![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/e/e0/Limestone_quarry.jpg/640px-Limestone_quarry.jpg&w=640&q=50)
ಸುಣ್ಣ
From Wikipedia, the free encyclopedia
ಸುಣ್ಣ ಎಂದರೆ ಭಸ್ಮೀಕೃತ (ಕ್ಯಾಲ್ಸೈನ್ಡ್) ಸುಣ್ಣಕಲ್ಲಿನ ವಿವಿಧ ಉತ್ಪನ್ನಗಳ ಸರ್ವನಾಮ (ಲೈಮ್). ಸುಣ್ಣದ ಪ್ರಮುಖ ಪ್ರಭೇದಗಳು ಇವು: ಸುಟ್ಟಸುಣ್ಣ (CaO: ಕ್ವಿಕ್ಲೈಮ್), ಜಲಯೋಜಿತ ಸುಣ್ಣ (Ca(OH)2: ಹೈಡ್ರೇಟೆಡ್ ಲೈಮ್) ಮತ್ತು ನಯಸುಣ್ಣ (ಸ್ಲೇಕ್ಡ್ ಲೈಮ್).
![Thumb image](http://upload.wikimedia.org/wikipedia/commons/thumb/e/e0/Limestone_quarry.jpg/640px-Limestone_quarry.jpg)
ಕ್ಯಾಲ್ಶಿಯಮ್ ಕಾರ್ಬೊನೇಟ್ ಅಧಿಕ ಪ್ರಮಾಣದಲ್ಲಿರುವ ಜಲಜಶಿಲೆಯೇ ಸುಣ್ಣಕಲ್ಲು. ಇದನ್ನು ಭಸ್ಮೀಕರಿಸಿದರೆ, ಅರ್ಥಾತ್ ಉಚ್ಚ ಉಷ್ಣತೆಯಲ್ಲಿ ದೀರ್ಘಕಾಲ ಹುರಿದರೆ ಸುಟ್ಟಸುಣ್ಣ ಲಭ್ಯ. ಬಳಸುವ ಮುನ್ನ ಸುಟ್ಟಸುಣ್ಣವನ್ನು ನೀರಿನಿಂದ ಉಪಚರಿಸುವುದು ವಾಡಿಕೆ. ನೀರಿನ ಪ್ರಮಾಣ ಅವಶ್ಯವಿರುವಷ್ಟೇ ಇದ್ದರೆ ಜಲಯೋಜಿತ ಸುಣ್ಣವೂ ಅಧಿಕವಾಗಿದ್ದರೆ ನಯಸುಣ್ಣವೂ ಲಭ್ಯ, ಮೊದಲನೆಯದು ಶುಷ್ಕ ಪುಡಿ, ಎರಡನೆಯದು ಪೇಸ್ಟ್.(ಸರಿ).
ಸುಣ್ಣಕಲ್ಲನ್ನು ಅದರಲ್ಲಿರುವ ಮೆಗ್ನೀಸಿಯಮ್ ಪ್ರಮಾಣವನ್ನು ಆಧರಿಸಿ ವರ್ಗೀಕರಿಸುವುದುಂಟು. ಉದಾ: ಅಧಿಕ ಕ್ಯಾಲ್ಸಿಯಮ್ ಸುಣ್ಣಕಲ್ಲು (CaCO3 ಪ್ರಮಾಣ < ತೂಕದ 5%), ಮೆಗ್ನೀಸಿಯಮ್ ಸುಣ್ಣಕಲ್ಲು (ತೂಕದ 5%ಗಿಂತ ಸ್ವಲ್ಪ ಹೆಚ್ಚು), ಡಾಲೊಮೈಟಿಕ್ ಸುಣ್ಣಕಲ್ಲು (ತೂಕದ 30-45%).