ಸ್ತನ ಕ್ಯಾನ್ಸರ್
From Wikipedia, the free encyclopedia
ಸ್ತನ ಕ್ಯಾನ್ಸರ್ ಅಥವ ಮೊಲೆ ಕ್ಯಾನ್ಸರ್ ಎದೆಯ ಅಂಗಾಂಶದಿಂದ ಬೆಳೆಯುವ ಒಂದು ಕ್ಯಾನ್ಸರ್.[1].ಮೊಲೆಗಳಲ್ಲಿ ಗಟ್ಟಿಯಾದ ಉಂಡೆ ಆಕಾರದ ಚಿಕ್ಕ ಮುದ್ದೆ, ಮೊಲೆಗಳ ಆಕಾರ ಬದಲಾವಣೆ, ಚರ್ಮದ ಮೇಲೆ ಕೆಂಪು ಚಿಪ್ಪುಗಳುಳ್ಳ ಪ್ಯಾಚ್, ತೊಟ್ಟುಗಳಲ್ಲಿ ದ್ರವ ವಿಸರ್ಜನೆ ಮತ್ತು ಸ್ತನಗಳ ಕುಗ್ಗುವಿಕೆ ಇವುಗಳು ಸ್ತನ ಕ್ಯಾನ್ಸರ್ ಚಿಹ್ನೆಗಳಾಗಿರಬಹುದು.[2].ಈ ಕ್ಯಾನ್ಸರ್ ಇತರ ಭಾಗಗಳಿಗೆ ಹರಡಿದವರಿಗೆ ಮೂಳೆ ನೋವು, ಊದಿಕೊಂಡ ದುಗ್ಧರಸ ಗ್ರಂಥಿಗಳು, ಉಸಿರಾಟದ ತೊಂದರೆ, ಅಥವಾ ಹಳದಿ ಚರ್ಮ ಇವುಗಳು ಕಾಣಿಸಿಕೊಳ್ಳಬಹುದು.[3]
ಸ್ತನ ಕ್ಯಾನ್ಸರ್ಗೆ ಕಾರಣವಾಗುವ ಕೆಲವು ಅಪಾಯಕಾರಿ ಅಂಶಗಳು ಯಾವುವೆಂದರೆ:ಸ್ತ್ರೀ ಲೈಂಗಿಕ ಸಂಬಂಧ, ಬೊಜ್ಜು, ದೈಹಿಕ ವ್ಯಾಯಾಮದ ಕೊರತೆ, ಮದ್ಯ ಕುಡಿತ, ಋತುಬಂಧದ ಸಮಯದಲ್ಲಿ ಹಾರ್ಮೋನು ಬದಲಿ ಚಿಕಿತ್ಸೆ, ಅಯಾನೀಕರಿಸುವ ವಿಕಿರಣದ , ಅತಿವೇಗದ ಮೊದಲ ಮುಟ್ಟಿನ ಆರಂಭ,ಆಲಸ್ಯವಾಗಿ ಮಕ್ಕಳಾಗುವುದು ಅಥವ ಮಕ್ಕಳು ಆಗದೇನೇ ಇರುವುದು,ಮುದಿ ವಯಸ್ಸು, ಕುಟುಂಬ ಇತಿಹಾಸ, ಮುಂತಾದವು.[2][4].ದೃಷ್ಟಾಂತಗಳ ಸುಮಾರು ೫-೧೦% ಪೋಷಕರಿಂದ ಆನುವಂಶಿಕವಾಗಿ ಜೀನ್ಗಳ ಮೂಲಕ( ಇತರರ ಪೈಕಿ BRCA1 ಮತ್ತು BRCA2 ) ಉಂಟಾಗುತ್ತದೆ. ..ಸ್ತನ ಕ್ಯಾನ್ಸರ್ ಹೆಚ್ಚು ಸಾಮಾನ್ಯವಾಗಿ ಹಾಲಿನ ನಾಳಗಳ ಒಳಪದರದ ಜೀವಕೋಶಗಳ್ಳಿ ಮತ್ತು ಹಾಲನ್ನು ನಾಳಗಳಿಗೆ ಪೂರೈಸುವ ಕಿರುಹಾಲೆಗಳಲ್ಲಿ ಉಂಟಾಗುತ್ತದೆ. .ನಾಳಗಳಿಂದ ಅಭಿವೃದ್ಧಿಯಾಗುವ ಕ್ಯಾನ್ಸರನ್ನು ನಾಳದ ಕಾರ್ಸಿನೋಮಗಳು ಎಂದು ಕರೆಯಲಾಗುತ್ತದೆ ಮತ್ತು ಕಿರುಹಾಲೆಗಳಿಂದ ಅಭಿವೃದ್ಧಿಯಾಗುವ ಕ್ಯಾನ್ಸರನ್ನು ಕಿರುಹಾಲೆಗಳ ಕಾರ್ಸಿನೋಮ ಗಳು ಎಂದು ಕರೆಯಲಾಗುತ್ತದೆ.[2].ಇದರ ಜೊತೆಗೆ 18 ಇತರ ಉಪವಿಧಗಳ ಸ್ತನ ಕ್ಯಾನ್ಸರ್ಗಳು ಇವೆ.ಕೆಲವು ಕ್ಯಾನ್ಸರ್ಗಳು ಒಳನಾಳದ ಕಾರ್ಸಿನೋಮನಂತಹ ಪೂರ್ವ ಆಕ್ರಮಣಶೀಲ ಗಾಯಗಳಿಂದಲೂ ಅಭಿವೃದ್ಧಿ ಹೊಂದಬಹುದು.[4].ಸ್ತನ ಕ್ಯಾನ್ಸರ್ನನ್ನು ಅದಕ್ಕೆ ಸಂಬಂಧಿಸಿದ ಗಂಟು ಒಂದರ ಬಯಾಪ್ಸಿ ತೆಗೆದುಕೊಳ್ಳುವುದರ ಮೂಲಕ ದೃಢೀಕರಿಸಲ್ಪಡುತ್ತದೆ.ಒಮ್ಮೆ ದೃಢೀಕರಿಸಿದ ನಂತರ ಕ್ಯಾನ್ಸರ್ ಇತರ ಭಾಗಗಳಿಗೆ ಹರಡಿರುವುದನ್ನು ಮತ್ತು ಯಾವ ರೀತಿಯ ಚಿಕಿತ್ಸೆಗಳಿಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ನಿರ್ಧರಿಸಲು ಮತ್ತಷ್ಟು ಪರೀಕ್ಷೆಗಳನ್ನು ಮಾಡಲಾಗುತ್ತದೆ.[2]