ಹೆಲ್ಸಿಂಕಿ
From Wikipedia, the free encyclopedia
ಹೆಲ್ಸಿಂಕಿ (listen (ಸಹಾಯ·ಮಾಹಿತಿ); ಸ್ವೀಡಿಶ್:Helsingfors, listen (ಸಹಾಯ·ಮಾಹಿತಿ)) ಫಿನ್ಲೆಂಡ್ನ ರಾಜಧಾನಿ ಮತ್ತು ಅತಿ ದೊಡ್ಡ ನಗರ. ರಾಜಧಾನಿಯು ಫಿನ್ಲೆಂಡ್ನ ದಕ್ಷಿಣ ಭಾಗದಲ್ಲಿ, ಬಾಲ್ಟಿಕ್ ಸಮುದ್ರದ ಬಳಿ ಫಿನ್ಲೆಂಡ್ ಕೊಲ್ಲಿಯ ದಡದಲ್ಲಿದೆ. ಹೆಲ್ಸಿಂಕಿ ನಗರದ ಜನಸಂಖ್ಯೆಯು ೬,೨೧,೮೬೩ (೩೦ ನವೆಂಬರ್ ೨೦೧೪),[1] ಇದರಿಂದಾಗಿ ಇಡೀ ಫಿನ್ಲೆಂಡ್ ದೇಶದಲ್ಲೇ ಅತಿ ಹೆಚ್ಚಿನ ಜನಸಂಖ್ಯೆಯು ಈ ಸ್ಥಳೀಯ ಆಡಳಿತ ಪ್ರದೇಶದಲ್ಲಿದೆ. ಸ್ವೀಡೆನ್ನ ಸ್ಟಾಕ್ಹೋಮ್ನಿಂದ ಪೂರ್ವದಿಕ್ಕಿನಲ್ಲಿ ಹೆಲ್ಸಿಂಕಿ ಸುಮಾರು 400 kilometres (250 mi) ದೂರವಿದೆ. ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಿಂದ 300 kilometres (190 mi) ಪಶ್ಚಿಮಕ್ಕೆ ಹಾಗೂ ಎಸ್ಟೊನಿಯಾದ ಟ್ಯಾಲಿನ್ನಿಂದ 80 kilometres (50 mi) ಉತ್ತರಕ್ಕಿದೆ. ಹೆಲ್ಸಿಂಕಿ ಈ ಮೂರು ನಗರಗಳ ನಡುವೆ ನಿಕಟ ಸಂಪರ್ಕಹೊಂದಿದೆ.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (September 2009) |
Helsinki
Helsinki – Helsingfors | |
---|---|
City | |
Helsingin kaupunki Helsingfors stad | |
Nickname(s): Stadi, Hesa | |
Country | Finland |
Region | Uusimaa |
Sub-region | Helsinki |
Charter | 1550 |
Capital city | 1812 |
Government | |
• Mayor | Jussi Pajunen |
Area | |
• Urban | ೭೭೦.೨೬ km೨ (೨೯೭.೪೦ sq mi) |
• Metro | ೨,೯೭೦.೧೮ km೨ (೧,೧೪೬.೭೯ sq mi) |
Population | |
• Density | ೦/km೨ (೦/sq mi) |
• Urban | ೧೧,೦೬,೮೮೧ |
• Urban density | ೧,೪೩೭.೦೨/km೨ (೩,೭೨೧.೯/sq mi) |
• Metro | ೧೩,೯೪,೮೦೯ |
• Metro density | ೪೬೯.೬/km೨ (೧,೨೧೬/sq mi) |
Time zone | UTC+2 (EET) |
• Summer (DST) | UTC+3 (EEST) |
Website | www.hel.fi |
ಹೆಲ್ಸಿಂಕಿ ಸ್ಥಳೀಯಾಡಳಿತ ಪ್ರದೇಶವು ಹೆಲ್ಸಿಂಕಿ ಮಹಾನಗರ ಪ್ರದೇಶ ಹಾಗೂ ಗ್ರೇಟರ್ ಹೆಲ್ಸಿಂಕಿ ಪ್ರದೇಶದ ಹೃದಯಭಾಗವಾಗಿದೆ. ಹೆಲ್ಸಿಂಕಿ ನಗರ ಹಾಗೂ ಮೂರು ಇತರೆ ನಗರಗಳನ್ನು ಒಳಗೊಂಡ ಹೆಲ್ಸಿಂಕಿ ಮಹಾನಗರ ಪ್ರದೇಶದಲ್ಲಿ ಒಂದು ದಶಲಕ್ಷಕ್ಕಿಂತಲೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಈ ನಗರಗಳಲ್ಲಿ ಎರಡು ನಗರಗಳಾದ ಎಸ್ಪೋ ಹಾಗೂ ವ್ಯಾಂಟಾ, ಕ್ರಮವಾಗಿ ಹೆಲ್ಸಿಂಕಿಯ ಪಶ್ಚಿಮ ಹಾಗೂ ಉತ್ತರ ದಿಕ್ಕುಗಳಲ್ಲಿವೆ. ಮೂರನೆಯ ನಗರ ಕೊನಿಯೈನೆನ್ ಎಸ್ಪೋ ನಗರದೊಳಗಿನ ಒಂದು ಪರಾವೃತ ಪ್ರದೇಶವಾಗಿದೆ. ಹೆಲ್ಸಿಂಕಿ ಮಹಾನಗರವು ಭೂಮಿಯಲ್ಲಿ ಅತ್ಯಂತ ಉತ್ತರದಲ್ಲಿರುವ ನಗರ ಪ್ರದೇಶವಾಗಿದೆ. ಇಲ್ಲಿನ ಜನಸಂಖ್ಯೆಯು ಒಂದು ದಶಲಕ್ಷವನ್ನೂ ಮೀರಿದೆ. ಈ ನಗರವು, ಯುರೋಪ್ ಒಕ್ಕೂಟದ ಯಾವುದೇ ಸದಸ್ಯ ರಾಷ್ಟ್ರದ ಅತ್ಯಂತ ಉತ್ತರದಲ್ಲಿರುವ ರಾಜಧಾನಿಯಾಗಿದೆ. ಮೇಲೆ ತಿಳಿಸಲಾದ ನಗರಗಳು ಮತ್ತು ಹೊರವಲಯದಲ್ಲಿರುವ ಒಂಬತ್ತು ಉಪನಗರಗಳನ್ನು ಒಳಗೊಂಡಿರುವ ಗ್ರೇಟರ್ ಹೆಲ್ಸಿಂಕಿ ಪ್ರದೇಶದಲ್ಲಿ ಒಟ್ಟು ಸುಮಾರು 1.3 ದಶಲಕ್ಷ ಜನರು ವಾಸಿಸುತ್ತಿದ್ದಾರೆ. ನಾಲ್ವರು ಫಿನ್ಲೆಂಡಿಗರಲ್ಲೊಬ್ಬರು ಗ್ರೇಟರ್ ಹೆಲ್ಸಿಂಕಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
ಹೆಲ್ಸಿಂಕಿ ಫಿನ್ಲೆಂಡ್ನ ಪ್ರಮುಖ ರಾಜಕೀಯ, ಶೈಕ್ಷಣಿಕ, ಹಣಕಾಸಿನ, ಸಾಂಸ್ಕೃತಿಕ ಹಾಗೂ ಸಂಶೋಧನಾ ಕೇಂದ್ರವಾಗಿದೆ. ಹೆಲ್ಸಿಂಕಿ ಬಾಲ್ಟಿಕ್ ಸಮುದ್ರ ಹಾಗೂ ಉತ್ತರ ಯುರೋಪ್ನ ಪ್ರಮುಖ ಪ್ರಾದೇಶಿಕ ನಗರವಾಗಿದೆ. ಫಿನ್ಲೆಂಡ್ನಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ವಿದೇಶೀ ಉದ್ದಿಮೆಗಳಲ್ಲಿ ಸುಮಾರು 70%ರಷ್ಟು ಉದ್ದಿಮೆಗಳು ಹೆಲ್ಸಿಂಕಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ.[2]
ಇಸವಿ 2009ರ ಆರಂಭದಿಂದಲೂ, ಹೆಲ್ಸಿಂಕಿ ಹಾಗೂ ವ್ಯಾಂಟಾ ಮಹಾನಗರಗಳ ವಿಲೀನ ಸಂಭವನೀಯತೆ ಕುರಿತು ಚಿಂತನೆ ನಡೆಯುತ್ತಿದೆ. ದಿನಾಂಕ 30 ಮಾರ್ಚ್ 2009ರಂದು, ವ್ಯಾಂಟಾ ನಗರ ಕೌನ್ಸಿಲ್ ವಿಲೀನದ ಕುರಿತು ಹೆಲ್ಸಿಂಕಿ ಪ್ರಸ್ತಾಪವನ್ನು ಪುನರ್ಪರಿಶೀಲಿಸಲು ಒಪ್ಪಿಕೊಂಡಿತು. ಈ ಪುನರ್ಪರಿಶೀಲನೆಯು ವ್ಯಾಂಟಾ ನಗರದ ಅಸ್ತಿತ್ವವನ್ನು ಅಳಿಸಿಬಿಡುವ ಸಾಧ್ಯತೆಯ ಕುರಿತಲ್ಲ ಎಂದು ನಗರ ಕೌನ್ಸಿಲ್ ಪ್ರತಿಪಾದಿಸಿದೆ.[3]
2009ರಲ್ಲಿ ಅಂತಾರಾಷ್ಟ್ರೀಯ ಕೈಗಾರಿಕಾ ವಿನ್ಯಾಸ ಮಂಡಳಿ,ಹೆಲ್ಸಿಂಕಿಯನ್ನು 2012ಕ್ಕಾಗಿ ವಿಶ್ವ ವಿನ್ಯಾಸ ರಾಜಧಾನಿಯನ್ನಾಗಿ ಆಯ್ಕೆ ಮಾಡಿತು. ಈ ಪ್ರಶಸ್ತಿಗಾಗಿ ಹೆಲ್ಸಿಂಕಿ ಏಂಡ್ಹೊವೆನ್ ನಗರವನ್ನು ಸ್ವಲ್ಪದರಲ್ಲಿ ಸೋಲಿಸಿ ಆಯ್ಕೆಯಾಯಿತು.