ಆರಿಗ್ನೇಷಿಯನ್ ಸಂಸ್ಕೃತಿಮಧ್ಯ ಫ್ರಾನ್ಸ್‌ನಲ್ಲಿ ಪ್ರಚಲಿತವಾಗಿದ್ದ ಹಳೆ ಶಿಲಾಯುಗದ ಉತ್ತರಭಾಗದ ಒಂದು ಪ್ರವೃದ್ಧ ಸಂಸ್ಕೃತಿ. ಆರಿಗ್ನಾಕ್ ಎಂಬಲ್ಲಿ ಕಂಡು ಬಂದದ್ದರಿಂದ ಆ ಹೆಸರು. ಕಾಲ ಪ್ಲಿಸ್ಟೊಸೀನ್ನ ಕಡೆಯ ಹಿಮಯುಗ ವುರ್ಮ್ನ ಮಧ್ಯಭಾಗ-ಸು. ೩೦,೦೦೦-೨೦,೦೦೦ ವರ್ಷಗಳ ಹಿಂದೆ. ಕ್ರೋಮ್ಯಾಗ್ನಾನ್ ಎಂಬ ನಿಜಮಾನವ ಕುಲದವರು ಈ ಸಂಸ್ಕೃತಿಯ ಪ್ರವರ್ತಕರು. ಈ ಕಾಲದಲ್ಲಿ ಬರೆಯುವ ಮತ್ತು ಕೊರೆಯುವ ವಿವಿಧ ಕಲ್ಲಿನ ಉಪಕರಣಗಳು ಬಳಕೆಯಲ್ಲಿದ್ದುವು. ಅಲ್ಲದೆ ಎಲುಬಿನ ಆಯುಧಗಳ ವಿಶೇಷ ಬಳಕೆಯೂ ಈ ಕಾಲದಲ್ಲಿ ರೂಢಿಗೆ ಬಂದಿತ್ತು. ಚಿತ್ರ ಮತ್ತು ಶಿಲ್ಪಕಲೆ ಕೂಡ ಈ ಕಾಲದಲ್ಲೇ ಪ್ರಾರಂಭವಾಗಿರಬಹುದೆಂದು ಬಹು ಜನರ ಅಭಿಮತ. ಈ ಕಲಾಕೃತಿ ಗಳು ಫ್ರಾನ್ಸ್‌ನ ಹಲವು ಸುಣ್ಣಕಲ್ಲು ಗುಹೆಗಳ ಗೋಡೆಗಳ ಮೇಲೂ ಅವರು ವಾಸಿಸುತ್ತಿದ್ದ ಗುಹಾಪ್ರದೇಶಗಳಲ್ಲೂ ದೊರಕಿವೆ. ಈ ಸಂಸ್ಕೃತಿ ಮಧ್ಯಫ್ರಾನ್ಸ್‌ನಲ್ಲಿ ಹೆಚ್ಚಾಗಿ ಕಂಡುಬರುವುದಾದರೂ ಅದರ ಮೂಲ ಅಥವಾ ಶಾಖೆಗಳನ್ನು ಪುರ್ವಯೂರೋಪ್ ಮತ್ತು ವಾಯವ್ಯ ಏಷ್ಯದಲ್ಲೂ ಕಾಣಬಹುದು.
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.