From Wikipedia, the free encyclopedia
ಸುಹಾಸಿನಿ ಮಣಿ ರತ್ನಮ್ (ಜನನ ಆಗಸ್ಟ್ ೧೫,[೧] ೧೯೬೧, ಹುಟ್ಟುಹೆಸರು ಸುಹಾಸಿನಿ) ದಕ್ಷಿಣ ಭಾರತದ ಚಿತ್ರನಟಿ. ಅವರು ೧೯೮೦ರಲ್ಲಿ ತಮಿಳು ಚಲನಚಿತ್ರ ”ನೆಂಜತಾಯ್ ಕಿಲ್ಲಾದೆ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು.[೨]
ಸುಹಾಸಿನಿ ಮಣಿರತ್ನಂ | |
---|---|
ಜನನ | ಚೆನ್ನೈ, ತಮಿಳು ನಾಡು,ಭಾರತ | ೧೫ ಆಗಸ್ಟ್ ೧೯೬೧
ವೃತ್ತಿ(ಗಳು) | ನಟಿ ನಿರ್ದೇಶಕಿ, ನಿರ್ಮಾಪಕಿ, ಬರಹಗಾರ್ತಿ |
ಸಕ್ರಿಯ ವರ್ಷಗಳು | 1980–present |
ಸಂಗಾತಿ(s) | ಮಣಿರತ್ನಂ (1988–present) |
ಮಕ್ಕಳು | 1 |
ಸುಹಾಸಿನಿ ಜನಿಸಿದ್ದು ಚೆನ್ನೈನಲ್ಲಿ. ಇವರ ತಂದೆ ಖ್ಯಾತ ನಟ ಚಾರು ಹಾಸನ್. ಕಮಲ್ ಹಾಸನ್ ಸುಹಾಸಿನಿ ಅವರ ಚಿಕ್ಕಪ್ಪ. ಚಲನಚಿತ್ರ ನಿರ್ದೇಶಕ ಮಣಿರತ್ನಂ ಸುಹಾಸಿನಿ ಅವರ ಪತಿ.
"ನೆಂಜತ್ತೆ ಕಿಳ್ಳಾದೆ" ಚಿತ್ರದ ಮೂಲಕ ನಟಿಯಾದ ಸುಹಾಸಿನಿಯವರು ನಿರ್ದೇಶನ, ನಿರ್ಮಾಣ ವಿಭಾಗಗಳಲ್ಲಿಯೂ ಅನುಭವ ಹೊಂದಿದ್ದಾರೆ.
ಕನ್ನಡದಲ್ಲಿ "ಉಷಾ", "ಬೆಂಕಿಯಲ್ಲಿ ಅರಳಿದ ಹೂವು" ಚಿತ್ರಗಳ ಮೂಲಕ ಕೆ ಬಾಲಚಂದರ್ ಅವರ ಚಿತ್ರಗಳಲ್ಲಿ ಪರಿಚಿತರಾದ ಸುಹಾಸಿನಿ ಮುಂದೆ "ಸುಪ್ರಭಾತ", "ಬಂಧನ", "ಹೊಸ ನೀರು", "ಮುತ್ತಿನ ಹಾರ", "ಹಿಮಪಾತ", "ಅಮೃತವರ್ಷಿಣಿ", "ಯಾರಿಗೆ ಸಾಲುತ್ತೆ ಸಂಬಳ", "ಮಾತಾಡು ಮಾತಾಡು ಮಲ್ಲಿಗೆ", "ಹೆಂಡ್ತೀಗೆ ಹೇಳ್ತೀನಿ", "ಸ್ಕೂಲ್ ಮಾಸ್ಟರ್ ", "ಎರಡನೇ ಮದುವೆ" ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
"ಸಿಂಧು ಭೈರವಿ’" ಚಿತ್ರದ ಅಭಿನಯಕ್ಕಾಗಿ ಸುಹಾಸಿನಿ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ. ದಕ್ಷಿಣ ಭಾರತದ ಪ್ರಸಿದ್ಧ ನಟರಾದ ವಿಷ್ಣುವರ್ಧನ್, ಅನಂತನಾಗ್, ರಜನೀಕಾಂತ್, ಮುಮ್ಮುಟಿ, ಮೋಹನ್ ಲಾಲ್, ಚಿರಂಜೀವಿ, ರಮೇಶ್ ಮುಂತಾದ ನಾಯಕನಟರು, ಎಲ್ಲಾ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಸುಹಾಸಿನಿ, "ಇಂದಿರಾ" ಎಂಬ ಚಿತ್ರವನ್ನೂ, "ಪೆಣ್ " ಎಂಬ ದೂರದರ್ಶನ ಧಾರವಾಹಿಯನ್ನೂ ನಿರ್ದೇಶಿಸಿದ್ದಾರೆ. ತಮ್ಮ ಪತಿ ಮಣಿರತ್ನಂ ಅವರೊಂದಿಗೆ ಚಿತ್ರಗಳ ನಿರ್ಮಾಣದಲ್ಲೂ ಅವರು ಸಹಭಾಗಿಗಳಾಗಿದ್ದಾರೆ. ಅಲ್ಲದೆ ದೂರದರ್ಶನದಲ್ಲಿ ಸಿನಿಮಾ ವಿಮರ್ಶೆ, ಸಾಮಾಜಿಕ ಸೇವಾಕ್ಷೇತ್ರಗಳಲ್ಲಿ ಭಾಗವಹಿಸುತ್ತಾರೆ.
ಸುಹಾಸಿನಿ ಅಭಿನಯದ ಕೆಲವು ಚಿತ್ರಗಳನ್ನು ಈ ಪಟ್ಟಿಯಲ್ಲಿ ನೀಡಲಾಗಿದೆ.
ವರ್ಷ | ಚಿತ್ರ | ಪಾತ್ರ | ನಿರ್ದೇಶನ | ಭೂಮಿಕೆ |
---|---|---|---|---|
೧೯೮೩ | ಬೆಂಕಿಯಲ್ಲಿ ಅರಳಿದ ಹೂವು[೩] | ಕೆ.ಬಾಲಚಂದರ್ | ಜೈಜಗದೀಶ್, ಪವಿತ್ರಾ | |
೧೯೮೪ | ಬಂಧನ[೪] | ಎಸ್.ವಿ.ರಾಜೇಂದ್ರಸಿಂಗ್ ಬಾಬು | ವಿಷ್ಣುವರ್ಧನ್, ಜೈಜಗದೀಶ್ | |
೧೯೮೬ | ಉಷಾ | ರಾಘವ | ರಾಮಕೃಷ್ಣ | |
೧೯೮೬ | ಹೊಸ ನೀರು[೫] | ಕೆ.ವಿ.ಜಯರಾಂ | ಅನಂತ್ ನಾಗ್ | |
೧೯೮೮ | ಸುಪ್ರಭಾತ[೬] | ದಿನೇಶ್ ಬಾಬು | ವಿಷ್ಣುವರ್ಧನ್ | |
೧೯೯೦ | ಮುತ್ತಿನಹಾರ[೭] | ಎಸ್.ವಿ.ರಾಜೇಂದ್ರಸಿಂಗ್ ಬಾಬು | ವಿಷ್ಣುವರ್ಧನ್ | |
೧೯೯೫ | ಹಿಮಪಾತ | ಎಸ್.ವಿ.ರಾಜೇಂದ್ರಸಿಂಗ್ ಬಾಬು | ವಿಷ್ಣುವರ್ಧನ್, ಜಯಪ್ರದಾ, ಜೈಜಗದೀಶ್ | |
೧೯೯೭ | ಅಮೃತವರ್ಷಿಣಿ | ದಿನೇಶ್ ಬಾಬು | ರಮೇಶ್, ಶರತ್ ಬಾಬು | |
೧೯೯೮ | ಹೆಂಡ್ತಿಗೇಳ್ತೀನಿ | ದಿನೇಶ್ ಬಾಬು | ವಿಷ್ಣುವರ್ಧನ್ | |
೧೯೯೯ | ವಿಶ್ವ | ಶಿವಮಣಿ | ಶಿವರಾಜ್ ಕುಮಾರ್, ಅನಂತ್ ನಾಗ್ | |
೨೦೦೦ | ಯಾರಿಗೆ ಸಾಲುತ್ತೆ ಸಂಬಳ | ಎಂ.ಎಸ್.ರಾಜಶೇಖರ್ | ಶಶಿಕುಮಾರ್ | |
೨೦೦೦ | ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ | ಕೂಡ್ಲು ರಾಮಕೃಷ್ಣ | ಅನಂತ್ ನಾಗ್,ರಾಮಕೃಷ್ಣ, ತಾರ | |
೧೯೯೦ | ಎಲ್ಲರ ಮನೆ ದೋಸೆನು | ಎಚ್.ಎನ್.ಪ್ರಕಾಶ್ | ರಾಮ್ ಕುಮಾರ್, ಶ್ರುತಿ | |
೨೦೦೧ | ಹಾಲು ಸಕ್ಕರೆ | ಯೋಗಿಶ್ ಹುಣಸೂರು | ದೇವರಾಜ್, ಶಶಿಕುಮಾರ್, ಜಗ್ಗೇಶ್, ಅರ್ಚನಾ | |
೨೦೦೩ | ಅಣ್ಣಾವ್ರು | ಓಂಪ್ರಕಾಶ್ ರಾವ್ | ಅಂಬರೀಶ್, ದರ್ಶನ್ | |
೨೦೦೭ | ಮಾತಾಡ್ ಮಾತಾಡು ಮಲ್ಲಿಗೆ | ನಾಗತಿಹಳ್ಳಿ ಚಂದ್ರಶೇಖರ್ | ವಿಷ್ಣುವರ್ಧನ್ | |
೨೦೧೦ | ಎರಡನೇ ಮದುವೆ | ದಿನೇಶ್ ಬಾಬು | ಅನಂತ್ ನಾಗ್ | |
೨೦೧೦ | ಸ್ಕೂಲ್ ಮಾಸ್ಟರ್ | ದಿನೇಶ್ ಬಾಬು | ವಿಷ್ಣುವರ್ಧನ್ | |
೨೦೧೧ | ಮತ್ತೊಂದು ಮದುವೇನಾ | ದಿನೇಶ್ ಬಾಬು | ಅನಂತ್ ನಾಗ್ | |
೨೦೧೩ | "ಮೈನಾ" | ನಾಗಶೇಖರ್ |
ಚೇತನ್ , ನಿತ್ಯಾ ಮೆನನ್ |
ವರ್ಷ | ಸಿನಿಮಾ | ಪಾತ್ರ | ಟಿಪ್ಪಣಿ |
---|---|---|---|
೨೦೧೫ | ವೈಟಿಂಗ್ | ಪಂಕಜ |
ವರ್ಷ | ಸಿನಿಮಾ | ನಟರು | ಟಿಪ್ಪಣಿ |
---|---|---|---|
೧೯೯೫ | ಇಂದಿರಾ | ಅನು ಹಾಸನ್, ಅರ್ವಿಂದ್ ಸ್ವಾಮಿ | |
೧೯೯೧ | ಪೆನ್ | ನಟಿ ಸಹ |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.