ಆದಿನಾಥ
From Wikipedia, the free encyclopedia
ಆದಿನಾಥರು ಜೈನ ಧರ್ಮದ ಪ್ರಥಮ ತೀರ್ಥಂಕರರಾಗಿದ್ದಾರೆ.[೧]ಇವರಿಗೆ ಋಷಭ, ವೃಷಭನಾಥ ಎನ್ನುವ ಹೆಸರುಗಳಿವೆ. ಮರುದೇವಿಯು ಗರ್ಭವನ್ನು ಧರಿಸುವ ಮುನ್ನ ಕನಸಿನಲ್ಲಿ ಋಷಭವು ತನ್ನ ಮುಖವನ್ನು ಪ್ರವೇಶಿಸುವಂತೆ ಕಂಡಳು. ಆದ್ದರಿಂದ ಮುಂದೆ ಹುಟ್ಟಿದ ಮಗುವಿಗೆ ಋಷಭ ಎಂದು ಹೆಸರಿಟ್ಟರು.ಮತ್ತೊಂದು ಅಭಿಪ್ರಾಯದ ಪ್ರಕಾರ ವೃಷ ಎಂದರೆ ಧರ್ಮ. ಆದಿನಾಥರು ಮುಂದೆ ಧರ್ಮ ಪ್ರಸಾರಕರಾಗುವುರಿಂದ ಮಗುವಿಗೆ ವೃಷಭ ಎಂದು ಹೆಸರಿಟ್ಟರು. ಆದಿನಾಥರ ತಂದೆ ಅಯೋಧ್ಯೆಯ ಅರಸರು;ಹೆಸರು ನಾಭಿರಾಜ.ತಾಯಿಯ ಹೆಸರು ಮರುದೇವಿ.[೨]
ಆದಿನಾಥ ತೀರ್ಥಂಕರ |
---|
![]() |
ಜನನ : ಚೈತ್ರ ಬಹುಳ ನವಮಿ, ಉತ್ತರಾಷಾಢ ನಕ್ಷತ್ರ ಜನ್ಮ ಸ್ಥಳ : ಅಯೋಧ್ಯಾ ತಂದೆ: ನಾಭಿರಾಜ ತಾಯಿ : ಮರುದೇವಿ ವಂಶ : ಇಕ್ಷ್ವಾಕು ವಂಶ ದೇಹದ ಬಣ್ಣ : ಸುವರ್ಣ ಗಣಧರರು: ವೃಷಭ ಸೇನ ದೇಹದ ಎತ್ತರ: ೫೦೦ ಬಿಲ್ಲುಗಳು ಯಕ್ಷ: ಗೋಮುಖ ಯಕ್ಷಿ: ಚಕ್ರೇಶ್ವರಿ ಲಾಂಚನ: ವೃಷಭ / ಎತ್ತು ತಪೋವನ : ಸಿದ್ಧಾರ್ಥಕವನ ತಪೋವೃಕ್ಷ: ವಟವೃಕ್ಷ ಮೋಕ್ಷಸ್ಥಾನ : ಕೈಲಾಸಗಿರಿ ಮೋಕ್ಷ ಪ್ರಾಪ್ತಿ : ಮಾಘ ಶುದ್ದ ಚತುರ್ದಶಿ ಬೆಳಗಿನ ಜಾವ ಉತ್ತರಾಷಾಢ |
ಹುಟ್ಟು
ಅಯೋಧ್ಯೆಯ ಅರಸು ನಾಭಿರಾಜ ಮತ್ತು ಅವನ ಪಟ್ಟದ ರಾಣಿ ಮರುದೇವಿಗೆ ಚೈತ್ರಮಾಸದ ಕೃಷ್ಣ ಪಕ್ಷದ ನವಮಿಯಂದು ಜನಿಸಿದರು. ವೃಷಭನಾಥರು ಜನಿಸಿದ ಘಳಿಗೆಯಲ್ಲಿ ಶುಭಶಕುನಗಳು ಘಟಿಸಿದವು ಎಂದು ನಂಬಲಾಗಿದೆ. ವೃಷಭನಾಥರ ಹುಟ್ಟಿನ ಘಳಿಗೆಯನ್ನು ಜನ್ಮ ಕಲ್ಯಾಣಕ ಎಂದು ಕರೆಯಲಾಗುತ್ತದೆ.[೩]
ಸಂಸಾರ ಬಾಳುವೆ
ವೃಷಭನಾಥ ರಿಗೆ ಇಬ್ಬರು ಹೆಂಡಿರು ಸುನಂದಾ ಮತ್ತು ಸುಮಂಗಲ. ಸುಮಂಗಲಾ ರಿಗೆ ತೊಂಬತ್ತೊಂಬತ್ತು ಮಂದಿ ಮಕ್ಕಳು ಮತ್ತು ಒಬ್ಬ ಮಗಳು ಸುಂದರಿ. ವೃಷಭ ನಾಥರು ಮೊದಲ ಹೆಂಡತಿಯ ಹಿರಿಮಗ ಭರತಚಕ್ರವರ್ತಿಗೆ ಪಟ್ಟ ಕಟ್ಟುತ್ತಾರೆ.
ವೈರಾಗ್ಯ
Wikiwand - on
Seamless Wikipedia browsing. On steroids.