![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/4/4b/Hampi_virupaksha_temple.jpg/640px-Hampi_virupaksha_temple.jpg&w=640&q=50)
ಹಂಪೆ
ಭಾರತದಲ್ಲಿರುವ ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ವಿಜಯನಗರ ಸಾಮ್ರಾಜ್ಯ ಕಾಲದ / From Wikipedia, the free encyclopedia
ಹಂಪಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಐತಿಹಾಸಿಕ ಸ್ಥಳ. ೧೩೩೬ರಿಂದ ೧೫೬೫ರವರೆಗೆ (೧೩೩೬-೧೫೬೫) ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪಿಯ ಮೊದಲನೆ ಹೆಸರು 'ಪಂಪಾ' ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು 'ವಿಜಯನಗರ' ಮತ್ತು 'ವಿರುಪಾಕ್ಷಪುರ' ಎಂದು ಕರೆಯಲ್ಪಟ್ಟಿತು. ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ೧೯೮೬ರಂದು ಘೋಷಿಸಿದೆ. ವಿಜಯನಗರ ಸಾಮ್ರಾಜ್ಯದ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪಿ ಬಜಾರ್ ಎಂದೆನ್ನಿಸಿ ಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೂಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ. ಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬಂತು. ಕೊನೆಗೆ ತಾಳಿಕೋಟೆಯ ಯುದ್ಧದಲ್ಲಿ ಮುಸ್ಲಿಂ ಸಾಮ್ರಾಜ್ಯದಿಂದ ಬಂದ ಆಕ್ರಮಣವನ್ನು ತಡೆಯದೆ ಅಂತ್ಯಗೊಂಡಿತು. ಹಂಪಿಯಲ್ಲಿದ್ದ ಅನೇಕ ಸ್ಮಾರಕಗಳನ್ನು ಸುಮಾರು ಆರು ತಿಂಗಳುಗಳ ಕಾಲ ಸೈನಿಕರು ನಾಶ ಮಾಡಿದರು ಎನ್ನುತ್ತದೆ ಇತಿಹಾಸ. ಇಂದು ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಬಗಳು, ವಿಶ್ವವಿಖ್ಯಾತ ಕಲ್ಲಿನ ರಥ, ಮಹಾನವಮಿ ದಿಬ್ಬ, ಸಾಸಿವೆಕಾಳು ಗಣಪತಿ, ಉಗ್ರನರಸಿಂಹ, ಕಮಲ ಮಹಲ್, ಬಡವಿ ಲಿಂಗ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ.
ಯುನೆಸ್ಕೋ ವಿಶ್ವ ಪರಂಪರೆಯ ತಾಣ | |
---|---|
![]() | |
ಸ್ಥಳ | ವಿಜಯನಗರ ಜಿಲ್ಲೆ, ಕರ್ನಾಟಕ, ಭಾರತ |
ಸಂಯೋಜಿತ ಸ್ಥಳಗಳು | ವಿರೂಪಾಕ್ಷ ದೇವಾಲಯ, ಹಂಪಿ |
ಮಾನದಂಡ | ಸಾಂಸ್ಕೃತಿಕ: i, iii, iv |
ಉಲ್ಲೇಖಗಳು | 241 |
ಶಾಸನ | 1986 (10th Session) |
ಅಳಿವಿನಂಚಿನಲ್ಲಿರುವ ಪ್ರದೇಶ | 1999–2006 |
ವಿಸ್ತೀರ್ಣ | 4,187.24 ಹೆಕ್ಟೇರು |
ಬಫರ್ ವಲಯ | 19,453.62 ಹೆಕ್ಟೇರು |
ವೆಬ್ ಸೈಟ್ | ಭಾರತೀಯ ಪುರಾತತ್ವ ಇಲಾಖೆ - ಹಂಪಿ |
ಕಕ್ಷೆಗಳು | 15°20′04″N 76°27′44″E |
![ವಿರೂಪಾಕ್ಷ ದೇವಾಲಯ](http://upload.wikimedia.org/wikipedia/kn/thumb/6/69/800px-Hampi_by_sourabh_by_indians.jpg/640px-800px-Hampi_by_sourabh_by_indians.jpg)
![Thumb image](http://upload.wikimedia.org/wikipedia/commons/thumb/c/c8/Hampi_Ruins_of_Vijaynagar_India_Map_1911.jpg/640px-Hampi_Ruins_of_Vijaynagar_India_Map_1911.jpg)
![Thumb image](http://upload.wikimedia.org/wikipedia/commons/thumb/8/8d/Krishna_Pushkarani_-_Hampi_Ruins.jpg/640px-Krishna_Pushkarani_-_Hampi_Ruins.jpg)
![Thumb image](http://upload.wikimedia.org/wikipedia/commons/thumb/9/98/Hampi_Murray.jpg/640px-Hampi_Murray.jpg)
![ಹಂಪಿ ವಿಹಂಗಮ ನೋಟ, ಮಾತಾಂಗ ಬೆಟ್ಟದಿಂದ ತೆಗೆದ ೩೬೦° ಪನೋರಮ](http://upload.wikimedia.org/wikipedia/commons/thumb/1/10/Hampi7-gimped-small.jpeg/200px-Hampi7-gimped-small.jpeg)