![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/d/d1/Scotch_whiskies.jpg/640px-Scotch_whiskies.jpg&w=640&q=50)
ಸ್ಕಾಚ್ ವಿಸ್ಕಿ
From Wikipedia, the free encyclopedia
ಸ್ಕಾಟ್ಲೆಂಡ್ನಲ್ಲಿ ತಯಾರಿಸಲಾದ ವಿಸ್ಕಿಯನ್ನು ಸ್ಕಾಚ್ ವಿಸ್ಕಿ ಎಂದು ಕರೆಯುತ್ತಾರೆ. ವಿಸ್ಕಿ ಎಂಬ ಪದವನ್ನು ಪ್ರತ್ಯೇಕವಾಗಿ ಹೇಳದ ಹೊರತು ಸ್ಕಾಚ್ ಎಂಬ ಅರ್ಥದಲ್ಲೇ ಬ್ರಿಟನ್ನಲ್ಲಿ ಸಾಧಾರಣವಾಗಿ ಬಳಸಲಾಗುತ್ತದೆ. ಇದನ್ನು ಬಹುತೇಕ "ಸ್ಕಾಚ್" ಎಂದು ಇತರೆ ಆಂಗ್ಲ-ಭಾಷಿಕ ರಾಷ್ಟ್ರಗಳಲ್ಲಿ ಕರೆಯಲಾಗುತ್ತದೆ.
ಸ್ಕಾಚ್ ವಿಸ್ಕಿಯನ್ನು ಐದು ಪ್ರತ್ಯೇಕ ವರ್ಗಗಳಾಗಿ ವಿಂಗಡಿಸಲಾಗಿದೆ: ಅವುಗಳೆಂದರೆ ಏಕ ಮಾಲ್ಟ್ ಸ್ಕಾಚ್ ವಿಸ್ಕಿ, ಸಂಯೋಜಿತ ಮಾಲ್ಟ್ (ಹಿಂದೆ "ತೊಟ್ಟಿಯಲ್ಲಿನ ನೆನೆಸಿದ ಮಾಲ್ಟ್" ಅಥವಾ "ಶುದ್ಧ ಮಾಲ್ಟ್" ಎನ್ನಲಾಗುತ್ತಿತ್ತು), ಸಂಯೋಜಿತ ಸ್ಕಾಚ್ ವಿಸ್ಕಿ, ಸಂಯೋಜಿತ ಧಾನ್ಯ ಸ್ಕಾಚ್ ವಿಸ್ಕಿ ಮತ್ತು ಏಕ ಧಾನ್ಯ ಸ್ಕಾಚ್ ವಿಸ್ಕಿ.[1]
ಸ್ಕಾಚ್ ವಿಸ್ಕಿಯ ಶೀಶೆ/ಸೀಸೆ/ಬಾಟಲಿಯ ಮೇಲೆ ಅದರ ಪಕ್ವತೆಯ ಬಗ್ಗೆ ಸಂಖ್ಯೆಯ ರೂಪದಲ್ಲಿ ಇರಬೇಕಾದ ನಮೂದನೆಯು, ಕಡ್ಡಾಯವಾಗಿ ಆ ಉತ್ಪನ್ನವನ್ನು ತಯಾರಿಸಲು ಬಳಸಿದ ಎಳೆಯ ಸ್ಕಾಚ್ ವಿಸ್ಕಿಯ ಪಕ್ವತೆಯನ್ನು ಬಿಂಬಿಸಬೇಕಾಗಿರುತ್ತದೆ. ಪಕ್ವತೆಯ ದಾಖಲೆಯೊಂದಿಗಿನ ವಿಸ್ಕಿಯನ್ನು ಖಚಿತ ಪಕ್ವತೆಯ ವಿಸ್ಕಿ ಎನ್ನಲಾಗುತ್ತದೆ.[2]
1495ನೇ ಇಸವಿಯಲ್ಲಿನ ಸ್ಕಾಟ್ಲೆಂಡ್ನ ರಾಜಭಂಡಾರದ ದಾಖಲೆಗಳಲ್ಲಿ ಸ್ಕಾಚ್ ವಿಸ್ಕಿಯ ಮೊತ್ತಮೊದಲ ಲಿಖಿತ ಪ್ರಸ್ತಾಪ ಕಂಡುಬಂದಿದೆ. ಜಾನ್ ಕಾರ್ ಎಂಬ ಓರ್ವ ಕ್ರೈಸ್ತಭಿಕ್ಷುವು ಅದರ ಬಟ್ಟಿಕಾರರಾಗಿದ್ದರು.[3][unreliable source?]