From Wikipedia, the free encyclopedia
ಸೌರಕಲೆಗಳು ಸೂರ್ಯನ ಉಜ್ವಲ ದ್ಯುತಿಗೋಳದಲ್ಲಿ ( Photosphere) ತಾತ್ಕಾಲಿಕವಾಗಿ ನಡೆಯುವ ಒಂದು ವಿದ್ಯಮಾನ.ಇವುಗಳು ಆಗಾಗ ಒಂಟೊಂಟಿಯಾಗಿ ಅಥವಾ ಭಾರೀ ಗುಂಪು ಗುಂಪಾಗಿ ಚಿತ್ರ ವಿಚಿತ್ರ ಆಕಾರಗಳಲ್ಲಿ ಮೈದಳೆವ ಕಪ್ಪು ಮಚ್ಚೆಗಳು.
ಸೌರಕಲೆಗಳದು ಕಲ್ಪನಾತೀತ ವಿಸ್ತಾರ. ಇವುಗಳ ವ್ಯಾಸ 16 ಕಿ.ಮೀ.ನಿಂದ [2] 1.6 ಲಕ್ಷ ಕಿ.ಮೀ ಗಳವರೆಗಿರುತ್ತದೆ [3].ಕೆಲವನ್ನು ದೂರದರ್ಶಕದ ನೆರವಿಲ್ಲದೆ ನೋಡಬಹುದು [4]. ಸೌರಕಲೆಗಳು ಸ್ಥಿರವೂ ಅಲ್ಲ, ಶಾಶ್ವತವೂ ಅಲ್ಲ. ಉದ್ಭವಿಸಿದ ನೆಲೆಗಳಿಂದ ಪ್ರತಿ ಸೆಕೆಂಡಿಗೆ ಕೆಲ ನೂರು ಮೀಟರ್ಗಳ ವೇಗದಲ್ಲಿ ಸೂರ್ಯನ ಮೇಲ್ಮೈಯಲ್ಲಿ ಚಲಿಸುತ್ತಾ ಸಾಗುತ್ತವೆ.ಕೆಲ ದಿನಗಳಿಂದ ಒಂದೆರಡು ತಿಂಗಳುಗಳ ಕಾಲ ಉಳಿದಿರುತ್ತವೆ.ನಂತರ ನಿಧಾನವಾಗಿ ಸಾಯುತ್ತವೆ. ಸೌರಕಲೆಗಳ ಗುಂಪು ಒಂದು ತುದಿಯಿಂದ ಮತ್ತೊಂದು ತುದಿಗೆ 3 ಲಕ್ಷ ಕಿ.ಮೀ.ಗೂ ಅಧಿಕ ಅಗಲ ಹರಡಿ ಮೂಡಿರುವ ದಾಖಲೆಗಳಿವೆ.
ಸೌರಕಲೆಗಳು ವಾಸ್ತವವಾಗಿ ಕಪ್ಪು ಬಣ್ಣದವೇನಲ್ಲ.ಅವು ಸೂರ್ಯನ ಮೇಲ್ಮೈಯಲ್ಲಿ ತಾಪ ಕುಸಿದ ಪ್ರದೇಶಗಳು.ಸೂರ್ಯನ ಮೇಲ್ಮೈ ಸರಾಸರಿ ಉಷ್ಣತೆ 5,500 °C (5,780 K).ಆದರೆ ಕಲೆಗಳು ಮೂಡಿದ ಪ್ರದೇಶದ ಉಷ್ಣತೆ 2,700°C ರಿಂದ 4,200 °C (3,000 K ರಿಂದ 4,500 K). ಈ ತಾಪಾಂತರದಿಂದಾಗಿ ಸೌರಕಲೆಗಳು ಕಪ್ಪಾಗಿರುವಂತೆ ಕಾಣುತ್ತವೆ.
ಸೌರಕಲೆಗಳ ಚಟುವಟಿಕೆಗಳ ಚಕ್ರವು ಪ್ರತಿ 11 ವರ್ಷಗಳಿಗೊಮ್ಮೆ ಪುನರಾವರ್ತನೆಗೊಳ್ಳುತ್ತದೆ.
ಸೂರ್ಯನ ಕಾಂತಕ್ಷೇತ್ರದಲ್ಲಿ ಉಂಟಾಗುವ ಏಳುಬೀಳುಗಳು ಸೌರಕಲೆಗಳು ಮೈದಳೆಯಲು ಕಾರಣ. ಸೂರ್ಯನಲ್ಲಿ ನಿರಂತರ ಕ್ರಿಯಾಶೀಲವಾಗಿರುವ ಬಲಿಷ್ಠ ಕಾಂತೀಯ ಬಲ ರೇಖೆಗಳು ಕೆಲಬಾರಿ ಕೆಲವೆಡೆಗಳಲ್ಲಿ ಇದ್ದಕ್ಕಿದ್ದಂತೆ ಸೂರ್ಯನ ಮೇಲ್ಮೈಯಲ್ಲಿ ಕುದಿ ಕುದಿವ ಅನಿಲಗಳ ಚಲನೆಗೆ ಅಡ್ಡ ನಿಲ್ಲುತ್ತವೆ. ಹಾಗಾದಾಗ ಅಂತಹ ಪ್ರದೇಶಗಳಲ್ಲಿ ಉಷ್ಣತೆ ಕುಸಿಯುತ್ತದೆ.ಹೀಗಾಗಿ ಆ ಪ್ರದೇಶಗಳು ಕಪ್ಪಾದಂತೆ ಗೋಚರಿಸುತ್ತವೆ.
ಆದರೆ ಹಾಗೆ ಉಕ್ಕುವ ಶಕ್ತಿಯ ಅಲೆಗಳನ್ನು ಒತ್ತಿ ಹಿಡಿದಿದ್ದ ಕಾಂತ ಕ್ಷೋಭೆ ಕೈ ಬಿಟ್ಟೊಡನೆ ಆ ವರೆಗೆ ಒತ್ತಡದಲ್ಲಿ ಉಳಿದಿದ್ದ ಶಕ್ತಿಯೆಲ್ಲ ಒಮ್ಮೆಗೇ ಸ್ಫೋಟಿಸಿ ಸೌರದ್ರವ್ಯವನ್ನು ಲಕ್ಷಾಂತರ ಕಿ.ಮಿ. ದೂರಕ್ಕೆ ಚಿಮ್ಮುತ್ತದೆ ಅತ್ಯಂತ ಉಗ್ರವಾದ ಸೌರಜ್ವಾಲೆ, ಕರೋನ(ಪ್ರಭಾವಲಯ)ದ ಮಾಸ್ ಇಜೆಕ್ಷನ್ ಗಳಂತಹ ವಿದ್ಯಮಾನಗಳನ್ನು ಸೃಜಿಸುತ್ತದೆ.
ಪ್ರತಿ 11 ವರ್ಷಗಳಿಗೊಮ್ಮೆ ಗರಿಷ್ಠ ಸಂಖ್ಯೆಯಲ್ಲಿ ಒಡಮೂಡುವ ಸೌರ ಕಲೆಗಳಿಂದ ಅಂತಹ ಕಾಲಗಳಲ್ಲಿ ಭೂ ವಾಯುಮಂಡಲದಲ್ಲಿ, ಭೂ ಹವಾಮಾನದಲ್ಲಿ ಭಾರೀ ಏರುಪೇರುಗಳು ಸಂಭವಿಸುತ್ತವೆ.
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
{{cite web}}
: More than one of |archivedate=
and |archive-date=
specified (help); More than one of |archiveurl=
and |archive-url=
specified (help)
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.