ಅಲೆ
From Wikipedia, the free encyclopedia
Remove ads
From Wikipedia, the free encyclopedia
ದ್ರವ ಚಲನಶಾಸ್ತ್ರದಲ್ಲಿ, ಅಲೆಗಳು (ಸಾಗರಗಳು, ಸಮುದ್ರಗಳು, ಕೆರೆಗಳು, ನದಿಗಳು, ಕಾಲುವೆಗಳು, ಕೊಚ್ಚೆಗುಂಡಿಗಳು ಅಥವಾ ಕೊಳಗಳಂತಹ) ಜಲಕಾಯಗಳ ಮುಕ್ತ ಮೇಲ್ಮೈ ಮೇಲೆ ಉಂಟಾಗುವ ತರಂಗಗಳು. ಇವು ದ್ರವದ ಮೇಲ್ಮೈ ಪ್ರದೇಶದ ಮೇಲೆ ಗಾಳಿ ಬೀಸುವುದರಿಂದ ಉಂಟಾಗುತ್ತವೆ. ಸಾಗರಗಳಲ್ಲಿನ ಅಲೆಗಳು ನೆಲ ಮುಟ್ಟುವುದಕ್ಕೆ ಮುಂಚೆ ಸಾವಿರಾರು ಮೈಲಿ ಪ್ರಯಾಣಿಸಬಹುದು. ಭೂಮಿ ಮೇಲಿನ ಅಲೆಗಳು ಗಾತ್ರದಲ್ಲಿ ಸಣ್ಣ ಅಲೆಗಳಿಂದ ಹಿಡಿದು ೧೦೦ ಅಡಿಗಿಂತ ಎತ್ತರದ ಅಲೆಗಳವರೆಗೆ ಇರಬಹುದು.[೧]
ಸ್ಥಳೀಯ ಗಾಳಿಯಿಂದ ಉತ್ಪನ್ನವಾದಾಗ ಮತ್ತು ಬಾಧಿತವಾದಾಗ, ಒಂದು ಅಲೆ ವ್ಯವಸ್ಥೆಯನ್ನು ಗಾಳಿ ಸಮುದ್ರ ಎಂದು ಕರೆಯಲಾಗುತ್ತದೆ. ಗಾಳಿ ಬೀಸುವುದು ನಿಂತ ನಂತರ, ಅಲೆಗಳನ್ನು ಉಬ್ಬುವಿಕೆಗಳೆಂದು ಕರೆಯಲಾಗುತ್ತದೆ. ಹೆಚ್ಚು ಸಾಮಾನ್ಯವಾಗಿ, ಉಬ್ಬುವಿಕೆಯು ಆ ಸಮಯದ ಸ್ಥಳೀಯ ಗಾಳಿಯಿಂದ ಗಮನಾರ್ಹವಾಗಿ ಬಾಧಿತವಾಗದ ಅಲೆಗಳನ್ನು ಹೊಂದಿರುತ್ತದೆ. ಅವು ಬೇರೆ ಎಲ್ಲೋ ಅಥವಾ ಸ್ವಲ್ಪ ಸಮಯ ಮೊದಲು ಉತ್ಪತ್ತಿಯಾಗಿರುತ್ತವೆ. ಸಾಗರದಲ್ಲಿನ ಅಲೆಗಳನ್ನು ಸಾಗರ ಮೇಲ್ಮೈ ತರಂಗಗಳು ಎಂದು ಕರೆಯಲಾಗುತ್ತದೆ.
ಅಲೆಗಳನ್ನು ಸಾಮಾನ್ಯವಾಗಿ ಭೂಮಿಯ ಸಮುದ್ರಗಳಲ್ಲಿ ಪರಿಗಣಿಸಲಾಗುತ್ತಾದರೂ, ಟೈಟನ್ ಚಂದ್ರದ ಹೈಡ್ರೊಕಾರ್ಬನ್ ಸಮುದ್ರಗಳೂ ಅಲೆಗಳನ್ನು ಹೊಂದಿರಬಹುದು.
ಅಲೆಗಳಲ್ಲಿನ ಹರಿವಿನ ರಚನೆಗಳ ಮೇಲೆ ಐದು ಅಂಶಗಳು ಪ್ರಭಾವ ಬೀರುತ್ತವೆ: (೧) ಅಲೆಯ ವೇಗದ ಹೋಲಿಕೆಯಲ್ಲಿ ಗಾಳಿಯ ವೇಗ ಅಥವಾ ಬಲ—ಶಕ್ತಿ ವರ್ಗಾವಣೆಯಾಗಲು ಅಲೆಯ ಶಿಖರಕ್ಕಿಂತ ಗಾಳಿಯು ವೇಗವಾಗಿ ಚಲಿಸುತ್ತಿರಬೇಕು; (೨) ಮುಕ್ತ ನೀರಿನ ತಡೆರಹಿತ ದೂರ. ನೀರಿನ ಮೇಲೆ ಗಾಳಿ ಬೀಸಿದಾಗ ದಿಕ್ಕಿನಲ್ಲಿ ಗಮನಾರ್ಹ ಬದಲಾವಣೆಯಾಗಬಾರದು; (೩) ಹರವಿನಿಂದ ಪ್ರಭಾವಿತವಾದ ಪ್ರದೇಶದ ಅಗಲ; (೪) ಗಾಳಿಯ ಕಾಲಾವಧಿ — ನೀರಿನ ಮೇಲೆ ಗಾಳಿ ಬೀಸಿದ ಅವಧಿ; (೫) ನೀರಿನ ಆಳ. ಈ ಎಲ್ಲ ಅಂಶಗಳು ಒಟ್ಟಾಗಿ ಕಾರ್ಯಮಾಡಿ ಅಲೆಗಳ ಗಾತ್ರ ಮತ್ತು ಅವುಗಳಲ್ಲಿನ ಹರಿವಿನ ರಚನೆಯನ್ನು ನಿರ್ಧರಿಸುತ್ತವೆ.
ಪೂರ್ಣವಾಗಿ ವಿಕಸನಗೊಂಡ ಸಮುದ್ರವು ನಿರ್ದಿಷ್ಟ ಬಲ, ಅವಧಿ, ಮತ್ತು ಹರವಿನ ಗಾಳಿಗೆ ಸೈದ್ಧಾಂತಿಕವಾಗಿ ಸಾಧ್ಯವಾದ ಗರಿಷ್ಠ ಅಲೆ ಗಾತ್ರವನ್ನು ಹೊಂದಿರುತ್ತದೆ. ಆ ಗಾಳಿಗೆ ಹೆಚ್ಚಿನ ಒಡ್ಡಿಕೆಯು ಕೇವಲ ಶಕ್ತಿಯ ಚೆದುರುವಿಕೆ ಉಂಟುಮಾಡಬಹುದು, ಏಕೆಂದರೆ ಅಲೆಗಳ ಶಿಖರಗಳು ಒಡೆಯುತ್ತವೆ ಮತ್ತು ನೊರೆಹೊತ್ತ ಹೆದ್ದೆರೆಗಳ ರಚನೆಯಾಗುತ್ತದೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಅಲೆಗಳು ವಿಶಿಷ್ಟವಾಗಿ ಎತ್ತರದ ಶ್ರೇಣಿಯನ್ನು ಹೊಂದಿರುತ್ತವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.