - on
Seamless Wikipedia browsing. On steroids.