ಹೋಟ್ಜೆನ್
From Wikipedia, the free encyclopedia
From Wikipedia, the free encyclopedia
ಹೋಟ್ಜೆನ್ (Hoatzin) ದಕ್ಷಿಣ ಅಮೇರಿಕದಲ್ಲಿ ವಾಸಿಸುವ, ಪಕ್ಷಿ ವರ್ಗದಲ್ಲೇ ಅತ್ಯಂತ ಪ್ರಾಚೀನ ಸ್ವರೂಪದ ಪಕ್ಷಿ. Opisthocomidae ಕುಟುಂಬಕ್ಕೆ ಸೇರಿದ ಈ ಪಕ್ಷಿಯ ವೈಜ್ಞಾನಿಕ ಹೆಸರು Opisthocomus hoazin.
ಈ ಪಕ್ಷಿಯ ಪಳಯುಳಿಕೆಗಳು ಐವತ್ತು ಮಿಲಿಯ ವರ್ಷಗಳ ಹಿಂದಿನ ಆಲಿಗೋಸೀನ್ ಯುಗದ ಪಳಯುಳಿಕೆಗಳೊಡನೆ ಸಿಕ್ಕಿವೆ. ಇಂತಹ ಪುರಾತನ ಪಕ್ಷಿ ಇನ್ನೂ ಜೀವಂತವಾಗಿದೆ ಎಂದು ತಿಳಿದಿದ್ದು ಮಧ್ಯ ಅಮೇರಿಕದ ಅಜಟೆಕ್ ಜನಾಂಗದಿಂದ. ರಯೋ ಉಕಾಯಲಿ ನದಿಯ ಸುತ್ತಮುತ್ತ ಇರುವ ಕಾಡುಗಳಲ್ಲಿದ್ದ ಈ ಪಕ್ಷಿಗಳನ್ನು ಮೊದಲು ಸಂಶೋಧಿಸಿ ಜಗತ್ತಿಗೆ ತಿಳಿಸಿದವರು ಡಾ.ಕೆ.ಹೆಚ್.ಲುಲಿಂಗ್ ಎಂಬ ಪಕ್ಷಿಶಾಸ್ತ್ರಜ್ಞ.
ಸುಮಾರು 2ಕಿ.ಗ್ರಾಂ ತೂಗುವ ಹೋಟ್ಜೆನ್, ಉಕಾಯಲಿ ನದಿ ತೀರದಲ್ಲಿ ಬೆಳೆಯುವ ಅರುಮ್ ಜಾತಿಯ ಮರದೆಲೆಗಳನ್ನು ಮಾತ್ರ ತಿನ್ನುತ್ತದೆ. ಈ ಎಲೆಗಳನ್ನು ಜಗಿದು ಉಂಡೆಮಾಡಿ ನುಂಗುತ್ತವೆ. ಆರುಮ್ ಮರದ ಎಲೆಗಳಿಗಿರುವ ದುರ್ವಾಸನೆ ಈ ಹಕ್ಕಿಗಳಲ್ಲೂ ಇರುವುದರಿಂದ ಇವನ್ನು ಯಾರೂ ತಿನ್ನುವುದಿಲ್ಲ. ಬಹುಶಃ ಈ ಹಕ್ಕಿ ಇಲ್ಲಿಯ ವರೆಗೂ ಬದುಕಿರಲು ಈ ದುರ್ವಾಸನೆಯೇ ಕಾರಣವೆನ್ನಬಹುದು.
ಇದು ಮರದ ಮೇಲೆ ವಾಸಿಸುವ ಹಕ್ಕಿಯಾದರೂ ಹಾರುವುದನ್ನು ಹೊಸದಾಗಿ ಕಲಿಯುತ್ತಿರುವ ಹಕ್ಕಿಯಂತೆ ತಡಬಡಾಯಿಸುತ್ತ ಹಾರುತ್ತದೆ. ಇದರ ಮರಿಗಳಿಗೆ ಆರ್ಕಿಯೋಪ್ಟೆರ ಡೈನೊಸಾರ್ ಗಳಿಗೆ ಇದ್ದಂತೆ ರೆಕ್ಕೆಗಳ ತುದಿಯಲ್ಲಿ ಉಗುರುಗಳಿರುತ್ತವೆ. ಮರಿಗಳು ಉಗುರುಗಳ ಸಹಾಯದಿಂದ ನೇತಾಡಿಕೊಂಡು ಚಲಿಸುತ್ತವೆ. ಮರಿಗಳು ಬೆಳೆದಂತೆ ಈ ಉಗುರುಗಳು ಉದುರಿ ಹೋಗುತ್ತವೆ. ಉರಗಗಳ ಮುಂಗಾಲುಗಳು ಮಾರ್ಪಟ್ಟು ಹಕ್ಕಿಗಳಲ್ಲಿ ರೆಕ್ಕೆಗಳಾಗಿದ್ದಕ್ಕೆ ಇದೊಂದು ಸ್ಪಷ್ಟ ಉದಾಹರಣೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.