ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
ಹ್ಯಾರಿ ಪಾಟರ್ ಪುಸ್ತಕಗಳು Harry Potter and the Half-Blood Prince | |
---|---|
ಲೇಖಕಿ | ಜೆ. ಕೆ. ರೊಲಿಂಗ್ |
ಚಿತ್ರಲೇಖಕ | Jason Cockcroft (UK) Mary GrandPré (US) |
ಪ್ರಕಾರ | ಕಲ್ಪನೆ |
ಪ್ರಕಾಶಕರು | ಬ್ಲೂಮ್ಸ್ ಬೆರಿ (ಯುಕೆ) ಆರ್ಥರ್ ಎ. ಲೆವಿನ್/ ಸ್ಕೊಲ್ಯಸ್ಟಿಕ್ (ಯುಎಸ್) ರೈನ್ಕೋಸ್ಟ್ (ಕೆನಡ) |
ಬಿಡುಗಡೆ | 16 July 2005 |
ಪುಸ್ತಕ ಸಂಖ್ಯೆ | Six |
ಮಾರಾಟ | ~65 million[ಸೂಕ್ತ ಉಲ್ಲೇಖನ ಬೇಕು] |
ಕಥಾ ಕಾಲಕ್ರಮಾಂಕ | 1 August 1996-June 10, 1997 |
ಅಧ್ಯಾಯಗಳು | 30 |
ಪುಟಗಳು | 607 (UK) 652 (US) |
ಐಎಸ್ಬಿಎನ್ | 0747581088 |
ಹಿಂದಿನ ಪುಸ್ತಕ | Harry Potter and the Order of the Phoenix |
ಮುಂದಿನ ಪುಸ್ತಕ | Harry Potter and the Deathly Hallows |
ಕಳೆದ ೨೦೦೫ರ ಜುಲೈ ೧೬ರಂದು ಬಿಡುಗಡೆಯಾದ ಹ್ಯಾರಿ ಪಾಟರ್ ಅಂಡ್ ದಿ ಹಾಫ್-ಬ್ಲಡ್ ಪ್ರಿನ್ಸ್, ಬ್ರಿಟಿಷ್ ಬರಹಗಾರ್ತಿ ಜೆ. ಕೆ. ರೌಲಿಂಗ್ರವರ ಜನಪ್ರಿಯ ಹ್ಯಾರಿ ಪಾಟರ್ ಏಳು ಕಾದಂಬರಿಗಳ ಸರಣಿಯಲ್ಲಿ ಆರನೆಯದು. ಹಾಗ್ವಾರ್ಟ್ಸ್ನಲ್ಲಿ ಹ್ಯಾರಿ ಪಾಟರ್ನ ಕಲಿಕೆಯ ಆರನೆಯ ವರ್ಷದಲ್ಲಿ ಇದರ ಕಥೆಯನ್ನು ಹೆಣೆಯಲಾಗಿದೆ. ಈ ಕಾದಂಬರಿಯು ಲಾರ್ಡ್ ವೊಲ್ಡ್ಮಾರ್ಟ್ರ ಹಿನ್ನೆಲೆಯನ್ನು ಪರಿಶೋಧಿಸುತ್ತದೆಯಲ್ಲದೇ, ಅಂತಿಮ ಯುದ್ಧಕ್ಕೆ ಹ್ಯಾರಿಯ ಸಿದ್ಧತೆಯ ಮೇಲೆ ಕಥೆ ಕೇಂದ್ರೀಕೃತವಾಗಿದೆ. ತಾರುಣ್ಯಾವಸ್ಥೆಯ ಲಕ್ಷಣಗಳಾದ ಆಗಷ್ಟೆ ಮೂಡುತ್ತಿರುವ ಪ್ರೇಮ-ಪ್ರಣಯ ಪ್ರಸಂಗಗಳು ಹಾಗೂ ಭಾವನಾತ್ಮಕ ಗೊಂದಲಗಳು ಮತ್ತು ಘರ್ಷಣೆ-ಸಮಸ್ಯೆಗಳ ಇತ್ಯರ್ಥ ಇವೆಲ್ಲವೂ ಸಹ ಈ ಕಾದಂಬರಿಯ ಅಂಶಗಳಲ್ಲಿ ಸೇರಿವೆ.
ಈ ಕಾದಂಬರಿ ಬಿಡುಗಡೆಯಾದ ನಂತರದ ಮೊದಲ ೨೪ ಗಂಟೆಗಳಲ್ಲಿ ಒಂಬತ್ತು ದಶಲಕ್ಷ ಪ್ರತಿಗಳು ಮಾರಾಟವಾದವು. ಆ ಸಮಯದಲ್ಲಿ ಇದು ದಾಖಲೆಯಾಗಿತ್ತು. ಇದಾದ ನಂತರ ಬಿಡುಗಡೆಯಾದ ಹ್ಯಾರಿ ಪಾಟರ್ ಅಂಡ್ ದಿ ಡೆತ್ಲಿ ಹ್ಯಾಲೊಸ್ ಕಂತು ಹಾಫ್ ಬ್ಲಡ್ ಪ್ರಿನ್ಸ್ ಕೃತಿಯ ಮಾರಾಟ ದಾಖಲೆಯನ್ನು ಹಿಂದಿಕ್ಕಿತು.[1]