ಹೆನ್ರಿ ಫೋರ್ಡ್
ಅಮೇರಿಕದ ಕೈಗಾರಿಕೋದ್ಯಮಿ / From Wikipedia, the free encyclopedia
ಹೆನ್ರಿ ಫೋರ್ಡ್[1] (ಜುಲೈ ೩೦, ೧೮೬೩ - ಏಪ್ರಿಲ್ ೭, ೧೯೪೭) ಅಮೇರಿಕದ ಕೈಗಾರಿಕೋದ್ಯಮಿ, ಫೋರ್ಡ್ ಮೋಟಾರ್ ಕಂಪನಿಯ ಸಂಸ್ಥಾಪಕರು ಮತ್ತು ಸಾಮೂಹಿಕ ಉತ್ಪಾದನೆ ಜೋಡಣೆ ತಂತ್ರ ಅಭಿವೃದ್ಧಿಯ ಪ್ರಾಯೋಜಕರು. ಫೋರ್ಡ್ ಮೋಟಾರ್ ಕಂಪನಿ ಮಾಲೀಕರಾಗಿ, ಅವರು ವಿಶ್ವದ ಶ್ರೀಮಂತ ಮತ್ತು ಪ್ರಸಿದ್ಧ ವ್ಯಕ್ತಿಯಾದರು. ೧೯ ನೆಯ ಶತಮಾನದ ಕೊನೆಯಲ್ಲಿ ಜಾಗತಿಕ ಕೈಗಾರಿಕಾ ಬೆಳವಣೆಗೆ ರೈಲು ರಸ್ತೆ ಮತ್ತು ಕಬ್ಬಿಣದ ಮೇಲೆ ಕೇಂದ್ರಿಕೃತವಾಗಿತ್ತು. ೧೯೨೦ ರ ಹೊತ್ತಿಗೆ ಜನರಿಗೆ ಉಪಯುಕ್ತವಾದ ಮತ್ತು ಬಳಕೆಗೆ ಬೇಕಾಗುವ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳಿಂದ ಈ ಬೆಳವಣೆಗೆ ಪ್ರಭಾವಗೊಂಡಿತು. ಇವುಗಳಲ್ಲಿ ಬಹಳ ಮುಖ್ಯವಾದದ್ದು ಸ್ವಚಾಲಿತ ವಾಹನಗಳ ತಯಾರಿಕೆ. ಈ ದಿಶೆಯಲ್ಲಿ ಮುಂದಾಳುತನ ಪ್ರದರ್ಶಿಸಿ ಪ್ರಪಂಚದ ಮುಖವನ್ನೇ ಬದಲಾಯಿಸಲು ಕಾರಣನಾದವರು ಹೆನ್ರಿ ಫೋರ್ಡ್.
Quick Facts ಹೆನ್ರಿ ಫೋರ್ಡ್, ಜನನ ...
Close