From Wikipedia, the free encyclopedia
ಸೆಕೆಂಡ್-ಇನ್-ಕಮಾಂಡ್ ಹರ್ಷಪಾಲ್ ಸಿಂಗ್ ಅವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಅಧಿಕಾರಿ. [೧] ಅವರು ೨೦೦೪ರಲ್ಲಿ ಸಿಆರ್ಪಿಎಫ್ಗೆ ಸೇರಿದ್ದರು. ಗಾಯಗೊಂಡಿದ್ದರೂ ಸಹ ಮೂವರು ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದ್ದಕ್ಕಾಗಿ ಅವರಿಗೆ ೨೦೧೯ ರ ಆಗಸ್ಟ್ ೧೫ ರಂದು (೭೩ನೇ ಸ್ವಾತಂತ್ರ್ಯೋತ್ಸವದ ದಿನ) ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪದಕವಾದ ಕೀರ್ತಿ ಚಕ್ರವನ್ನು ನೀಡಿ ಗೌರವಿಸಲಾಯಿತು.[೨] [೩][೪]
೨೦೧೪ ರಲ್ಲಿ ಸಿಂಗ್ ಅವರು ಛತ್ತೀಸ್ಗಢದ ಖುಂಟಿ ಜಿಲ್ಲೆಯಲ್ಲಿ ರೂ.೨ ಲಕ್ಷ (೨೦೨೩ರಲ್ಲಿ ರೂ. ೩.೩ ಲಕ್ಷ ಅಥವಾ £೩,೩೩೪ಕ್ಕೆ ಸಮ) ಬೆಲೆ ಬಹುಮಾನ ಘೋಷಿತ ಒಬ್ಬ ನಕ್ಸಲನನ್ನು ಹತ್ಯೆಗೈದರು. [೫] ಖುಂಟಿಯಲ್ಲಿ ನಕ್ಸಲ್ ವಲಯ ಕಮಾಂಡರ್ನನ್ನು ಹತ್ಯೆಗೈದಿದ್ದಕ್ಕಾಗಿ ಅವರಿಗೆ ೨೦೧೫ರಲ್ಲಿ ಪೊಲೀಸ್ ಪದಕ (ಶೌರ್ಯ) ನೀಡಲಾಯಿತು ಹಾಗೂ ಅದೇ ವರ್ಷದಲ್ಲಿ, ಅವರಿಗೆ ಜಾರ್ಖಂಡ್ ಸರ್ಕಾರದಿಂದ ಪೊಲೀಸ್ ಪದಕವನ್ನು ನೀಡಲಾಯಿತು.[೬] [೭]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.