ತಣ್ಣಗಿರುವ ಸೋಡಿಯಂ ಕಾರ್ಬೋನೇಟ್ (sodium carbonate) ಸಂತೃಪ್ತ ದ್ರಾವಣದ ಮೂಲಕ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಹಾಯಿಸುವುದರಿಂದ ಸೋಡಿಯಂ ಬೈ ಕಾರ್ಬೋನೇಟ್ (Sodium bicarbonate) ದೊರೆಯುತ್ತದೆ. ಸೋಡಿಯಂ ಬೈ ಕಾರ್ಬೋನೇಟ್ ಹರಳುಗಳು ಪ್ರತ್ಯೇಕಗೊಳ್ಳುತ್ತವೆ.
Na2CO3 + CO2 + H2O → 2NaHCO3
ಸೋಡಿಯಂ ಬೈ ಕಾರ್ಬೋನೇಟ್ ಒಂದು ಬಿಳಿಯ ಸ್ಪಟಿಕಲವಣವಾಗಿದ್ದು ನೀರಿನಲ್ಲಿ ಕರಗುತ್ತದೆ.
ಸೋಡಿಯಂ ಬೈ ಕಾರ್ಬೋನೇಟ್ ಅನ್ನು ೧೦೦°c (೩೭೩k)ಗಿಂತ ಹೆಚ್ಚು ಕಾಯಿಸಿದರೆ ವಿಭಜನೆ ಹೊಂದಿ ಸೋಡಿಯಂ ಕಾರ್ಬೋನೇಟ್ ಉಂಟಾಗುತ್ತದೆ.
ಇದು ಆಮ್ಲಗಳೊಡನೆ ವರ್ತಿಸಿದಾಗ ಇಂಗಾಲದ ಡೈ ಆಕ್ಸೈಡ್ (Carbon dioxide) ಉತ್ಪಾದನೆಯಾಗುತ್ತದೆ.
ಸೋಡಿಯಂ ಬೈ ಕಾರ್ಬೋನೇಟ್ ಅನ್ನು ಅಡಿಗೆ ಸೋಡದ (ಬೇಕಿಂಗ್ ಪೌಡರ್) ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ದೋಸೆ, ಇಡ್ಲಿ, ಬೋಂಡ ಮುಂತಾದುವುಗಳಿಗೆ ಹಾಕುತ್ತಾರೆ. ಬಿಸಿಯಲ್ಲಿ ಇದು ವಿಭಜಿಸಲ್ಪಟ್ಟು ಇಂಗಾಲಾಮ್ಲ ಉತ್ಪತ್ತಿಯಾಗಿ ಪದಾರ್ಥಗಳನ್ನು ಉಬ್ಬಿಸಿ ಮೃದುವಾಗುವಂತೆ ಗರಿಗರಿಯಾಗುವಂತೆ ಮಾಡುತ್ತದೆ.
ಇದನ್ನು ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ನಿವಾರಿಸಲು ಔಷಧಿಯಾಗಿ ಬಳಸುತ್ತಾರೆ,ಇದು ಪ್ರತ್ಯಾಮ್ಲಿಯ ಗುಣವನ್ನು ಹೊಂದಿರುವುದರಿಂದ ಹೊಟ್ಟೆಯಲ್ಲಿ ಹೆಚ್ಚಾದ ಆಮ್ಲವನ್ನು ತಟಸ್ಥಗೊಳಿಸುತ್ತದೆ ಮತ್ತು ಸಮಾಧಾನವನ್ನುಂಟು ಮಾಡುತ್ತದೆ.[7]
ಇದು ಕ್ಷಾರ ಗುಣವುಳ್ಳದ್ದು. ಆದ್ದರಿಂದ ಕೇಕ್ ಬಿಸ್ಕತ್ ಮುಂತಾದುವನ್ನು ಉಬ್ಬುವಂತೆ ಮಾಡಲು ಉಪಯೋಗಿಸುವ ಬೇಕಿಂಗ್ ಪೌಡರ್ನಲ್ಲಿ ಅಡಿಗೆ ಸೋಡ, ಟಾರ್ಟಾರಿಕ್ ಆಮ್ಲ ಅಥವಾ ಪೊಟಾಸಿಯಮ್ ಆಸಿಡ್ ಟಾರ್ಟರೇಟ್ ಇವುಗಳ ಸೂಕ್ತ ಮಿಶ್ರಣವಿರುತ್ತದೆ.[8] ತೇವದಲ್ಲಿ ಬಿಸಿ ಮಾಡಿದಾಗ ಇವೆರಡರ ರಾಸಾಯನಿಕ ಕ್ರಿಯೆಯಿಂದ ಇಂಗಾಲಾಮ್ಲ ಉತ್ಪತ್ತಿಯಾಗಿ ಒಲೆಯಲ್ಲಿ ಇಟ್ಟ ಕೇಕ್ ಉಬ್ಬುತ್ತದೆ. ಕ್ಷಾರಪದಾರ್ಥ ಆಮ್ಲ ಪದಾರ್ಥದೊಂದಿಗೆ ಬೆರೆಯುವುದರಿಂದ ಬೇಯಿಸಿದ ಕೇಕ್ನಲ್ಲಿ ಕ್ಷಾರಗುಣ ಉಳಿಯುವುದಿಲ್ಲ.
J. L. Ellingboe, J. H. Runnels (1966). "Solubilities of Sodium Carbonate and Sodium Bicarbonate in Acetone-Water and Methanol-Water Mixtures". J. Chem. Eng. Data. 11 (3): 323–324. doi:10.1021/je60030a009.
Goldberg, Robert N.; Kishore, Nand; Lennen, Rebecca M. "Thermodynamic quantities for the ionisation reactions of buffers in water". CRC Handbook. pp.7–13.
"Sodium Bicarbonate". Jackson Siegelbaum Gastroenterology. 1998. Archived from the original on 5 October 2016. Retrieved 4 October 2016.{{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)