ಸಿಟಿ ಪ್ಯಾಲೇಸ್, ಜೈಪುರ್
From Wikipedia, the free encyclopedia
ಸಿಟಿ ಪ್ಯಾಲೇಸ್, ಜೈಪುರ್ ಅರಮನೆಯನ್ನು ಜೈಪುರ್ ನಗರವನ್ನು ಸ್ಥಾಪಿಸಿದ ಸಮಯದಲ್ಲೇ ಸ್ಥಾಪಿಸಲಾಯಿತು. 1727 ರಲ್ಲಿ ತನ್ನ ಆಸ್ಥಾನವನ್ನು ಅಂಬರ್ನಿಂದ ಜೈಪುರ್ಗೆ ಸ್ಥಳಾಂತರಿಸಿದ ಮಹಾರಾಜ ಸವಾಯಿ ಜೈ ಸಿಂಗ್ II ಇದನ್ನು ಸ್ಥಾಪಿಸಿದನು.[1] ಜೈಪುರ ಇಂದಿನ ರಾಜಸ್ಥಾನದ ರಾಜಧಾನಿಯಾಗಿದ್ದು, 1949 ರವರೆಗೆ ಸಿಟಿ ಪ್ಯಾಲೇಸ್ ಜೈಪುರದ ಮಹಾರಾಜನ ಅಧಿಕೃತ ಮತ್ತು ಆಡಳಿತ ಪೀಠವಾಗಿತ್ತು. ಈ ಅರಮನೆಯು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಥಳವೂ ಆಗಿತ್ತು, ಜೊತೆಗೆ ಕಲೆ, ವಾಣಿಜ್ಯ ಮತ್ತು ಉದ್ಯಮದ ಆಶ್ರಯತಾಣವೂ ಆಗಿತ್ತು. ಇದು ಈಗ ಎರಡನೇ ಮಹಾರಾಜ ಸವಾಯಿ ಮನ್ ಸಿಂಗ್ ಸಂಗ್ರಹಾಲಯವನ್ನು ಹೊಂದಿದೆ ಮತ್ತು ಜೈಪುರ್ ರಾಜಮನೆತನದ ನಿವಾಸವಾಗಿ ಮುಂದುವರೆದಿದೆ. ಜೈಪುರದ ರಾಜಮನೆತನವು ಭಗವಾನ್ ರಾಮನ ವಂಶಸ್ಥರು ಎಂದು ಹೇಳಲಾಗುತ್ತದೆ. ಅರಮನೆ ಸಂಕೀರ್ಣವು ಹಲವಾರು ಕಟ್ಟಡಗಳು, ವಿವಿಧ ಪ್ರಾಂಗಣಗಳು, ದ್ವಾರಮಂಟಪಗಳು, ರೆಸ್ಟೋರೆಂಟ್ಗಳು ಮತ್ತು ವಸ್ತುಸಂಗ್ರಹಾಲಯ ನ್ಯಾಸದ ಕಚೇರಿಗಳನ್ನು ಹೊಂದಿದೆ. ಮಹಾರಾಜ ಸವಾಯಿ ಮಾನ್ ಸಿಂಗ್ ಸಂಗ್ರಹಾಲಯ ನ್ಯಾಸವು ವಸ್ತುಸಂಗ್ರಹಾಲಯವನ್ನು ಮತ್ತು ಅರಸೊತ್ತಿಗೆಯ ಸ್ಮಾರಕಗಳನ್ನು (ಛತ್ರಿ ಎಂದು ಕರೆಯಲ್ಪಡುತ್ತವೆ) ನೋಡಿಕೊಳ್ಳುತ್ತದೆ.