From Wikipedia, the free encyclopedia
ಸ್ನೂಕರ್ ಎಂಬುದು ನಾಲ್ಕೂ ತುದಿಗಳಲ್ಲಿ ಹಾಗೂ ನೀಳವಾದ ಅಂಚುಮೆತ್ತೆಗಳಲ್ಲಿ ಚೀಲಗಳಿರುವ ಅಗಲವಾದ ಹಸಿರು ಬೈಜ್ ಬಟ್ಟೆಯಿಂದ ಆವೃತವಾದ ಮೇಜಿನಲ್ಲಿ ದಾಂಡಿ/ಕೋಲಿನ ಸಹಾಯದಿಂದ ಆಡುವ ಕ್ಯೂ ಕ್ರೀಡೆಯಾಗಿದೆ. ವಿಧಾಯಕ ಗಾತ್ರದ (ಪೂರ್ಣ-ಗಾತ್ರ) ಮೇಜಿದು 12 ft × 6 ft (3.7 m × 1.8 m). ಇದನ್ನು ಒಂದು ಕೋಲು/ದಾಂಡು ಹಾಗೂ ಸ್ನೂಕರ್ ಚೆಂಡುಗಳೊಂದಿಗೆ ಆಡಲಾಗುತ್ತದೆ : ಒಂದು ಬಿಳಿಬಣ್ಣದ cue ball, ಒಂದು ಅಂಕ ಮೌಲ್ಯದ 15 red balls, ಹಾಗೂ ವಿವಿಧ ಬಣ್ಣಗಳ ಆರು ಚೆಂಡುಗಳು colours ಹಳದಿ (2 ಅಂಕಗಳು), ಹಸಿರು (3), ಕಂದು (4), ನೀಲಿ (5), ಗುಲಾಬಿ (6) ಹಾಗೂ ಕಪ್ಪು ಬಣ್ಣದ್ದು (7).[1] ಓರ್ವ ಆಟಗಾರ (ಅಥವಾ ತಂಡ), ಕೆಂಪು ಹಾಗೂ ಬಣ್ಣಗಳ ಚೆಂಡುಗಳೊಂದಿಗೆ ಕೋಲು/ದಾಂಡು ಚೆಂಡನ್ನು pot ಮಾಡುವ ಮೂಲಕ ತನ್ನ ಎದುರಾಳಿ(ಗಳಿ)ಗಿಂತ ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ಸ್ನೂಕರ್ನ frame (ಏಕ ಪಂದ್ಯ)ವನ್ನು ಗೆಲ್ಲಬಹುದು. ಓರ್ವ ಆಟಗಾರ ನಿರ್ದಿಷ್ಟ ಸಂಖ್ಯೆಯ ಸುತ್ತುಗಳಲ್ಲಿ ಗೆಲ್ಲುವ ಮೂಲಕ ಪಂದ್ಯವನ್ನು ಗೆಲ್ಲಬಹುದು.
ಸಾಧಾರಣವಾಗಿ ಬ್ರಿಟಿಷ್ ಸೇನಾ ಅಧಿಕಾರಿಗಳಿಂದ ಭಾರತದಲ್ಲಿ ಆವಿಷ್ಕರಿಸಲಾದ ಕ್ರೀಡೆ ಎಂದು ಭಾವಿಸಲ್ಪಟ್ಟಿರುವುದಲ್ಲದೇ, ಕೆಲ ಉನ್ನತ ವೃತ್ತಿಪರ ಆಟಗಾರರು ಈ ಕ್ರೀಡೆಯಿಂದ ಬಹು-ದಶಲಕ್ಷ ಪೌಂಡ್ಗಳ ಆದಾಯದ ವೃತ್ತಿಜೀವನವನ್ನು ಕಂಡುಕೊಂಡಿರುವುದಲ್ಲದೇ ಸ್ನೂಕರ್ ಕ್ರೀಡೆಯು ಅನೇಕ ಆಂಗ್ಲ-ಭಾಷಿಕ ಹಾಗೂ ಕಾಮನ್ವೆಲ್ತ್ ರಾಷ್ಟ್ರಗಳಲ್ಲಿ[2] ಜನಪ್ರಿಯವಾಗಿದೆ.[3] ಈ ಕ್ರೀಡೆಯು ನಿರ್ದಿಷ್ಟವಾಗಿ ಚೀನಾದಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ.[4]
19ನೇ ಶತಮಾನದ ಉತ್ತರಾರ್ಧದಲ್ಲಿ ಸ್ನೂಕರ್ ಹುಟ್ಟಿತು ಎಂಬುದು ಸಾಧಾರಣ ಒಪ್ಪಿತ ಅಭಿಪ್ರಾಯ.[5] ಭಾರತದಲ್ಲಿ ಉಳಿದುಕೊಂಡಿದ್ದ ಬ್ರಿಟಿಷ್ ಸೇನಾಧಿಕಾರಿಗಳ ಜನಪ್ರಿಯ ಚಟುವಟಿಕೆ ಬಿಲಿಯರ್ಡ್ಸ್ ಆಟವಾಗಿದ್ದುದಲ್ಲದೇ, ಹೆಚ್ಚು ಸಾಂಪ್ರದಾಯಿಕವಾಗಿದ್ದ ಬಿಲಿಯರ್ಡ್ ಕ್ರೀಡೆಗಳಲ್ಲಿ ವೈವಿಧ್ಯತೆಯನ್ನು ರಚಿಸಲಾಯಿತು. ಜಬಲ್ಪುರ್ನ ಅಧಿಕಾರಿಗಳ ಉಪಹಾರ ಕೇಂದ್ರದಲ್ಲಿ 1874[6] ಅಥವಾ 1875,[5] ರ ಅವಧಿಯಲ್ಲಿ ಹಾಗೆ ರಚಿಸಿದ ಮಾರ್ಪಾಟಾದ ಕ್ರೀಡೆಯು ಪಿರಮಿಡ್ ಪೂಲ್ ಹಾಗೂ ಲೈಫ್ ಪೂಲ್ಗಳಲ್ಲಿ ಬಳಸುತ್ತಿದ್ದ ಕೆಂಪು ಹಾಗೂ ಕಪ್ಪು ಬಣ್ಣದ ಚೆಂಡುಗಳ ಜೊತೆಗೆ ಇತರೆ ಬಣ್ಣದ ಚೆಂಡುಗಳನ್ನು ಸೇರಿಸಿತ್ತು.[7] ಸ್ನೂಕರ್ ಎಂಬ ಪದ ಕೂಡಾ ಸೈನ್ಯಮೂಲದ್ದಾಗಿದ್ದು ಪ್ರಥಮ-ವರ್ಷದ ಸೈನಿಕರನ್ನು ಅಥವಾ ಹೊಸ ಸಿಬ್ಬಂದಿಗಳನ್ನು ಸಂಭೋದಿಸಲು ಈ ಪದವನ್ನು ಗ್ರಾಮ್ಯ ಪದವಾಗಿ ಬಳಸಲಾಗುತ್ತಿತ್ತು.[5] ಘಟನಾವಳಿಯ ಒಂದು ಆವೃತ್ತಿಯ ಪ್ರಕಾರ ಡೆವನ್ಷೈರ್ ತುಕಡಿಯ ಕರ್ನಲ್ ಸರ್ ನೆವಿಲ್ಲೆ ಚೇಂಬರ್ಲೇನ್ ಈ ನವೀನ ಆಟವನ್ನು ಆಡುತ್ತಿದ್ದಾಗ ಎದುರಾಳಿಯು ಚೆಂಡನ್ನು ಕುಳಿಗೆ ಹಾಕಲು ವಿಫಲರಾದಾಗ ಚೇಂಬರ್ಲೇನ್ ಆತನನ್ನು ಸ್ನೂಕರ್ ಎಂದು ಲೇವಡಿ ಮಾಡಿದರು.[7] ಹಾಗಾಗಿ ಈ ಪದವು ಬಿಲಿಯರ್ಡ್ಸ್ ಆಟಕ್ಕೆ ಅಂಟಿಕೊಂಡು ಅನನುಭವಿ ಆಟಗಾರರನ್ನು ಸ್ನೂಕರ್ಗಳೆಂದು ಕರೆಯಲಾಯಿತು.[8]
19ನೇ ಶತಮಾನದ ಉತ್ತರಾರ್ಧ ಹಾಗೂ 20ನೇ ಶತಮಾನದ ಆದಿಯಲ್ಲಿ ಸ್ನೂಕರ್ ಆಟವು ಅಭಿವೃದ್ಧಿ ಹೊಂದಿತಲ್ಲದೇ, 1927ರ ವೇಳೆಗೆ ಕ್ರೀಡೆಯನ್ನು ಸಾಧಾರಣ ಕಾಲಕ್ಷೇಪದ ಬದಲಿಗೆ ಹೆಚ್ಚಿನ ವೃತ್ತಿಪರ ಪರಿಧಿಗೆ ಕರೆತಂದ ಓರ್ವ ವೃತ್ತಿಪರ ಆಂಗ್ಲ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಆಟಗಾರ ಜೋ ಡೇವಿಸ್, ಪ್ರಥಮ ವಿಶ್ವ ಸ್ನೂಕರ್ ಚಾಂಪಿಯನ್ಷಿಪ್[5] ಅನ್ನು ಆಯೋಜಿಸಿದರು.[9] ಜೋ ಡೇವಿಸ್ 1946ರಲ್ಲಿ ತಾವು ನಿವೃತ್ತಿಯಾಗುವವರೆಗೆ ನಡೆದ ಪ್ರತಿ ವಿಶ್ವ ಚಾಂಪಿಯನ್ಷಿಪ್ಯನ್ನು ಜಯಿಸಿದ್ದರು. ಆಟವನ್ನಾಡುತ್ತಿರುವವರನ್ನು ಬಿಟ್ಟು ಉಳಿದವರಲ್ಲಿ ಹೆಚ್ಚೇನೂ ಆಸಕ್ತಿ ಹುಟ್ಟಿಸದ ಕಾರಣ 1950ರ ದಶಕದಿಂದ 1960ರ ದಶಕದುದ್ದಕ್ಕೂ ಆಟವು ಅಧೋಗತಿಗಿಳಿಯಿತು. 1959ರಲ್ಲಿ, ಡೇವಿಸ್ ಆಟದ ಜನಪ್ರಿಯತೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಹೆಚ್ಚುವರಿ ಎರಡು ಬಣ್ಣಗಳನ್ನು ಸೇರಿಸಿ ಸ್ನೂಕರ್ ಪ್ಲಸ್ ಎಂಬ ಈ ಆಟದ ಮತ್ತೊಂದು ಮಾರ್ಪಾಟನ್ನು ಪರಿಚಯಿಸಿದರು. ಆದಾಗ್ಯೂ ಯಾವುದೇ ಪ್ರಯೋಜನವಾಗಲಿಲ್ಲ. 1969ರಲ್ಲಿ ಆಗಿನ BBCಯ ಉನ್ನತ ಅಧಿಕಾರಿಯಾಗಿದ್ದ ಡೇವಿಡ್ ಅಟೆನ್ಬರೋ ವರ್ಣಪ್ರಸಾರದ ಅನುಕೂಲಗಳನ್ನು ಬಿಂಬಿಸಲು ಸೂಕ್ತವಾದ ಹಸಿರು ಮೇಜು ಹಾಗೂ ಬಹುವರ್ಣೀಯ ಚೆಂಡುಗಳೊಂದಿಗೆ ವರ್ಣ ಕಿರುತೆರೆಯ ಸಾಮರ್ಥ್ಯದ ನಿದರ್ಶನ ನೀಡಲು ಪಾಟ್ ಬ್ಲಾಕ್ ಎಂಬ ಸ್ನೂಕರ್ ಪಂದ್ಯಾವಳಿಯನ್ನು ಆಯೋಜಿಸಿದಾಗ ಪ್ರಮುಖ ಬೆಳವಣಿಗೆಯುಂಟಾಯಿತು.[10][11] ಈ ಕಿರುತೆರೆ ಸರಣಿಯ ಶ್ರೇಯಾಂಕವು ಯಶಸ್ವಿಯಾಗಿ ವೃದ್ಧಿಸಿತಲ್ಲದೇ ಕೆಲ ಸಮಯದವರೆಗೆ BBC Two/ಟು ವಾಹಿನಿಯಲ್ಲಿ ಎರಡನೇ ಅತಿ ಜನಪ್ರಿಯ ಕಾರ್ಯಕ್ರಮವೆನಿಸಿತ್ತು.[12] ಕ್ರೀಡೆಯಲ್ಲಿನ ಜನರ ಆಸಕ್ತಿ ವೃದ್ಧಿಸಿತಲ್ಲದೇ 1978ರ ವಿಶ್ವ ಚಾಂಪಿಯನ್ಷಿಪ್ ಪ್ರಪ್ರಥಮ ಬಾರಿಗೆ ಪೂರ್ಣಪ್ರಮಾಣದ ಕಿರುತೆರೆ ಪ್ರಸಾರ ಕಂಡಿತು.[2][13] UK, ಐರ್ಲೆಂಡ್ ಹಾಗೂ ಕಾಮನ್ವೆಲ್ತ್ನ ಬಹುತೇಕ ರಾಷ್ಟ್ರಗಳಲ್ಲಿ ಈ ಆಟವು ಬಹುಬೇಗ ಮುಖ್ಯವಾಹಿನಿಯ ಕ್ರೀಡೆಯಾಯಿತಲ್ಲದೇ[14] ಕಿರುತೆರೆ ಪ್ರಸಾರಿತ ಶ್ರೇಯಾಂಕಿತ ಪಂದ್ಯಾವಳಿಗಳಲ್ಲಿ ಒಂದಾಗಿ ಕಳೆದ 30 ವರ್ಷಗಳಲ್ಲಿ ಬಹಳಷ್ಟು ಯಶಸ್ಸನ್ನು ಕಂಡಿದೆ. 1985ರಲ್ಲಿ ಡೆನ್ನಿಸ್ ಟೇಲರ್ ಹಾಗೂ ಸ್ಟೀವ್ ಡೇವಿಸ್ ನಡುವಿನ ವಿಶ್ವ ಚಾಂಪಿಯನ್ಷಿಪ್ ಅಂತಿಮ ಪಂದ್ಯದ ಕೊನೆಯ ಸುತ್ತನ್ನು ಒಟ್ಟಾರೆ 18.5 ದಶಲಕ್ಷ ವೀಕ್ಷಕರು ವೀಕ್ಷಿಸಿದ್ದರು.[15] ಇತ್ತೀಚಿನ ವರ್ಷಗಳಲ್ಲಿ ತಂಬಾಕು ಕಂಪೆನಿಗಳ ಪ್ರಾಯೋಜನೆ ಇಲ್ಲದ ಕಾರಣ ಹೊಸ ಪ್ರಾಯೋಜಕರನ್ನು ಹೊಂದಿಸಿದ್ದರೂ ಅನೇಕ ವೃತ್ತಿಪರ ಪಂದ್ಯಾವಳಿಗಳ ಸಂಖ್ಯೆಯಲ್ಲಿ ಕುಸಿತ ಕಂಡಿದೆ;[16] ಆದಾಗ್ಯೂ ಲಿಯಾಂಗ್ ವೆನ್ಬೋರಂತಹಾ ಉದಯೋನ್ಮುಖ ಪ್ರತಿಭೆಗಳ ಹಾಗೂ ವಿಶ್ವದ ಆ ಭಾಗದಲ್ಲಿ ಕ್ರೀಡೆಗೆ ಉತ್ತಮ ಭವಿಷ್ಯ ನೀಡಬಲ್ಲ ಡಿಂಗ್ ಜುನ್ಹುಯಿ ಹಾಗೂ ಮಾರ್ಕೊ ಫುರಂತಹಾ ಯಶಸ್ವಿ ಆಟಗಾರರಿಂದ ದೂರ ಪ್ರಾಚ್ಯ ಹಾಗೂ ಚೀನಾಗಳಲ್ಲಿ ಜನಪ್ರಿಯತೆ ಹೆಚ್ಚಿದೆ.[4][17]
ಪೂರ್ವನಿರ್ಧರಿತ ಕ್ರಮದಲ್ಲಿ ಚೆಂಡನ್ನು ಹಾಕುವ ಮೂಲಕobject balls ಎದುರಾಳಿಗಿಂತ ಹೆಚ್ಚಿನpoints ಅಂಕವನ್ನು ಗಳಿಸುವುದು ಆಟದ ಗುರಿ. ಸುತ್ತಿನ ಆರಂಭದಲ್ಲಿ, ಚೆಂಡುಗಳನ್ನು ತೋರಿಸಿದ ರೀತಿಯಲ್ಲಿ ಇರಿಸಲಾಗಿರುತ್ತದೆ, ಆಟಗಾರರು ಸರತಿಯ ಮೇಲೆ ಅವುಗಳನ್ನು ದಾಂಡಿ/ಕೋಲಿನ tipರ ಮೂಲಕ ಒಂದೇ ಬೀಸಿನಲ್ಲಿ, ಕೆಂಪು ಚೆಂಡುಗಳಲ್ಲಿ ಒಂದನ್ನು ಗುರಿ ಮುಟ್ಟಿಸಿ ಅಂಕ ಗಳಿಸುತ್ತಾರೆ. ಅವರು ಕನಿಷ್ಟ ಒಂದು ಕೆಂಪು ಚೆಂಡನ್ನು ಹಾಕಿದರೆ, ಅದು ಚೀಲದೊಳಗೆ ಇರುತ್ತದಲ್ಲದೇ ಅವರಿಗೆ ಮತ್ತೊಂದು ಅವಕಾಶ ಸಿಗುತ್ತದೆ- ಈ ಬಾರಿ ಬೇರೆ ವರ್ಣಗಳ ಚೆಂಡನ್ನು ಹೊಡೆಯಬೇಕಾಗಿರುತ್ತದೆ. ಅವರು ಯಶಸ್ವಿಯಾದರೆ ಹಾಕಿದ ಬಣ್ಣದ ಅಂಕ ಗಳಿಸುತ್ತಾರೆ. ಅದನ್ನು ಮತ್ತೆ ತನ್ನ ಸರಿಯಾದ ಸ್ಥಾನದಲ್ಲಿಟ್ಟ ನಂತರ ಅವರು ಮತ್ತೊಂದು ಕೆಂಪು ಚೆಂಡನ್ನು ಹಾಕಲು ಪ್ರಯತ್ನಿಸಬೇಕು. ಈ ಪ್ರಕ್ರಿಯೆಯು ಅವರು ಬೇಕಾದ ಚೆಂಡನ್ನು ಹಾಕಲು ಸೋಲುವವರೆಗೆ ನಡೆಯುತ್ತದೆ, ಆಗ ಅವರ ಎದುರಾಳಿಯು ಮೇಜಿಗೆ ಹಿಂತಿರುಗಿ ತನ್ನ ಮುಂದಿನ ಹೊಡೆತ ನೀಡುತ್ತಾರೆ. ಆಟವು ಇದೇ ಮಾದರಿಯಲ್ಲಿ ಎಲ್ಲಾ ಕೆಂಪುಚೆಂಡುಗಳನ್ನು ಹಾಕುವವರೆಗೆ ಮುಂದುವರೆಯುತ್ತದೆ ಆಗ ಕೇವಲ 6 ಬಣ್ಣದ ಚೆಂಡುಗಳು ಮಾತ್ರವೇ ಮೇಜಿನ ಮೇಲಿರುತ್ತವೆ; ಆ ಸಮಯದಲ್ಲಿ ಹಳದಿ, ಹಸಿರು, ಕಂದು, ನೀಲಿ, ಗುಲಾಬಿ, ಕಪ್ಪು ಈ ಕ್ರಮದಲ್ಲಿ ಬಣ್ಣದ ಚೆಂಡುಗಳನ್ನು ಹಾಕುವುದು ಗುರಿಯಾಗಿರುತ್ತದೆ. ಸುತ್ತಿನ ಈ ಭಾಗದಲ್ಲಿ ಬಣ್ಣದ ಚೆಂಡನ್ನು ಹಾಕಿದರೆ ಅದು ಮೇಜಿನ ಹೊರಗೇ ಉಳಿಯುತ್ತದೆ. ಕೊನೆಯ ಚೆಂಡನ್ನು ಹಾಕಿದಾಗ, ಹೆಚ್ಚಿನ ಅಂಕಗಳನ್ನು ಪಡೆದಿರುವ ಆಟಗಾರ ಜಯಿಸುತ್ತಾನೆ.[1]
ಆಟಗಾರ'ನ ಎದುರಾಳಿಯು fouls ಮಾಡಿದಾಗಲೂ ಆಟದಲ್ಲಿ ಅಂಕಗಳನ್ನು ಗಳಿಸಬಹುದು. ಆಟಗಾರ ಕೆಂಪು ಚೆಂಡನ್ನು ಹೊಡೆಯಲು ಪ್ರಯತ್ನಿಸುವಾಗ ಬಣ್ಣದ ಚೆಂಡನ್ನು ಮೊದಲು ಹೊಡೆಯುವುದು, ಕೋಲು/ದಾಂಡು ಚೆಂಡನ್ನೇ ಹಾಕುವುದು, ಅಥವಾ "a snooker" ದಿಂದ ಪಾರಾಗಲು ಸಾಧ್ಯವಾಗದೇ ಇರುವುದು (ಹಿಂದಿನ ಆಟಗಾರ ಗುರಿಚೆಂಡನ್ನು ನೇರವಾಗಿ ಹೊಡೆಯಲಾಗದ ಸ್ಥಿತಿಯಲ್ಲಿ ಕೋಲು/ದಾಂಡು ಚೆಂಡನ್ನು ಬಿಟ್ಟು ತಮ್ಮ ಸರದಿ ಮುಗಿಸಿದ ಸನ್ನಿವೇಶ) ಮುಂತಾದ ಅನೇಕ ಕಾರಣಗಳಿಂದಾಗಿ ತಪ್ಪು ನಡೆ ಸಂಭವಿಸಬಹುದು. ತಪ್ಪು ನಡೆಯಿಂದ ಗಳಿಸಬಹುದಾದ ಅಂಕಗಳು ಕನಿಷ್ಟ 4ರಿಂದ ಕಪ್ಪು ಚೆಂಡು ಒಳಗೊಂಡಿದ್ದರೆ ಗರಿಷ್ಟ 7ರವರೆಗೆ ವ್ಯತ್ಯಾಸಗೊಳ್ಳುತ್ತವೆ.[1]
ಚೆಂಡುಗಳು ತಮ್ಮ ಆರಂಭಿಕ ಸ್ಥಾನದಿಂದ ಕೊನೆಯ ಚೆಂಡನ್ನು ಹಾಕುವವರೆಗಿನ ಒಂದು ಆಟgameವನ್ನು, ಒಂದು ಸುತ್ತುframe ಎನ್ನುತ್ತಾರೆ. ಪಂದ್ಯವೊಂದುmatch ಸಾಧಾರಣವಾಗಿ ಪೂರ್ವನಿರ್ಧರಿತ ಸಂಖ್ಯೆಯ ಸುತ್ತುಗಳನ್ನು ಹೊಂದಿದ್ದು ಅತಿ ಹೆಚ್ಚಿನ ಸಂಖ್ಯೆಯ ಸುತ್ತುಗಳನ್ನು ಗೆದ್ದ ಆಟಗಾರ ಪಂದ್ಯವನ್ನು ಒಟ್ಟಾರೆಯಾಗಿ ಗೆಲ್ಲುತ್ತಾನೆ. ಬಹುಪಾಲು ವೃತ್ತಿಪರ ಪಂದ್ಯಗಳಲ್ಲಿ ಆಟಗಾರನು ಐದು ಸುತ್ತುಗಳನ್ನು ಜಯಿಸಬೇಕಾಗಿದ್ದು, ಹಾಗೂ ಅವರನ್ನು "ಒಂಬತ್ತರಲ್ಲಿ ಅತ್ಯುತ್ತಮ" ಎಂದು ಅದೇ ಗರಿಷ್ಟಸಾಧ್ಯ ಸುತ್ತುಗಳ ಸಂಖ್ಯೆಯಾದುದರಿಂದ ಕರೆಯುತ್ತಾರೆ. ಪಂದ್ಯಾವಳಿಯ ಅಂತಿಮ ಪಂದ್ಯಗಳು ರೂಢಿಗತವಾಗಿ 17ರಲ್ಲಿ ಅತ್ಯುತ್ತಮ ಅಥವಾ 19ರಲ್ಲಿ ಅತ್ಯುತ್ತಮವಾದರೆ, ವಿಶ್ವ ಚಾಂಪಿಯನ್ಷಿಪ್ ದೀರ್ಘ ಪಂದ್ಯಗಳನ್ನು ಹೊಂದಿರುತ್ತದೆ - ಅರ್ಹತಾಸುತ್ತು ಹಾಗೂ ಪ್ರಥಮ ವಿಹಿತ ಸುತ್ತಿಗೆ 19ರಲ್ಲಿ ಅತ್ಯುತ್ತಮದಿಂದ ಹಿಡಿದು 35 ಸುತ್ತುಗಳವರೆಗೆ ವ್ಯಾಪಿಸಿರಬಹುದಲ್ಲದೇ (ಮೊದಲನೆಯದರಿಂದ 18), ಅದನ್ನು ಎರಡು ದಿನಗಳ ಕಾಲ ಆಡಲಾಗುತ್ತದೆ.[18]
ವೃತ್ತಿಪರ ಹಾಗೂ ಸ್ಪರ್ಧಾತ್ಮಕ ಹವ್ಯಾಸಿ ಪಂದ್ಯಗಳನ್ನು ರೆಫರಿಯೋರ್ವರು ನಡೆಸುತ್ತಾರಲ್ಲದೇ, ಅವರೇ ಯುಕ್ತ ಆಟದ ಏಕೈಕ ತೀರ್ಪುಗಾರರಾಗಿರುತ್ತಾರೆ. ರೆಫರಿಯವರೇ ಮೇಜಿನ ಮೇಲಿನ ಬಣ್ಣದ ಚೆಂಡುಗಳನ್ನು ಮರುಹೊಂದಿಸುವರಲ್ಲದೇ ಮಧ್ಯಂತರದಲ್ಲಿ ಆಟಗಾರನ ಅಂಕಗಳೆಷ್ಟು ಎಂದು ಘೋಷಿಸುತ್ತಾರೆ. ವೃತ್ತಿಪರ ಆಟಗಾರರು ರೆಫರಿ ಗುರುತಿಸಿರದ ತಪ್ಪು ನಡೆಗಳನ್ನು ಘೋಷಿಸುವುದು, ಎದುರಾಳಿಯ ಉತ್ತಮ ನಡೆಯನ್ನು ಪ್ರಶಂಸಿಸುವುದು ಅಥವಾ ಅನುಕೂಲಕರ ನಡೆಗಾಗಿ ಕ್ಷಮೆ ಯಾಚಿಸಲು ಕೈ ಎತ್ತುವುದೂ ಸೇರಿದಂತೆ ಸಾಧಾರಣವಾಗಿ ಕ್ರೀಡಾಮನೋಭಾವದಲ್ಲಿ ಆಡುತ್ತಾರೆ.
ಸ್ನೂಕರ್ನಲ್ಲಿ ಬಳಸುವ ಮತ್ತೊಂದು ಪಾರಿಭಾಷಿಕ ಪದವೆಂದರೆ ಆಟಗಾರನು ಶೇಖರಿಸಿದ ಮೇಜಿಗೆ ನೀಡಿದ ಒಂದು break ಭೇಟಿಯಲ್ಲಿ ಸಂಗ್ರಹಿಸಿದ (ತಪ್ಪು ನಡೆಗಳನ್ನು ಹೊರತುಪಡಿಸಿ) ಅನುಕ್ರಮ ಅಂಕಗಳ ಮೊತ್ತವಾದ ಆಟಗಾರನ ವಿರಾಮvisit. 15ರ ವಿರಾಮ ಗಳಿಸಿದ ಓರ್ವ ಆಟಗಾರ ಉದಾಹರಣೆಗೆ, ಮುಂದಿನ ಕೆಂಪು ಚೆಂಡನ್ನು ಹಾಕಲು ವಿಫಲಗೊಳ್ಳುವ ಮುಂಚೆ ಮೊದಲಿಗೆ ಕೆಂಪು ನಂತರ ಕಪ್ಪು, ನಂತರ ಕೆಂಪು ನಂತರ ಗುಲಾಬಿ ಚೆಂಡುಗಳನ್ನು ಹಾಕಿರಬಹುದು. ಸ್ನೂಕರ್ನಲ್ಲಿನ ಸಾಂಪ್ರದಾಯಿಕ ಗರಿಷ್ಟ ವಿರಾಮವೆಂದರೆ ಎಲ್ಲಾ ಕೆಂಪು ಚೆಂಡುಗಳನ್ನು, ಕಪ್ಪು ಚೆಂಡುಗಳನ್ನು ನಂತರ ಎಲ್ಲಾ ಬಣ್ಣದ ಚೆಂಡುಗಳನ್ನು ಹಾಕಿದಾಗ ಸಿಗುವ 147 ಅಂಕಗಳು; ಇದನ್ನು ಅನೇಕವೇಳೆ "147" ಅಥವಾ "ಗರಿಷ್ಟ"ವೆನ್ನುತ್ತಾರೆ.[19] ಇದನ್ನೂ ನೋಡಿ: ಹೆಚ್ಚಿನ ಮೊತ್ತದ ಸ್ನೂಕರ್ ವಿರಾಮಗಳು .
ಸ್ನೂಕರ್ನಲ್ಲಿ ಬಳಸುವ ಪರಿಕರಗಳೆಂದರೆ ದಾಂಡಿ/ಕೋಲಿನ ತುದಿಗೆ ಬಳಸುವ ಸೀಮೆಸುಣ್ಣ/ಚಾಕ್ chalk, ಅನೇಕ ರೀತಿಯ ಊರೆrestsಗಳು (ಪೂರ್ಣಗಾತ್ರದ ಮೇಜಿನಿಂದಾಗಿ ಅನೇಕವೇಳೆ ಬೇಕಾಗುತ್ತದೆ), ಕೆಂಪು ಚೆಂಡುಗಳನ್ನು ಹಾಗೂ ಅಂಕಪಟ್ಟಿಗಳಿಗೆ ಆಧಾರವಾಗಿಡಲುrack ಒಂದು ತ್ರಿಕೋನಾಕೃತಿ. ಪೂರ್ಣ ಗಾತ್ರದ ಮೇಜಿನ ಸ್ನೂಕರ್ನ ಒಂದು ನ್ಯೂನತೆಯೆಂದರೆ, ಎಲ್ಲಾ ಮಗ್ಗಲುಗಳಲ್ಲಿ ಸಮಾಧಾನಕರವಾಗಿ ಕೋಲನ್ನು ಆಡಿಸಲು ಬೇಕಾಗುವಷ್ಟು ಕೋಣೆಯ ಅಳತೆ (22' x 16' ಅಥವಾ ಸರಿಸುಮಾರು 5 m x 7 m).[20] ಇದು ಆಟವನ್ನು ಸುಲಭವಾಗಿ ಆಡಬಹುದಾದ ಸ್ಥಾನಗಳ ಸಂಖ್ಯೆಯನ್ನು ನಿಯಂತ್ರಿಸುತ್ತದೆ. ಅನೇಕ ಪಬ್ಗಳಲ್ಲಿ ಪೂಲ್ ಮೇಜುಗಳು ಸಾಧಾರಣವಾಗಿ ಲಭ್ಯವಿದ್ದರೂ, ಸ್ನೂಕರ್ ಆಟವನ್ನು ಖಾಸಗಿ ಸ್ಥಳಗಳಲ್ಲಿ ಅಥವಾ ಸಾರ್ವಜನಿಕ ಸ್ನೂಕರ್ ಕೊಠಡಿಗಳಲ್ಲಿ ಆಡಲಾಗುತ್ತದೆ. ಕ್ರೀಡೆಯನ್ನು ಸಣ್ಣ ಮೇಜಿನಲ್ಲಿ ಕಡಿಮೆ ಸಂಖ್ಯೆಯ ಕೆಂಪು ಚೆಂಡುಗಳೊಂದಿಗೆ ಕೂಡಾ ಆಡಲಾಗುತ್ತದೆ. ಮೇಜಿನ ತರಹೇವಾರಿ ಅಳತೆಗಳು ಹೀಗಿವೆ : 10' x 5', 9' x 4.5', 8' x 4', 6' x 3' (ವಾಸ್ತವಿಕ ಆಟಕ್ಕೆ ಬೇಕಾದ ಅತಿ ಸಣ್ಣ ಅಳತೆ) ಹಾಗೂ 4' x 2'. ಮಡಿಸಬಹುದಾದ ಅಥವಾ ಪರಿವರ್ತನೀಯ ಊಟದ ಮೇಜಿನಂತಹಾ ವಿವಿಧ ಶೈಲಿಗಳಲ್ಲಿ ಸಣ್ಣ ಮೇಜುಗಳು ಲಭ್ಯವಿವೆ.
ವರ್ಲ್ಡ್ ಪ್ರೊಫೆಷನಲ್ ಬಿಲಿಯರ್ಡ್ಸ್ ಅಂಡ್ ಸ್ನೂಕರ್ ಅಸೋಸಿಯೇಷನ್ (WPBSA, ವಿಶ್ವ ಸ್ನೂಕರ್ ಎಂದೂ ಕರೆಯಲಾಗುತ್ತದೆ),ಅನ್ನು ಪ್ರೊಫೆಷನಲ್ ಬಿಲಿಯರ್ಡ್ ಪ್ಲೇಯರ್ಸ್ ಅಸೋಸಿಯೇಷನ್,[21] ಎಂಬ ಹೆಸರಿನಿಂದ ವೃತ್ತಿಪರ ಕ್ರೀಡೆಗೆ ನಿಯಂತ್ರಣ ಸಂಸ್ಥೆಯಾಗಿ 1968ರಲ್ಲಿ ಸ್ಥಾಪಿಸಲಾಗಿತ್ತು. ಅದರ ಅಂಗಸಂಸ್ಥೆಯಾದ ಇಂಗ್ಲೆಂಡ್ನ ಬ್ರಿಸ್ಟಾಲ್ ಮೂಲದ, ವರ್ಲ್ಡ್ ಸ್ನೂಕರ್ ವೃತ್ತಿಪರ ಪ್ರವಾಸ/ಪಂದ್ಯಾವಳಿಗಳನ್ನು ಏರ್ಪಡಿಸುತ್ತದೆ. ವರ್ಷಗಳ ಅವಧಿಯಲ್ಲಿ WPBSAಯ ಆಡಳಿತ ಮಂಡಳಿಯು ಅನೇಕ ಬಾರಿ ಬದಲಾಗಿದೆ, ಕೆಲವರ ವಾದದ ಪ್ರಕಾರ ಇದು ಕ್ರೀಡೆಯಲ್ಲಿ ಭಿನ್ನಾಭಿಪ್ರಾಯದ ಸೂಚನೆಯಾಗಿದೆ.[22][23][24] ಇಂಟರ್ನ್ಯಾಷನಲ್ ಬಿಲಿಯರ್ಡ್ಸ್ ಅಂಡ್ ಸ್ನೂಕರ್ ಫೆಡರೇಷನ್ (IBSF) ಹವ್ಯಾಸಿ ಪಂದ್ಯಗಳನ್ನು ನಿಯಂತ್ರಿಸುತ್ತದೆ.[25]
ವೃತ್ತಿಪರ ಸ್ನೂಕರ್ ಆಟಗಾರರು ವರ್ಲ್ಡ್ ಸ್ನೂಕರ್ ಪ್ರಧಾನ ಪ್ರವಾಸೀ ಶ್ರೇಯಾಂಕ ಸರಣಿಗಳಲ್ಲಿ ಆಡಬಹುದಾಗಿರುತ್ತದೆ. ಆಟಗಾರರು ಕಳೆದೆರಡು ಋತುಗಳಲ್ಲಿ ತಾವು ಗಳಿಸಿದ ಶ್ರೇಯಾಂಕ ಸೂಚಿತ ಅಂಕಗಳು ಪ್ರಸಕ್ತ ವಿಶ್ವ ಶ್ರೇಯಾಂಕವನ್ನು ನಿರ್ಧರಿಸುತ್ತದೆ.[26] ಓರ್ವ ಆಟಗಾರನ ಶ್ರೇಯಾಂಕವು ಅವರಿಗೆ ಶ್ರೇಯಾಂಕಿತ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಬೇಕಾದ ಅರ್ಹತೆಯ ಮಟ್ಟವನ್ನು ನಿರ್ಧರಿಸುತ್ತದೆ. ಯಾವುದೇ ಪಂದ್ಯಾವಳಿಗಳಿಗೆ ಅರ್ಹತಾಪರೀಕ್ಷೆ ಬೇಕಾಗಿರದ "ಶ್ರೇಷ್ಟ 16" ಶ್ರೇಯಾಂಕಿತ ಆಟಗಾರರನ್ನು,[27] ವೃತ್ತಿಪರ ಸ್ನೂಕರ್ನ ಗಣ್ಯರು ಎಂದು ಪರಿಗಣಿಸಲಾಗುತ್ತದೆ.[28] ಪ್ರವಾಸವು 96 ಆಟಗಾರರನ್ನೊಳಗೊಂಡಿರುತ್ತದೆ - ಹಿಂದಿನೆರಡು ಋತುಗಳ ಶ್ರೇಷ್ಟ 64 ಕ್ರೀಡಾಳುಗಳು, ಶ್ರೇಷ್ಟ 64ರ ಗುಂಪಿನಲ್ಲಿರದ ವರ್ಷದ ಒಟ್ಟಾರೆ ಅಂಕಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ 8 ಮಂದಿ, ಕಳೆದ ಋತುವಿನ ಪಾಂಟಿನ್ಸ್ ಇಂಟರ್ನ್ಯಾಷನಲ್ ಓಪನ್ ಸೀರೀಸ್ (PIOS)ನ ಶ್ರೇಷ್ಟ 8 ಮಂದಿ, ಹಾಗೂ ಅನೇಕ ಪ್ರಾಂತೀಯ, ಕಿರಿಯ ಹಾಗೂ ಹವ್ಯಾಸೀ ಚಾಂಪಿಯನ್ಗಳು ಇವರಲ್ಲಿರುತ್ತಾರೆ.
1927ರಿಂದ ವಾರ್ಷಿಕವಾಗಿ ನಡೆಯುತ್ತಿರುವ (1958ರಿಂದ 1963ರ ನಡುವೆ ಹಾಗೂ ಎರಡನೇ ವಿಶ್ವ ಸಮರದ ವೇಳೆ ಹೊರತುಪಡಿಸಿ) ವಿಶ್ವ ಚಾಂಪಿಯನ್ಷಿಪ್[29] ವೃತ್ತಿಪರ ಸ್ನೂಕರ್ನ ಪ್ರಧಾನ ಸಂಗತಿಯಾಗಿದೆ. 1977ರಿಂದ ಷೆಫೀಲ್ಡ್ನ (ಇಂಗ್ಲೆಂಡ್) ಕ್ರೂಸಿಬಲ್ ಥಿಯೇಟರ್ನಲ್ಲಿ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ, 1976ರಿಂದ 2005ವರೆಗಿನ ಅವಧಿಯಲ್ಲಿ ದೂತಾವಾಸವು ಇವುಗಳನ್ನು ಪ್ರಾಯೋಜಿಸುತ್ತಿತ್ತು.[16] 2005ರಿಂದ, ಯುನೈಟೆಡ್ ಕಿಂಗ್ಡಂನಲ್ಲಿ ತಂಬಾಕು ಕಂಪೆನಿಗಳು ಪಂದ್ಯಾವಳಿಗಳನ್ನು ಪ್ರಾಯೋಜಿಸುವುದಕ್ಕೆ ಅನುಮತಿ ಇಲ್ಲದಿರುವುದರಿಂದ, ವಿಶ್ವ ಸ್ನೂಕರ್ ಚಾಂಪಿಯನ್ಷಿಪ್ ಹೊಸ ಪ್ರಾಯೋಜಕರನ್ನು ಹುಡುಕಬೇಕಾಯಿತು. ಜನವರಿ 2006ರಲ್ಲಿ 2006–2010ರ ವಿಶ್ವ ಚಾಂಪಿಯನ್ಷಿಪ್ಗಳನ್ನು ಆನ್ಲೈನ್ ಕ್ಯಾಸಿನೊ/ಜೂಜುಕಟ್ಟೆ 888.comಯು ಪ್ರಾಯೋಜಿಸುತ್ತದೆ ಎಂದು ಘೋಷಿಸಲಾಯಿತು. 888.com ತಮ್ಮ ಐದು ವರ್ಷಗಳ ಪ್ರಾಯೋಜಕತ್ವದಿಂದ ಮೂರು ವರ್ಷಗಳ ನಂತರ ಹಿಂದೆ ಸರಿದ ಕಾರಣ ಪ್ರಸ್ತುತ ಚಾಂಪಿಯನ್ಷಿಪ್ಅನ್ನು BetFred.com ಪ್ರಾಯೋಜಿಸುತ್ತಿದೆ.[30] 15 ಏಪ್ರಿಲ್ 2009ರಂದು ವಿಶ್ವ ಸ್ನೂಕರ್ ಚಾಂಪಿಯನ್ಷಿಪ್ ಜಾಲತಾಣವು Betfred.com ಸಂಸ್ಥೆಯು ಮುಂದಿನ ನಾಲ್ಕು ವರ್ಷಗಳ ಕಾಲ ವಿಶ್ವ ಚಾಂಪಿಯನ್ಷಿಪ್ನ ಪ್ರಾಯೋಜಕರಾಗಿರುತ್ತಾರೆ ಎಂದು ಘೋಷಿಸಿತು.[31][32]
ವಿಶ್ವ ಚಾಂಪಿಯನ್ಷಿಪ್ಅನ್ನು ಗೆದ್ದ ಪಟ್ಟವು ಶ್ರೇಷ್ಠವಾಗಿರುತ್ತದಲ್ಲದೇ ಸಿಗುವ ಆರ್ಥಿಕ ಸಂಭಾವನೆ (ವಿಜೇತರಿಗೆ £250,000 ನೀಡಲಾಗುತ್ತದೆ)[33] ಹಾಗೂ ಪ್ರತಿಷ್ಠೆ ಎರಡೂ ದೃಷ್ಠಿಯಿಂದ ವೃತ್ತಿಪರ ಸ್ನೂಕರ್ನಲ್ಲಿಯೇ ಹೆಚ್ಚಿನ ಮೌಲ್ಯದ ಪ್ರಶಸ್ತಿ[34] ಯಾಗಿದೆ. ವಿಶ್ವ ಚಾಂಪಿಯನ್ಷಿಪ್ಅನ್ನು UKನಲ್ಲಿ BBC[35] ವ್ಯಾಪಕವಾಗಿ ಪ್ರಸಾರ ಮಾಡುತ್ತಿದೆ ಹಾಗೂ ಮಧ್ಯಪ್ರಾಚ್ಯ ಹಾಗೂ ಯೂರೋಸ್ಪೋರ್ಟ್[36] ನ ಮೂಲಕ ಯೂರೋಪ್ನಲ್ಲಿ ಪ್ರಸಾರಿಸಲಾಗುತ್ತಿದೆ.
ಪಂದ್ಯಾವಳಿಗಳ ಪ್ರಾಮುಖ್ಯತೆಯಲ್ಲಿ ಮುಂದಿನ ಆದ್ಯತೆ ಇತರೆ ಶ್ರೇಯಾಂಕ ಪಂದ್ಯಾವಳಿಗಳದ್ದು. ಈ ಪಂದ್ಯಾವಳಿಗಳಲ್ಲಿನ ಆಟಗಾರರು ವಿಶ್ವ ಶ್ರೇಯಾಂಕಗಳನ್ನು ಪಡೆಯಬಲ್ಲರು. ಉತ್ತಮ ಶ್ರೇಯಾಂಕವು ಮುಂದಿನ ವರ್ಷದ ಪಂದ್ಯಾವಳಿಗಳಿಗೆ ಅರ್ಹತೆಯನ್ನು, ಆಹ್ವಾನ ಪಂದ್ಯಾವಳಿಗಳಿಗೆ ಆಹ್ವಾನವನ್ನು ಹಾಗೂ ಪಂದ್ಯಾವಳಿಗಳಲ್ಲಿನ ಫಲಿತಾಂಶಗಳಲ್ಲಿ ಪೂರಕ ಸರಿಸಮತೆಗಳನ್ನು ನಿಶ್ಚಿತಗೊಳಿಸುತ್ತದೆ.[27] ಇವುಗಳಲ್ಲಿ ವಿಶ್ವ ಚಾಂಪಿಯನ್ಷಿಪ್ ನಂತರದ ಪ್ರತಿಷ್ಠಿತವಾದುದೆಂದರೆ UK ಚಾಂಪಿಯನ್ಷಿಪ್. ಮೂರನೆಯದೆಂದರೆ ಆಹ್ವಾನ ಪಂದ್ಯಾವಳಿಗಳು ಇದಕ್ಕೆ, ಬಹುತೇಕ ಉನ್ನತ ಶ್ರೇಯಾಂಕಿತ ಆಟಗಾರರನ್ನು ಆಹ್ವಾನಿಸಲಾಗುತ್ತದೆ. ಈ ವರ್ಗದ ಪ್ರಮುಖ ಪಂದ್ಯಾವಳಿ ಎಂದರೆ ಬಹಳಷ್ಟು ಆಟಗಾರರಿಗೆ ಎರಡನೇ ಅಥವಾ ಮೂರನೆಯ ಆದ್ಯತೆಯ ಪ್ರಶಸ್ತಿಯಾಗಿರುವ ದ ಮಾಸ್ಟರ್ಸ್[37].[38]
ಕಿರುತೆರೆ ಪ್ರಸಾರಿತ ಪಂದ್ಯಗಳು ನಿಧಾನವಾಗಬಲ್ಲವು ಅಥವಾ ದೀರ್ಘಕಾಲೀನ ಸುರಕ್ಷತಾ ವಿನಿಮಯಗಳಲ್ಲಿ ಸಿಲುಕಿಕೊಳ್ಳಬಹುದು ಹಾಗೂ ಜಾಹೀರಾತುದಾರರಿಗೆ,[39] ದೀರ್ಘಕಾಲೀನ ಪಂದ್ಯಗಳು ತೊಂದರೆಯುಂಟುಮಾಡಬಹುದು ಎಂಬ ಟೀಕೆಗಳಿಗೆ ಉತ್ತರಿಸುವ ಸಲುವಾಗಿ, ಬದಲಿ ನಿಗದಿತ ಸಮಯದ ಪಂದ್ಯಾವಳಿಗಳ ಸರಣಿಯನ್ನು ಮ್ಯಾಚ್ರೂಮ್ ಸ್ಪೋರ್ಟ್ನ ಅಧ್ಯಕ್ಷ ಬ್ಯಾರಿ ಹರ್ನ್ ಆಯೋಜಿಸಿದರು. ಹೊಡೆತ-ಸಮಯದ ಪ್ರೀಮಿಯರ್ ಲೀಗ್ ಸ್ನೂಕರ್ ಅನ್ನು ಸ್ಥಾಪಿಸಿ, ಯುನೈಟೆಡ್ ಕಿಂಗ್ಡಂನ ವಾಡಿಕೆಯ ತಾಣಗಳಲ್ಲೇ ಏಳು ಆಟಗಾರರನ್ನು ಸ್ಪರ್ಧಿಸಲು ಆಹ್ವಾನಿಸಲಾಯಿತು, ಹಾಗೂ ಸ್ಕೈ ಸ್ಪೋರ್ಟ್ಸ್ನಲ್ಲಿ ಪ್ರಸಾರ ಮಾಡಲಾಯಿತು. ಆಟಗಾರರಿಗೆ ಪ್ರತಿ ಹೊಡೆತಕ್ಕೆ ಇಪ್ಪತ್ತೈದು ಸೆಕೆಂಡ್ಗಳ ಕಾಲಾವಕಾಶವಿರುತ್ತದೆ, ಪ್ರತಿ ಆಟಗಾರನ ಪ್ರತಿ ಪಂದ್ಯಕ್ಕೆ ಐದು ಮೀರಿದ-ಕಾಲಸೂಚಿಗಳಿದ್ದವು. ಈ ಮಾದರಿಯ ಪಂದ್ಯಾವಳಿಯಲ್ಲಿ ಸ್ವಲ್ಪಮಟ್ಟಿಗೆ ಯಶಸ್ಸು ಸಿಕ್ಕಿತಾದರೂ, ವಾಡಿಕೆಯ ಶ್ರೇಯಾಂಕಿತ ಪಂದ್ಯಾವಳಿಗಳಷ್ಟು ಮಾಧ್ಯಮದ ಗಮನ ಹಾಗೂ ಪ್ರತಿಷ್ಠೆ ಪಡೆಯಲಿಲ್ಲ.
ವಿಶ್ವ ಶ್ರೇಯಾಂಕ ಪಡೆಯದ ಹಾಗೂ ಕಿರುತೆರೆ ಪ್ರಸಾರ ಕಾಣದ ಕಡಿಮೆ ಪ್ರಾಮುಖ್ಯತೆಯ ಯಾವುದೇ ಇತರ ಅನೇಕ ಪಂದ್ಯಾವಳಿಗಳೂ ಇವೆ. ಇವು ಪಂಚಾಂಗಗಳು ಹಾಗೂ ಪ್ರಾಯೋಜಕರ ಅನುಸಾರ ಪ್ರತಿವರ್ಷ ಬದಲಾಗುವ ಸಾಧ್ಯತೆ ಇರುತ್ತದೆ.
ಜೋ ಡೇವಿಸ್ರೊಂದಿಗೆ 1930ರ ದಶಕದಲ್ಲಿ ಆರಂಭವಾಗಿ ಇಂದಿನವರೆಗೂ ಮುಂದುವರೆದಿರುವ ವೃತ್ತಿಪರ ಯುಗದಲ್ಲಿ, ಸಾಪೇಕ್ಷವಾಗಿ ಅಲ್ಪ ಸಂಖ್ಯೆಯ ಆಟಗಾರರಷ್ಟೇ ಶ್ರೇಷ್ಟಮಟ್ಟ ಮುಟ್ಟಲು ಸಾಧ್ಯವಾಗಿದ್ದು.[40] ನೈಸರ್ಗಿಕ ಸಾಮರ್ಥ್ಯದೊಂದಿಗೆ ಅನೇಕ ವರ್ಷಗಳ ಸಮರ್ಪಣೆ ಹಾಗೂ ಪ್ರಯತ್ನಗಳು ಅಗತ್ಯವಾಗುವಂತಹಾ ಪಂದ್ಯ ಮಾನಕಗಳ ಕಾರಣ ಸ್ನೂಕರ್ ಗಣ್ಯರ ಸ್ಥಾನ ಪಡೆಯುವುದು ಹಾಗೂ ಅದನ್ನು ಉಳಿಸಿಕೊಳ್ಳುವುದು ಕಠಿಣ ಕಾರ್ಯ.[41]
ನಿರ್ದಿಷ್ಟ ಆಟಗಾರರು ದಶಕಗಳ ಕಾಲ ಪಂದ್ಯಗಳಲ್ಲಿ ಸಾರ್ವಭೌಮತೆ ಮೆರೆದರು. ರೇ ರೇರ್ಡನ್ 1970ರ ದಶಕದುದ್ದಕ್ಕೂ ಸ್ಟೀವ್ ಡೇವಿಸ್ 1980ರ ದಶಕದುದ್ದಕ್ಕೂ ಹಾಗೂ ಸ್ಟೀಫನ್ ಹೆಂಡ್ರಿ 1990ರ ದಶಕದುದ್ದಕ್ಕೂ, ಅನುಕ್ರಮವಾಗಿ 6, 6 ಹಾಗೂ 7 ವಿಶ್ವ ಚಾಂಪಿಯನ್ಷಿಪ್ಗಳನ್ನು ಗೆದ್ದು ಅಗ್ರಗಣ್ಯ ಆಟಗಾರರೆಂದು ಪರಿಗಣಿತರಾಗಿದ್ದಾರೆ. ರಾನ್ನಿ O'ಸುಲ್ಲಿವಾನ್ ಮೂರು ಬಾರಿ ಹಾಗೂ ಮಾರ್ಕ್ ವಿಲಿಯಮ್ಸ್ ಮತ್ತು ಜಾನ್ ಹಿಗ್ಗಿನ್ಸ್ ಎರಡು ಬಾರಿ ಗೆಲ್ಲುವುದರೊಂದಿಗೆ 2000ರ ದಶಕದಲ್ಲಿ ಯಾರೂ ಪ್ರಾಬಲ್ಯ ಹೊಂದಲಿಲ್ಲ ; 1998ರಲ್ಲಿ ಗೆದ್ದಿದ್ದನ್ನೂ ಸೇರಿಸಿ ಹಿಗ್ಗಿನ್ಸ್ ಒಟ್ಟಾರೆ ಮೂರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.[42]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.