ಟೈಪ್ ಆಫ್ ವುಡ್ From Wikipedia, the free encyclopedia
ಅಗರು ಅಗ್ಯಾಲಕ್ ಮರಗಳು (ಆಗ್ನೇಯ ಏಷ್ಯಾಕ್ಕೆ ಸ್ಥಳೀಯವಾದ ದೊಡ್ಡ ನಿತ್ಯಹರಿದ್ವರ್ಣಮರಗಳಾದ ಆಕ್ವಿಲೇರಿಯಾ ಮತ್ತು ಜೈರಿನಾಪ್ಸ್) ಒಂದು ಪ್ರಕಾರದ ಬೂಸಿನಿಂದ ಸೋಂಕಿಗೊಳಗಾದಾಗ ರೂಪಗೊಳ್ಳುವ ಒಂದು ಗಾಢಬಣ್ಣದ ರಾಳಯುಕ್ತ ಚೇಗು. ಸೋಂಕಿಗೆ ಮುಂಚೆ, ಚೇಗು ನಿರ್ಗಂಧವಾಗಿದ್ದು, ತುಲನಾತ್ಮಕವಾಗಿ ತಿಳಿ ಮತ್ತು ಮಸುಕಾದ ಬಣ್ಣಹೊಂದಿರುತ್ತದೆ; ಆದರೆ, ಸೋಂಕು ಬೆಳೆದಂತೆ, ಆಕ್ರಮಣದ ಪ್ರತಿಯಾಗಿ, ಮರವು ಗಾಢಬಣ್ಣದ ಪರಿಮಳಯುಕ್ತ ರಾಳವನ್ನು ಉತ್ಪಾದಿಸುತ್ತದೆ, ಮತ್ತು ಇದರ ಪರಿಣಾಮವಾಗಿ ಚೇಗು ಬಹಳ ದಟ್ಟ, ಗಾಢ, ರಾಳಯುಕ್ತವಾಗಿರುತ್ತದೆ. ಈ ರಾಳಯುಕ್ತ ದಾರು ಅದರ ವಿಶಿಷ್ಟ ಸುವಾಸನೆಗಾಗಿ ಅನೇಕ ಸಂಸ್ಕೃತಿಗಳಲ್ಲಿ ಮಹತ್ವ ಪಡೆದಿದೆ, ಮತ್ತು ಹಾಗಾಗಿ ಧೂಪದ್ರವ್ಯ ಮತ್ತು ಸುಗಂಧ ದ್ರವ್ಯಗಳಿಗಾಗಿ ಬಳಸಲ್ಪಡುತ್ತದೆ.
ಕಾಡು ಸಂಪನ್ಮೂಲದ ಬರಿದಾಗುವಿಕೆ ಅಗರಿನ ತುಲನಾತ್ಮಕ ವಿರಳತೆ ಮತ್ತು ಅಧಿಕ ವೆಚ್ಚದ ಮುಖ್ಯ ಕಾರಣಗಳಲ್ಲಿ ಒಂದು.[1] ೧೯೯೫ರಿಂದ, ಪ್ರಾಥಮಿಕ ಮೂಲವಾದ ಆಕ್ವಿಲೇರಿಯಾ ಮಲ್ಯಾಕ್ಸೆನ್ಸಿಸ್ ಅನ್ನು ಸಂಭಾವ್ಯವಾಗಿ ಅಪಾಯಕ್ಕೊಳಗಾದ ಪ್ರಜಾತಿಗಳ ಪಟ್ಟಿಯಲ್ಲಿ ಇರಿಸಲಾಗಿದೆ. ೨೦೦೪ರಲ್ಲಿ ಎಲ್ಲ ಆಕ್ವಿಲೇರಿಯಾ ಪ್ರಜಾತಿಗಳನ್ನು ಇದರಲ್ಲಿ ಪಟ್ಟಿ ಮಾಡಲಾಯಿತು, ಆದರೆ ಹಲವಾರು ದೇಶಗಳು ಆ ಪಟ್ಟಿಗೆ ಸಂಬಂಧಿಸಿದಂತೆ ಎದ್ದುಕಾಣುವ ಸಂದೇಹಗಳನ್ನು ಹೊಂದಿವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.