![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/b/ba/Red_tikka_powder.jpg/640px-Red_tikka_powder.jpg&w=640&q=50)
ಸಿಂಧೂರ
From Wikipedia, the free encyclopedia
ಸಿಂಧೂರವು ಭಾರತೀಯ ಉಪಖಂಡದ ಒಂದು ಸಾಂಪ್ರದಾಯಿಕ ಇಂಗಲೀಕ ಕೆಂಪು ಬಣ್ಣದ ಅಥವಾ ಕೇಸರಿಕೆಂಪು ಬಣ್ಣದ ಸೌಂದರ್ಯವರ್ಧಕ ಪುಡಿ. ಸಾಮಾನ್ಯವಾಗಿ ಇದನ್ನು ಮದುವೆಯಾದ ಸ್ತ್ರೀಯರು ತಮ್ಮ ಕೂದಲಿನ ಮಧ್ಯದಲ್ಲಿ ಹಚ್ಚಿಕೊಳ್ಳುತ್ತಾರೆ.[1] ಹಿಂದೂ ಸಮುದಾಯಗಳಲ್ಲಿ ಸಿಂಧೂರದ ಬಳಕೆಯು ಮಹಿಳೆಯು ವಿವಾಹಿತೆ ಎಂದು ಮತ್ತು ಸಾಮಾನ್ಯವಾಗಿ ಅದನ್ನು ಹಚ್ಚಿಕೊಳ್ಳದಿರುವುದು ವೈಧವ್ಯವನ್ನು ಸೂಚಿಸುತ್ತದೆ. ಸಿಂಧೂರವನ್ನು ದೇವರ ಪೂಜೆಯಲ್ಲಿಯೂ ಬಳಸಲಾಗುತ್ತದೆ, ವಿಶೇಷವಾಗಿ ಗಣೇಶನ ಪೂಜೆಯಲ್ಲಿ.
![Thumb image](http://upload.wikimedia.org/wikipedia/commons/thumb/b/ba/Red_tikka_powder.jpg/640px-Red_tikka_powder.jpg)
![Thumb image](http://upload.wikimedia.org/wikipedia/commons/thumb/0/06/Wooden_Sindoor_%28Vermilion%29_box.jpg/640px-Wooden_Sindoor_%28Vermilion%29_box.jpg)
![Thumb image](http://upload.wikimedia.org/wikipedia/commons/thumb/6/6e/Shop_selling_Sindoor_%28Vermilion%29_in_Pushkar%2C_Rajasthan.jpg/640px-Shop_selling_Sindoor_%28Vermilion%29_in_Pushkar%2C_Rajasthan.jpg)
ಸಾಮಾನ್ಯವಾಗಿ ರಸಸಿಂಧೂರ, ಅರಿಶಿನ ಮತ್ತು ಸುಣ್ಣ ಸಾಂಪ್ರದಾಯಿಕ ಸಿಂಧೂರದ ಮುಖ್ಯ ಘಟಕವಾಗಿದೆ. ಕೆಲವು ವಾಣಿಜ್ಯಿಕ ಸಿಂಧೂರ ಉತ್ಪನ್ನಗಳು ಕೃತಕ ಘಟಕಾಂಶಗಳನ್ನು ಹೊಂದಿರುತ್ತವೆ, ಮತ್ತು ಇವುಗಳಲ್ಲಿ ಕೆಲವು ಸರಿಯಾದ ಮಾನದಂಡದನುಸಾರ ತಯಾರಾಗಿರುವುದಿಲ್ಲ ಮತ್ತು ಪಾದರಸ ಹಾಗೂ ಸೀಸವನ್ನು ಹೊಂದಿರಬಹುದು.