![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/a/a4/Cake_competition_%252814287027130%2529.jpg/640px-Cake_competition_%252814287027130%2529.jpg&w=640&q=50)
ಸ್ಪಂಜ್ ಕೇಕ್
From Wikipedia, the free encyclopedia
ಸ್ಪಂಜ್ ಕೇಕ್ ಮೊಟ್ಟೆಗಳು, ಹಿಟ್ಟು ಮತ್ತು ಸಕ್ಕರೆಯಿಂದ ತಯಾರಿಸಲ್ಪಡುವ ಹಗುರವಾದ ಕೇಕ್ ಆಗಿದೆ. ಕೆಲವೊಮ್ಮೆ ಇದನ್ನು ಉಬ್ಬುಪುಡಿಯನ್ನು ಬಳಸಿ ಹುದುಗು ಬರಿಸಲಾಗುತ್ತದೆ.[1] ಒಡೆದು ಬಿರುಸಾಗಿ ಕಲಕಿದ ಮೊಟ್ಟೆಗಳನ್ನು ಬಳಸಿ ಹುದುಗು ಬರಿಸಿದ ಸ್ಪಂಜ್ ಕೇಕ್ಗಳು ನವೋದಯದ ಕಾಲದಲ್ಲಿ ಹುಟ್ಟಿಕೊಂಡವು, ಪ್ರಾಯಶಃ ಸ್ಪೇನ್ನಲ್ಲಿ.[2] ಸ್ಪಂಜ್ ಕೇಕ್ ಯೀಸ್ಟ್ ಬಳಸದ ಮೊದಲ ಕೇಕ್ಗಳಲ್ಲಿ ಒಂದೆಂದು ಭಾವಿಸಲಾಗಿದೆ.
![Thumb image](http://upload.wikimedia.org/wikipedia/commons/thumb/a/a4/Cake_competition_%2814287027130%29.jpg/640px-Cake_competition_%2814287027130%29.jpg)
ಮೂಲಭೂತ ಗೊಟಾಯಿಸಿದ ಸ್ಪಂಜ್ ಕೇಕ್ ಯಾವುದೇ ಕೊಬ್ಬನ್ನು ಹೊಂದಿರುವುದಿಲ್ಲ. ಇದನ್ನು ಮೊಟ್ಟೆಗಳು ಹಾಗೂ ಸಕ್ಕರೆಯನ್ನು ಗೊಟಾಯಿಸಿ ಮತ್ತು ಹಿಟ್ಟನ್ನು ನಿಧಾನವಾಗಿ ಕಲಸಿ ತಯಾರಿಸಲಾಗುತ್ತದೆ.[3] ಈ ಬಗೆಯ ಕೇಕ್ನ್ನು ಫ಼ೋಮ್ ಕೇಕ್ ಎಂದೂ ಕರೆಯಲಾಗುತ್ತದೆ. ಇದು ಏರಲು ಮೊಟ್ಟೆಗಳ ಅನಿಲಗೂಡಿಕೆ ಮತ್ತು ಶಾಖದ ಮೇಲೆ ಅವಲಂಬಿಸಿರುತ್ತದೆ.[4]