From Wikipedia, the free encyclopedia
ಹಸಿರುಮನೆ (ಗಾಜಿನಮನೆ ಎಂದು ಸಹ ಕರೆಯಲ್ಪಡುವ) ಸಸಿಗಳನ್ನು ಬೆಳೆಸುವ ಒಂದು ಕಟ್ಟಡ.
ಹಸಿರುಮನೆ ಅನ್ನುವುದು ಗಾಜಿನ ಅಥವಾ ಪ್ಲಾಸ್ಟಿಕ್ಕು ಮೇಲ್ಛಾವಣಿ ಮತ್ತು ಹೆಚ್ಚಾಗಿ ಗಾಜಿನ ಅಥವಾ ಪ್ಲಾಸ್ಟಿಕ್ಕು ಗೋಡೆಗಳಂತಹ, ವಿವಿಧ ರೀತಿಯ ಮುಚ್ಚುವ ಮೂಲವಸ್ತುಗಳನ್ನು ಹೊಂದಿದ ಒಂದು ನಿರ್ಮಾಣವಾಗಿದೆ; ಸೂರ್ಯನಿಂದ ಒಳಗೆ ಬರುವ ಗೋಚರಿಸುವ ಸೌರ ವಿಕಿರಣಗಳನ್ನು ಕಟ್ಟಡದ ಒಳಗಿನ ಸಸಿಗಳು, ಮಣ್ಣು ಮತ್ತು ಇತರ ವಸ್ತುಗಳು ಹೀರಿಕೊಳ್ಳುವ ಕಾರಣ ಇದು ಬಿಸಿಯಾಗಿರುತ್ತದೆ. ಗಾಜು ಈ ವಿಕಿರಣಕ್ಕೆ ಪಾರದರ್ಶಕವಾಗಿರುತ್ತದೆ. ಬೆಚ್ಚನೆಯ ಕಟ್ಟಡದ ವಿನ್ಯಾಸಗಳು ಮತ್ತು ಹಸಿರುಮನೆ ಒಳಗಿನ ಸಸಿಗಳು ಈ ಶಕ್ತಿಯನ್ನು ಇನ್ಫ್ರಾರೆಡ್ (ಅತೀಗೆಂಪು) ವಿಕಿರಣಗಳಾಗಿ ಮರು ಪ್ರಸರಿಸುತ್ತವೆ, ಇದಕ್ಕೆ ಗಾಜು ಭಾಗಶಃ ಅಪಾರದರ್ಶಕವಾಗಿರುತ್ತದೆ, ಮತ್ತು ಆ ಶಕ್ತಿಯು ಗಾಜಿನಮನೆಯ ಒಳಗೇ ಉಳಿಯುತ್ತದೆ. ವರ್ತಿಸುವಿಕೆಯಿಂದ ಸ್ವಲ್ಪ ಮಟ್ಟಿನ ಶಾಖ ನಾಶವಾಗಿ ಹೋಗಿದ್ದರೂ, ಗಾಜಿನಮನೆಯ ಒಳಗಿನ ನಿವ್ವಳ ಶಕ್ತಿಯಲ್ಲಿ (ಮತ್ತು ಇದರಿಂದ ಉಷ್ಣತೆಯಲ್ಲಿ) ಹೇರಿಕೆ ಉಂಟಾಗುತ್ತದೆ. ಬಿಸಿಯಾಗಿದ್ದ ಒಳಗಿನ ಮೆಲ್ಮೈಗಳಿಂದ ಬೆಚ್ಚಗಾದ ಗಾಳಿಯು ಮೆಲ್ಛಾವಣಿ ಮತ್ತು ಗೋಡೆಗಳಿಂದ ತಡೆಯಲ್ಪಟ್ಟು ಕಟ್ಟಡದ ಒಳಗೇ ಉಳಿಯುತ್ತದೆ. ಈ ರೀತಿಯ ವಿನ್ಯಾಸದ ಕಟ್ಟಡಗಳು ಚಿಕ್ಕ ಗಾತ್ರದ ಷೆಡ್ಡುಗಳಿಂದ ಹಿಡಿದು ಬೃಹತ್ ಗಾತ್ರದ ಕಟ್ಟಡಗಳ ವರೆಗೂ ಇರುತ್ತವೆ.
ಹಸಿರುಮನೆಯನ್ನು ಗಾಜಿನ ಹಸಿರುಮನೆ ಮತ್ತು ಪ್ಲಾಸ್ಟಿಕ್ಕು ಹಸಿರುಮನೆ ಎಂದು ವಿಭಾಗಿಸಬಹುದಾಗಿದೆ. ಹೆಚ್ಚಾಗಿ ಉಪಯೋಗಿಸಬಹುದಾದ ಪ್ಲಸ್ಟಿಕ್ಕುಗಳೆಂದರೆ, ಪಿಇಪಿಲ್ಮ್ ಮತ್ತು ಪಿಸಿಯಲ್ಲಿನ ಮಲ್ಟಿವಾಲ್ (ಬಹುಗೋಡೆಯ) ಹಾಳೆ ಅಥವಾ ಪಿಎಮ್ಎಮ್ಎ. ವಾಣಿಜ್ಯದ ಗಾಜಿನ ಹಸಿರುಮನೆಗಳು ಹೆಚ್ಚಾಗಿ ತರಕಾರಿಗಳು ಮತ್ತು ಹೂವುಗಳಿಗೆ ಉಪಯೋಗಿಸುವ ಅತ್ಯುತ್ತಮ ತಂತ್ರಜ್ಞಾನವನ್ನು ಒಳಗೊಂಡ ಉತ್ಪಾದನಾ ಸೌಲಭ್ಯಗಳಾಗಿವೆ. ಗಾಜಿನ ಹಸಿರುಮನೆಗಳು ಮರೆಮಾಡುವಿಕೆಯನ್ನು ನೆಲೆಗೊಳಿಸುವಿಕೆಗಳು, ಬಿಸಿಯಾಗಿಸುವ, ತಂಪಾಗಿಸುವ ಮತ್ತು ಬೆಳಕನ್ನು ಒದಗಿಸುವ ಉಪಕರಣಗಳನ್ನು ಒಳಗೊಂಡಿದ್ದು ಇವನ್ನು ಬಹುಶಃ ಗಣಕಯಂತ್ರದ ಸಹಾಯದಿಂದ ಸ್ವಯಂ ನಿಯಂತ್ರಿಸಲಾಗುವುದು.
ಹಸಿರುಮನೆಗೆ ಉಪಯೋಗಿಸಿದ ಗಾಜು ಗಾಳಿಯ ಪ್ರವಾಹಕ್ಕೆ ಪ್ರತಿಬಂಧಕವಾಗಿ ಕಾರ್ಯನಿರ್ವಹಿಸುತ್ತದೆ, ಮತ್ತು ಇದು ಕಟ್ಟಡದ ಒಳಗಿನ ನೆಲ ಮತ್ತು ಸಸಿಗಳು ಎರಡರನ್ನೂ ಬಿಸಿಯಾಗಿಸುವ, ಶಕ್ತಿಯನ್ನು ಹಸಿರುಮನೆಯ ಒಳಗೇ ಸೆರೆಹಿಡಿಯಲು ಪರಿಣಾಮಕಾರಿಯಾಗಿರುತ್ತದೆ. ಇದು ನೆಲದ ಹತ್ತಿರ ಗಾಳಿಯನ್ನು ಬೆಚ್ಚಗಿರಿಸುತ್ತದೆ, ಮತ್ತು ಈ ಗಾಳಿಯನ್ನು ಏರುವಿಕೆಯಿಂದ ಮತ್ತು ದೂರ ಪ್ರವಹಿಸುವಿಕೆಯಿಂದ ತಡೆಯುತ್ತದೆ. ಹಸಿರುಮನೆಯ ಮೇಲ್ಛಾವಣಿಯ ಹತ್ತಿರ ಒಂದು ಚಿಕ್ಕ ಕಿಟಕಿಯನ್ನು ತೆರೆಯುವುದರ ಮೂಲಕ ಇದನ್ನು ಪ್ರಮಾಣೀಕರಿಸಬಹುದಾಗಿದೆ: ಉಷ್ಣಾಂಶವು ಗಣನೀಯವಾಗಿ ಇಳಿಯುತ್ತದೆ. ಈ ತತ್ವವು ಆಟೊವೆಂಟ್ ಸ್ವಯಂಚಾಲಿತ ತಂಪಾಗಿಸುವ ಪದ್ಧತಿಯನ್ನು ಆಧಾರಿಸಿದೆ. ಚಿಕ್ಕ ಹಸಿರುಮನೆಯನ್ನು ಕೋಲ್ಡ್ ಫ್ರೇಮ್ (ತಮ್ಪಾದ ರಚನೆ) ಎಂದು ಸೂಚಿಸಲಾಗುತ್ತದೆ.
ಹಸಿರುಮನೆಗಳು ಬೆಳೆಗಳನ್ನು ಅತಿಯಾದ ಶಾಖ ಅಥವಾ ಅತಿಯಾದ ತಂಪಿನಿಂದ ಕಾಪಾಡುತ್ತವೆ, ಸಸಿಗಳನ್ನು ದೂಳಿನ ಬಿರುಗಾಳಿಗಳಿಂದ ಮತು ಹಿಮಗಾಳಿಗಳಿಂದ ರಕ್ಷಿಸುವ ರಕ್ಷಣಾಕವಚಗಳಾಗುತ್ತವೆ ಮತ್ತು ಇವುಗಳನ್ನು ಹಾನಿಕಾರಕ ಕೀಟಗಳಿಂದ ದೂರ ಇಡಲು ಸಹಾಯವಾಗುತ್ತವೆ. ಬೆಳಕು ಮತ್ತು ಉಷ್ಣತೆಯ ನಿಯಂತ್ರಣವು ಹಸಿರುಮನೆಗಳು ಕೃಷಿಯೋಗ್ಯವಲ್ಲದ ಭೂಮಿಯನ್ನು ಕೃಷಿಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಲು ಸಹಾಯವಾಗುತ್ತವೆ, ಆದರಿಂದ ಅಲ್ಪ ಪ್ರಮಾಣದ ವಾತಾವರಣಗಳಲ್ಲಿ ಆಹಾರದ ಉತ್ಪಾದನೆಯು ಸುಧಾರಿಸುತ್ತದೆ.
ಹಸಿರುಮನೆಗಳು ಕೆಲವು ನಿರ್ಧಿಷ್ಟ ಬಳೆಗಳನ್ನು ವರ್ಷಪೂರ್ತಿ ಬೆಳೆಯಲು ಅನುಕೂಲವಾಗುವ ಕಾರಣದಿಂದ, ಅತ್ಯಂತ ಹೆಚ್ಚಿನ ಪೂರ್ಣ ವಿಸ್ತಾರ ಹೊಂದಿದ ದೇಶಗಳಲ್ಲಿನ ಆಹಾರ ಸರಬರಾಜಿನಲ್ಲಿ ಹಸಿರುಮನೆಗಳು ಹೇರಳವಾಗಿ ಪ್ರಮುಖವಾಗಿವೆ. ಪ್ರಪಂಚದಲ್ಲೇ ಅತೀ ದೊಡ್ಡ ಹಸಿರುಮನೆ ಕಾಂಪ್ಲೆಕ್ಸ್ಗಳಲ್ಲಿ ಒಂದು ಸ್ಫೈನ್ನ ಅಲ್ಮೆರಿಯದಲ್ಲಿದೆ, ಅಲ್ಲಿ ಹಸಿರುಮನೆಗಳು ಸುಮಾರು ಎಲ್ಲವನ್ನೂ ಒಳಗೊಂಡಿರುತ್ತವೆ 50,000 acres (200 km2). ಕೆಲವುಸಲ ಇದನ್ನು ಪ್ಲಾಸ್ಟಿಕ್ಕುಗಳ ಸಾಗರ ಎಂದು ಕರೆಯಲಾಗುತ್ತದೆ.
ಹೆಚ್ಚಾಗಿ ಹಸಿರುಮನೆಗಳನ್ನು ಪುಷ್ಪಗಳ, ತರಕಾರಿಗಳ, ಹಣ್ಣುಗಳ, ಮತ್ತು ತಂಬಾಕು ಸಸಿಗಳನ್ನು ಬೆಳೆಸಲು ಉಪಯೋಗಿಸಲಾಗುತ್ತದೆ. ಬಹುತೇಕ ಹಸಿರುಮನೆಯ ಪರಾಗಸ್ಪರ್ಶಕ್ಕೆ ದುಂಬಿಗಳು ಬಹುಮುಖ್ಯ ಪುಷ್ಪಪರಾಗ ಸಾಗಾಣಿಕೆಗಳಾಗಿವೆ, ಅದಾಗ್ಯೂ ವಿವಿಧ ರೀತಿಯ ನೊಣಗಳನ್ನುಸಹ ಉಪಯೀಗಿಸಲಾಗುತ್ತದೆ, ಮತ್ತು ಕೃತಕ ಪರಾಗಸ್ಪರ್ಶವನ್ನು ಸಹ ಮಾಡಲಾಗುತ್ತದೆ. ಹಸಿರುಮನೆಗಳಲ್ಲಿನ ಒಳಗಿನ ಸ್ಥಳದ ಅಧಿಕವಾದ ಉಪಯೋಗಕ್ಕಾಗಿ ಹೈಡ್ರೋಪೋನಿಕ್ಸ್ (ಫೌಷ್ಟಿಕ ದ್ರವ್ಯ)ಗಳನ್ನು ಬಳಸಬಹುದಾಗಿದೆ.
ತಂಬಾಕು ಜೊತೆಗೆ, ಹಸಿರುಮನೆಗಳಲ್ಲಿ ಅನೇಕ ತರಕಾರಿಗಳನ್ನು ಮತ್ತು ಪುಷ್ಪಗಳನ್ನು, ಚಳಿಗಾಲದ ಕೊನೆಯಲ್ಲಿ ಮತ್ತು ವಸಂತಕಾಲದ ಆರಂಭದಲ್ಲಿ ಬೆಳೆಯಲಾಗುತ್ತದೆ, ಮತ್ತು ನಂತರ ವಾತಾವರಣವು ಬಿಸಿಯಾಗಿರುವುದರಿಂದ ಇವನ್ನು ಹೊರಗೆ ಸ್ಥಳಾಂತರಿಸಲಾಗುವುದು. ಸ್ಥಳಾಂತರಿಸುವ ಸಮಯದಲ್ಲಿ ಚಿಕ್ಕ ಚಿಕ್ಕ ಸಸಿಗಳನ್ನು ತೋಟಗಾರರಿಗಾಗಿ ಕೃಷಿಕರ' ಮಾರುಕಟ್ಟೆಗಳಲ್ಲಿ ಲಭ್ಯವಿಡಲಾಗುತ್ತದೆ. ಟಮಾಟೊಗಳಂತಹ ಹಸಿರುಮನೆಯ ವಿಶಿಷ್ಟ ವಿಧದ ಬೆಳೆಗಳನ್ನು ಸಾಮಾನ್ಯವಾಗಿ ವಾಣಿಜ್ಯ ಉತ್ಪಾದನೆಗಾಗಿ ಉಪಯೋಗಿಸಲಾಗುತ್ತದೆ.
ಹೊರಾಂಗಣದ ಉತ್ಪಾದನೆಗೆ ಹೋಲಿಸಿದರೆ, ಹಸಿರುಮನೆಯ ಮುಚ್ಚಲ್ಪಟ್ಟ ವಾತಾವರಣವು ತನ್ನದೇ ಆದ ವಿಶಿಷ್ಟ ಅವಶ್ಯಕತೆಗಳನ್ನು ಹೊಂದಿದೆ. ಹಾನಿಕಾರಕ ಕೀಟಗಳನ್ನು ಮತ್ತು ರೋಗಗಳನ್ನು, ಮತ್ತು ಅತಿಯಾದ ಶಾಖ ಮತ್ತು ತೆವಾಂಶಗಳನ್ನು ನಿಯಂತ್ರಿಸಬೇಕಾಗುತ್ತದೆ, ಮತ್ತು ನೀರಾವರಿಗೆ ನೀರನ್ನು ಒದಗಿಸುವುದು ಅತ್ಯಾವಶ್ಯಕ. ಶಾಖ ಮತ್ತು ಬೆಳಕಿನ ಪರಿಣಾಮಕಾರಿ ಮೂಲಗಳ ಅವಶ್ಯಕತೆಯಿದೆ, ಮುಖ್ಯವಾಗಿ ಬಚ್ಚನೆಯ-ವಾತಾವರಣದ ತರಕಾರಿಗಳ ಚಳಿಗಾಲದ ಉತ್ಪಾದನೆಗೆ ಇದು ಅತ್ಯವಶ್ಯಕ.
ಆದಕಾರಣ ಹಸಿರುಮನೆಯ ಉಷ್ಣಾಂಶ ಮತ್ತು ತೆವಾಂಶಗಳನ್ನು ಕಡ್ಡಾಯವಾಗಿ ನಿರಂತರವಾಗಿ ಗಮನಿಸಿ, ಪರಿಸ್ಥಿತಿ ಅನುಕೂಲವಾಗಿರುವಂತೆ ನೋಡಲಾಗುತ್ತದೆ, ದೂರದಿಂದಲೆ ಈ ಮಾಹಿತಿಯನ್ನು ಸಂಗ್ರಹಿಸಲು ವೈರ್ಲೆಸ್ ಸೆನ್ಸರ್ ನೆಟ್ವರ್ಕ್ ಬಳಸಲಾಗುತ್ತದೆ. ಈ ಮಾಹಿತಿಯನ್ನು ನಿಯಂತ್ರಣಾ ಸ್ಥಳಕ್ಕೆ ಸಾಗಿಸಲಾಗುತ್ತದೆ ಮತ್ತು ಇದನ್ನು ಉಪಯೋಗಿಸಿ ಬಿಸಿಯಾಗಿಸುವಿಕೆ, ತಂಪಾಗಿಸುವಿಕೆ, ಮತ್ತು ನೀರಾವರಿ ಪದ್ಧತಿಯನ್ನು ನಿಯಂತ್ರಿಸಲಾಗುವುದು.[1]
ನಿಯಂತ್ರಿಸಿದ ವಾತಾವರಣದ ಪ್ರದೇಶಗಳಲ್ಲಿ ಸಸಿಗಳನ್ನು ಬೆಳೆಸುವ ಕಲ್ಪನೆಯು ರೋಮನ್ ಕಾಲದಿಂದಲೂ ಇದೆ. ರೋಮನ್ ಚಕ್ರವರ್ತಿ ಟಿಬೆರಿಯಸ್, ಸೌತೆಕಾಯಿ-ಮಾದರಿಯ[2] ತರಕಾರಿಯನ್ನು ಪ್ರತಿದಿನವೂ ಸೇವಿಸುತ್ತಿದ್ದರು. ವರ್ಷದ ಪೂರ್ತಿ ಅವರಿಗೆ ಲಭ್ಯವಿರುವಂತೆ ನೋಡಲು ರೋಮನ್ ತೋಟಗಾರರು ಈ ತರಕಾರಿಯನ್ನು ಬೆಳೆಯಲು ಕೃತಕ ಪದ್ಧತಿಗಳನ್ನು (ಹಸಿರುಮನೆ ಪದ್ಧತಿಗೆ ಸಮನಾದ) ಉಪಯೋಗಿಸುತ್ತಿದ್ದರು. ಸೌತೆಕಾಯಿ ಬಳ್ಳಿಗಳನ್ನು ಗಾಲಿಗಳು ಇರುವ ಗಾಡಿಯಲ್ಲಿ ನೆಡಲಾಗಿದ್ದು ಪ್ರತಿನಿತ್ಯಲೂ ಅವನ್ನು ಸೂರ್ಯನ ಬಿಸಿಲಿಗೆ ಇಡಲಾಗುತ್ತಿತ್ತು, ಮತ್ತು ರಾತ್ರಿವೇಳೆಯಲ್ಲಿ ಬೆಚ್ಚಗೆ ಇರುವಂತೆ ನೋಡಲು ಅವನ್ನು ಒಳಗೆ ತೆಗೆದುಕೊಂಡು ಹೋಗಲಾಗುತ್ತಿತ್ತು.[3] ಸೌತೆಕಾಯಿಗಳನ್ನು ಚೌಕಟ್ಟುಗಳಲ್ಲಿ ಅಥವಾ "ಸ್ಪೆಕುಲಾರಿಯ" ಎಂದು ಗುರುತಿಸುವ ಎಣ್ಣೆಬಟ್ಟೆ ಅಥವಾ ಸೆಲೆನೈಟ್ (ಎ.ಕೆ.ಎ. ಲ್ಯಾಪಿಸ್ ಸ್ಪೆಕುಲಾರೀಸ್ ) ಹಾಳೆಗಳಿಂದ ನುಣುಪಾಗಿಸಿದ ಸೌತೆಕಾಯಿ ಮನೆಗಳಲ್ಲಿ ಶೇಖರಿಸಿಡಲಾಗುತ್ತಿತ್ತು, ಪ್ಲಿನಿ ದಿ ಎಲ್ಡರ್ರ ವರ್ಣನೆಯ ಪ್ರಕಾರ.[4]
ಮೊದಲ ಆಧುನಿಕ ಹಸಿರುಮನೆಗಳನ್ನು 13ನೆಯ ಶತಮಾನದಲ್ಲಿ[5] ನಿರ್ಮಿಸಲಾಗಿದ್ದು, ಇವುಗಳಲ್ಲಿ ಶೋಧಿಸುವವರು ಟ್ರೋಪಿಕ್ಸ್ನಿಂದ ಮರಳಿ ತಂದ ಎಕ್ಸೋಟಿಕ್ ಸಸಿಗಳನ್ನು ಇಡಲಾಗಿತ್ತು. ಮೂಲತಃ ಅವನ್ನು ಗಿಯಾರ್ಡಿನಿ ಬೊಟಾನಿಕಿ (ಬೊಟಾನಿಕಲ್ ಗಾರ್ಡನ್ಸ್) ಎಂದು ಕರೆಯಲಾಗುತ್ತಿತ್ತು. ಹಸಿರುಮನೆಗಲ ಪರಿಕಲ್ಪನೆಯು ಮೊದಲು ನೆದರ್ಲ್ಯಾಂಡ್ಸ್ ಮತ್ತು ನಂತರ ಇಂಗ್ಲೆಂಡ್ಗೆ, ಸಸಿಗಳ ಜೊತೆಯಲ್ಲೇ ವೇಗವಾಗಿ ಹರಡಿತು. ಇದರ ಆರಂಭದ ಕೆಲವು ಪ್ರಯತ್ನಗಳು, ಇವನ್ನು ರಾತ್ರಿವೇಳೆಯಲ್ಲಿ ಮುಚ್ಚಲು ಮತ್ತು ಚಳಿಗಾಲದ ವಾತಾವರಣಕ್ಕೆ ತಕ್ಕಹಾಗೆ ಪರಿವರ್ತಿಸಲು ಅಪಾರ ಪ್ರಮಾಣದ ಕಾರ್ಯ ನಿರ್ವಹಿಸುತ್ತಿದ್ದವು. ಈ ಆರಂಭದ ಹಸಿರುಮನೆಗಳಲ್ಲಿ ಸಾಕಷ್ಟು ಮತ್ತು ಸಮತೋಲವುಳ್ಳ ಶಾಖವನ್ನು ಒದಗಿಸುವಲ್ಲಿ ಗಂಭೀರ ತೊಂದರೆಗಳನ್ನು ಎದುರಿಸಬೇಕಾಗುತ್ತಿತ್ತು. ಪ್ರಸ್ತುತ ನೆದರ್ಲ್ಯಾಂಡ್ಸ್ ಪ್ರಪಂಚದ ಬಹುತೇಕ ದೊಡ್ಡ ಪ್ರಮಾಣದ ಹಸಿರುಮನೆಗಳನ್ನು ಹೊಂದಿದೆ, ಅವುಗಳಲ್ಲಿ ಕೆಲವು ಪ್ರತೀವರ್ಷ ಮಿಲಿಯನ್ ಗಟ್ಟಲೆ ತರಕಾರಿಗಳನ್ನು ಉತ್ಪಾದಿಸುವಷ್ಟು ದೊಡ್ಡವು.
ಫ್ರೆಂಚ್ ಸಸ್ಯಶಾಸ್ತ್ರಜ್ಞ ಚಾರ್ಲೆಸ್ ಲುಸಿಯನ್ ಬೊನಪಾರ್ಟೆ, ವೈದ್ಯಕ್ಕೆ ಸಂಬಂಧಿಸಿದ ಉಷ್ಣವಲಯದ ಸಸಿಗಳನ್ನು ಬೆಳೆಸಲು, ಹಾಲ್ಯಾಂಡ್ನ, ಲೈಡೆನ್ನಲ್ಲಿ ಮೊದಲ ಕ್ರಿಯಾತ್ಮಕ ಆಧುನಿಕ ಹಸಿರುಮನೆಯ ಕಟ್ಟಡವನ್ನು ಹೊಂದಿದ್ದರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]
ಮೂಲತಹ ಶ್ರೀಮಂತ ಎಸ್ಟೇಟ್ಗಳಲ್ಲಿ ಇರುತ್ತಿದ್ದ ಹಸಿರುಮನೆಗಳು, ಸಸ್ಯಶಾಸ್ತ್ರ ವಿಜ್ಞಾನದ ಬೆಳವಣಿಗೆಯೊಂದಿಗೆ, ವಿಶ್ವವಿಧ್ಯಾಲಯಗಳಿಗೂ ಹರಡಿವೆ. ಫ್ರೆಂಚ್ ದೇಶದವರು, ಹಸಿರುಮನೆಗಳನ್ನು ಕಿತ್ತಳೆ ಮರಗಳು ಚಳಿಯಿಂದ ಸೆಡೆದುಕೊಳ್ಳದಂತೆ ಕಾಪಾಡಲು ಉಪಯೋಗಿಸುತ್ತಿದ್ದರಿಂದ, ತಮ್ಮ ಮೊದಲ ಹಸಿರುಮನೆಗಳನ್ನು ಓರಂಜರೀಸ್ ಎಂದು ಕರೆಯಿತ್ತಿದ್ದರು. ಅನಾನಸ್ ಹಣ್ಣುಗಳು ಜನಪ್ರಿಯವಾದಂತೆ ಪಿನೆರೀಸ್ ಅಥವಾ ಪೈನ್ಯಾಪಲ್ (ಅನಾನಸ್) ಪಿಟ್ಗಳನ್ನು ನಿರ್ಮಿಸಲಾಗಿತ್ತು. ಹದಿನೇಳನೆಯ ಶತಮಾನದಲ್ಲಿ ಯುರೋಪಿನಲ್ಲಿ, ತಂತ್ರಜ್ಞಾನವು ಉತ್ತಮ ಗಾಜನ್ನು ಉತ್ಪಾದಿಸಿದಂತೆ ಮತ್ತು ನಿರ್ಮಾಣದ ತಂತ್ರಗಳು ಅಭಿವೃದ್ಧಿಯಾದಂತೆ, ಹಸಿರುಮನೆಗಳ ವಿನ್ಯಾಸದೊಂದಿಗಿನ ಅನೇಕ ಪ್ರಯೋಗಗಳು ಮುಂದುವರೆದವು. ವರ್ಸೈಲೆಸ್ ಪ್ಯಾಲೆಸ್ನಲ್ಲಿನ ಹಸಿರುಮನೆಯು ಅವರ ಹಸಿರುಮನೆಗಳ ಗಾತ್ರ ಮತ್ತು ವಿಸ್ತಾರತೆಗೆ ಒಂದು ಉದಾಹರಣೆ ಆಗಿದೆ; ಇದು 500 ಅಡಿಗಳಿಗಿಂತಲೂ ಹೆಚ್ಚು ಉದ್ದವಾಗಿ, 42 ಅಡಿ ಅಗಲವಾಗಿ, ಮತ್ತು 45 ಅಡಿ ಎತ್ತರದಲ್ಲಿತ್ತು.
ಹತ್ತೊಂಬತ್ತನೆಯ ಶತಮಾನದಲ್ಲಿ ಅತ್ಯಂತ ದೊಡ್ಡ ಗಾತ್ರದ ಹಸಿರುಮನೆಗಳನ್ನು ನಿರ್ಮಿಸಲಾಗಿತ್ತು. ಇಂಗ್ಲೆಂಡ್ನ ಕೆವ್ ಗಾರ್ಡೆನ್ಸ್ನಲ್ಲಿನ ಸಸ್ಯ ಸಂರಕ್ಷಣಾಗೃಹವು ವಿಕ್ಟೋರಿಯನ್ ಹಸಿರುಮನೆಗೆ ಒಂದು ಮುಖ್ಯ ಉದಾಹರಣೆ. ತೋಟಗಾರಿಕೆಯ ಮತ್ತು ತೋಟಗಾರಿಕೆಯಲ್ಲದ ಎರಡು ರೀತಿಯ ಪ್ರದರ್ಶನಗಳನ್ನು ಉದ್ದೇಶಿಸಿ ಮಾಡಿದ್ದರೂ, ಇವು ಲಂಡನ್ನಿನ ಕ್ರಿಸ್ಟಲ್ ಪ್ಯಾಲೆಸ್, ದಿ ನ್ಯೂ ಯಾರ್ಕ್ ಕ್ರಿಸ್ಟಲ್ ಪ್ಯಾಲೆಸ್ ಮತ್ತು ಮುನಿಕ್’ನ ಗ್ಲಾಸ್ಪಲಾಸ್ಟ್ಗಳನ್ನು ಒಳಗೊಂಡಿವೆ. ಡೆರ್ವಿಶೈರ್ನಲ್ಲಿನ ಚಾಟ್ಸ್ವರ್ತ್ನಲ್ಲಿ ತೋಟಗಾರರ ಪ್ರಧಾನಾಂಶಗಳಾಗಿ ದೊಡ್ಡದಾದ ಹಸಿರುಮನೆಗಳನ್ನು ರಚಿಸುವಲ್ಲಿ, ಗಾಜು ಮತ್ತು ಕಬ್ಬಿಣಗಳಿಂದ ಅನೇಕ ಪ್ರಯೋಗಗಳನ್ನು ನಡೆಸಿದ, ಜೋಸೆಫ್ ಪಕ್ಸ್ಟನ್, ಲಂಡನ್’ನ ಮೊದಲ ಕ್ರಿಸ್ಟಲ್ ಪ್ಯಾಲೆಸ್ನ್ನು ವಿನ್ಯಾಶಿಸಿದ್ದರು ಮತ್ತು ನಿರ್ಮಿಸಿದ್ದರು. ಚಿರಸ್ಮರಣೀಯ ಹಸಿರುಮನೆ ಕಟ್ಟಡಗಳಲ್ಲಿ ವಾಸ್ತುಕಲೆಯ ಬೃಹತ್ ಸಾಧನೆಯೆಂದರೆ, ಬೆಲ್ಗಿಯಮ್ನ ರಾಜ ಲಿಯೊಪೋಡ್ IIಗಾಗಿ ನಿರ್ಮಿಸಿದ್ದ, ರಾಯಲ್ ಗ್ರೀನ್ಹೌಸೆಸ್ ಆಫ್ ಲೀಕೆನ್ (1874–1895).
ಜಪಾನ್ನಲ್ಲಿ, ಮೊದಲ ಹಸಿರುಮನೆಯನ್ನು 1880ರಲ್ಲಿ, ಸಾಮ್ಯುಲ್ ಕೋಕಿಂಗ್ರವರಿಂದ ನಿರ್ಮಿಸಲಾಗಿತ್ತು, ಇವರೊಬ್ಬ ಬ್ರಿಟಿಷ್ ವರ್ತಕರಾಗಿದ್ದು, ವನಸ್ಪತಿಗಳ ರಪ್ತಿನಲ್ಲಿ ತೊಡಗಿದ್ದರು.
ಇಪ್ಪತ್ತನೆಯ ಶತಮಾನದಲ್ಲಿ ಜ್ಯೊಡೆಸಿಕ್ ಶಿಖರದ ವಿನ್ಯಾಸವನ್ನು ಅನೇಕ ವಿಧದ ಹಸಿರುಮನೆಗಳು ಒಳಗೊಂಡಿದ್ದವು. ಇದರ ಒಂದು ಗಣನೀಯ ಉದಾಹರಣೆ ಎಂದರೆ, ಕಾರ್ನ್ವಾಲ್ನಲ್ಲಿನ ಎಡೆನ್ ಯೋಜನೆ.
1960ರಲ್ಲಿ ಪೋಲಿಥಲಿನ್ನ ವಿಶಾಲವಾದ ಷೀಟುಗಳು ವ್ಯಾಪಕವಾಗಿ ಲಭ್ಯವಾದ ಸಮಯದಲ್ಲಿ, ಹಸಿರುಮನೆಯ ವಿನ್ಯಾಸಗಳನ್ನು ಆಯ್ದುಕೊಳ್ಳಲಾಯಿತು. ಹೂಪ್ ಮನೆಗಳನ್ನು ಅನೇಕ ಸಂಸ್ಥೆಗಳಿಂದ ಮಾಡಲಾಗಿತ್ತು ಮತ್ತು ಆಗಾಗ್ಗೆ ಬೆಳೆಗಾರರಿಂದಲೇ ಸ್ವತಃ ಮಾಡಲಾಗುತ್ತಿತ್ತು. ಅಲ್ಯೂಮಿನಿಯಮ್ನ್ನು ಹೊರಪಡಿಸಿ, ವಿಶೇಷ ಗ್ಯಾಲ್ವನೈಜ್ಡ್ (ವಿದ್ಯುತ್ತಿನಿಂದ ಉತ್ತೆಜಿಸಿದ) ಕೊಳವೆಗಳಿಂದ ಅಥವಾ ಕೇವಲ ಉದ್ದನೆಯ ಸ್ಟೀಲಿನ ಅಥವಾ ಪಿವಿಸಿ ನೀರಿನ ಪೈಪುಗಳಿಂದ ನಿರ್ಮಿಸಿದ್ದು, ನಿರ್ಮಾಣದ ವೆಚ್ಚ ಮಹತ್ತರವಾಗಿ ಕಡಿಮೆಯಾಗಲು ಕಾರಣವಾಯಿತು. ಇದು ಚಿಕ್ಕ ಚಿಕ್ಕ ಜಮೀನುಗಳಲ್ಲಿ ಮತ್ತು ತೋಟದ ಕೇಂದ್ರಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದ ಹಸಿರುಮನೆಗಳ ನಿರ್ಮಾಣಕ್ಕೆ ಕಾರಣವಾಯಿತು. 1970ರಲ್ಲಿ ಹೆಚ್ಚಿನ ಪರಿಣಾಮಕಾರಿ ಪ್ರತಿಬಂಧಕಗಳನ್ನು ಅಭಿವೃದ್ಧಿಪಡಿಸಿ ಸೇರಿಸಿದಾಗ, ಫಾಲಿಯಥಲಿನ್ ಫಿಲ್ಮ್ನ ಬಾಳಿಕೆಯು ಮಹತ್ತರವಾಗಿ ಹೆಚ್ಚಾಯಿತು. ಈ ಯುವಿ ನಿರ್ಬಂಧಕಗಳು ಫಿಲ್ಮ್ನ ಉಪಯೋಗದ ಕಾಲವನ್ನು ಒಂದು ಅಥವಾ ಎರಡು ವರ್ಷಗಳಿಂದ 3 ವರ್ಷಗಳ ವರೆಗೂ ಮತ್ತು ನಂತರ 4 ಅಥವಾ ಅದಕ್ಕಿಂತಲೂ ಹೆಚ್ಚಿನ ವರ್ಷಗಳ ವರೆಗೂ ವಿಸ್ತರಿಸಿದವು. ಚರಂಡಿಯ ಸಂಪರ್ಕ ಕಲ್ಪಿಸಿದ ಹಸಿರುಮನೆಗಳು 1980ರ ಮತ್ತು 1990ರ ದಶಕಗಳಲ್ಲಿ ಹೆಚ್ಚು ವ್ಯಾಪಕವಾಗಿ ಹರಡಿದವು. ಈ ಹಸಿರುಮನೆಗಳು ಎರಡು ಅಥವಾ ಹೆಚ್ಚಿನ ಖಾರಿಗಳನ್ನು ಹೊಂದಿದ್ದು, ಅವುಗಳ ನಡುವೆ ಸಾಮಾನ್ಯ ಗೋಡೆಯಿಂದ ಅಥವಾ ಆಧಾರ ಕಂಬಗಳಿಂದ ಸಂಪರ್ಕ ಕಲ್ಪಿಸಲಾಗಿತ್ತು. ನೆಲ ವಿಸ್ತೀರ್ಣ ಮತ್ತು ಮೇಲು ಛಾವಣಿಯ ವಿಸ್ತೀರ್ಣದ ಪ್ರಮಾಣವು ಹೆಚ್ಚಾದಂತೆ, ಬಿಸಿಯಾಗಿಸುವ ಮೂಲವಸ್ತುಗಳ ಅವಶ್ಯಕತೆಯು ಕಡಿಮೆಯಾಯಿತು. ಚರಂಡಿಯ ಸಂಪರ್ಕ ಹೊಂದಿದ್ದ ಹಸಿರುಮನೆಗಳನ್ನು ಈಗ ಉತ್ಪಾದನೆ ಮತ್ತು ಸಸಿಗಳನ್ನು ಬೆಳೆಸಿ ಸಾರ್ವಜನಿಕರಿಗೆ ಮಾರಾಟ ಮಾಡುವಂತಹ ಸಂದರ್ಭಗಳೆರಡರಲ್ಲೂ ಸಾಮಾನ್ಯವಾಗಿ ಉಪಯೋಗಿಸಲಾಗುತ್ತಿದೆ. ಚರಂಡಿಯ ಸಂಪರ್ಕ ಹೊಂದಿದ್ದ ಹಸಿರುಮನೆಗಳನ್ನು ಸಮಾನ್ಯವಾಗಿ, ಹೆಚ್ಚಿಸಿದ ಬಿಸಿಯಾಗಿಸುವ ದಕ್ಷತೆಯನ್ನು ಒದಗಿಸಲು ಮಧ್ಯ ಮಧ್ಯ ಗಾಳಿ ಬೀಸುವ ದ್ವಿಗುಣ ಪೊರೆಗಳ ಫಾಲಿಯಥಲಿನ್ ಫಿಲ್ಮ್ಗಳಿಂದ ಅಥವಾ ವಿನ್ಯಾಸಿಸಿದ ಪಾಲಿಕಾರ್ಬೊನೇಟ್ ಮೂಲವಸ್ತುಗಳಿಂದ ಮುಚ್ಚಲಾಗುತ್ತದೆ.
ಪ್ರಪಂಚದಲ್ಲೇ ದೊಡ್ಡದಾದ ಹಸಿರುಮನೆಗಳಲ್ಲಿ ಕೆಲವನ್ನು ನೆದರ್ಲ್ಯಾಂಡ್ಸ್ ಹೊಂದಿದೆ. ದೇಶದಲ್ಲಿನ ಆಹಾರ ಉತ್ಪಾದನೆಯ ಪ್ರಮಾಣದಂತೆ, ಅಂದರೆ 2000ರಲ್ಲಿ ಹಸಿರುಮನೆಗಳು 10,526 ಹೆಕ್ಟೇರುಗಳ ಅಥವಾ ನೆದರ್ಲ್ಯಾಂಡ್ಸ್ನ ಪೂರ್ಣ ವಿಸ್ತೀರ್ಣದ 0.25% ವಿಸ್ತೀರ್ಣದಲ್ಲಿ ವ್ಯಾಪಿಸಿದ್ದವು.[6]
ಹತ್ತೊಂಬತ್ತನೆಯ ಶತಮಾನದ ಮಧ್ಯಕಾಲದಲ್ಲಿ ನೆದರ್ಲ್ಯಾಂಡ್ಸ್ನ ವೆಸ್ಟ್ಲ್ಯಾಂಡ್ ಪ್ರದೇಶದಲ್ಲೂ ಹಸಿರುಮನೆಗಳ ನಿರ್ಮಾಣ ಕಾರ್ಯವು ಆರಂಭವಾಗಿತ್ತು. ಕೆಸರು ಭೂಮಿಗಳ ಜೊತೆಗೆ ಸೇರಿಸಿದ ಮಣ್ಣು ಮತ್ತು ಜೇಡಿಮಣ್ಣು ಬೇಸಾಯಕ್ಕೆ ಬೇಕಾದ ಫಲವತ್ತಾದ ಮಣ್ಣಿನ ತಯಾರಿಕೆಗೆ ಅನುಕೂಲವಾಯಿತು, ಮತ್ತು ಮೊದಲ ಹಸಿರುಮನೆಗಳಲ್ಲಿ ಸುಮಾರು 1850 ದ್ರಾಕ್ಷೆಬೆಳೆಯನ್ನು ಬೆಳೆಸಲಾಯಿತು, ಈ ಹಸಿರುಮನೆಗಳು ಒಂದು ಬದಿಯಲ್ಲಿ ಘನರೂಪದ ಗೋಡೆಗಳನ್ನು ಹೊಂದಿದ್ದ ಸರಳ ಗಾಜಿನ ಕಟ್ಟಡಗಳಾಗಿದ್ದವು. 1900ರ ದಶಕದ ಆಸುಪಾಸು ಸಮಯದಲ್ಲಿ ಹಸಿರುಮನೆಗಳನ್ನು ಕೇವಲ ಗಾಜಿನಿಂದ ನಿರ್ಮಿಸಲಾಗುತ್ತಿತ್ತು, ಮತ್ತು ಅವು ಬಿಸಿಯಾಗಿರುತ್ತಿದ್ದವು. ಇದು ಸಾಧಾರಣ ಪ್ರದೇಶಗಳಲ್ಲಿ ಬೆಳೆಸಲು ಸಾಧ್ಯವಿಲ್ಲದ ಫಲ ಪುಷ್ಫಗಳನ್ನು ಬೆಳೆಸಲು ಅನುಕೂಲವಾಯಿತು. ಪ್ರಸ್ತುತ ವೆಸ್ಟ್ಲ್ಯಾಂಡ್ ಮತ್ತು ಆಲ್ಸ್ಮೀರ್ನ ಸುತ್ತಮುತ್ತಲಿನ ಪ್ರದೇಶಗಳು ಪ್ರಪಂಚದಲ್ಲೇ ಅತೀ ಹೆಚ್ಚಿನ ಹಸಿರುಮನೆಯ ಬೇಸಾಯ ಕೆಂದ್ರಗಳಾಗಿವೆ. ವೆಸ್ಟ್ಲ್ಯಾಂಡ್ ಹೆಚ್ಚಾಗಿ ತರಕಾರಿಗಳನ್ನು ಉತ್ಪಾದಿಸುತ್ತದೆ, ಇದರಜೊತೆಗೆ ಸಸಿಗಳನ್ನು ಮತ್ತು ಪುಷ್ಫಗಳನ್ನು ಬೆಳೆಸುತ್ತದೆ; ಆಲ್ಸ್ಮೀರ್ ಮುಖ್ಯವಾಗಿ ಫುಷ್ಪಗಳ ಮತ್ತು ಮಡಿಕೆಯ ಸಸಿಗಳ ಉತ್ಪಾದನೆಗೆ ಪ್ರಸಿದ್ಧಿಯಾಗಿದೆ. ಇಪ್ಪತ್ತನೆಯ ಶತಮಾನದಿಂದ, ವೆನ್ಲೊ (ಲಿಂಬರ್ಗ್ನಲ್ಲಿನ) ಸುತ್ತಮುತ್ತಲಿನ ಪ್ರದೇಶಗಳು ಮತ್ತು ಡ್ರೆಂಥೆನ ಭಾಗಗಳು ಸಹ ಹಸಿರುಮನೆಯ ಬೇಸಾಯಕ್ಕೆ ಪ್ರಮುಖ ಪ್ರದೇಶಗಳಾಗಿವೆ.
2000ದಿಂದ, ತಾಂತ್ರಿಕ ಹೊಸ ಕಲ್ಪನೆಗಳು "ಮುಚ್ಚಿದ ಹಸಿರುಮನೆಗಳನ್ನು" ಒಳಗೊಂಡಿವೆ, ಸಂಪೂರ್ಣವಾಗಿ ಮುಚ್ಚಿದ ವ್ಯವಸ್ಥೆಯು ಬೆಳೆಗಾರರು ಕಡಿಮೆ ಸಾಮರ್ಥ್ಯವನ್ನು ಉಪಯೋಗಿಸಿ ಬೆಳೆಯ ಪ್ರಕ್ರಿಯೆಯ ಮೇಲೆ ಪೂರ್ಣ ಹತೋಟಿಯನ್ನು ಹೊಂದಲು ಅನುಕೂಲವಾಯಿತು. ದೇಶದ ಜಲಮಯ ಪ್ರದೇಶಗಳಲ್ಲಿ ತೇಲುವ ಹಸಿರುಮನೆಗಳನ್ನು ಉಪಯೋಗಿಸಲಾಯಿತು.
ನೆದರ್ಲ್ಯಾಂಡ್ಸ್ ಸುಮಾರು 9000 ಹಸಿರುಮನೆ ಉದ್ಯಮಗಳನ್ನು ಒಳಗೊಂಡಿದ್ದು ಅವು 10,000 ಹೆಕ್ಟೇರ್ಸ್ ಹಸಿರುಮನೆಗಳ ನಿರ್ವಹಣೆಯನ್ನು ಮಾಡುತ್ತಿದ್ದು ಸುಮಾರು 150,000 ಕೆಲಸಗಾರರನ್ನು ನೇಮಕ ಮಾಡಿಕೊಂಡು E4.5 ಬಿಲಿಯನ್ ಮೌಲ್ಯದ ತರಕಾರಿಗಳನ್ನು, ಹಣ್ಣುಗಳನ್ನು, ಸಸಿಗಳನ್ನು, ಮತ್ತು ಹೂವುಗಳನ್ನು ಬೆಳೆಯಲಾಗುತ್ತಿದ್ದು, ಇವುಗಳ 80% ರಫ್ತುಮಾಡಲಾಗುತ್ತಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.