ಹೂ ಜಿಂಟಾವೊ
From Wikipedia, the free encyclopedia
ಟೆಂಪ್ಲೇಟು:Fix bunching
Hu Jintao | |||||||||||||||
---|---|---|---|---|---|---|---|---|---|---|---|---|---|---|---|
ಸರಳೀಕಸರಿಸಿದ ಚೀನೀ | 胡锦涛 | ||||||||||||||
ಸಾಂಪ್ರದಾಯಿಕ ಚೀನೀ | 胡錦濤 | ||||||||||||||
|
Hu Jintao 胡锦涛 | |
---|---|
General Secretary of the Communist Party of China | |
ಹಾಲಿ | |
ಅಧಿಕಾರ ಸ್ವೀಕಾರ 15 November 2002 | |
ಪೂರ್ವಾಧಿಕಾರಿ | Jiang Zemin |
President of the People's Republic of China | |
ಹಾಲಿ | |
ಅಧಿಕಾರ ಸ್ವೀಕಾರ 15 March 2003 | |
Premier | Wen Jiabao |
ಉಪ ರಾಷ್ಟ್ರಪತಿ | Zeng Qinghong Xi Jinping |
ಪೂರ್ವಾಧಿಕಾರಿ | Jiang Zemin |
Chairman of the Central Military Commission of the Communist Party of China | |
ಹಾಲಿ | |
ಅಧಿಕಾರ ಸ್ವೀಕಾರ 19 September 2004 | |
ಪ್ರತಿನಿಧಿ | Guo Boxiong Xu Caihou |
ಪೂರ್ವಾಧಿಕಾರಿ | Jiang Zemin |
Chairman of the Central Military Commission of the People's Republic of China | |
ಹಾಲಿ | |
ಅಧಿಕಾರ ಸ್ವೀಕಾರ 13 March 2005 | |
ಪ್ರತಿನಿಧಿ | Guo Boxiong Xu Caihou |
ಪೂರ್ವಾಧಿಕಾರಿ | Jiang Zemin |
Vice President of the People's Republic of China | |
ಅಧಿಕಾರ ಅವಧಿ 15 March 1998 – 15 March 2003 | |
ರಾಷ್ಟ್ರಪತಿ | Jiang Zemin |
ಪೂರ್ವಾಧಿಕಾರಿ | Rong Yiren |
ಉತ್ತರಾಧಿಕಾರಿ | Zeng Qinghong |
ವೈಯಕ್ತಿಕ ಮಾಹಿತಿ | |
ಜನನ | (1942-12-21) ೨೧ ಡಿಸೆಂಬರ್ ೧೯೪೨ (ವಯಸ್ಸು ೮೧) Jiangyan, Jiangsu Province China |
ರಾಜಕೀಯ ಪಕ್ಷ | Communist Party of China |
ಸಂಗಾತಿ(ಗಳು) | Liu Yongqing |
ಮಕ್ಕಳು | Hu Haifeng Hu Haiqing |
ವಾಸಸ್ಥಾನ | Zhongnanhai |
ಅಭ್ಯಸಿಸಿದ ವಿದ್ಯಾಪೀಠ | Tsinghua University |
ಉದ್ಯೋಗ | Hydraulic engineer |
ಟೆಂಪ್ಲೇಟು:Fix bunching ಹೂ ಜಿಂಟಾವೊ (ಪಿನ್ಯಿನ್: Hú Jǐntáo, [xǔ tɕìntʰɑ́ʊ] ಎಂಬುದಾಗಿ ಉಚ್ಚರಿಸಲಾಗುತ್ತದೆ; 1942ರ ಡಿಸೆಂಬರ್ 21ರಂದು ಜಿಯಾಂಗ್ಸುವಿನ ತೈಝೊವು ಎಂಬಲ್ಲಿ ಜನನ) ಚೀನಿ ಜನರ ಗಣರಾಜ್ಯದ ಈಗಿನ ಸಾರ್ವಭೌಮಾಧಿಕಾರವುಳ್ಳ ನಾಯಕನಾಗಿದ್ದಾನೆ. ಹಲವು ಬಗೆಯ ಅಧಿಕಾರ-ಪಟ್ಟಗಳನ್ನು ಅವನು ನಿರ್ವಹಿದ್ದಾನೆ. 2002ರಿಂದ ಚೀನಾದ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದುದು, 2003ರಿಂದ ಚೀನಿ ಜನರ ಗಣರಾಜ್ಯದ ಅಧ್ಯಕ್ಷನಾಗಿದ್ದುದು, ಮತ್ತು 2004ರಿಂದ ಕೇಂದ್ರೀಯ ಸೇನಾ ಆಯೋಗದ ಸಭಾಪತಿಯಾಗಿದ್ದುದು, ಚೀನಾದ ಕಮ್ಯೂನಿಸ್ಟ್ ಪಕ್ಷದ ನಾಲ್ಕನೇ ಪೀಳಿಗೆಯ ನಾಯಕತ್ವದ ಅಗ್ರಗಣ್ಯ ನಾಯಕನಾಗಿ ಜಿಯಾಂಗ್ ಝೆಮಿನ್ಗೆ ಉತ್ತರಾಧಿಕಾರಿಯಾದುದು ಇವೆಲ್ಲವೂ ಈ ಪಟ್ಟಿಯಲ್ಲಿ ಸೇರುತ್ತವೆ.
ಅತಿಗೆ-ಹೋಗದ ಮತ್ತು ಬಿಗುಮಾನದ (ಅಥವಾ ಮಿತಭಾಷಿಯಾದ) ಒಂದು ನಾಯಕತ್ವ ಶೈಲಿಯನ್ನು ಹೂ ಹೊಂದಿದ್ದಾನೆ.[1] ವಯಸ್ಸಾದ, ಅಧಿಕಾರರೂಢವರ್ಗದ ಕಮ್ಯೂನಿಸ್ಟರಿಂದ ತರುಣರಾಗಿರುವ, ಹೆಚ್ಚು ಹಠವಾದಿಯಾಗಿರುವ ತಂತ್ರಜ್ಞ ಪ್ರಭುತ್ವವಾದಿಗಳಿಗೆ ಚೀನಾದ ನಾಯಕತ್ವದ ದಾಟುವಿಕೆಯನ್ನು ಅವನು ಅಧ್ಯಕ್ಷಗಿರಿಗೆ ಏರಿದ್ದು ಪ್ರತಿನಿಧಿಸುತ್ತದೆ. ಹಿಂದಿನ ಆಡಳಿತದಿಂದ ಸಡಿಲಗೊಳಿಸಲ್ಪಟ್ಟಿದ್ದ ಆರ್ಥಿಕತೆಯ ಮೇಲಿನ ನಿಶ್ಚಿತ ಹತೋಟಿಗಳನ್ನು ತನ್ನ ಅಧಿಕಾರ-ಪ್ರಾಬಲ್ಯದ ಕಾಲದಿಂದಲೂ ಹೂ ಪುನಃ ಸ್ಥಾಪಿಸಿದ್ದಾನೆ, ಮತ್ತು ರಾಜತಾಂತ್ರಿಕ ಸುಧಾರಣೆಗಳೆಡೆಗಿನ ತನ್ನ ವರ್ತನೆಯಲ್ಲಿ ಅವನು ಸಂಪ್ರದಾಯಪಾಲಕನಾಗಿದ್ದಾನೆ.[2] ವಿದೇಶಾಂಗ ನೀತಿಗೆ ಸಂಬಂಧಿಸಿ ಹೇಳುವುದಾದರೆ, ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಮಧ್ಯಮ ಮಾರ್ಗಿಯಾದ ಅಧಿಕಾರವನ್ನು ಅನುಸರಿಸುವ ಮೂಲಕ, "ಚೀನಾದ ಶಾಂತಿಯುತ ಅಭಿವೃದ್ಧಿ" ಎಂದು ಕರೆಯಲ್ಪಡುವ ಮಾರ್ಗವೊಂದನ್ನು ಹೂ ಸಮರ್ಥಿಸುತ್ತಾನೆ. ತನ್ನ ಸಹೋದ್ಯೋಗಿಯಾದ ಪ್ರಧಾನಮಂತ್ರಿ ವೆನ್ ಜಿಯಾಬಾವೊ ಜೊತೆಗೆ, ಸುಸಂಗತವಾದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಒಳಗೊಂಡಿದ್ದ ಸರಿಸುಮಾರಾಗಿ ಒಂದು ದಶಕದ ಅವಧಿಯ ಆಡಳಿತವನ್ನು ಹೂ ನಡೆಸಿದ ಪರಿಣಾಮವಾಗಿ ವಿಶ್ವದ ಒಂದು ಪ್ರಮುಖ ಶಕ್ತಿಯಾಗಿ ಚೀನಾ ಪ್ರತಿಷ್ಠಾಪಿಸಲ್ಪಡಲು ಸಾಧ್ಯವಾಯಿತು. ಹೂನ ಅಧಿಕಾರಾವಧಿಯ ಉದ್ದಕ್ಕೂ ಆಫ್ರಿಕಾ, ಲ್ಯಾಟಿನ್ ಅಮೆರಿಕಾ, ಮತ್ತು ಇತರ ಅಭಿವೃದ್ಧಿಶೀಲ ದೇಶಗಳಲ್ಲಿನ ಚೀನಾದ ಜಾಗತಿಕ ಪ್ರಭಾವವು ವರ್ಧಿಸಿತು.[3]
ತನ್ನ ವಯಸ್ಕ ಜೀವನದ ಬಹುತೇಕ ಭಾಗವನ್ನು ಕಮ್ಯೂನಿಸ್ಟ್ ಪಕ್ಷದ ಪ್ರಭುತ್ವದಲ್ಲಿ ತೊಡಗಿಸಿಕೊಂಡಿದ್ದ ಹೂ, ಟಿಬೆಟ್ ಸ್ವಯಮಾಧಿಕಾರದ ವಲಯಕ್ಕೆ ಸಂಬಂಧಿಸಿದಂತೆ ಪಕ್ಷದ ಮುಖ್ಯಸ್ಥನಾಗಿ, ಹಾಗೂ ಕಾಲಾನಂತರದಲ್ಲಿ CPCಯ ಆಡಳಿತ ಕಚೇರಿಯ ಕಾರ್ಯದರ್ಶಿಯಾಗಿ ಮತ್ತು ಜಿಯಾಂಗ್ ಝೆಮಿನ್ ಅಡಿಯಲ್ಲಿ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದು ಗಮನಾರ್ಹವಾಗಿತ್ತು. ಸ್ವದೇಶದಲ್ಲಿ ಸಮರಸದ ಸಮಾಜಕ್ಕೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ[4] ಶಾಂತಿಯುತ ಅಭಿವೃದ್ಧಿ ಗೆ ಸಂಬಂಧಿಸಿದ ಒಂದು ಮೂಲಾಧಾರವನ್ನು ಸ್ಥಾಪಿಸುವುದರೆಡೆಗೆ ಹೂನ ರಾಜತಾಂತ್ರಿಕ ತತ್ತ್ವವು ಗುರಿಯಿರಿಸಿಕೊಂಡಿದೆ ಎಂಬುದಾಗಿ ಸಂಕ್ಷೇಪವಾಗಿ ವಿವರಿಸಲಾಗುತ್ತದೆ; ಚೀನಾದ ಹಲವಾರು ಆರ್ಥಿಕ, ಪರಿಸರೀಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ನಿಭಾಯಿಸುವುದಕ್ಕಾಗಿ ಸಂಘಟಿತವಾದ ಪರಿಹಾರೋಪಾಯಗಳನ್ನು ಬಯಸುವ ವೈಜ್ಞಾನಿಕ ಅಭಿವೃದ್ಧಿಯ ಪರಿಕಲ್ಪನೆಯೊಂದರಿಂದ ಸಮರಸದ ಸಮಾಜದ ಪರಿಕಲ್ಪನೆಯು ಸೃಷ್ಟಿಸಲ್ಪಟ್ಟಿದೆ.[4]