ಸೀಸದ ವಿಷವೇರಿಕೆ
From Wikipedia, the free encyclopedia
ಸೀಸದ ವಿಷವೇರಿಕೆ ಎಂದರೆ ಸೀಸಯುಕ್ತ ಪದಾರ್ಥಗಳ ದೀರ್ಘಕಾಲೀನ ಸಂಪರ್ಕದಿಂದಾಗಿ ದೇಹದ ಊತಕಗಳಲ್ಲಿ ನಿಧಾನವಾಗಿ ಸೀಸ ಸಂಚಯಿಸಿ ಉಂಟಾಗುವ ಹಾನಿಕಾರಕ ಪರಿಣಾಮಗಳು (ಲೆಡ್ ಪಾಯ್ಸನಿಂಗ್, ಪ್ಲಂಬಿಸ್ಮ್).[1] ಸೀಸದ ಜಲವಿಲೇಯ ಲವಣಗಳು ಪ್ರಬಲ ದೈಹಿಕ (ಸಿಸ್ಟೆಮಿಕ್) ವಿಷಗಳು. ಇವನ್ನು ವಿಸರ್ಜಿಸುವ ವ್ಯವಸ್ಥೆ ದೇಹದಲ್ಲಿ ಇಲ್ಲದಿರುವುದು ವಿಷವೇರಿಕೆಗೆ ಕಾರಣ.