ಹವಾ ಶೀತಲೀಕರಣ
ಡಾ. ಸುನಿಲ ಜಾಬಾದಿ / From Wikipedia, the free encyclopedia
ಹವಾ ಶೀತಲೀಕರಣ(Air cooling)ವು ವಸ್ತುವಿನಿಂದ ಉಷ್ಣತೆಯನ್ನು ಹೊರಹಾಕುವ ಒಂದು ವಿಧಾನವಾಗಿದೆ.
ಒಂದು ವಸ್ತುವಿನ ಮೇಲ್ಮೈ ವಿಸ್ತೀರ್ಣವನ್ನು ಹೆಚ್ಚು ಮಾಡುವುದರ ಮುಖಾಂತರ ಅಥವಾ ಅದರ ಮೇಲೆ ಹಾದುಹೋಗುವ ಗಾಳಿಯ ಹರಿವನ್ನು ಹೆಚ್ಚು ಮಾಡುವುದರ ಮುಖಾಂತರ ಅಥವಾ ಇವೆರಡನ್ನೂ ಉಪಯೋಗಿಸಿಕೊಂಡು ಈ ವ್ಯವಸ್ಥೆ ಕೆಲಸ ಮಾಡುತ್ತದೆ.
ಒಂದು ವಸ್ತುವಿನ ಮೇಲ್ಮೈ ವಿಸ್ತೀರ್ಣವನ್ನು ಹೆಚ್ಚಿಸಲು ತಂಪು ರೆಕ್ಕೆಗಳನ್ನು(Cooling Fins)ಉಪಯೋಗಿಸುತ್ತಾರೆ.ಈ ತಂಪು ರೆಕ್ಕೆಗಳನ್ನು ಆ ವಸ್ತುವಿನ ಅವಿಭಾಜ್ಯ ಅಂಗವನ್ನಾಗಿಸುವುದರಿಂದ ಅಥವಾ ಬಿಗಿಯಾಗಿ ಜೋಡಿಸುವುದರಿಂದ ಅದರ ಮೇಲ್ಮೈ ವಿಸ್ತೀರ್ಣವು ಹೆಚ್ಚಾಗಿ ಶಾಖ ವರ್ಗಾವಣೆಯ ದಕ್ಷತೆಯು ಗಣನೀಯವಾಗಿ ಹೆಚ್ಚುವುದು.
ಗಾಳಿಯ ಹರಿವನ್ನು ಹೆಚ್ಚಿಸಲು ಫ್ಯಾನ್ ಗಳನ್ನು ಉಪಯೋಗಿಸಲಾಗುತ್ತದೆ.
ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತಂಪಾಗಿಸಲು ಬಳಸುವ ಉಷ್ಣತೊಟ್ಟಿ(Heat Sink)ಗಳಲ್ಲಿ ತಂಪು ರೆಕ್ಕೆಗಳನ್ನು ಉಪಯೋಗಿಸುವುದರಿಂದ ಅದರ ಮೇಲ್ಮೈ ವಿಸ್ತೀರ್ಣವು ಗಣನೀಯವಾಗಿ ಹೆಚ್ಚಿ ತಂಪಾಗುವಿಕೆಯು ಅತ್ಯತ್ತಮವಾಗಿರುತ್ತದೆ.
ಉಷ್ಣಬಲ(Thermodynamics)ದ ಎರಡನೆಯ ನಿಯಮದ ಪ್ರಕಾರ ಉಷ್ಣತೆಯು ಬಿಸಿಯಾಗಿರುವ ಕೋಶದಿಂದ ತಂಪಾಗಿರುವ ಕೋಶದೆಡೆಗೆ ಮಾತ್ರ ಸ್ವಾಭಾವಿಕವಾಗಿ ಹರಿಯುತ್ತದೆ. ಹೀಗಾಗಿ ಹವಾ ಶೀತಲೀಕರಣದಲ್ಲಿ ಗಾಳಿಯ ಉಷ್ಣತೆಯು ತಂಪು ಮಾಡಲ್ಪಡುವ ವಸ್ತುವಿನ ಉಷ್ಣತೆಗಿಂತ ಕಡಿಮೆಯಾಗಿರುವುದು ಅವಶ್ಯವಾಗಿದೆ.