ಹೆನ್ರಿಕ್ ಹಿಮ್ಲರ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (June 2010) |
ಹೆನ್ರಿಕ್ ಲ್ಯೂಟಿಪೋಲ್ಡ್ ಹಿಮ್ಲರ್ (pronounced [ˈhaɪnʁɪç ˈluˑɪtˌpɔlt ˈhɪmlɐ] ( listen) 7 ಅಕ್ಟೋಬರ್ 1900 – 23 ಮೇ 1945), SSನ ರೀಕ್ಸ್ಫಹ್ರರ್, ಅಂದರೆ ಓರ್ವ ಸೇನಾ ದಳಪತಿ, ಮತ್ತು ನಾಜಿ ಪಕ್ಷದ ಓರ್ವ ಅಗ್ರಗಣ್ಯ ಸದಸ್ಯನಾಗಿದ್ದ. ಜರ್ಮನ್ ಆರಕ್ಷಕ ಪಡೆಯ ಓರ್ವ ಮುಖ್ಯಸ್ಥನಾಗಿ ಮತ್ತು ನಂತರದಲ್ಲಿ ಗೃಹಖಾತೆಯ ಸಚಿವನಾಗಿ, ಗೆಸ್ಟಾಪೊವನ್ನು ಒಳಗೊಂಡಂತೆ ಎಲ್ಲಾ ಆಂತರಿಕ ಮತ್ತು ಬಾಹ್ಯ ಆರಕ್ಷಕ ಮತ್ತು ಭದ್ರತಾ ಪಡೆಗಳ ಮೇಲ್ವಿಚಾರಣೆಯನ್ನು ಹಿಮ್ಲರ್ ವಹಿಸಿದ್ದ. ರೀಕ್ಸ್ಫಹ್ರರ್ ಆಗಿ ಮತ್ತು ನಂತರದಲ್ಲಿ ಬದಲಿ (ಸ್ವದೇಶಿ) ಸೇನೆಯ ದಳಪತಿಯಾಗಿ ಮತ್ತು ರೀಕ್ನ ಸಮಗ್ರ ಆಡಳಿತಕ್ಕೆ (ಜೆನರಲ್ಬೆಲ್ವೊಲ್ಮ್ಯಾಟೈಟರ್ ಫರ್ ಡೈ ವೆರ್ವಾಲ್ಟಂಗ್ ) ಸಂಬಂಧಿಸಿದ ಪ್ರಧಾನ ಪೂರ್ಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಹಿಮ್ಲರ್, ನಾಜಿ ಜರ್ಮನಿಯಲ್ಲಿ ಎರಡನೇ ಅತ್ಯಂತ ಶಕ್ತಿವಂತ ಮನುಷ್ಯನಾಗುವವರೆಗಿನ ಹಂತವನ್ನು ತಲುಪಿದ.
ಸೆರೆ ಶಿಬಿರಗಳು, ಮೂಲೋತ್ಪಾಟನ ಶಿಬಿರಗಳು, ಮತ್ತು ಐನ್ಸ್ಯಾಟ್ಜ್ಗ್ರಪ್ಪೆನ್ (ಅಕ್ಷರಶಃ ಅರ್ಥ: ವಿಶೇಷ ಕಾರ್ಯಪಡೆಗಳು; ಸಾಯಿಸುವ ದಳಗಳಾಗಿ ಇವು ಅನೇಕಬಾರಿ ಬಳಸಲ್ಪಟ್ಟವು) ಪಡೆಗಳ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸಿದ ಹಿಮ್ಲರ್, ಅಗಾಧ ಪ್ರಮಾಣದಲ್ಲಿ ಜನರನ್ನು ಸಾಯಿಸುವ ಕೃತ್ಯದಲ್ಲಿ ಸಮಭಾಗಿಯಾಗಿದ್ದ; ಸುಮಾರು ಆರು ದಶಲಕ್ಷದಷ್ಟು ಯೆಹೂದಿಗಳು, 200,000 ಮತ್ತು 500,000 ಸಂಖ್ಯೆಯ ನಡುವಿನ ರೋಮಾನಿ ಜನರು,[1][2], ಅನೇಕ ಮಂದಿ ಯುದ್ಧದ ಸೆರೆಯಾಳುಗಳು, ಮತ್ತು ಪ್ರಾಯಶಃ ಮತ್ತೊಂದು ಮೂರರಿಂದ ನಾಲ್ಕು ದಶಲಕ್ಷದಷ್ಟು ಪೋಲೆಂಡಿನ ಜನರು, ಕಮ್ಯುನಿಸ್ಟರು, ಅಥವಾ ಸಲಿಂಗಕಾಮಿಗಳು, ಶಾರೀರಿಕ ಮತ್ತು ಮಾನಸಿಕ ದೌರ್ಬಲ್ಯಗಳನ್ನು ಹೊಂದಿರುವ ಜನರು, ಜೆಹೊವಾಹ್ನ ಸಾಕ್ಷಿಗಳು ಮತ್ತು ಪಾಪನಿವೇದನೆ ಮಾಡಿಕೊಳ್ಳುವ ಚರ್ಚಿನ ಸದಸ್ಯರಂಥ, ಬದುಕಲು ಯೋಗ್ಯರಲ್ಲದವರು ಎಂಬುದಾಗಿ ನಾಜಿಗಳಿಂದ ಪರಿಗಣಿಸಲ್ಪಟ್ಟಿದ್ದ ಜನರು ಅಥವಾ ಆ "ಹಾದಿಯಲ್ಲಿದ್ದ" ಇತರ ಗುಂಪುಗಳು ಹೀಗೆ ಸತ್ತ ಜನಗಳಲ್ಲಿ ಸೇರಿದ್ದರು. ಯುದ್ಧವು ಅಂತ್ಯಗೊಳ್ಳುವುದಕ್ಕೆ ಸ್ವಲ್ಪವೇ ಮುಂಚಿತವಾಗಿ, ತನ್ನ ವಿರುದ್ಧ ಕಾನೂನು ಕ್ರಮ ಜರುಗಿಸದೆ ತನ್ನನ್ನು ಉಳಿಸಿದ್ದೇ ಆದಲ್ಲಿ, ಪಾಶ್ಚಾತ್ಯ ಮಿತ್ರರಾಷ್ಟ್ರಗಳಿಗೆ ಜರ್ಮನಿಯ ಮತ್ತು ಸ್ವತಃ ತನ್ನ ಶರಣಾಗತಿಯಾಗುವುದರ ಕುರಿತು ಅವನು ಪ್ರಸ್ತಾವವನ್ನು ಮುಂದಿರಿಸಿದ್ದ.
ಬ್ರಿಟಿಷ್ ಪಡೆಗಳಿಂದ ಬಂಧಿಸಲ್ಪಟ್ಟ ನಂತರ, ಯಾವುದೇ ಪ್ರಶ್ನೆಗಳಿಗೆ ತಾನು ಈಡಾಗುವುದಕ್ಕೆ ಮುಂಚೆಯೇ ಅವನು ಆತ್ಮಹತ್ಯೆ ಮಾಡಿಕೊಂಡ.