ಅರಬ್ಬೀ ಸಮುದ್ರ
ಸಮುದ್ರ From Wikipedia, the free encyclopedia
ಸಮುದ್ರ From Wikipedia, the free encyclopedia
ಆರಬ್ಬೀ ಸಮುದ್ರ ಭಾರತದ ಪಶ್ಚಿಮ ಭಾಗವನ್ನು ಆವರಿಸಿರುವ ಸಮುದ್ರ, ಹಿಂದೂ ಮಹಾಸಾಗರದ ಒಂದು ಭಾಗ. ಅದರ ವಾಯವ್ಯ ಭಾಗದಲ್ಲಿದೆ ಇದರ ಹಳೆ ಹೆಸರು ಎರಿಥ್ರಿಯನ್ ಸಮುದ್ರ. ಅರಬ್ಬರ ವಾಣಿಜ್ಯ ಈ ಭಾಗದಲ್ಲಿ ಹೆಚ್ಚಾಗಿರುವುದರಿಂದ, ಇದನ್ನು ಅರಬ್ಬೀ ಸಮುದ್ರವೆಂದು ಕರೆಯಲಾಯಿತು. ಪೂರ್ವಕ್ಕೆ ಭಾರತವೂ ಉತ್ತರಕ್ಕೆ ಪಾಕಿಸ್ತಾನ ಮತ್ತು ಇರಾನ್ ದೇಶಗಳ ಪಶ್ಚಿಮ ಭಾಗಗಳೂ ಪಶ್ಚಿಮಕ್ಕೆ ಅರೇಬಿಯ, ಆಫ್ರಿಕಗಳ ಪೂರ್ವಭಾಗಗಳೂ ಇವೆ. ಕೆಂಪು ಸಮುದ್ರವೂ ಪರ್ಷಿಯ ಕೊಲ್ಲಿಯೂ ಅರಬ್ಬೀ ಸಮುದ್ರಕ್ಕೆ ಸೇರಿಕೊಂಡಿವೆ. ಸಿಂಧು, ನರ್ಮದಾ ಮತ್ತು ತಪತಿ ಇವು ಈ ಸಮುದ್ರವನ್ನು ಸೇರುವ ಮುಖ್ಯ ನದಿಗಳು. ಭಾರತದ ಜೊತೆ ಇರಾನ್,ಪಾಕಿಸ್ತಾನ, ಶ್ರೀಲಂಕಾ ಸುಡಾನ್ಮುಂತಾದ ದೇಶಗಳೂ ಕೂಡ 'ಅರಬ್ಬೀ ಸಮುದ್ರ ತೀರ'ಗಳನ್ನು ಹೊಂದಿವೆ. ಇದನ್ನು ಸಿಂಧು ಸಾಗರ ಎಂದೂ ಕರೆಯುತ್ತಿದ್ದರು.
ಸಮುದ್ರತೀರ'ದುದ್ದಕ್ಕೂ ಹಲವಾರು ನಗರಗಳಿವೆ 'ಅರಬ್ಬೀ ಸಮುದ್ರ ತೀರ'ದಲ್ಲಿರುವ ಕೆಲವು ಪ್ರಮುಖ ನಗರಗಳೆಂದರೆ -ಕೊಚ್ಚಿ, ಮಂಗಳೂರು, ಮುಂಬಯಿ, ಸೂರತ್, ಕರಾಚಿ ಏಡೆನ್
ಒಂದಾನೊಂದು ಕಾಲದಲ್ಲಿ ಈ ಸಮುದ್ರ ತೀರ ಹಡಗಿನ ಸಂಚಾರಕ್ಕೆ ಪ್ರಖ್ಯಾತಿ ಹೊಂದಿತ್ತು. ಈಗ ಯುರೋಪ್ ಮತ್ತು ಭಾರತಗಳ ಮಧ್ಯೆ ಪ್ರಮುಖ ನೌಕಾಮಾರ್ಗವಾಗಿದೆ. ಅಕ್ಟೋಬರ್ನಿಂದ ಮೇ ವರೆಗೆ ಈಶಾನ್ಯ ವಾಣಿಜ್ಯ ಮಾರುತವೂ ಜೂನ್ನಿಂದ ಸೆಪ್ಟೆಂಬರ್ವರೇಗೆ ನೈರುತ್ಯ ವಾಣಿಜ್ಯ ಮಾರುತವೂ ಬೀಸುತ್ತವೆ. ಜೂನ್ನಿಂದ ಸೆಪ್ಟೆಂಬರ್ವರೇಗೆ ನೈರುತ್ಯ ವಾಣಿಜ್ಯ ಮಾರುತವೂ ಅರಬ್ಬೀ ಸಮುದ್ರದ ಪ್ರಾಮುಖ್ಯ ಸೂಯೆಜ್ ಕಾಲುವೆಯನ್ನು ತೆರೆದ ಅನಂತರ (1869) ಬಹಳ ಹೆಚ್ಚಿತು. ಇಲ್ಲಿನ ಕೆಲವು ದ್ವೀಪಗಳಲ್ಲಿ ಸೊಕೊಟ್ರಾ ಮತ್ತು ಲಕ್ಷದ್ವೀಪ ಎಂಬುವು ಮುಖ್ಯವಾದುವು.
ಒಟ್ಟು ವಿಸ್ತೀರ್ಣ 3,863,000 ಚ.ಕಿಮೀ. ಸರಾಸರಿ ಆಳ 2,734 ಮೀ. ಸಮುದ್ರದ ಮಧ್ಯಭಾಗದ ಆಳ 2,900 ಮೀ ಮೀರುತ್ತದೆ. ಇಲ್ಲಿ ಯಾವುದೇ ದ್ವೀಪಗಳಿಲ್ಲ, ದಾಖಲಾಗಿರುವ ಸಮುದ್ರದ ಅತೀ ಆಳ 4,850 ಮೀ. ಬೇಸಗೆಯಲ್ಲಿ ಸಮುದ್ರದ ಮಧ್ಯ ಭಾಗದ ಮೇಲ್ಮೈ ನೀರಿನ ಉಷ್ಣಾಂಶ 240-250 ಸೆಂ. ಸಮುದ್ರ್ರ ಪಶ್ಚಿಮ ಭಾಗ ಸಮೃದ್ಧ ಮೀನು ಸಂಪತ್ತು ಹೊಂದಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.