![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/f/f9/Stephenie_Meyer_April_2009_%2528cropped%2529.jpg/640px-Stephenie_Meyer_April_2009_%2528cropped%2529.jpg&w=640&q=50)
ಸ್ಟೆಫೆನಿ ಮೆಯೆರ್
From Wikipedia, the free encyclopedia
ಸ್ಟೆಫೆನಿ ಮೆಯೆರ್ (ಹುಟ್ಟಿದ್ದು 1973ರ ಡಿಸೆಂಬರ್ 24ರಂದು) (ವಿವಾಹಪೂರ್ವ ಕನ್ಯಾನಾಮ ಮೋರ್ಗಾನ್ ) ಅಮೆರಿಕಾದ ಓರ್ವ ಲೇಖಕಿಯಾಗಿದ್ದು, ತಾನು ಬರೆದ ಟ್ವಿಲೈಟ್ ಎಂಬ ರಕ್ತಪಿಶಾಚಿ ಪ್ರಣಯ ಸರಣಿಯಿಂದ ಚಿರಪರಿಚಿತಳಾಗಿದ್ದಾಳೆ.[1][2][3] ಟ್ವಿಲೈಟ್ ಕಾದಂಬರಿಗಳು ವಿಶ್ವವ್ಯಾಪಿ ಮನ್ನಣೆಯನ್ನು ಗಳಿಸಿದ್ದು, ಅನೇಕ ಸಾಹಿತ್ಯಿಕ ಪ್ರಶಸ್ತಿಗಳನ್ನು ಗೆಲ್ಲುವುದರ ಜೊತೆಗೆ ವಿಶ್ವಾದ್ಯಂತ[1][4] 100 ದಶಲಕ್ಷ ಪ್ರತಿಗಳಿಗೂ ಹೆಚ್ಚು ಮಾರಾಟಗೊಂಡಿವೆ ಹಾಗೂ ಸುಮಾರು 37 ವಿವಿಧ ಭಾಷೆಗಳಿಗೆ ಭಾಷಾಂತರಗೊಂಡಿವೆ.[2][3] ದಿ ಹೋಸ್ಟ್ ಎಂಬ ವಯಸ್ಕರ ವೈಜ್ಞಾನಿಕ ಕಾದಂಬರಿಯನ್ನೂ ಸಹ ಮೆಯೆರ್ ಬರೆದಿದ್ದಾಳೆ.
Stephenie Meyer | |
---|---|
![]() Meyer in April 2009. | |
ಜನನ | Stephenie Morgan (1973-12-24) ಡಿಸೆಂಬರ್ ೨೪, ೧೯೭೩ (ವಯಸ್ಸು ೫೦) Hartford, Connecticut, United States |
ವೃತ್ತಿ | Novelist |
ರಾಷ್ಟ್ರೀಯತೆ | American |
ಪ್ರಕಾರ/ಶೈಲಿ | Vampire romance, young-adult fiction, science fiction |
ಪ್ರಭಾವಗಳು
| |
ಸಹಿ | ![]() |
www |
USA ಟುಡೆ 'ಯ "ವರ್ಷದ ಲೇಖಕಿ" ಎಂದು ಮೆಯೆರ್ 2008ರಲ್ಲಿ ಹೆಸರಿಸಲ್ಪಟ್ಟಳು.[5] 2008ರ ವರ್ಷವೊಂದರಲ್ಲೇ[6][7] 29 ದಶಲಕ್ಷ ಪುಸ್ತಕಗಳು ಮಾರಾಟವಾಗುವುದರೊಂದಿಗೆ ಆಕೆ ಆ ವರ್ಷದ ಜನಪ್ರಿಯ, ಅಧಿಕ ಮಾರಾಟದ ಪುಸ್ತಕದ ಲೇಖಕಿ ಎನಿಸಿಕೊಂಡಳು. ಟ್ವಿಲೈಟ್ ಕಾದಂಬರಿಯು ಆ ವರ್ಷದ ಅತ್ಯಧಿಕ-ಮಾರಾಟದ ಪುಸ್ತಕದ ಸ್ಥಾನಮಾನವನ್ನು ಪಡೆಯಿತು.[8] ಟೈಮ್ ನಿಯತಕಾಲಿಕದ "2008ರಲ್ಲಿ 100 ಅತ್ಯಂತ ಪ್ರಭಾವಶಾಲಿ ಜನರ"[9] ಪಟ್ಟಿಯಲ್ಲಿ ಮೆಯೆರ್ಗೆ #49ನೇ ಶ್ರೇಯಾಕ ದೊರಕಿತು ಮತ್ತು 2009ರಲ್ಲಿನ ವಿಶ್ವದ ಅತ್ಯಂತ ಪ್ರಭಾವೀ ಪ್ರಸಿದ್ಧ ವ್ಯಕ್ತಿಗಳಿಗೆ ಸಂಬಂಧಿಸಿದ ಫೋರ್ಬ್ಸ್ 100 ಪ್ರಸಿದ್ಧ ವ್ಯಕ್ತಿಗಳ ಪಟ್ಟಿಯಲ್ಲೂ ಅವಳ ಹೆಸರು ಸೇರ್ಪಡೆಗೊಂಡಿತ್ತು. ಅವಳ ವಾರ್ಷಿಕ ಗಳಿಕೆಗಳು 50 ದಶಲಕ್ಷ $ನಷ್ಟು ಮೊತ್ತವನ್ನು ಮೀರುವುದರೊಂದಿಗೆ ಅವಳಿಗೆ ಈ ಪಟ್ಟಿಯಲ್ಲಿ #26ನೇ ಶ್ರೇಯಾಂಕ ದೊರಕಿತ್ತು.[10]