’ಕುಮುದ್ ಲಾಲ್ ಕುಂಜಿಲಾಲ್ ಗಂಗೂಲಿ’ಯೆಂದು ಮನೆಯಲ್ಲಿ ಕರೆಯಲ್ಪಡುವ 'ಅಶೋಕ್ ಕುಮಾರ್, ಬಂಗಾಳದ 'ಭಾಗಲ್ಪುರ' ದಲ್ಲಿ ಹುಟ್ಟಿದ್ದು ಅಕ್ಟೋಬರ್, ೧೩, ೧೯೧೧ ರಲ್ಲಿ. ತಂದೆ, 'ಕುಂಜಲಾಲ್ ಗಂಗೂಲಿ', ಲಾಯರ್ ಆಗಿದ್ದರು. ತಾಯಿ 'ಗೌರಿ ದೇವಿ', ಧನಿಕರ ಮಗಳು. ’ಖಾಂಡ್ವ’ '(ಮಧ್ಯ ಪ್ರದೇಶ್)'ನಿಂದ ಬಂದವರು. 'ಬಾಲಿವುಡ್ ಚಿತ್ರರಂಗ'ದ ಇನ್ನೂ ಹಲವು ಹೆಸರುಗಳಾದ 'ಕಿಶೋರ್ ಕುಮಾರ್', 'ಅನೂಪ್ ಕುಮಾರ್', ಇವರ ಸೋದರರು. ಸೋದರಿ 'ಸತಿದೇವಿ', 'ಸಶಧರ್ ಮುಖರ್ಜಿ' ಯವರ ಪತ್ನಿ, ಹತ್ತಿರದ ಗೆಳೆಯರಿಂದ 'ದಾದಾಮುನಿ'ಯೆಂದೇ ಸಂಬೋಧಿಸಲ್ಪಡುವ ' ಅಶೋಕ್ ಕುಮಾರ್' ೧೯೪೦ ರಲ್ಲೇ ಕಲ್ಕತ್ತಾದ 'ಪ್ರೆಸಿಡೆನ್ಸಿ ಕಾಲೇಜ್' ನಿಂದ ಎಮ್. ಎ; ಪದವಿ ಪಡೆದಿದ್ದರು.
Ashok Kumar | |
---|---|
ಜನನ | Kumudlal Kunjilal Ganguly ೧೩ ಅಕ್ಟೋಬರ್ ೧೯೧೧ Bhagalpur, Bengal Presidency, British India |
ಮರಣ | 10 December 2001 90) ಮುಂಬೈ, Maharastra, India | (aged
Cause of death | Heart Failure |
ಇತರೆ ಹೆಸರು | Sanjay Ashok Kumar |
ವೃತ್ತಿ(ಗಳು) | Actor, painter |
ಸಕ್ರಿಯ ವರ್ಷಗಳು | 1936–1997 |
ಸಂಗಾತಿ | Shobha Devi |
ಸಂಬಂಧಿಕರು | Anoop Kumar, Kishore Kumar(Brothers), Sati Devi (Sister) |
'ವೈವಿಧ್ಯಮಯ ಪಾತ್ರಗಳು
ನಾಯಕ, ಖಳನಾಯಕ, ತಂದೆ, ಮಾವ, ಅಣ್ಣ, ಹೀಗೆ ಒಟ್ಟಾರೆ ೨೨೦ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ೧೯೪೦ ರ ದಶಕದಲ್ಲಿ 'ಮುಂಬಯಿ ಟಾಕೀಸ್' ಗೆ ಪಾದಾರ್ಪಣೆಮಾಡಿದ 'ದಾದಾಮುನಿ'ಯವರು, ೧೯೯೮ ರವರೆಗೆ ಸಕ್ರಿಯವಾಗಿ ಚಿತ್ರರಂಗದಲ್ಲಿ ಬೇರುಬಿಟ್ಟಿದ್ದರು. ಯಾರೂ ಸಾಧಿಸದ ಸಾಧನೆಯೆಂದರೆ, ನೂರಕ್ಕೂ ಹೆಚ್ಚು 'ಶತದಿನೋತ್ಸವ'ಗಳನ್ನು ಆಚರಿಸಿದ ಚಿತ್ರಗಳಲ್ಲಿ ಅವರು ನಟಿಸಿದ್ದರು. 'ನವಯುವಕ'ನಿಂದ 'ಅಜ್ಜ'ನವರೆಗೆ ಹಾಸ್ಯ, ಗಾಂಭೀರ್ಯ, ಭಾವನಾತ್ಮಕವಾದ ಅಬ್ಬರ ಅರಚಾಟಿಕೆಯಿಲ್ಲದೆ ಸಹಜತೆಯ ಅಭಿನಯದಿಂದ ಜನಪ್ರಿಯತೆ ಸಾಧಿಸಿದರು. ನಿರ್ಮಾಪರಿಗಂತೂ 'ಅಶೋಕ್ ಕುಮಾರ್' ಮೇಲೆ ಹಣ ಗ್ಯಾರಂಟಿಯಾಗಿ ಚಕ್ರಬಡ್ಡಿಯ ಸಮೇತ ವಾಪಸ್ ದೊರೆಯುತ್ತಿತ್ತು.
'ದಾದಾಮುನಿಯವರ, ನಾಯಕಿಯರು
- 'ದೇವಿಕಾರಾಣಿ',
- 'ಲೀಲಾಚಿಟ್ನಿಸ್',
- 'ವನಮಾಲಾ',
- 'ವಾಸಂತಿ',
- 'ರೋಸ್',
- 'ನೂತನ್,
- 'ಮೀನಾಕುಮಾರಿ'
- 'ಮಧುಬಲಾ'
- 'ಗೀತಾಬಾಲಿ'
- 'ಸುಮಿತ್ರ'
- 'ಹೇಮಾಮಾಲಿನಿ'
ಜೊತೆ ಪಾತ್ರಾಭಿನಯಿಸಿದ ಏಕೈಕ ಕಲಾವಿದ. 'ಪದ್ಮಶ್ರೀ', 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿವಿಜೇತ',ವ್ಯವಹಾರದಲ್ಲಿ ಅತಿ ಕಟ್ಟುನಿಟ್ಟಿನವ. ವಿಚಿತ್ರ ಸ್ವಭಾವದವ. 'ಬಿ.ಆರ್. ಛೋಪ್ರ', 'ದೇವಕಿ ಬೋಸ್','ಅಮಿಯ ಚಕ್ರವರ್ತಿ', 'ಬಿಮಾಲ್ ರಾಯ್', 'ಸಕ್ಬೇನ್ ಬೋಸ್', ಹಾಗೂ ಮದ್ರಾಸ್ ನ ಚಿತ್ರ-ನಿರ್ಮಾಪಕರು, ನಿರ್ದೇಶಕರುಗಳ ಅತ್ಯಂತ ಬೇಡಿಕೆಯ ನಟ.
'ಮುಂಬೈನ,'ಕಾಲಾಘೋಡ ಜಿಲ್ಲೆ'ಯಲ್ಲಿ 'ಸ್ವಂತಮನೆ'
೧೯೬೦-೭೦ ರ ದಶಕದಲ್ಲಿ ಹಿಂದಿ ಚಿತ್ರರಂಗದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದರು. ಮುಂಬೈನಲ್ಲಿ 'ಕಾಲಾಘೋಡಾ ಜಿಲ್ಲೆ'ಯ ಅತಿಬೆಲೆಬಾಳುವ ಜಾಗದಲ್ಲಿ 'ರೋಸ್,' ಎಂಬ ಬಹುಮಹಡಿಯ-ಕಟ್ಟಡದ ಎರಡನೆಯ ಮಹಡಿಯ 'ಸ್ವಂತ ಮನೆ'ಯಲ್ಲಿ ಅವರು ವಾಸಿಸುತ್ತಿದ್ದರು. ಈ ಕಟ್ಟಡ ಈಗಿನ 'ಛತ್ರಪತಿ ವಸ್ತುಸಂಗ್ರಹಾಲಯ' ದ ಹಿಂಭಾಗದಲ್ಲಿದೆ. ಹಣಕಾಸಿನ ವಿಷಯದಲ್ಲಿ ಯಾವರಾಜಿಗೂ ಸಿದ್ಧರಾಗದ 'ದಾದಾಮುನಿ'ಯವರು ಯಾವಾಗಲೂ ತಮ್ಮಪಾಡಿಗೆ ಇರುತ್ತಿದ್ದರು. ತಮ್ಮಂದಿರು ಯಾವಾಗಲೂ ಅವರ ಜೊತೆಯಲ್ಲಿ ವಾಸವಾಗಿರಲಿಲ್ಲ. ಜನರ ನೆನಪಿನಲ್ಲುಳಿಯುವ ಹಲವು ಚಿತ್ರಗಳಲ್ಲಿ ಮನೋಜ್ಞ ಅಭಿನಯವನ್ನು ಕೊಟ್ಟಿದ್ದಾರೆ.
- 'Achhut Kanya' (Hindi: अछूत कन्या, Urdu: اچھوت کنیا, translation: Untouchable Maiden) ೧೯೩೬ ರಲ್ಲಿ, ನಿರ್ಮಿಸಿದ ಚಿತ್ರದಲ್ಲಿ ಪಾದಾರ್ಪಣೆ.
- 'ಕಿಸ್ಮತ್'
- 'ಕಂಗನ್'
- 'ಪರಿಣೀತಾ'
- 'ಏಕ್ ಹೀ ರಾಸ್ತ'
- 'ಪಾಕೀಜಾ'
- 'ಹೂಮಾಯೂನ್', ಐತಿಹಾಸಿಕ ಚಿತ್ರ,
- 'ಮಹಲ್' ಮುಂತಾದವುಗಳು
'ಅಶೋಕ್ ಕುಮಾರ್,' ಒಳ್ಳೆಯ ’ಗಾಯಕ’ ಕೂಡಾ. ಅವರ ದಿನಗಳಲ್ಲಿ ಹಿಂಬದಿಯ ಹಾಡುಗಾರಿಕೆ ಅಷ್ಟು ಪ್ರಬಲವಾಗಿರಲಿಲ್ಲ. ಸಾಮಾನ್ಯವಾಗಿ ಅಂದಿನ ನಾಯಕ-ನಾಯಕಿಯರು, ತಮ್ಮ ಪಾತ್ರಗಳಿಗೆ ಸಂಬಂಧಿಸಿದ ಹಾಡುಗಳನ್ನು ಅವರೇ ಹಾಡುವ ಕಾಲವದು. ’ಆಶೀರ್ವಾದ್’ ನಲ್ಲಿ ’ಚಲಿರೆ ರೇಲ್ ಗಾಡಿ ಕಲೆಗಾಂ ಮಲೆಗಾಂ'.ಅವಿಸ್ಮರಣೀಯ ಅದ್ಭುತ ನಟನೆ; ಹಣದ ಬಗ್ಗೆ ತೀವ್ರವಾದ ಅಕ್ಕರೆ.
ಕೊಂಡಿಗಳು
ಹೊರಗಿನ ಕೊಂಡಿಗಳು
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.