ಸ್ಯಾಕರಿನ್
From Wikipedia, the free encyclopedia
ಸ್ಯಾಕರಿನ್ ಎಂಬುದು ಅಪೌಷ್ಟಿಕ ಸಿಹಿಕಾರಕವಾಗಿ ಬಳಸಲ್ಪಡುವ ಆರ್ತೊಸಲ್ಫೊಬೆನ್ಝಾಯಿಕ್ ಇಮೈಡ್ ಅಥವಾ ಬೆನ್ಝೊಸಲ್ಫಮೈಡ್ ಎಂಬ ಕಾರ್ಬನಿಕ ಸಂಯುಕ್ತ.[1][2] ಅಣುಸೂತ್ರ: C6H4CONHSO2. ಇದು ಬಿಳಿ ಸ್ಫಟಿಕೀಯ ಸಂಶ್ಲೇಷಿತ ಪುಡಿ. ಶುದ್ಧ ಸ್ಯಾಕರಿನ್ ಕಬ್ಬಿನ ಸಕ್ಕರೆಗಿಂತ 550 ಪಟ್ಟು, ವಾಣಿಜ್ಯ ಸ್ಯಾಕರಿನ್ ಸು. 375 ಪಟ್ಟು ಅಧಿಕ ಸಿಹಿ. ಸೇವಿಸಿದಾಗ ತುಸು ಕಹಿ ಹಾಗೂ ಲೋಹೀಯ ರುಚಿಯ ಅನುಭವವೂ ಆಗುತ್ತದೆ. 0.25 (1 ಚಹಾ ಚಮಚದಷ್ಟು ಸಕ್ಕರೆಗೆ ಸಮ), 0.5 ಮತ್ತು 1 ಗ್ರೇನ್ ತೂಕದ ಗುಳಿಗೆಗಳ ರೂಪಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ.