![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/3/3e/1910-Sophia-Suffragette-Duleep-Singh-fixed.jpg/640px-1910-Sophia-Suffragette-Duleep-Singh-fixed.jpg&w=640&q=50)
ಸೋಫಿಯಾ ದುಲೀಪ್ ಸಿಂಗ್
From Wikipedia, the free encyclopedia
ರಾಜಕುಮಾರಿ ಸೋಫಿಯಾ ಅಲೆಕ್ಸಾಂಡ್ರೋವ್ನಾ ದುಲೀಪ್ ಸಿಂಗ್ (8 ಆಗಸ್ಟ್ 1876 - 22 ಆಗಸ್ಟ್ 1948) ಯುನೈಟೆಡ್ ಕಿಂಗ್ಡಂನ ಪ್ರಮುಖವಾದ ಸಫ್ರಜೆಟ್ (ಸಂಘಟಿತ ಪ್ರತಿಭಟನೆಯ ಮೂಲಕ ಮತ ಚಲಾಯಿಸುವ ಹಕ್ಕನ್ನು ಪ್ರತಿಪಾದಿಸುವ ಮಹಿಳೆ) ಆಗಿದ್ದರು.
ಸೋಫಿಯಾ ಅಲೆಕ್ಸಾಂಡ್ರಾ ದುಲೀಪ್ ಸಿಂಗ್ | |
---|---|
![]() | |
1913 ರಲ್ಲಿ "ದಿ ಸಫರ್ಜೆಟ್" ಅನ್ನು ಮಾರುತ್ತಿರುವ ಸೋಫಿಯಾ ದುಲೀಪ್ ಸಿಂಗ್ | |
ಪೂರ್ಣ ಹೆಸರು | |
ಸೋಫಿಯಾ ಅಲೆಕ್ಸಾಂಡ್ರಾ ದುಲೀಪ್ ಸಿಂಗ್ | |
ಜನನ | 8 August 1876 ಎಲ್ವೆಡೆನ್ ಹಾಲ್, ಎಲ್ವೆಡೆನ್, ಸಫೋಕ್, ಇಂಗ್ಲೆಂಡ್ |
ಮರಣ | 22 August 1948(1948-08-22) (aged 72) ಟೈಲರ್ಸ್ ಗ್ರೀನ್, ಬಕಿಂಗ್ಹ್ಯಾಮ್ ಶೈರ್, ಇಂಗ್ಲೆಂಡ್ |
ಕೆಲಸ | ಯುನೈಟೆಡ್ ಕಿಂಗ್ಡಂನ ಪ್ರಮುಖವಾದ ಸಫರ್ಜೆಟ್ (ಸಂಘಟಿತ ಪ್ರತಿಭಟನೆಯ ಮೂಲಕ ಮತ ಚಲಾಯಿಸುವ ಹಕ್ಕನ್ನು ಪ್ರತಿಪಾದಿಸುವ ಮಹಿಳೆ) |
ಧರ್ಮ | ಸಿಖ್ |
ಅವರ ತಂದೆ ಮಹಾರಾಜ ದುಲೀಪ್ ಸಿಂಗ್. ಭಾರತದಲ್ಲಿನ ಆಗಿನ ಗವರ್ನರ-ಜನರಲ್ ಡಾಲ್ಹೌಸಿಯ ರಾಜಕೀಯ ತಂತ್ರದಿಂದಾಗಿ, ದುಲೀಪ್ ಸಿಂಗ್ ತನ್ನ ಪಂಜಾಬ್ ರಾಜ್ಯವನ್ನು ಬ್ರಿಟಿಷ್ ರಾಜ್ಗೆ ಬಿಟ್ಟುಕೊಟ್ಟರು ಮತ್ತು ತರುವಾಯ ಅವರನ್ನು ಇಂಗ್ಲೆಂಡ್ಗೆ ಗಡೀಪಾರು ಮಾಡಲಾಯಿತು. ಸೋಫಿಯಾ ತಾಯಿ ಮಹಾರಾಣಿ ಬಂಬಾ ಮುಲ್ಲರ್, ಮತ್ತು ರಾಣಿ ವಿಕ್ಟೋರಿಯಾ ಅವರ ಧರ್ಮಮಾತೆಯಾಗಿದ್ದರು. ಅವರಿಗೆ ನಾಲ್ಕು ಜನ ಸಹೋದರಿಯರು ಸೇರಿದಂತೆ, ಇಬ್ಬರು ಮಲಸಹೋದರಿಯರು, ಮತ್ತು ನಾಲ್ಕು ಸಹೋದರರು ಇದ್ದರು. ರಾಣಿ ವಿಕ್ಟೋರಿಯಾರ ಅನುಗ್ರಹ ಹಾಗೂ ಒಲವಿನಿಂದ ದೊರೆತ ಹ್ಯಾಂಪ್ಟನ್ ಕೋರ್ಟ್ ಅಪಾರ್ಟ್ಮೆಂಟ್ನ ಫಾರಡೆ ಹೌಸ್ನಲ್ಲಿ ನೆಲೆಸಿದ್ದರು.
ಇಪ್ಪತ್ತನೆಯ ಶತಮಾನದ ಆರಂಭದಲ್ಲಿ, ಬ್ರಿಟನ್ನಲ್ಲಿ ಮಹಿಳಾ ಹಕ್ಕುಗಳ ಕಾರಣಕ್ಕಾಗಿ ಮುಂಚೂಣಿಯಲ್ಲಿದ್ದ ಅನೇಕ ದಕ್ಷಿಣ ಏಷ್ಯಾದ ಮಹಿಳೆಯರಲ್ಲಿ ಸಿಂಗ್ ಕೂಡ ಒಬ್ಬರಾಗಿದ್ದರು. ಮಹಿಳಾ ತೆರಿಗೆ ನಿರೋಧಕ ಕೂಟ (Women's Tax Resistance League)ದಲ್ಲಿ ತನ್ನ ಪ್ರಮುಖ ಪಾತ್ರಕ್ಕಾಗಿ ಅವಳು ಹೆಸರುವಾಸಿಯಾಗಿದ್ದರೂ ಸಹ, ಮಹಿಳಾ ಸಮಾಜ ಮತ್ತು ರಾಜಕೀಯ ಒಕ್ಕೂಟವನ್ನೂ ಒಳಗೊಂಡಂತೆ ಇತರ ಮಹಿಳಾ ಮತದಾರರ ಗುಂಪುಗಳಲ್ಲಿ ಅವರು ಭಾಗವಹಿಸಿದರು.