ಹೈದರಾಬಾದ್, ತೆಲಂಗಾಣ
ತೆಲಂಗಾಣ ರಾಶ್ತ್ರದ ರಾಜಧಾನಿ / From Wikipedia, the free encyclopedia
ಹೈದರಾಬಾದ್ (ತೆಲುಗು:హైదరాబాద్,ಉರ್ದು: حیدرآباد) ತೆಲಂಗಾಣದ ರಾಜಧಾನಿ ಹಾಗೂ ಭಾರತದ ಅತಿ ಹೆಚ್ಚು ಜನಸಂಖ್ಯೆ ಇರುವ ಒಂದು ನಗರ. ಹೈದರಾಬಾದ್ 4 ಮಿಲಿಯನ್ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.[1] ಇದನ್ನು "ಮುತ್ತುಗಳ ನಗರ" ಹಾಗೂ "ನಿಜಾಮ್ರ ನಗರ" ಎಂದು ಹೇಳಲಾಗುತ್ತದೆ.
' | |
Charminar | |
ರಾಜ್ಯ - ಜಿಲ್ಲೆ |
[[ತೆಲಂಗಾಣ]] - List
|
ನಿರ್ದೇಶಾಂಕಗಳು | 17.41° N 78.47° E |
ವಿಸ್ತಾರ - ಎತ್ತರ |
621.48 km² - 536 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2001) - ಸಾಂದ್ರತೆ - Agglomeration (2009) |
3637483 (6th) - 5852.9/ಚದರ ಕಿ.ಮಿ. - 6290397 (6th) |
Commissioner | S.P.Singh |
ಕೋಡ್ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 500 xxx - +91-40 - AP09, AP10, AP11, AP12, AP13, AP28, AP29 |
ಅಂತರ್ಜಾಲ ತಾಣ: www.ghmc.gov.in |
ಈ ನಗರವು ತನ್ನ ಅಭಿವೃದ್ಧಿಪರತೆ ಮತ್ತು ತನ್ನ ವಿಶಾಲವಾದ ವಿಸ್ತೀರ್ಣ,ಜನಸಂಖ್ಯೆಗಳ ಕಾರಣದಿಂದ A-1 ಸಿಟಿ ಎಂದು ಗುರುತಿಸಲ್ಪಟ್ಟಿದೆ.[2]
ಹೈದರಾಬಾದ್ ನಗರವು ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಒಂದು ಪ್ರಮುಖ ತಾಣವಾಗಿ ಬೆಳವಣಿಗೆಗೊಂಡಿದೆ. ಈ ನಗರವು ಪ್ರಪಂಚದ ಅತಿ ದೊಡ್ಡ ಫಿಲ್ಮ್ ಸ್ಟುಡಿಯೋ ಆಗಿರುವ ರಾಮೋಜಿ ಫಿಲ್ಮ್ ಸಿಟಿಗೆ ಮನೆಯಾಗಿದೆ, ಅಲ್ಲದೆ ಟಾಲಿವುಡ್ ಎಂದು ಜನಪ್ರಿಯವಾದ ತೆಲಗು ಫಿಲ್ಮ್ ಇಂಡಸ್ಟ್ರಿಯು ಭಾರತದಲ್ಲಿನ ಎರಡನೇ ಅತಿ ದೊಡ್ಡ ಸಿನೆಮಾ ಉದ್ಯಮವಾಗಿದೆ. ಇದು ಹಲವಾರು ಕ್ರೀಡಾಂಗಣಗಳನ್ನು ಹೊಂದಿರುವ ಕಾರಣ ಪ್ರಮುಖ ಕ್ರೀಡಾತಾಣವಾಗಿದೆ. ಇಲ್ಲಿ ಹಲವಾರು ಅಂತರಾಷ್ಟ್ರೀಯ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಅಲ್ಲದೆ ಈ ನಗರವು ಇಂಡಿಯನ್ ಪ್ರೀಮಿಯರ್ ಲೀಗ್ನ ಡೆಕ್ಕನ್ ಚಾರ್ಜರ್ಸ್ ತಂಡಕ್ಕೆ ತವರಾಗಿದೆ.
ಹೈದರಾಬಾದಿನ ನಿವಾಸಿಗಳನ್ನು ಹೈದರಾಬಾದಿಗಳು ಎಂದು ಕರೆಯಲಾಗುತ್ತದೆ. ಈ ನಗರವು ಆಧುನಿಕತೆಯನ್ನು ಮತ್ತು ಪಾರಂಪಾರಿಕತೆ ಎರಡನ್ನೂ ಸಂಯೋಜನೆಗೊಂಡಿರುವುದಕ್ಕಾಗಿ ಹೆಸರುವಾಸಿಯಾಗಿದೆ.[3]