From Wikipedia, the free encyclopedia
ಅಲಂಕಾರ:-- ಮನುಷ್ಯನು ಚೆನ್ನಾಗಿ ಕಾಣುವ ಉದ್ದೇಶದಿಂದ ಒಡವೆ, ವಸ್ತ್ರ , ಇತ್ಯಾದಿಗಳನ್ನು ಧರಿಸಿಕೊಳ್ಳುತ್ತಾನೆ . ಈ ಅಲಂಕಾರದಿಂದ ಜನರು ಆಕರ್ಷಿತರಾಗುತ್ತಾರೆ . ಕಟ್ಟಡ ಅಥವಾ ಗೋಡೆಯ ಸೌಂದರ್ಯವನ್ನು ಹೆಚ್ಚಿಸಲು ಸುಂದರ ವಸ್ತುಗಳಿಂದ ಅಲಂಕರಿಸುತ್ತೇವೆ. ಅಲ್ಲಿಗೆ ಅಲಂಕಾರವೆಂದರೆ ಸೌಂದರ್ಯವನ್ನು ಹೆಚ್ಚಿಸುವುದು ಎಂದಾಯಿತು . ಹಾಗೆಯೇ ಮಾತನಾಡುವಾಗಲೂ ಕೇಳುವವರಿಗೆ ಹಿತವಾಗುವಂತೆ ಚಮತ್ಕಾರದ ರೀತಿಯಲ್ಲಿ ಮಾತಾನಾಡುವುದು ಉಂಟು.
ಉದಾಹರಣೆ:- ಕಮಲೆಯ ಜಿಂಕೆಯಂತೆ ಓಡುತ್ತಾಳೆ ಉಪಮೇಯ -ಕಮಲೆಯು ಉಪಮಾನ - ಜಿಂಕೆ ಉಪಮಾವಾಚಕ - ಅಂತೆ ಸಾದಾರಣಧರ್ಮ - ಓಡುತ್ತಾಳೆ
ಕಾವ್ಯವನ್ನು ಕುರಿತು ಚರ್ಚಿಸುವಾಗ ವಿಶಾಲ ಅರ್ಥವನ್ನು ಬಯಸಿ, ರಸವನ್ನುಅಲಂಕಾರವೆಂದೆ ಪರಿಗಣಿಸಿ, ಕಾವ್ಯದಲ್ಲಿ ಅಲಂಕಾರಗಳೇ ಮುಖ್ಯವೆಂದು ಪ್ರತಿಪಾದಿಸಿದ ಕಾವ್ಯಮೀಮಾಂಸಕರಾದ ಭಾಮಹ, ಉದ್ಬಟ, ರುದ್ರಟ, ಜಯದೇವ ಮೊದಲಾದವರ ಒಟ್ಟು ಚರ್ಚೆಯನ್ನು 'ಅಲಂಕಾರ ಪ್ರಸ್ಥಾನ'ವೆಂದು ಕರೆಯಬಹುದು. ಅಲಂಕಾರ ಪ್ರಸ್ಥಾನದ ಪ್ರಭಾವವೂ ಗಾಢವಾಗಿದ್ದ ಕಾವ್ಯಮೀಮಾಂಸೆಯನ್ನು 'ಅಲಂಕಾರ ಶಾಸ್ತ್ರ'ವೆಂದು ಹೇಳಲಾಗುತ್ತದೆ.
ಕವಿಗಳು ಅರ್ಥ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದರೆ ಅದು ಅರ್ಥಾಲಂಕಾರ. ಅರ್ಥಾಲಂಕಾರದಲ್ಲಿ ಎಂಟು ವಿಧ ಅವುಗಳೆಂದರೆ :-
ಎರಡು ವಸ್ತುಗಳು ಪರಸ್ಪರವಾಗಿ ಇರುವ ಸಾದೃಶ್ಯ (ಸಮಾನವಾದ) ಹೋಲಿಕೆಯನ್ನು ತಿಳಿಸುವುದೇ ಉಪಮಾಲಂಕಾರ. ಇದರಲ್ಲಿ ಎರಡು ಬಗೆ - ೧.ಪೂರ್ಣೋಪಮೆ, ೨.ಲುಪ್ತೋಪಮೆ ಉಪಮಾಲಂಕಾರದಲ್ಲಿ, ಉಪಮೇಯ = ಯಾವ ವಸ್ತುವನ್ನು ಹೋಲಿಸುತ್ತೇವೆಯೋ ಆ ವಸ್ತು, ಉಪಮಾನ = ಯಾವ ವಸ್ತುವಿಗೆ ಹೋಲಿಸುತ್ತೇವೆಯೋ ಆ ವಸ್ತು, ಸಮಾನಧರ್ಮ = ಉಪಮೇಯ, ಉಪಮಾನಗಳಲ್ಲಿ ಕಂಡು ಬರುವ ಸಮಾನಗುಣ, ಉಪಮಾವಾಚಕ = ಅಂತೆ, ಹಾಗೆ, ವೊಲ್, ಅಂಗ ಎಂಬ ನಾಲ್ಕು ಅಂಶಗಳಿರುತ್ತವೆ. ಉದಾ 1: ಮಗುವಿನ ಮುಖವು ಚಂದ್ರನಂತೆ ಮನೋಹರವಾಗಿವೆ ಉಪಮೇಯ = ಮಗುವಿನ ಮುಖ ಉಪಮಾನ = ಚಂದ್ರ ಸಮಾನಧರ್ಮ = ಮನೋಹರ ಉಪಮಾವಾಚಕ = ಅಂತೆ ಸಮನ್ವಯ : ಇಲ್ಲಿ ಉಪಮೇಯವಾದ ಮಗುವಿನ ಮುಖವನ್ನು ಉಪಮಾನವಾದ ಚಂದ್ರನಿಗೆ ಸಮಾನವಾಗಿ ( ಸಾದೃಶ್ಯ) ಹೋಲಿಸಲಾಗಿದೆ. ಆದ್ದರಿಂದ ಇದು ಉಪಮಾಲಂಕಾರ. ಇಲ್ಲಿ ಉಪಮೇಯ, ಉಪಮಾನ, ಸಮಾನಧರ್ಮ ಮತ್ತು ಉಪಮಾವಾಚಕ - ಈ ನಾಲ್ಕೂ ಅಂಶಗಳಿರುವುದರಿಂದ ಇದು ಪೂರ್ಣ ಉಪಮಾಲಂಕಾರ ಎಂದೆನ್ನಿಸಿಕೊಳ್ಳುತ್ತದೆ. ಉದಾ ೨ : ಸೀತೆಯ ಮುಖ ಕಮಲದಂತೆ ಇದೆ. ಉಪಮೇಯ = ಸೀತೆಯ ಮುಖ ಉಪಮಾನ = ಕಮಲ ಉಪಮಾವಾಚಕ = ಅಂತೆ ಇಲ್ಲಿ ಸಮಾನಧರ್ಮ ಇಲ್ಲ. ಆದ್ದರಿಂದ ಇದಕ್ಕೆ ಲುಪ್ತೋಪಮಾಲಂಕಾರ ಎಂದು ಹೆಸರು.
ಅಭ್ಯಾಸಕ್ಕಾಗಿ ಉದಾಹರಣೆ :
ಉಪಮೇಯ ಉಪಮಾನಗಳಲ್ಲಿ ಹೋಲಿಕೆಯು ಬೇಧವಿಲ್ಲದೆ ವರ್ಣಿತವಾದರೆ ಅದು ರೂಪಕಾಲಂಕಾರ (ಉಪಮೇಯ , ಉಪಮಾನ ಎರಡೂ ಒಂದೇ ಎಂದು ವರ್ಣಿಸುವುದು )
ಉದಾ : ಸೀತೆಯ ಮುಖ ಕಮಲ
ಉಪಮೇಯ = ಸೀತೆಯ ಮುಖ
ಉಪಮಾನ = ಕಮಲ
ಸಮನ್ವಯ : ಇಲ್ಲಿ ಉಪಮೇಯವಾದ ಸೀತೆಯ ಮುಖಕ್ಕೂ ಉಪಮಾನವಾದ ಕಮಲಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಆದ್ದರಿಂದ ಇದು ರೂಪಕಾಲಂಕಾರ
ಇದರಲ್ಲಿ ಎರಡು ವಿಧಗಳು-
೧.ಅಭೇದ ರೂಪಕಾಲಂಕಾರ= ವರ್ಣಿಸುವ ವಸ್ತುವು ಇನ್ನೊಂದರಂತೆ ಇದೆ ಎಂದು ಹೇಳದೆ,ಎರಡು ವಸ್ತುಗಳು ಅಂದರೆ ಉಪಮೇಯ ಉಪಮಾನಗಳೆರಡೂ ಒಂದೇ ಎಂದು ಭೇದವಿಲ್ಲದೆ ಹೇಳುವುದು.
೨.ತದ್ರೂಪ್ಯ ರೂಪಕಾಲಂಕಾರ= ಉಪಮೇಯ & ಉಪಮಾನಗಳೆರಡನ್ನೂ ತದ್ರೂಪಿಯಾಗಿ ನಿದರ್ಶಿಸುವುದು.
ಅಭ್ಯಾಸಕ್ಕಾಗಿ ಉದಾಹರಣೆ "
ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ ಸಮರ್ಥನೆ ಮಾಡುವುದನ್ನು ಅರ್ಥಾಂತರನ್ಯಾಸಾಲಂಕಾರ ಎನ್ನುವರು . ಉದಾ : ಅಮೀರನು ಉಂಡಮನೆಗೆ ಕೇಡು ಬಗೆದ . ಕೃತಘ್ನರು ಏನನ್ನೂ ಮಾಡುವರು. ಅಮೀರನು ಉಂಡ ಮನೆಗೆ ಕೇಡು ಬಗೆದ. ( ವಿಶೇಷ ವಾಕ್ಯ ) ಕೃತಘ್ನರು ಏನನ್ನೂ ಮಾಡುವರು. ( ಸಾಮಾನ್ಯ ವಾಕ್ಯ ) ಸಮನ್ವಯ : ಇಲ್ಲಿ ಉಪಮಾನವಾದ "ಕೃತಘ್ನರು ಏನನ್ನೂ ಮಾಡುವರು." ( ಸಾಮಾನ್ಯ ವಾಕ್ಯ ) , ಅಮೀರನು ಉಂಡ ಮನೆಗೆ ಕೇಡು ಬಗೆದ ( ವಿಶೇಷ ವಾಕ್ಯ ) ಎಂಬ ಮಾತನ್ನು ಸಮರ್ಥಿಸಲಾಗಿದೆ ಆದ್ದರಿಂದ ಇದು ಅರ್ಥಾಂತರನ್ಯಾಸಾಲಂಕಾರ.
ಎರಡು ಬೇರೆಬೇರೆ ವಾಕ್ಯಗಳು ಅರ್ಥ ಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಭಾವದಂತೆ ತೋರುತ್ತಿದ್ದರೆ ಅದು ದೃಷ್ಟಾಂತ ಅಲಂಕಾರ ಉದಾ : ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ ಉಪಮೇಯ = ತಾಯಿ ಉಪಮಾನ = ಉಪ್ಪು ಉಪಮವಾಚಕ = ಗಿಂತ ಸಮನ್ವಯ : ಇಲ್ಲಿ ಉಪಮೇಯವಾದ ತಾಯಿಗಿಂತ ಬಂಧುವಿಲ್ಲ ಹಾಗೂ ಉಪಮಾನವಾದ ಉಪ್ಪಿಗಿಂತ ರುಚಿಯಿಲ್ಲ ಎರಡೂ ಬಿಂಬ ಪ್ರತಿಬಿಂಬ ಭಾವದಂತೆ ಇರುವುದುರಿಂದ ಇದು ದೃಷ್ಟಾಂತ ಅಲಂಕಾರ
ಒಂದಕ್ಕಿಂತ ಹೆಚ್ಚು ಅರ್ಥಕೊಡುವ ಪದಶಕ್ತಿಗೆ ಶ್ಲೇಷಾ ಎಂದು ಹೆಸರು. ಬೇರೆಬೇರೆ ಅರ್ಥ ನೀಡುವಂತಿದ್ದರೆ ಅದು ಶ್ಲೇಷಾಲಂಕಾರ ಉದಾ : ಕುರುಕುಲಾರ್ಕನು ಅರ್ಕನು ಅಸ್ತಂಗತರಾದರು. ಉಪಮೇಯ = ಕುರುಕುಲಾರ್ಕನು ( ಕುರು ವಂಶಕ್ಕೆ ಸೂರ್ಯನಂತಿರುವವನು = ದುರ್ಯೋಧನ ) ಉಪಮಾನ = ಅರ್ಕ ( ಸೂರ್ಯ ) ಸಮನ್ವಯ : ಬೇರೆಬೇರೆ ಅರ್ಥ ಹೊಂದಿದ ಅರ್ಕ ಎಂಬ ಪದ ಉಪಮೇಯಕ್ಕೆ ( ಸುಯೋಧನ ) ಉಪಮಾನವಾದ ( ಸೂರ್ಯ ) ಬೇರೆಬೇರೆ ಅರ್ಥ ನೀಡುತ್ತದೆ. ಆದ್ದರಿಂದ ಇದು ಶ್ಲೇಷಾಲಂಕಾರ ಒಂದಕ್ಕಿಂತ ಹೆಚ್ಚು ಅರ್ಥಕೊಡುವ ಪದಶಕ್ತಿಗೆ ಶ್ಲೇಷಾ ಎಂದು ಹೆಸರು. ಬೇರೆಬೇರೆ ಅರ್ಥ ನೀಡುವಂತಿದ್ದರೆ ಅದು ಶ್ಲೇಷಾಲಂಕಾರ ಉದಾ : ಕುರುಕುಲಾರ್ಕನು ಅರ್ಕನು ಅಸ್ತಂಗತರಾದರು. ಉಪಮೇಯ = ಕುರುಕುಲಾರ್ಕನು ( ಕುರು ವಂಶಕ್ಕೆ ಸೂರ್ಯನಂತಿರುವವನು = ದುರ್ಯೋಧನ ) ಉಪಮಾನ = ಅರ್ಕ ( ಸೂರ್ಯ ) ಸಮನ್ವಯ : ಬೇರೆಬೇರೆ ಅರ್ಥ ಹೊಂದಿದ ಅರ್ಕ ಎಂಬ ಪದ ಉಪಮೇಯಕ್ಕೆ ( ಸುಯೋಧನ ) ಉಪಮಾನವಾದ ( ಸೂರ್ಯ ) ಬೇರೆಬೇರೆ ಅರ್ಥ ನೀಡುತ್ತದೆ. ಆದ್ದರಿಂದ ಇದು ಶ್ಲೇಷಾಲಂಕಾರ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.