From Wikipedia, the free encyclopedia
ಸಿಂಗಪುರ್ ಏರ್ಲೈನ್ಸ್ ಲಿಮಿಟೆಡ್ (ಎಸ್ಐಎ ) (Malay: [Syarikat Penerbangan Singapura] Error: {{Lang}}: text has italic markup (help); Chinese: 新加坡航空公司; pinyin: Xīnjiāpō Hángkōng Gōngsī, ಸಂಕ್ಷಿಪ್ತ ರೂಪ 新航; ತಮಿಳು:சிங்கப்பூர் வான்வழி) (SGX: C6L) ಸಿಂಗಪುರ್್ದ ಧ್ವಜವನ್ನು ಒಯ್ಯುತ್ತಿದೆ.(ಸರ್ಕಾರಿ ಸ್ವಾಮ್ಯದ ಸಂಸ್ಥೆ) ಸಿಂಗಪುರ್ ಏರ್ಲೈನ್ಸ್ ಚಾಂಗಿ ಏರ್ಪೋರ್ಟ್್ನಲ್ಲಿ ಒಂದು ಕೇಂದ್ರದಿಂದ ಕಾರ್ಯಾಚರಣೆ ನಡೆಸುತ್ತಿದ್ದು ಆಗ್ನೇಯ ಏಶಿಯಾ, ಪೂರ್ವ ಏಶಿಯಾ, ದಕ್ಷಿಣ ಏಶಿಯಾ ಮತ್ತು "ಕಾಂಗರೂ ಮಾರ್ಗ"ದ ಮಾರುಕಟ್ಟೆಯಲ್ಲಿ ಒಂದು ಬಲವಾದ ಅಸ್ತಿತ್ವವನ್ನು ಹೊಂದಿದೆ. ಕಂಪನಿಯು ಪೆಸಿಫಿಕ್ ಸಾಗರದಾಚೆಯೂ ವಿಮಾನಗಳನ್ನು ಹಾರಿಸುತ್ತದೆ, ಇದರಲ್ಲಿ ಜಗತ್ತಿನ ಎರಡು ಅತಿ ದೂರದ ತಡೆ-ರಹಿತ ವಾಣಿಜ್ಯ ವಿಮಾನಗಳು ಸಿಂಗಪುರದಿಂದ ನೆವಾರ್ಕ್ ಮತ್ತು ಲಾಸ್ ಎಂಜಿಲಿಸ್ ಸೇರಿದೆ. ಇದಕ್ಕೆ ಏರ್್ಬಸ್ ಎ340-500 ಬಳಸುತ್ತಿದೆ.[3][4]
| ||||
ಸ್ಥಾಪನೆ | 1947 (as Malayan Airways) | |||
---|---|---|---|---|
Hubs | Singapore Changi Airport | |||
Focus cities |
| |||
Frequent-flyer program |
| |||
Airport lounge | Silver Kris Lounge | |||
Alliance | Star Alliance | |||
Subsidiaries | SilkAir | |||
Fleet size | 106 (+52 orders) | |||
Destinations | 61 | |||
Company slogan | A Great Way To Fly | |||
Parent company | Temasek Holdings (54.5%)[1] | |||
Headquarters | Singapore | |||
Key people | Chew Choon Seng (CEO) Goh Choon Phong (CEO-Designate)[2] | |||
Website | www.singaporeair.com |
ಸಿಂಗಪುರ್ ಏರ್ಲೈನ್ಸ್ "ಸುಪರ್್ಜಂಬೋ" ಏರ್್ಬಸ್ ಎ380ಯ ಆರಂಭದ ಗ್ರಾಹಕ ಆಗಿತ್ತು. ಏರ್ಲೈನ್್ಗೆ ಸಂಬಂಧಿಸಿದ ಏರ್್ಕ್ರಾಫ್ಟ್್ಗಳ ನಿರ್ವಹಣೆ ಮತ್ತು ಎಂಜಿನಿಯರಿಂಗ್್ನಂಥ ವೈವಿಧ್ಯಮಯ ಉದ್ಯಮವನ್ನು ಎಸ್ಐಎ ಹೊಂದಿದೆ. ಇದರ ಸಂಪೂರ್ಣ ಮಾಲೀಕತ್ವವನ್ನು ಹೊಂದಿರುವ ಅಂಗಸಂಸ್ಥೆ ಸಿಲ್ಕ್್ಏರ್. ಎರಡನೆ ದರ್ಜೆಯ ನಗರಗಳಿಗೆ ಚಿಕ್ಕ ಸಾಮರ್ಥ್ಯದ ಅಗತ್ಯಗಳೊಂದಿಗೆ ಪ್ರಾದೇಶಿಕ ಹಾರಾಟವನ್ನು ಇದು ನಿರ್ವಹಿಸುತ್ತದೆ. ಅಂಗಸಂಸ್ಥೆ ಸಿಂಗಪುರ್ ಏರ್ಲೈನ್ಸ್ ಕಾರ್ಗೋ ಎಸ್ಐಎದ ಸಮರ್ಪಿತ ಸರಕು ಸಾಗಣೆ ವಿಮಾನಗಳನ್ನೂ ನಿರ್ವಹಿಸುವುದು ಮತ್ತು ಎಸ್ಐಎದ ಪ್ರಯಾಣಿಕರ ವಿಮಾನದಲ್ಲಿಯ ಸರಕು-ಒಯ್ಯುವ ಸಾಮರ್ಥ್ಯವನ್ನು ನಿರ್ವಹಿಸುವುದು. ಎಸ್ಐಎ ವರ್ಜಿನ್ ಅಟ್ಲಾಂಟಿಕ್್ನಲ್ಲಿ ಶೇ.49 ಶೇರುಗಳನ್ನು ಹೊಂದಿದೆ. ಟೈಗರ್ ಏರ್್ವೇಸ್್ನಲ್ಲಿಯ ತನ್ನ ಹಕ್ಕಿನಿಂದ ಕಡಿಮೆ- ವೆಚ್ಚದ ಸಾಗಾಟದ ನಿರ್ವಹಣೆ ಮಾಡುವುದು. ಆದಾಯ, ಪ್ರಯಾಣಿಕರು, ಕಿಲೋಮೀಟರು[5] ಗಳ ದೃಷ್ಟಿಯಿಂದ ಜಗತ್ತಿನಾದ್ಯಂತ ಇರುವ 15 ಉನ್ನತ ವಿಮಾನ ಕಂಪನಿಗಳಲ್ಲಿ ಇದೂ ಒಂದು. ಅಂತಾರಾಷ್ಟ್ರೀಯ ಪ್ರಯಾಣಿಕರ ಸಾಗಾಟದಲ್ಲಿ ಇದು ಜಗತ್ತಿನಲ್ಲಿ 6ನೆ ಸ್ಥಾನದಲ್ಲಿದೆ.[6]
ಸಿಂಗಪುರ್್ ಏರ್ಲೈನ್ಸ್ ಜಗತ್ತಿನ ಅತ್ಯಂತ ಮೆಚ್ಚುಗೆಯ ಏರ್ಲೈನ್ ಮತ್ತು ಫಾರ್ಚ್ಯೂನ್ ್ದ ಜಗತ್ತಿನ ಅತಿ ಹೆಚ್ಚು ಮೆಚ್ಚುಗೆಯ ಕಂಪನಿಗಳ 2010ರ ಶ್ರೇಯಾಂಕದಲ್ಲಿ 27ನೆ ಸ್ಥಾನವನ್ನು ಪಡೆದಿದೆ.[7][8] ಇದು ಪ್ರಭಾವಿಯಾದ ಬ್ರಾಂಡ್ ಹೆಸರನ್ನು[9] ಹೊಂದಿದೆ. ಮತ್ತು ಇದು ವಿಮಾನಯಾನ ಉದ್ಯಮದಲ್ಲಿ ಅದರಲ್ಲೂ ನಾವೀನ್ಯ, ಸುರಕ್ಷೆ ಮತ್ತು ಸೇವೆಯ ಶ್ರೇಷ್ಠತೆಯಲ್ಲಿ[10] ಒಂದು ಮಾರ್ಗಪ್ರವರ್ತಕ.[11] ಅದಕ್ಕೆ ಜೊತೆ ಅದು ನಿರಂತರ ಲಾಭಗಳಿಸುತ್ತಿರುವುದು.[12] ಇದು ಅನೇಕ ಪ್ರಶಸ್ತಿಗಳನ್ನು[13] ಗೆದ್ದುಕೊಂಡಿದೆ. ವಿಮಾನ ಖರೀದಿಯಲ್ಲಿ ಇದೊಂದು ಉದ್ಯಮದ ಮುಂದಾಳು.[14]
ಮಲಯನ್ ಏರ್ಲೈನ್ಸ್ (ಎಂಎಎಲ್)ನ ಒಳಸಂಸ್ಥೆಯಾಗಿ ಸಿಂಗಪುರ್ ಏರ್ಲೈನ್ಸ್ 1937ರ ಅಕ್ಟೋಬರ್ 12ರಂದು ಆರಂಭವಾಯಿತು. ಆರಂಭಿಸಿದವರು ಲಿವರ್್ಪೂಲ್್ನ ಓಸಿಯನ್ ಸ್ಟೀಮ್್ಶಿಪ್ ಕಂಪನಿ, ಸಿಂಗಪುರದ ಸ್ಟ್ರೇಟ್ಸ್ ಸ್ಟೀಮ್್ಶಿಪ್ ಕಂಪನಿ ಮತ್ತು ಇಂಪೀರಿಯಲ್ ಏರ್ವೇಸ್. ಈ ಏರ್ಲೈನ್್ದ ಪ್ರಥಮ ಹಾರಾಟವು ಒಂದು ಬಾಡಿಗೆಯ ಹಾರಾಟವಾಗಿತ್ತು. ಸಿಂಗಪುರದ ಬ್ರಿಟಿಷ್ ಸ್ಟ್ರೇಟ್ಸ್ ಸೆಟ್ಲಮೆಂಟ್್ನಿಂದ ಕೌಲಾಲಂಪುರಕ್ಕೆ 1947ರ ಏಪ್ರಿಲ್ 2ರಂದು ಈ ಹಾರಾಟ ನಡೆಯಿತು. ಅದು ಏರ್್ಸ್ಪೀಡ್ ಕನ್ಸುಲ್ ಅವಳಿ- ಇಂಜಿನ್್ನ ಏರ್್ಪ್ಲೇನ್ ಆಗಿತ್ತು.[15] ನಿಯಮಿತವಾದ ವಾರದ ವೇಳಾಪಟ್ಟಿಯ ವಿಮಾನ ಹಾರಾಟವು ಸ್ವಲ್ಪಕಾಲದಲ್ಲಿಯೇ ಸಿಂಗಪುರದಿಂದ ಕೌಲಾಲಂಪುರಕ್ಕೆ, ಇಪೋಹ್ ಮತ್ತು ಪೆನಾಂಗ್್ಗೆ 1947ರ ಮೇ 1ರಿಂದ ಅದೇ ಮಾದರಿಯ ವಿಮಾನದಿಂದ ಆರಂಭವಾಯಿತು.[16] 1940 ಮತ್ತು 1950ರ ದಶಕದ ಉಳಿದ ಭಾಗದಲ್ಲಿ ಈ ಏರ್ಲೈನ್ ವಿಸ್ತರಣೆಯನ್ನು ಮುಂದುವರಿಸಿತು. ಇತರ ಬ್ರಿಟಿಷ್ ಕಾಮನ್ವೆಲ್ತ್ ಏರ್ಲೈನ್ಸ್ (ಬಿಓಎಸಿ ಮತ್ತು ಕ್ವಾಂಟಾಸ್ ಎಂಪಾಯರ್ ಏರ್್ವೇಸ್ ರೀತಿ) ಹಾಗೆ ತಾಂತ್ರಿಕ ನೆರವನ್ನು ಒದಗಿಸಿತು ಅದೇ ರೀತಿ ಐಎಟಿಎ ಸೇರುವುದಕ್ಕೆ ನೆರವನ್ನೂ ನೀಡಿತು.[ಸೂಕ್ತ ಉಲ್ಲೇಖನ ಬೇಕು] 1955ರ ವೇಳೆಗೆ ಮಲಯನ್ ಏರ್್ವೇಸ್' ಪಡೆಯು ದೊಡ್ಡ ಸಂಖ್ಯೆಯಲ್ಲಿ ಡೌಗ್ಲಾಸ್ ಡಿಸಿ-3ಗಳನ್ನು ಸೇರಿಸಿಕೊಂಡು ಬೆಳೆಯಿತು. 1957ರ ವೇಳೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿತು. ಮೊದಲ ಎರಡು ದಶಕಗಳಲ್ಲಿ ಬಳಸುತ್ತಿದ್ದ ಇತರ ಏರ್್ಕ್ರಾಫ್ಟ್್ಗಳೆಂದರೆ ಡೌಗ್ಲಾಸ್ ಡಿಸಿ-4 ಸ್ಕೈಮಾಸ್ಟರ್, ವಿಕೆರ್ಸ್ ವಿಸ್ಕೌಂಟ್, ಲಾಕ್್ಹೀಡ್ 1049 ಸುಪರ್ ಕಾನ್ಸ್ಟೆಲೇಶನ್, ಬ್ರಿಸ್ಟಾಲ್ ಬ್ರಿಟಾನ್ನಿಯಾ, ಡೆ ಹಾವಿಲ್ಯಾಂಡ್ ಕೊಮೆಟ್4 ಮತ್ತು ಫೊಕ್ಕೆರ್ ಎಫ್27.
1963ರಲ್ಲಿ ಮಲಯಾ, ಸಿಂಗಪುರ, ಸಬಾಹ್ ಮತ್ತು ಸರವಾಕ್ ಮಲೇಶಿಯಾ ಒಕ್ಕೂಟವನ್ನು ಸ್ಥಾಪಿಸಲಾಯಿತು. ಆಗ ಏರ್ಲೈನ್ ಹೆಸರನ್ನು "ಮಲಯನ್ ಏರ್್ವೇಸ್"್ನಿಂದ "ಮಲೇಶಿಯನ್ ಏರ್್ವೇಸ್"್ಗೆ ಬದಲಾಯಿಸಲಾಯಿತು. ಎಂಎಎಲ್ ಬೋರ್ನಿಯೋ ಏರ್್ವೇಸ್್.ಅನ್ನು ಖರೀದಿಸಿತು. 1966ರಲ್ಲಿ ಒಕ್ಕೂಟದಿಂದ ಸಿಂಗಪುರ ಪ್ರತ್ಯೇಕವಾದುದರಿಂದ ಏರ್ಲೈನ್ ಹೆಸರನ್ನು ಮಲೇಶಿಯಾ- ಸಿಂಗಪುರ ಏರ್ಲೈನ್ಸ್ (ಎಂಎಸ್ಎ) ಎಂದು ಬದಲಿಸಲಾಯಿತು. ಅದರ ಮರುವರ್ಷ ಏರ್ಲೈನ್ ಪಡೆಯಲ್ಲಿ ಮತ್ತು ಮಾರ್ಗದಲ್ಲಿ ವ್ಯಾಪಕ ವಿಸ್ತರಣೆ ನೋಡಲು ದೊರೆಯಿತು. ಎಂಎಸ್ಎದ ಮೊದಲ ಬೋಯಿಂಗ್ ವಿಮಾನ ಬೋಯಿಂಗ್ 707ದ ಖರೀದಿಯೂ ಇದರಲ್ಲಿ ಸೇರಿದೆ. ಸಿಂಗಪುರದಲ್ಲಿ ಅತಿ ಎತ್ತರದ ಕೇಂದ್ರ ಕಚೇರಿಯ ನಿರ್ಮಾಣವೂ ಪೂರ್ಣಗೊಂಡಿತು. ಇದಾದ ಬಳಿಕ ಬೋಯಿಂಗ್ 737 ಗಳನ್ನು ಶೀಘ್ರವೇ ವಿಮಾನ ಶ್ರೇಣಿಗೆ ಸೇರಿಸಲಾಯಿತು.
ಸಿಂಗಪುರ ಮತ್ತು ಮಲೇಶಿಯಾಗಳ ನಡುವೆ ರಾಜಕೀಯ ಭಿನ್ನಮತ ತಲೆದೋರಿದಾಗ ಎರಡು ಪ್ರತ್ಯೇಕ ಸಂಸ್ಥೆಗಳು ಸಿಂಗಪುರ ಏರ್ಲೈನ್ಸ್ ಮತ್ತು ಮಲೇಶಿಯನ್ ಏರ್ಲೈನ್ಸ್ ಸಿಸ್ಟಮ್ ಅಸ್ತಿತ್ವಕ್ಕೆ ಬಂದು ಎಂಎಸ್್ಎ 1972ರಲ್ಲಿ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತು.[17][18][19] ಸಿಂಗಪುರ ಏರ್ಲೈನ್ಸ್ ಎಂಎಸ್ಎದ ಎಲ್ಲ 10 ಬೋಯಿಂಗ್ 707 ಮತ್ತು 737 ಗಳನ್ನು ತಾನೇ ಇಟ್ಟುಕೊಂಡಿತು. ಸಿಂಗಪುರ ಹೊರಗಿನ ಅಂತಾರಾಷ್ಟ್ರೀಯ ಮಾರ್ಗಗಳನ್ನು ಉಳಿಸಿಕೊಂಡಿತು. ಅಲ್ಲದೆ ನಗರದಲ್ಲಿಯ ಕಾರ್ಪೋರೇಟ್ ಕೇಂದ್ರ ಕಚೇರಿ ಇದರ ಬಳಿಯೇ ಉಳಿಯಿತು. ಮತ್ತು ಎಂಎಸ್ಎದ ಹಿಂದಿನ ಜಂಟಿ ಮುಖ್ಯಸ್ಥ ಜೆ.ವೈ.ಪಿಳ್ಳೆಯವರನ್ನು ಮೊದಲ ಅಧ್ಯಕ್ಷರನ್ನಾಗಿ ಮಾಡಿಕೊಂಡಿತು. ವಿಮಾನದ ಮಹಿಳಾ ಸಿಬ್ಬಂದಿ 1968ರಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಸರೋಂಗ್ ಕೆಬಯಾ ಸಮವಸ್ತ್ರವನ್ನೇ ಧರಿಸುವುದನ್ನು ಮುಂದುವರಿಸಿದರು. ಸ್ಥಳೀಯವಾಗಿ ಆರಂಭಿಸಿದ ಜಾಹೀರಾತು ಕಂಪನಿ ಬಾತೇ ಆ್ಯಡ್ಸ್್ಗೆ ಏರ್ಲೈನ್ ಮಾರುಕಟ್ಟೆ ಹಕ್ಕನ್ನು ನೀಡಲಾಗಿತ್ತು. ಅಂತಿಮವಾಗಿ ಆಯ್ಕೆಮಾಡಿದ ಬಲಿಷ್ಠವಾದ ಕೇಬಯಾ ಧರಿಸಿದ ವ್ಯವಸ್ಥಾಪಕಿಯರು ಏರ್ಲೈನ್್ಗೆ ಒಂದು ಪ್ರತಿಮೆಯಂತಾಗಿ ಅವರನ್ನು ಸಿಂಗಪುರ ಗರ್ಲ್ಸ್ ಎಂದು ಕರೆಯಲಾರಂಭಿಸಿದರು.
1970ರ ದಶಕದಲ್ಲಿ ಎಸ್ಐಎ ತೀವ್ರವಾಗಿ ಬೆಳೆವಣಿಗೆಯನ್ನು ಹೊಂದಿತು. ಭಾರತೀಯ ಉಪಖಂಡ ಮತ್ತು ಏಶಿಯಾದ ನಗರಗಳನ್ನು ಸೇರಿಸಿಕೊಂಡಿತು ಮತ್ತು ತನ್ನ ವಿಮಾನ ಶ್ರೇಣಿಗೆ ಬೋಯಿಂಗ್ 747 ಸೇರಿಸಿಕೊಂಡಿತು. ಆಗ ಸಂಪರ್ಕ ಖಾತೆ ಸಚಿವರಾಗಿದ್ದ ಮಿ. ಯಂಗ್ ನ್ಯೂಕ್ ಲಿನ್ 1973ರ ಸೆಪ್ಟೆಂಬರ್ 3 ಸೋಮವಾರ ಸಂಜೆ 4 ಗಂಟೆಗೆ ಪಾಯಾ ಲೆಬರ್ ವಿಮಾನ ನಿಲ್ದಾಣದಲ್ಲಿ ಮೊದಲ ಎರಡು ಎಸ್ಐಎ- ಬೋಯಿಂಗ್ 747 ಸ್ವಾಗತ ಸಮಾರಂಭದಲ್ಲಿ ಹೀಗೆ ಹೇಳಿದರು:
“ | May I emphasise that SIA as an organisation will continue to succeed only so long as the men and women behind it will not relax but continue to work diligently, plan boldly, and strive for excellence in performance.[20] | ” |
1980ರ ದಶಕದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳು, ಕೆನಡಾ ಮತ್ತು ಯುರೋಪಿನ ನಗರಗಳಿಗೆ ಹೊಸ ಸೇವೆ ಆರಂಭವಾಯಿತು. ಎಸ್ಐಎ ಸೇವೆಯನ್ನು ಒದಗಿಸಿದ ಸ್ಪ್ಯಾನಿಶ್ ಮಾತನಾಡುವ ಜನರಿರುವ ಪ್ರಥಮ ನಗರ ಮ್ಯಾಡ್ರಿಡ್ ಆಯಿತು. ಬೋಯಿಂಗ್ 474-400ಗಳನ್ನು 1989ರಲ್ಲಿ ಎಸ್ಐಎ ಪಡೆಗೆ ಸೇರಿಸಲಾಯಿತು. ಮತ್ತು ಅದಕ್ಕೆ ಮೆಗಾಟಾಪ್ಸ್ ಎಂದು ಹೆಸರಿಡಲಾಯಿತು. ನಂತರ ಅವನ್ನು ಬೋಯಿಂಗ್ 777ಗಳು, ಏರ್್ಬಸ್ ಎ310ಗಳು ಮತ್ತು ಏರ್್ಬಸ್ ಎ340ಗಳಿಗೆ ಪೂರಕವಾಗಿ ಉಳಿಸಿಕೊಳ್ಳಲಾಯಿತು. ದಕ್ಷಿಣ ಆಫ್ರಿಕದ ಜೋಹಾನ್ಸ್್ಬರ್ಗ್್ಗೆ ವಿಮಾನ ಸೇವೆ ಆರಂಭವಾದಾಗ ಸೇವೆಯನ್ನು ಆಫ್ರಿಕದ ದಕ್ಷಿಣ ದೇಶಗಳಿಗೆ 1990ರಲ್ಲಿ ವಿಸ್ತರಿಸಲಾಯಿತು. ಆನಂತರ ಹಾರಾಟ ಮಾರ್ಗದ ಜಾಲದಲ್ಲಿ ಕೇಪ್್ಟೌನ್ ಮತ್ತು ಡರ್ಬನ್್ಗಳನ್ನು ಸೇರಿಸಲಾಯಿತು.
2004ರಲ್ಲಿ ಎಸ್ಐಎ ಪೆಸಿಫಿಕ್ ಸಾಗರದಾಚೆಗೆ ತಡೆರಹಿತ ವಿಮಾನ ಹಾರಾಟವನ್ನು ಆರಂಭಿಸಿತು. ಸಿಂಗಪುರದಿಂದ ಲಾಸ್ ಎಂಜಿಲಸ್ ಮತ್ತು ನೆವಾರ್ಕ್್ಗೆ ಏರ್್ಬಸ್ ಎ340-500 ಬಳಸಿ ಈ ಸೇವೆ ನೀಡಲಾಯಿತು. ಈ ವಿಮಾನಗಳು ಸಿಂಗಪುರ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ನಡುವಿನ ಮೊಟ್ಟಮೊದಲ ತಡೆರಹಿತ ವಾಯುಯಾನ ಸೇವೆ ಎಂದು ದಾಖಲಾಯಿತು. ಸಿಂಗಪುರದಿಂದ ನೆವಾರ್ಕ್ ವಿಮಾನವು ಅತ್ಯಂತ ದೂರಕ್ಕೆ ನಿಗದಿಯಾದ ವಾಣಿಜ್ಯ ವಿಮಾನವೆಂದು ದಾಖಲಾಯಿತು. ಒಂದೊಂದು ಕಡೆಯಿಂದ 18 ತಾಸುಗಳ ಹಾರಾಟ ಇದು ಸಿಂಗಪುರ್ ಏರ್ಲೈನ್ಸ್ ನೆವಾರ್ಕ್ ಮತ್ತು ಲಾಸ್್ಎಂಜಿಲಸ್ ಮಾರ್ಗದಲ್ಲಿ ಹಾರಿಸಲು ತನ್ನ ಐದು ಏರ್್ಬಸ್ ಎ340-500 ವಿಮಾನಗಳನ್ನು 64 ಬಿಸಿನೆಸ್ ಕ್ಲಾಸ್ /117 ಪ್ರೀಮಿಯಂ ಎಕಾನಮಿ ಕ್ಲಾಸ್ ವಿನ್ಯಾಸದಿಂದ ಎಲ್ಲ 100 ಸ್ಥಾನಗಳೂ ಬಿಸಿನೆಸ್ ಕ್ಲಾಸ್ ವಿನ್ಯಾಸಕ್ಕೆ ಬದಲಾಯಿಸಿತು.[21]
2006ರ ಫೆಬ್ರವರಿ 22ರಂದು ನಡೆದ ಸಂಪುಟ ಸಭೆಯಲ್ಲಿ ಆಸ್ಟ್ರೇಲಿಯಾದ ಸರ್ಕಾರವು ಆಸ್ಟ್ರೇಲಿಯಾದಿಂದ ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ ಸಿಂಗಪುರ್ ಏರ್ಲೈನ್ಸ್ ವಿಮಾನ ಹಾರಾಟ ನಡೆಸುವುದಕ್ಕೆ ಐದನೆ ಸ್ವತಂತ್ರ ಹಕ್ಕುಗಳನ್ನು ಮಂಜೂರು ಮಾಡದಿರಲು ನಿರ್ಧರಿಸಿತು.[22] ಅಟ್ಲಾಂಟಿಕ್ ಸಾಗರದಾಚೆಗೆ ಹೋಗುವ ಆಸ್ಟ್ರೇಲಿಯಾದ ವಿಮಾನಗಳು ಕಡಿಮೆ ಸಾಮರ್ಥ್ಯದಿಂದ ಬಳಲುತ್ತಿವೆ, ಇದು ಸೀಮಿತ ಸ್ಪರ್ಧೆಗೆ ದಾರಿ ಮಾಡಿದೆ ಮತ್ತು ವಿಮಾನ ಪ್ರಯಾಣ ದರಗಳು ಹೋಲಿಕೆಯಲ್ಲಿ ದುಬಾರಿಯಾಗಿವೆ ಎಂದು ಸಿಂಗಪುರ್ ಏರ್ಲೈನ್ಸ್ ವಾದಿಸಿತು.[22] ಆ ನಡೆಯು ಹೆಚ್ಚುತ್ತಿರುವ ಸ್ಪರ್ಧೆಯಿಂದ ಕ್ವಾಂಟಾಸನ್ನು ರಕ್ಷಿಸುವುದಕ್ಕಾಗಿ ತೆಗೆದುಕೊಂಡ ಕ್ರಮ ಎಂಬುದಾಗಿ ಅದು ಕಾಣುತ್ತಿತ್ತು.[23] ಎಸ್ಐಎ ಈ ಹಿಂದೆಯೂ ಇಂಥ ರಕ್ಷಣಾತ್ಮಕ ಕ್ರಮಗಳನ್ನು ಎದುರಿಸಿತ್ತು. ಏರ್ ಕೆನಡಾ ದೂರು ನೀಡಿದಾಗ ಎಸ್ಐಎ ಟೊರೋಂಟೋ ಮಾರುಕಟ್ಟೆಯಿಂದ ಬಾಗಿಲು ಮುಚ್ಚಿ ಹೊರಗೆ ಬಂದಿತ್ತು. ಗರುಡ ಇಂಡೋನೇಶಿಯಾಗೆ ಸ್ಪರ್ಧಿಸಲು ಅದೇ ರೀತಿಯ ಸಾಧನಗಳು ಇಲ್ಲದೆ ಇದ್ದಾಗ ಅದು ತೋರಿಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಕಾರ್ತಾದಲ್ಲಿ ಬೋಯಿಂಗ್ 474-400ಗಳ ಹಾರಾಟವನ್ನು ನಿಲ್ಲಿಸುವಂತೆ ಬಲವಂತಕ್ಕೆ ಒಳಪಡಿಸಲಾಗಿತ್ತು.[24]
2000ನೆ ಇಸ್ವಿ ಸೆಪ್ಟೆಂಬರ್ 29ರಂದು ಎಸ್ಐಎ 25 ಏರ್್ಬಸ್ ಖರೀದಿಯ ಆದೇಶದ ಘೋಷಣೆಯನ್ನು ಮಾಡಿತು. (ಎ380 ಎಂದು ಆ ಕಾಲಕ್ಕೆ ತಿಳಿಯಲಾಗಿತ್ತು.) 8.6 ಶತಕೋಟಿ ಡಾಲರ್ ಮೌಲ್ಯದ ಈ ಆದೇಶದಲ್ಲಿ 10 ವಿಮಾನಗಳು ನಿಶ್ಚಿತವಾಗಿತ್ತು. ಇತರ 15 ಏರ್್ಪ್ರೇಮ್(ಎಂಜಿನ್ ಬಿಟ್ಟು ವಿಮಾನದ ಶರೀರ)ಗಳ ಆಯ್ಕೆಗಳ ಅವಕಾಶವಿತ್ತು.[25] 2001ರ ಜುಲೈ 12ರಂದು ಸಿಂಗಪುರ್ ಏರ್ಲೈನ್ಸ್ ಆದೇಶವನ್ನು ದೃಢಪಡಿಸಿತು. 2005ರ ಜನವರಿಯಲ್ಲಿ "ಫಸ್ಟ್ ಟು ಫ್ಲೈ ದಿ ಎ380- ಎಕ್ಷ್್ಪೀರಿಯನ್ಸ್ ದಿ ಡಿಫರೆನ್ಸ್ ಇನ್ 2006" ಎಂಬ ಘೋಷಣೆಯನ್ನು ಏರ್ಲೈನ್ 2005ರ ಜನವರಿಯಲ್ಲಿ ಬಿಡುಗಡೆ ಮಾಡಿತು. 2006ರ ದ್ವಿತೀಯ ತ್ರೈಮಾಸಿಕದಲ್ಲಿ ಬರುವುದೆಂದು ನಿರೀಕ್ಷೆ ಮಾಡಲಾಗಿದ್ದ ಮೊದಲ ಎ380-800 ವಿಮಾನದ ಪ್ರಚಾರಕ್ಕಾಗಿ ಅದು ತಾನಾಗಿಯೇ ರೂಪಿಸಿದ್ದು.[26] 2005ರ ಜೂನ್್ನಲ್ಲಿ ಅನಿರೀಕ್ಷಿತ ತಾಂತ್ರಿಕ ಸಮಸ್ಯೆಗಳಿಂದಾಗಿ ಆರಂಭದ ಏರ್್ಬಸ್ ಎ380 ಪೂರೈಕೆ ಆರು ತಿಂಗಳ ಕಾಲ ವಿಳಂಬವಾಗಲಿದೆ ಎಂಜು ಏರ್್ಬಸ್ ದೃಢಪಡಿಸಿತು. ಇದರಿಂದಾಗಿ ಮೊದಲ ಆಗಮನವನ್ನು ನವೆಂಬರ್ 2006ಕ್ಕೆ ಮುಂದೂಡಲಾಯಿತು.[27] ಈ ಪ್ರಕಟಣೆಯು ಎಸ್ಐಎದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚ್ಯೂ ಚೂನ್ ಸೆಂಗ್ ಅವರಿಗೆ ಕೋಪವನ್ನು ತರಿಸಿತು. ಅವರು ಏರ್್ಬಸ್ಅನ್ನು ಕೋರ್ಟಿಗೆಳೆಯುವ ಬೆದರಿಕೆ ಹಾಕಿದರು. ಅವರು ಹೀಗೆ ಹೇಳಿದರು:
“ | Airbus took some time to acknowledge the delay in the timetable for the A380's entry into service...I would have expected more sincerity.[28] | ” |
ಮುಂದುವರಿದ ಅವರು, ಎ380ಗೂ ಮೊದಲೇ ಬೋಯಿಂಗ್ 777-300ಇಆರ್ ಆಗಮನವಾಗಲಿರುವುದರಿಂದ ಎಸ್ಐಎ ತನ್ನ ಗಮನವನ್ನು ಬೋಯಿಂಗ್ ಕಡೆ ತಿರುಗಿಸುವುದು ಎಂದು ಹೇಳಿದರು. ಏನೇ ಇದ್ದರೂ ಇದರಿಂದ ತನ್ನ ಪ್ರಚಾರ ಆಂದೋಳನಕ್ಕೆ ಯಾವುದೇ ತೊಂದರೆಯಾಗದು ಎಂಬುದನ್ನು ಎಸ್ಐಎ ಸೂಚಿಸಿತು.
2006ರ ಫೆಬ್ರವರಿಯಲ್ಲಿ ಮೊದಲ ಎ380 ಸಿಂಗಪುರ್ ಏರ್ಲೈನ್ಸ್್ನ ವಿಶಿಷ್ಟ ಬಣ್ಣದೊಂದಿಗೆ ಸಿಂಗಪುರಕ್ಕೆ ಹಾರಿತು. ಅಲ್ಲಿಯ ಏಶಿಯನ್ ಎರೋಸ್ಪೇಸ್್ನಲ್ಲಿ ಅದನ್ನು ಪ್ರದರ್ಶಿಸಲಾಯಿತು. 2006ರ ಜೂನ್ 14ರಂದು ಸಿಂಗಪುರ್ ಏರ್ಲೈನ್ಸ್ ತನ್ನ ಭವಿಷ್ಯದ ವಿಮಾನ ವಿಸ್ತರಣೆಯ ಭಾಗವಾಗಿ ಬೋಯಿಂಗ್ 787ಗೆ ಪ್ರಾರಂಭಿಕ ಆದೇಶವನ್ನು ನೀಡಿತು. ಈ ಆದೇಶವು 20 787-9ಗಳನ್ನು ಮತ್ತು 20ಕ್ಕೂ ಹೆಚ್ಚಿನವಕ್ಕೆ ಹಕ್ಕುಗಳನ್ನು ಒಳಗೊಂಡಿತ್ತು. ಎ380 ಸುಪರ್್ಜಂಬೋ ಮತ್ತೂ 6 ತಿಂಗಳು ವಿಳಂಬವಾಗಲಿದೆ ಎಂದು ಏರ್್ಬಸ್ ಪ್ರಕಟಿಸಿದ ಒಂದು ದಿನದ ನಂತರ ಈ ಆದೇಶ ಹೊರಬಿತ್ತು.
ಮೂರನೆಯ ವಿಳಂಬ ಘೋಷಣೆಯಾಗಿದ್ದು 2006ರ ಅಕ್ಟೋಬರ್ 3ರಂದು. ಪ್ರಥಮ ಎ380 ಪೂರೈಕೆಯನ್ನು ಅಕ್ಟೋಬರ್ 2007ರಂದು ಪೂರೈಸುವುದಾಗಿ ಪ್ರಕಟಿಸಲಾಯಿತು.[29]
2007 ಅಕ್ಟೋಬರ್ 25ರಂದು ಮೊದಲ ವಾಣಿಜ್ಯಕ ಎ380 ಆರಂಭವಾಯಿತು. ವಿಮಾನದ ನಂಬರ್ ಎಸ್್ಕ್ಯೂ 380,[30] 455 ಪ್ರಯಾಣಿಕರನ್ನು ಹೊತ್ತು ಸಿಂಗಪುರದಿಂದ ಸಿಡ್ನಿಗೆ ತೆರಳಿತು. ಸಿಡ್ನಿ ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 3:24 ಕ್ಕೆ ಇಳಿದಾಗ ಗಮನಾರ್ಹ ಸಂಖ್ಯೆಯಲ್ಲಿ ನೆರೆದ ಮಾಧ್ಯಮದವರು ಅದನ್ನು ಸ್ವಾಗತಿಸಿದರು.[31] ಸಿಡ್ನಿಯಲ್ಲಿ ಮರುದಿನ ನಡೆದ ಸಮಾರಂಭದಲ್ಲಿ ಈ ಹಾರಾಟದಿಂದ ಬಂದ ಎಲ್ಲ ಆದಾಯವನ್ನೂ ಮೂರು ಅನಾಥಾಲಯಗಳಿಗೆ ಏರ್ಲೈನ್ ದಾನ ಮಾಡಿತು.
2007ರ ಅಕ್ಟೋಬರ್ 28ರಿಂದ ಎಸ್ಐಎ ಎ380ದ ನಿಯಮಿತ ಹಾರಾಟವನ್ನು ಆರಂಭಿಸಿತು.
ಎ380 ಈಗ ನಿತ್ಯವೂ ಸಿಡ್ನಿ (ಅಕ್ಟೋಬರ್ 31ರಿಂದ ದಿನಕ್ಕೆ ಎರಡು ಬಾರಿ)[32], ಟೋಕಿಯೋ, ಪ್ಯಾರಿಸ್, ಹಾಂಗ್ ಕಾಂಗ್, ಮೆಲ್ಬೋರ್ನ್, ಜುರಿಚ್ ಮತ್ತು ಲಂಡನ್ನಿಗೆ ನಿತ್ಯ ಡಬ್ಬಲ್ ಫ್ಲೈಟ್ ಹಾರಾಟ ನಡೆಸುತ್ತಿದೆ. ಸಿಂಗಪುರ್ ಏರ್ಲೈನ್ಸ್ 2010ರ ಏಪ್ರಿಲ್ 23 ಮತ್ತು 28ರಿಂದ ಐತಿಹಾಸಿಕವೆನ್ನಿಸಿದ ಲಂಡನ್ ಮತ್ತು ಸಿಂಗಪುರ್ ನಡುವೆ ದಿನಕ್ಕೆ ಮೂರು ಬಾರಿ ಎ380 ವಿಮಾನವನ್ನು ಹಾರಿಸಿ ಸ್ಮರಣೀಯವಾಗಿಸಿತು. ಕೆಲವು ದಿನಗಳ ಮೊದಲು 2010ರ ಇಜಾಫ್ಜಾಲ್ಲಾಜೋಕುಲ್(ಜ್ವಾಲಾಮುಖಿ) ಉಕ್ಕಿದ್ದರಿಂದ ಬಾಕಿ ಉಳಿದ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಈ ಹಾರಾಟ ನಡೆಸಲಾಯಿತು.
2009ರ ಫೆಬ್ರವರಿ 16ರಂದು ಏರ್ಲೈನ್ ತಾನು ಏಫ್ರಿಲ್ 2009ರಿಂದ ಮಾರ್ಚ್ 2010ರ ನಡುವೆ 17 ವಿಮಾನಗಳನ್ನು ಸೇವೆಯಿಂದ ಹಿಂದಕ್ಕೆ ಪಡೆಯುವುದಾಗಿ ಪ್ರಕಟಿಸಿತು. ವೆಚ್ಚವನ್ನು ಉಳಿಸುವ ಕ್ರಮ ಇದು. ಕುಸಿಯುತ್ತಿರುವ ಪ್ರಯಾಣಿಕರು ಮತ್ತು ಸರಕು ಸಾಗಣೆ ಬೇಡಿಕೆಯ ಕುಸಿತವನ್ನು ಇದರಿಂದ ಎದುರಿಸಬಹುದು. ಆರಂಭದಲ್ಲಿ ಕೇವಲ ನಾಲ್ಕು ವಿಮಾನಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿತು. ಈಗಾಗಲೇ ಆದೇಶನೀಡಲಾಗಿರುವ ವಸ್ತುಗಳ ಪೂರೈಕೆಯಲ್ಲಿ ವಿಳಂಬವಾಗುವ ಸಾಧ್ಯತೆಯನ್ನು ಅಲ್ಲಗಳೆಯುವುದಿಲ್ಲ ಎಂದೂ ಏರ್ಲೈನ್ ಹೇಳಿತು.[33][34]
ಈ ಏರ್ಲೈನ್ ಸಿಂಗಪುರ್ ಸರ್ಕಾರದ ಅಧೀನ ಸಂಸ್ಥೆ. ಹೂಡಿಕೆ ಮತ್ತು ಹೋಲ್ಡಿಂಗ್ ಇರುವ ಕಂಪನಿ. ವೋಟ್ ಮಾಡುವ ಹಕ್ಕಿರುವ ಶೇ.54.5 ಪಾಲನ್ನು ಟೆಮಾಸೆಕ್ ಹೋಲ್ಡಿಂಗ್ ಹೊಂದಿದೆ.[1][35] ಸಿಂಗಪುರ್ ಸರ್ಕಾರವು ಹಣಕಾಸು ಸಚಿವಾಲಯದ ಮೂಲಕ ಗೋಲ್ಡನ್ ಶೇರ್ ಹೊಂದಿದೆ. ಕಂಪನಿಯ ಆಡಳಿತದಲ್ಲಿ ಪಾಲ್ಗೊಳ್ಳದೆ ಇರುವುದಕ್ಕೆ ನಿಯಮಿತವಾಗಿ ಒತ್ತು ನೀಡುತ್ತಲೇ ಇರುತ್ತದೆ. ಸಚಿವರ ಸಲಹೆಗಾರ ಲೀ ಕೌನ್ ಯೀವ್ ಸಿಂಗಪುರ ಚಾಂಗಿ ವಿಮಾನ ನಿಲ್ದಾಣದ ವಿಮಾನಯಾನ ಕೇಂದ್ರ ಎನ್ನುವ ಸ್ಥಾನಮಾನವನ್ನು ಎಸ್ಐಎದ ಹಿತವನ್ನು ಬಲಿಕೊಟ್ಟಾದರೂ ಉಳಿಸಿಕೊಳ್ಳುವುದಾಗಿ ಘೋಷಿಸುವ ಮೂಲಕ ಇದನ್ನು ದೃಢಪಡಿಸಿದ್ದಾರೆ.[36] ಹೀಗಿದ್ದರೂ ಅವರು ಕಂಪನಿ ಮತ್ತು ಪೈಲಟ್್ಗಳ ನಡುವಿನ ತಿಕ್ಕಾಟವನ್ನು ಶಮನಗೊಳಿಸಲು ವೈಯಕ್ತಿಕವಾಗಿ ಮುಂದಾಗಿದ್ದರು.[37] ವೆಚ್ಚವನ್ನು ಕಡಿತಗೊಳಿಸುವಂತೆ ಏರ್ಲೈನ್್ಗೆ ಎಚ್ಚರಿಕೆ ನೀಡಿದ್ದರು.[38] ಮತ್ತು ಅಂಗಸಂಸ್ಥೆಗಳಲ್ಲಿಯ ಬಂಡವಾಳವನ್ನು ಹಿಂದಕ್ಕೆ ಪಡೆಯಿರಿ ಎಂದು ತಾವು ಏರ್ಲೈನ್ಸ್್ಗೆ ನೀಡಿದ್ದ ಸಲಹೆಯನ್ನು ಬಹಿರಂಗಪಡಿಸಿದ್ದರು.[39] ಏರ್ಲೈನ್ಸ್ ಕಾರ್ಪೋರೇಟ್ ಆಡಳಿತ ನೀತಿಗಳನ್ನು ರಾಷ್ಟ್ರೀಯ ನಿಯಮಗಳಿಗೆ ಅನುಗುಣವಾಗಿ ಚೆನ್ನಾಗಿಯೇ ರೂಢಿಮಾಡುತ್ತಿದೆ ಎಂದು ಸ್ವತಂತ್ರ ಸಂಶೋಧನೆ ಪ್ರಾತಿನಿಧಿಕವೆನ್ನುವಂತೆ ಬೆಲೆಕಟ್ಟುತ್ತವೆ.[40] 2007ರ ಅಕ್ಟೋಬರ್ 2ರಂದು ಯುನೈಟೆಡ್ ಕಿಂಗ್ಡಂ ಜೊತೆ ಮಾಡಿಕೊಂಡ ಮುಕ್ತ ಆಕಾಶ ಒಪ್ಪಂದ ಪರಿಣಾಮವಾಗಿ, ಸರ್ಕಾರದ ಸಂಬಂಧ ಹೊಂದಿರುವ ಕಂಪನಿಯಾಗಿದ್ದರೂ ಎಸ್ಐಎ ಸರ್ಕಾರದಿಂದ ಹಣವನ್ನು ಪಡೆಯುತ್ತಿದೆ, ರಿಯಾಯಿತಿಯನ್ನು ಅಥವಾ ಆದ್ಯತೆಯನ್ನು ಪಡೆದುಕೊಳ್ಳುತ್ತಿದೆ ಎಂಬ ಅನುಮಾನಗಳನ್ನು ದೂರಮಾಡುವುದಕ್ಕಾಗಿ ಸಿಂಗಪುರ್ ವಿಮಾನಯಾನ ಅಧಿಕಾರಿಗಳು ಏರ್ಲೈನ್ಸ್್ನ ಆಡಿಟ್ ಆಗಿರುವ ವಾರ್ಷಿಕ ವರದಿಗಳನ್ನು ಉಲ್ಲೇಖಿಸಿದರು.[41] ಸಿಂಗಪುರ್ ಏರ್ಲೈನ್ಸ್್ನ ಕೇಂದ್ರ ಕಚೇರಿಯು ಸಿಂಗಪುರದ ಚಾಂಗಿ ಪ್ರದೇಶದಲ್ಲಿಯ ಚಾಂಗಿ ಏರ್ಪೋರ್ಟ್್ನ ಏರ್ಲೈನ್ ಹೌಸ್್ನಲ್ಲಿದೆ[42]
This article is outdated. |
ಸಿಂಗಪುರ್ ಏರ್ಲೈನ್ಸ್ ಸಂಬಂಧಿಸಿದ ವಿವಿಧ ಉದ್ಯಮಗಳನ್ನು ಗ್ರೌಂಡ್ ಹ್ಯಾಂಡಲಿಂಗ್, ಏರ್್ಕ್ರಾಫ್ಟ್ ಲೀಸಿಂಗ್, ಏವಿಯೇಶನ್ ಎಂಜಿನಿಯರಿಂಗ್, ಏರ್ ಕ್ಯಾಟರಿಂಗ್, ಮತ್ತು ಟೂರ್ ಆಪರೇಶನ್ಸ್ ಗಳೆಂದು.ವಿಭಾಗಿಸಿದೆ. ಕಿಕ್ಕಿರಿದ ಕಾರ್ಯಾಚರಣೆ ಘಟಕಗಳನ್ನು ಸಂಪೂರ್ಣ ಸ್ವಂತದ್ದಾದ ಅಂಗಸಂಸ್ಥೆಗಳನ್ನಾಗಿ ಪುನರ್ರಚನೆ ಮಾಡಲಾಯಿತು. ಇದರ ಉದ್ದೇಶ ಪ್ರಯಾಣಿಕರ ಏರ್ಲೈನ್ಅನ್ನು ಪ್ರಮುಖ ವ್ಯವಹಾರವನ್ನಾಗಿ ಉಳಿಸಿಕೊಳ್ಳುವುದು. 2007ರ ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಸಿಂಗಪುರ್ ಏರ್ಲೈನ್ಸ್ ಗ್ರುಪ್ 25 ಅಂಗ ಸಂಸ್ಥೆ ಕಂಪನಿಗಳನ್ನು, 32 ಸಹ ಕಂಪನಿಗಳು ಮತ್ತು ಎರಡು ಜಂಟಿ ಉದ್ಯಮದ ಕಂಪನಿಗಳನ್ನು ಹೊಂದಿದೆ. ಜಂಟಿ ಉದ್ಯಮವಾಗಿದ್ದ ಸಿಂಗಪುರ್ ಏರ್್ಕ್ರಾಫ್ಟ್ ಲೀಸಿಂಗ್ ಎಂಟರ್್ಪ್ರೈಸಸ್್ನಲ್ಲಿದ್ದ ತನ್ನ ಎಲ್ಲ 35.5% ಷೇರುಗಳನ್ನು ಎಸ್ಐಎ ಬ್ಯಾಂಕ್ ಆಫ್ ಚೀನಾಗೆ 980 ದಶ ಲಕ್ಷ ಅಮೆರಿಕದ ಡಾಲರ್್ಗಳಿಗೆ 2006ರ ಡಿಸೆಂಬರ್ 15ರಂದು ಮಾರಾಟ ಮಾಡಿತು.[43] ಎಸ್ಐಎ ಎಂಜಿನಿಯರಿಂಗ್ ಕಂಪನಿ ಮತ್ತು ಸಿಂಗಪುರ್ ಏರ್್ಪೋರ್ಟ್ ಟರ್ಮಿನಲ್ ಸರ್ವಿಸ್್ಗಳಲ್ಲಿಯ ಬಂಡವಾಳವನ್ನು ಹಿಂದಕ್ಕೆ ಪಡೆಯಬೇಕು ಎನ್ನುವ ಬಗ್ಗೂ ಇತ್ತೀಚೆಗೆ ಸಲಹೆಗಳು ಬಂದಿವೆ. ಸಚಿವರ ಸಲಹೆಗಾರ ಲೀ ಕ್ವಾನ್ ಯೀವ್ 2005ರ ಡಿಸೆಂಬರ್್ನಲ್ಲಿ, ಸಿಂಗಪುರ್ ಏರ್ಲೈನ್ಸ್ ತನ್ನ ಪ್ರಮುಖ ಉದ್ಯಮವಾದ ಏರ್ ಟ್ರಾನ್ಸ್್ಪೋರ್ಟೇಶನ್್ಗೆ ಹೆಚ್ಚಿನ ಗಮನ ನೀಡುವುದಕ್ಕಾಗಿ ಈ ಎರಡು ಕಂಪನಿಗಳಲ್ಲಿಯ ಬಂಡವಾಳವನ್ನು ಹಿಂದಕ್ಕೆ ಪಡೆಯಬೇಕು ಎಂದು ತಮ್ಮ ಅಭಿಪ್ರಾಯದ ದನಿ ಎತ್ತಿದ್ದರು.[44] ಹೀಗಿದ್ದರೂ ಸಿಂಗಪುರ್ ಏರ್ಲೈನ್ಸ್ ಬಂಡವಾಳ ಹಿಂದೆಗೆತದ ಅವಕಾಶದ ಮೌಲ್ಯಮಾಪನ ಮಾಡುತ್ತಲೇ ಇದೆ, ಆದರೆ ಯಾವುದೇ ತಾತ್ಕಾಲಿಕ ಯೋಜನೆಯನ್ನು ಇಂದಿನ ವರೆಗೂ ಪ್ರಕಟಿಸಿಲ್ಲ.[45]
ಸಿಂಗಪುರ್ ಏರ್ಲೈನ್ಸ್ ಗ್ರುಪ್್ನಲ್ಲಿರುವ ಪ್ರಮುಖ ಕಂಪನಿಗಳು:
ಮಾದರಿ | ಪ್ರಮುಖ ಚಟುವಟಿಕೆಗಳು | ಯಾವುದರಲ್ಲಿ ಸಂಯೋಜಿತ ಸಂಸ್ಥೆ | ಗ್ರುಪ್ಸ್ ಈಕ್ವಿಟಿ ಷೇರ್್ಹೋಲ್ಡಿಂಗ್ (31 ಮಾರ್ಚ್ 2007) | |
ಇಂಟರ್್ನ್ಯಾಶನಲ್ ಎಂಜಿನ್ ಕಾಂಪೋನೆಂಟ್ ಓವರ್್ಹೌಲ್ ಪ್ರೈವೇಟ್ ಲಿಮಿಟೆಡ್ | ಜಂಟಿ ಉದ್ಯಮಗಳು | ಏರ್್ಕ್ರಾಫ್ಟ್ ಕೂಲಂಕಷ ಪರೀಕ್ಷೆ | ಸಿಂಗಪುರ | 41% |
ಎಸ್ಐಎ ಎಂಜಿನಿಯರಿಂಗ್ ಕಂಪನಿ ಲಿಮಿಟೆಡ್ | ಅಂಗಸಂಸ್ಥೆ | ಎಂಜಿನಿಯರಿಂಗ್ ಕ್ಷೇತ್ರ | ಸಿಂಗಪುರ | 81.9% |
ಸಿಲ್ಕ್್ಏರ್ (ಸಿಂಗಪುರ್) ಪ್ರೈವೇಟ್ ಲಿಮಿಟೆಡ್ | ಅಂಗಸಂಸ್ಥೆ | ಏರ್ ಲೈನ್ | ಸಿಂಗಪುರ | 100% |
ಸಿಂಗಪುರ್ ಏರೋ ಎಂಜಿನ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ | ಜಂಟಿ ಉದ್ಯಮಗಳು | ಎಂಜಿನ್ ಕೂಲಂಕಷ ಪರೀಕ್ಷೆ | ಸಿಂಗಪುರ | 41% |
ಸಿಂಗಪುರ್ ಏರ್ಲೈನ್ಸ್ ಕಾರ್ಗೋ ಪ್ರೈವೇಟ್ ಲಿಮಿಟೆಡ್ | ಅಂಗಸಂಸ್ಥೆ | ಸರಕು ವಾಯುಯಾನ ಸಂಸ್ಥೆಗಳು | ಸಿಂಗಪುರ | 100% |
ಸಿಂಗಪುರ್ ಏರ್್ಪೋರ್ಟ್ ಟರ್ಮಿನಲ್ ಸರ್ವಿಸಸ್ ಲಿಮಿಟೆಡ್ | ಅಂಗಸಂಸ್ಥೆ | ಹಿಡುವಳಿ ಸಂಸ್ಥೆ | ಸಿಂಗಪುರ | 81.9% |
ಸಿಂಗಪುರ್ ಫ್ಲೈಯಿಂಗ್ ಕಾಲೇಜ್ ಪ್ರೈವೇಟ್ ಲಿಮಿಟೆಡ್ | ಅಂಗಸಂಸ್ಥೆ | ಫ್ಲೈಟ್ ಸ್ಕೂಲ್ | ಸಿಂಗಪುರ | 100% |
ತಾಜ್ ಎಸ್ ಎಟಿಎಸ್ ಏರ್ ಕ್ಯಾಟರಿಂಗ್ | ಜಂಟಿ ಉದ್ಯಮಗಳು | ಅಡುಗೆ | ಭಾರತ | 50% |
ಈ ಏರ್ಲೈನ್ ಸಿಂಗಪುರ ನೆಲೆಯಿಂದ ಆಚೆಯೂ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಇತರ ಏರ್ಲೈನ್ ಗಳಲ್ಲಿಯೂ ಹೂಡಿಕೆಯನ್ನು ಮಾಡಿತ್ತು. ಹೀಗಿದ್ದೂ ಇದರ ಪರಿಣಾಮ ಹಣಕಾಸಿನ ದೃಷ್ಟಿಯಿಂದ ನಿಷೇಧಾತ್ಮಕವಾಗಿತ್ತು. 1989ರಲ್ಲಿ ಇದು ಡೆಲ್ಟಾ ಏರ್ಲೈನ್ಸ್ ಮತ್ತು ಸ್ವಿಸ್ ಏರ್ ಜೊತೆ ತ್ರಿಪಕ್ಷೀಯ ಒಡಂಬಡಿಕೆಯನ್ನು ಮಾಡಿಕೊಂಡಿತು.[46] ಆದರೆ 1999ರಲ್ಲಿ ಪ್ರತಿಯೊಂದು ಕಂಪನಿಯಲ್ಲಿಯ ಶೇ.5 ಈಕ್ವಿಟಿಯನ್ನು ಹಿಂದಕ್ಕೆ ಪಡೆದು ಅವರ ಪಾಲುದಾರಿಕೆಗೆ ಅಂತ್ಯ ಹಾಡಿತು. 2000ನೆ ಇಸ್ವಿಯಲ್ಲಿ ಏರ್ಲೈನ್ ಏರ್ ನ್ಯೂಜಿಲೆಂಡ್ ನ ಶೇ.25 ಪಾಲು ಖರೀದಿಸಿತು. ಏರ್ ನ್ಯೂಜಿಲೆಂಡ್ ದಿವಾಳಿಯ ಅಂಚಿಗೆ ಬಂದು ನಿಂತಾಗ ನ್ಯೂಜಿಲೆಂಡ್ ಸರ್ಕಾರವು ಏರ್ಲೈನ್ ದಿವಾಳಿಯಾಗುವುದನ್ನು ತಪ್ಪಿಸಲು ಅದನ್ನು ಖರೀದಿಸಿತು ಮತ್ತು ಸಿಂಗಪುರ್ ಏರ್ಲೈನ್ಸ್ ಪಾಲನ್ನು ಶೇ.4.5ಕ್ಕೆ ಇಳಿಸಿತು. ಆನಂತರ ಇದನ್ನು ಭಾರೀ ನಷ್ಟದೊಂದಿಗೆ 2004ರಲ್ಲಿ ಮಾರಲಾಯಿತು.
2000ನೆ ಇಸ್ವಿ ಮಾರ್ಚ್ 30ರಂದು ಎಸ್ ಐ ಎ ವರ್ಜಿನ್ ಅಟ್ಲಾಂಟಿಕ್ ಏರ್ವೇಸ್ ನ ಶೇ.49 ಪಾಲನ್ನು ಖರೀದಿಸಿತು. 600 ದಶಲಕ್ಷ ಪೌಂಡ್ ನಗದನ್ನು ನೀಡಲಾಯಿತು.[47] ಆಕರ್ಷಕವಾಗಿದ್ದ ಅಟ್ಲಾಂಟಿಕ್ ಸಾಗರೋತ್ತರ ಮಾರುಕಟ್ಟೆಯಿಂದ ಇದನ್ನು ಮರಳಿ ಪಡೆಯಬಹುದು ಎಂಬ ಆಶೆ ಇಟ್ಟುಕೊಳ್ಳಲಾಗಿತ್ತು. ಆದರೆ ಸಾಧನೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ ಎಂಬ ವರದಿಗಳು 2007ರ ವೇಳೆಗೆ ಕೇಳಿಬಂತು. ಅದರಲ್ಲಿಯ ಪಾಲನ್ನು ಹಿಂದಕ್ಕೆ ಪಡೆಯುವ ಸಾಧ್ಯತೆಯೂ ಇದೆ.[48] 2008ರ ಮೇ 14ರಂದು ಕಂಪನಿಯು ಔಪಚಾರಿಕವಾಗಿ ವರ್ಜಿನ್ ಅಟ್ಲಾಂಟಿಕ್್ದಲ್ಲಿಯ ತನ್ನ ಪಾಲನ್ನು ಮಾರುವ ಸಂಬಂಧದಲ್ಲಿ ಆಹ್ವಾನವನ್ನು ಪ್ರಕಟಿಸಿತು ಮತ್ತು ಬಹಿರಂಗವಾಗಿಯೇ ಏರ್ಲೈನ್್ದಲ್ಲಿಯ ಅದರ ಪಾಲು ನಿರೀಕ್ಷಿತಕ್ಕಿಂತ ಕಡಿಮೆ ಸಾಧನೆ ಮಾಡಿದೆ ಎಂದು ಒಪ್ಪಿಕೊಂಡಿತು[49] 2004ರ ಸೆಪ್ಟೆಂಬ್್ನಲ್ಲಿ ಏರ್ಲೈನ್ ಕಡಿಮೆ ವೆಚ್ಚದ ಹಾರಾಟದ ಮಾರುಕಟ್ಟೆಯನ್ನು ಪ್ರವೇಶಿಸಿತು. ಇದಕ್ಕಾಗಿ ಅದು ಟೈಗರ್ ಏರ್ ವೇಸ್ ಪ್ರಾರಂಭಿಸಿತು. ಇದರಲ್ಲಿ ಅದರದ್ದು ಶೇ.49 ಪಾಲುದಾರಿಕೆ. ಬಿಲ್ ಫ್ರಾಂಕಿ ಸ್ಥಾಪಿಸಿ ಇನ್ವೆಸ್ಟ್್ಮೆಂಟ್ ಫರ್ಮ್ ಇಂಡಿಗೋ ಪಾರ್ಟನರ್ಸ್ ಎಲ್ಎಲ್್ಸಿ ಇದರಲ್ಲಿ ಪಾಲುದಾರ, ಇದರ ಪಾಲಿ ಶೇ.24. ಟೋನಿ ರಿಯಾನ್್ನ ಖಾಸಗಿ ಹೂಡಿಕೆ ಸಂಸ್ಥೆ ಐರ್ಲಾಂಡಿಯಾ ಇನ್ವೆಸ್ಟ್್ಮೆಂಟ್ಸ್ ಲಿಮಿಟೆಡ್ ಪಾಲು ಶೇ.16 ಮತ್ತು ಟೆಮಾಸೆಕ್ ಹೋಲ್ಡಿಂಗ್ಸ್ ಪಿಟಿಇ ಲಿ. ಪಾಲು ಶೇ.11ರಷ್ಟು. ಟೈಗರ್ ಏರ್ವೇಸ್ ಅಂತಿಮವಾಗಿ 2010ರ ಫೆಬ್ರವರಿಯಲ್ಲಿ SGXನಲ್ಲಿ ಪಟ್ಟಿಯಾಯಿತು. ಎಸ್ಐಎ ಷೇರುಗಳು ಶೇ.34.4ಕ್ಕೆ ಕಡಿತಗೊಳಿಸಲಾಯಿತು.
2007 ಮಾರ್ಚ್ 31ರ ಹಣಕಾಸು ವರ್ಷದ ಕೊನೆಯಲ್ಲಿ ಸಿಂಗಪುರ್ ಏರ್ಲೈನ್ಸ್ ಗ್ರುಪ್ ಒಟ್ಟೂ 29,457 ಸಿಬ್ಬಂದಿಯನ್ನು ಹೊಂದಿತ್ತು.[50] ಮೂಲ ಏರ್ಲೈನ್ ತಾನೇ 13,942 (47.3%) ಸಿಬ್ಬಂದಿಯನ್ನು ಹೊಂದಿತ್ತು.ಇವರಲ್ಲಿ 2174 ಪೈಲಟ್್ಗಳು ಮತ್ತು 6914 ಕ್ಯಾಬಿನ್ ಸಿಬ್ಬಂದಿ ಇದ್ದರು. ಈ ಗುಂಪಿನ ನೌಕರರಿಗೆ ಐದು ಕಾರ್ಮಿಕ ಸಂಘಟನೆಗಳಿವೆ. ಅವು ಸಿಂಂಗಪುರ್ ಏರ್ಲೈನ್ಸ್ ಸ್ಟಾಫ್ ಯೂನಿಯನ್ (ಎಸ್ಐಎಎಸ್್ಯಿ), ದಿ ಎಸ್ಐಎ ಎಂಜಿನಿಯರಿಂಗ್ ಕಂಪನಿ ಎಂಜಿನಿಯರ್ಸ್ ಆ್ಯಂಡ್ ಎಕ್ಸಿಕ್ಯೂಟಿವ್ಸ್ ಯೂನಿಯನ್ (ಎಸಿಇಇಯು), ದಿ ಸಿಂಗಪೂರ್ ಏರ್ಪೋರ್ಟ್ ಟರ್ಮಿನಲ್ ಸರ್ವಿಸಸ್ ವರ್ಕರ್ಸ್ ಯೂನಿಯನ್ (ಎಸ್ಎಟಿಎಸ್್ಡಬ್ಲ್ಯೂಯು), ದಿ ಏರ್ ಟ್ರಾನ್ಸ್್ಪೋರ್ಟ್ ಎಕ್ಸಿಕ್ಯುಟಿವ್ಸ್ ಸ್ಟಾಫ್ ಯುನಿಯನ್ (ಎಇಎಸ್್ಯು), ಮತ್ತು ದಿ ಏರ್ ವೈನ್ ಪೈಲಟ್ಸ್ ಅಸೋಸಿಯೇಶನ್ ಸಿಂಗಪುರ್ (ಎಎಲ್್ಪಿಎ-ಎಸ್).
ಕಾರ್ಮಿಕ ಸಂಘಟನೆಗಳು ಮತ್ತು ಆಡಳಿತ ಮಂಡಳಿಯ ಗುಂಪಿನ ನಡುವಿನ ಸಂಬಂಧ ಅನೇಕ ಬಾರಿ ಪರೀಕ್ಷೆಗೊಳಗಾಗಿವೆ,ಎಸ್ಎಆರ್್ಎಸ್್ನಂಥ ಕಠಿಣ ಆರ್ಥಿಕ ಪರಿಸ್ಥಿತಿ 2003ರಲ್ಲಿ ಸ್ಫೋಟಗೊಂಡಾಗ ಅದರಲ್ಲೂ ವಿಶೇಷವಾಗಿ ಸರಣಿ ರೂಪದಲ್ಲಿ ಸಂಬಳ ಕಡಿತ, ಮಿತವ್ಯಯ ಕ್ರಮ ಮತ್ತು ಅವಧಿಗೆ ಮೊದಲೇ ನಿವೃತ್ತಿ ಕಾರ್ಮಿಕರ ನೈತಿಕ ಸ್ಥೈರ್ಯದ ಮೇಲೆ ಪರಿಣಾಮ ಬೀರಿತು.[ಸೂಕ್ತ ಉಲ್ಲೇಖನ ಬೇಕು] ಎಎಲ್್ಪಿಎ-ಎಸ್ ಒಂದೇ ಮೇ 1981ರಲ್ಲಿ ಅದರ ನೋಂದಣಿಯಾದ ದಿನದಿಂದ (ತಾನಾಗಿಯೇ ಹುಟ್ಟಿಕೊಂಡದ್ದು ಇದು. ಇದರ ಹಿಂದಿದ್ದ, ಸಿಂಗಪುರ್ ಏರ್ಲೈನ್ಸ್ ಪೈಲಟ್ಸ್ ಅಸೋಸಿಯೇಶನ್ 15 EXCO ಸದಸ್ಯರನ್ನು ಹೊಂದಿದ್ದು ಆಡಳಿತ ಮಂಡಳಿಯೊಂದಿಗೆ ವಿವಾದ ತಲೆದೋರಿದ್ದರಿಂದ ಅವರ ಮೇಲೆ ಆರೋಪ ಹೊರಿಸಿ ಶಿಕ್ಷೆಗೆ ಗುರಿಮಾಡಲಾಗಿತ್ತು. ಮತ್ತು 1981ರ ಫೆಬ್ರವರಿ 26ರಂದು ಎಸ್ಐಎಪಿಎದ ನೊಂದಣಿಯನ್ನು ಅಮಾನ್ಯ ಮಾಡಲಾಗಿತ್ತು.) 30 ನವೆಂಬರ 2003ರ ವರೆಗೆ ಆಡಳಿತ ಮಂಡಳಿಯೊಂದಿಗೆ 24ಕ್ಕೆ ಕಡಿಮೆ ಇಲ್ಲದಷ್ಟು ಪ್ರಕರಣಗಳಲ್ಲಿ ಭಾಗಿಯಾಗಿದೆ. ಆಗ ಮಿನಿಸ್ಟ್ರಿ ಆಫ್ ಮ್ಯಾನ್್ಪವರ್ (ಸಿಂಗಪುರ್) ಎಎಲ್್ಪಿಎ-ಎಸ್್ನ ಸಂವಿಧಾನದಲ್ಲಿಯ, ಆಡಳಿತ ಮಂಡಳಿಯು ಪಾಲ್ಗೊಂಡಿದ್ದ ಮಾತುಕತೆಯ ಒಪ್ಪಂದಗಳಿಗೆ ಸಾಮಾನ್ಯ ಸದಸ್ಯತ್ವದಿಂದ ಔಪಚಾರಿಕ ಒಪ್ಪಿಗೆ ಬೇಕೆಂಬ ಒಂದು ಐಟಂಅನ್ನು ಅಮಾನ್ಯ ಮಾಡಲು ಟ್ರೇಡ್ ಯೂನಿಯನ್ಸ್ ಆಕ್ಟ್್ಗೆ ತಿದ್ದುಪಡಿಯನ್ನು ತಂದಿತು.[51] 2007ರಲ್ಲಿ, ಏರ್್ಬಸ್ ಎ380 ಹಾರಿಸುವ ಪೈಲಟ್್ಗಳಿಗೆ ಆಡಳಿತ ಮಂಡಳಿಯು ಕೊಡಲುದ್ದೇಶಿಸಿದ್ದ ಸಂಬಳ ದರವು ಎಎಲ್್ಪಿಎ-ಎಸ್್ಗೆ ಒಪ್ಪಿಗೆಯಾಗದ ಕಾರಣ ಏರ್ಲೈನ್ ಮತ್ತೊಮ್ಮೆ ಸುದ್ದಿಯಲ್ಲಿ ಬಂತು.[52] ಮತ್ತು ಈ ಪ್ರಕರಣವನ್ನು ಔದ್ಯಮಿಕ ಪಂಚಾಯ್ತಿ ನ್ಯಾಯಾಲಯ ಬಗೆಹರಿಸಬೇಕಾಗಿದೆ.[53]
ವಿಚಾರಣೆಯ ಮೊದಲ ದಿನ ಎಸ್ಐಎ ಪೈಲಟ್್ಗಳು ಪಡೆಯುತ್ತಿರುವ ಸಂಬಳವನ್ನು ಬಹಿರಂಗಪಡಿಸಲಾಯಿತು. ಏರ್ಲೈನ್ಸ್್ನ ಬೋಯಿಂಗ್ 777 ಹಾರಿಸುವ 935 ಕ್ಯಾಪ್ಟನ್್ಗಳು ತಮ್ಮ ಸಂಬಳ ವರ್ಗದ ಮಧ್ಯ-ಬಿಂದುವಿನಲ್ಲಿ ಕಂಪನಿಯ 36 ವೈಸ್್ ಪ್ರೆಸಿಡೆಂಟರ ಸಂಬಳಕ್ಕಿಂತ (S$233,270) ಹೆಚ್ಚಿನ ಸಂಬಳ (S$270,000 ಅಧಿಕ) ಪಡೆಯುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಯಿತು.[54]
ವಿವಾದಗಳು ಕಾರ್ಮಿಕ ಸಂಘಟನೆಗಳಿಗೂ ಬಿಸಿ ಮುಟ್ಟಿಸಿತು. ಅದೆಷ್ಟು ಗಂಭೀರವಾಗಿತ್ತೆಂದರೆ ಅವರು ಸರ್ಕಾರದ ಮಧ್ಯಪ್ರವೇಶವನ್ನು ಆಹ್ವಾನಿಸಿದರು. ಎಎಲ್್ಪಿಎ-ಎಸ್್ನ ಆಂತರಿಕ ವೈರತ್ವವು ಆಡಳಿತ ಮಂಡಳಿಯ ಎಲ್ಲ 22 ಸದಸ್ಯರೂ 17 ನವೆಂಬರ್ 2003ರಂದು ಹೊರಬೀಳುವಂತೆ ಮಾಡಿತು. ಇದನ್ನು "ಆಂತರಿಕ ರಾಜಕೀಯ" ಎಂದು ಹೇಳಲಾಯಿತು. ಮತ್ತು ತಾತ್ಪರ್ಯವೇನೆಂದರೆ, ಎಸ್ಐಎಪಿಎ ದ ನೊಂದಣಿ ಅನೂರ್ಜಿತಗೊಳಿಸುವಲ್ಲಿ ಪಾಲ್ಗೊಂಡಿದ್ದವರೂ ಸೇರಿದಂತೆ ಮಾಜಿ ಪೈಲಟ್್ಗಳು ಪಾಲ್ಗೊಳ್ಳಬಹುದು ಎಂಬುದು.[55] ಜನವರಿ 2008 ರಲ್ಲಿ ಎನ್್ಟಿಯುಸಿ ಪ್ರಧಾನ ಕಾರ್ಯದರ್ಶಿ ಲಿಮ್ ಸ್ವೀ ಸೇ ಎಸ್ಐಎಎಸ್್ಯುದ ಆಂತರಿಕ ವಿವಾದದಲ್ಲಿ ಭಾಗಿಯಾದ ಗುಂಪುಗಳಿಂದ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ವಿರೋಧ ವ್ಯಕ್ತಪಡಿಸಿದರು.[56]
ತಮ್ಮ ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳುವ ನಿಟ್ಟಿನಲ್ಲಿ ಪರಸ್ಪರ ಕಾರ್ಮಿಕ ಪರ ಮತ್ತು ಉದ್ಯಮ ಪರ ಎಂಬ ಘೋಷಣೆಯೊಂದಿಗೆ 2007ರ ಏಪ್ರಿಲ್ 2 ರಂದು ಏರ್ಲೈನ್ ಗ್ರುಪ್ ಮತ್ತು ಅದರ ಕಾರ್ಮಿಕ ಸಂಘಟನೆಗಳು ಜಂಟಿಯಾಗಿ ಸಿಂಗಪುರ್ ಏರ್ಲೈನ್ಸ್ ಗ್ರುಪ್ ಯೂನಿಯನ್- ಮ್ಯಾನೇಜ್್ಮೆಂಟ್ ಪಾರ್ಟನರ್್ಶಿಪ್ಅನ್ನು ಮತ್ತು ಲೇಬರ್್ ಮೂವ್್ಮೆಂಟ್ 2011(ಎಲ್ಎಂ2011)ಅನ್ನು ಜಂಟಿಯಾಗಿ ಆರಂಭಿಸಿದರು.[57] 2008ರ ಏಪ್ರಿಲ್್ನಲ್ಲಿ ಏರ್ಲೈನ್ ಚೇರ್ಮನ್ ಸ್ಟೀಫನ್ ಲೀ, ಆಡಳಿತ ಮಂಡಳಿ ಮತ್ತು ಕಾರ್ಮಿಕ ಸಂಘಟನೆಗಳ ನಡುವಿನ ಸಂಬಂಧಗಳು ಕಳೆದ ಎರಡು ವರ್ಷಗಳಲ್ಲಿ ಅವುಗಳ ನಡುವೆ ಹೆಚ್ಚಿನ ಸಂಪರ್ಕದಿಂದ ಸ್ಥಿರವಾಗಿವೆ ಮತ್ತು ಸೌಹಾರ್ದದಿಂದ ಕೂಡಿದೆ ಎಂದು ಘೋಷಿಸಿದರು. ಸಚಿವರ ಸಲಹೆಗಾರ ಲೀ ಕ್ಯುಆನ್ ಯೀವ್ ಸೇರಿದಂತೆ ಅನೇಕ ಸರ್ಕಾರಿ ವ್ಯಕ್ತಿಗಳನ್ನು ಅವರು ಪ್ರಸ್ತಾಪಿಸಿದರು. ಭಿನ್ನಮತವನ್ನು ಶಮನ ಮಾಡುವುದಕ್ಕೆ ಅವರೆಲ್ಲ ಮಧ್ಯಪ್ರವೇಶಿಸಿದರು ಎಂದು ಹೇಳಿದರು. ಮುಂದೆ ಇನ್ನೂ ಹೆಚ್ಚು ನಿಯಮಿತವಾದ ಸಭೆಗಳು ವಿನಿಮಯಗಳು ಎರಡೂ ಕಡೆಯಿಂದ ನಡೆಯಲಿವೆ ಎಂದರು.[58]
[59][60] | ||||||
ಆದಾಯ (S$m) |
ವೆಚ್ಚ (S$m) |
ಕಾರ್ಯಾಚರಣೆ ಲಾಭ (S$m) |
ಲಾಭಕ್ಕೆ ಮೊದಲು ತೆರಿಗೆಗಳು (S$m) |
ಹೊರಿಸಬಹುದಾದ ಲಾಭ ಈಕ್ವಿಟಿ ಹೊಂದಿದವರು (S$m) |
ಇಪಿಎಸ್ ತೆರಿಗೆ ನಂತರ – ಸಾರಗುಂದಿಸಿದ್ದು(ಸೆಂಟ್ಸ್) | |
31 ಮಾರ್ಚ್ 1999 | 7,795.9 | 6,941.5 | 854.4 | 1,116.8 | 1,033.2 | 80.6 |
31 ಮಾರ್ಚ್ 2000 | 9,018.8 | 7,850.0 | 1,168.8 | 1,463.9 | 1,163.8 | 91.4 |
31 ಮಾರ್ಚ್ 2001 | 9,951.3 | 8,604.6 | 1,346.7 | 1,904.7 | 1,549.3 | 126.5 |
31 ಮಾರ್ಚ್ 2002 | 9,382.8 | 8,458.2 | 924.6 | 925.6 | 631.7 | 51.9 |
31 ಮಾರ್ಚ್ 2003 | 10,515.0 | 9,797.9 | 717.1 | 976.8 | 1,064.8 | 87.4 |
31 ಮಾರ್ಚ್ 2004 | 9,761.9 | 9,081.5 | 680.4 | 820.9 | 849.3 | 69.7 |
31 ಮಾರ್ಚ್ 2005 | 12,012.9 | 10,657.4 | 1,355.5 | 1,829.4 | 1,389.3 | 113.9 |
31 ಮಾರ್ಚ್ 2006 | 13,341.1 | 12,127.8 | 1,213.3 | 1,662.1 | 1,240.7 | 101.3 |
31 ಮಾರ್ಚ್ 2007 | 14,494.4 | 13,180.0 | 1,314.4 | 2,284.6 | 2,128.8 | 170.8 |
31 ಮಾರ್ಚ್ 2008 | 15,972.5 | 13,848.0 | 2,124.5 | 2,547.2 | 2,049.4 | 166.1 |
31 ಮಾರ್ಚ್ 2009 | 15,996.3 | 15,092.7 | 903.6 | 1,198.6 | 1,061.5 | 89.1 |
31 ಮಾರ್ಚ್ 2010[61] | 12,707.3 | 12,644.1 | 63.2 | 285.5 | 215.8 | 18.0 |
[59][60] | |||||||
ಪ್ರಯಾಣಿಕರು (ಸಾವಿರಗಳಲ್ಲಿ) |
ಆರ್್ಪಿಕೆ (ದಶಲಕ್ಷ) |
ಎಎಸ್್ಕೆ (ದಶಲಕ್ಷ) |
ಲೋಡ್ ಫ್ಯಾಕ್ಟರ್ (%) |
ಇಳುವರಿ (S¢/km) |
ಘಟಕದ ವೆಚ್ಚ (ಸೆಂಟ್ಸ್/ಎಎಸ್್ಕೆ) |
ಬ್ರೆಕ್ ಇವನ್ ಲೋಡ್ (ಹೊರಬೇಕಾದ ಹೊರೆ ಪ್ರಮಾಣ) ಘಟಕ (%) | |
31 ಮಾರ್ಚ್ 1993 | 8,640 | 37,860.6 | 53,100.4 | 71.3 | 10.5 | - | - |
31 ಮಾರ್ಚ್ 1994 | 9,468 | 42,328.3 | 59,283.3 | 71.4 | 10.1 | - | - |
31 ಮಾರ್ಚ್ 1995 | 10,082 | 45,412.2 | 64,053.9 | 70.9 | 9.9 | - | - |
31 ಮಾರ್ಚ್ 1996 | 11,057 | 50,045.4 | 68,555.3 | 73.0 | 9.4 | - | - |
31 ಮಾರ್ಚ್ 1997 | 12,022 | 54,692.5 | 73,511.4 | 74.4 | 9.0 | - | - |
31 ಮಾರ್ಚ್ 1998 | 11,957 | 54,441.2 | 77,221.6 | 70.5 | 9.5 | - | - |
31 ಮಾರ್ಚ್ 1999 | 12,777 | 60,299.9 | 83,191.7 | 72.5 | 8.6 | - | - |
31 ಮಾರ್ಚ್ 2000 | 13,782 | 65,718.4 | 87,728.3 | 74.9 | 9.1 | - | - |
31 ಮಾರ್ಚ್ 2001 | 15,002 | 71,118.4 | 92,648.0 | 76.8 | 9.4 | 7.5 | 70.2 |
31 ಮಾರ್ಚ್ 2002 | 14,765 | 69,994.5 | 94,558.5 | 74.0 | 9.0 | 6.4 | 71.1 |
31 ಮಾರ್ಚ್ 2003 | 15,326 | 74,183.2 | 99,565.9 | 74.5 | 9.1 | 6.7 | 73.6 |
31 ಮಾರ್ಚ್ 2004 | 13,278 | 64,685.2 | 88,252.7 | 73.3 | 9.2 | 6.7 | 72.8 |
31 ಮಾರ್ಚ್ 2005 | 15,944 | 77,593.7 | 104,662.3 | 74.1 | 10.1 | 7.0 | 69.3 |
31 ಮಾರ್ಚ್ 2006 | 16,995 | 82,741.7 | 109,483.7 | 75.6 | 10.6 | 7.5 | 70.8 |
31 ಮಾರ್ಚ್ 2007 | 18,346 | 89,148.8 | 112,543.8 | 79.2 | 10.9 | 7.9 | 72.5 |
31 ಮಾರ್ಚ್ 2008 | 19,120 | 91,485.2 | 113,919.1 | 80.3 | 12.1 | 8.4 | 69.4 |
31 ಮಾರ್ಚ್ 2009 | 18,293 | 90,128.1 | 117,788.7 | 76.5 | 12.5 | 9.2 | 73.6 |
ಆರಂಭದಲ್ಲಿ ವಿಮಾನದ ಸಿಬ್ಬಂದಿಯ ಸುತ್ತಮುತ್ತಲೇ ಬ್ರ್ಯಾಂಡ್ ಮಾಡುವುದು ಮತ್ತು ಪ್ರಚಾರ ಮಾಡುವ ಪ್ರಯತ್ನ ನಡೆಯಿತು.[62] ಇದಕ್ಕೆ ವಿರುದ್ಧವಾಗಿ ಇತರ ಬಹುತೇಕ ಏರ್ಲೈನ್್ಗಳು ಸಾಮಾನ್ಯವಾಗಿ ವಿಮಾನ ಮತ್ತು ಸೇವೆಗಳನ್ನು ಪ್ರಮುಖವಾಗಿ ಪ್ರಚಾರ ಮಾಡುತ್ತವೆ. ನಿರ್ದಿಷ್ಟವಾಗಿ ಸಿಂಗಪುರ್ ಗರ್ಲ್ಸ್ ಎಂದು ಹೆಸರಾದ ಮೇಲ್ವಿಚಾರಕಿಯರು ವ್ಯಾಪಕವಾಗಿ ಯಶಸ್ವಿಯೂ ಆದರು ಮತ್ತು ಹೆಚ್ಚಿನ ಏರ್ಲೈನ್ಸ್ ಜಾಹಿರಾತುಗಳಲ್ಲಿ ಮತ್ತು ಪ್ರಕಟಣೆಗಳಲ್ಲಿ ಅವರು ಕಾಣಿಸಿಕೊಳ್ಳುವುದು ಸಾಮಾನ್ಯವಾಯಿತು. ಈ ಬ್ರಾಂಡ್ ಮಾಡುವ ಕಾರ್ಯತಂತ್ರವು ಸಿಂಗಪುರ್ ಗರ್ಲ್ಸ್ ಸುತ್ತ ಒಂದು ಪೌರಾಣಿಕ ದಿವ್ಯತೇಜವನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿತ್ತು. ಮತ್ತು ಅವರನ್ನು ಏಶಿಯಾದ ಆತಿಥ್ಯದ ಮತ್ತು ಲಾವಣ್ಯದ ಪ್ರತಿನಿಧಿಯೆಂಬಂತೆ ಚಿತ್ರಿಸುವುದಾಗಿತ್ತು. ಏರ್ಲೈನ್್ದ ತರಬೇತಿ ಕಾರ್ಯಕ್ರಮಗಳಲ್ಲಿ ಕ್ಯಾಬಿನ್ ಮತ್ತು ತಾಂತ್ರಿಕ ಹಾರಾಟ ಸಿಬ್ಬಂದಿಗೆ ಈ ವಿಷಯದ ಕುರಿತು ತಿಳಿಹೇಳಲಾಗುತ್ತಿತ್ತು.
1968ರಲ್ಲಿ ಪಿಯೆರ್ರೆ ಬಲ್ಮೈನ್ ವಿನ್ಯಾಸಗೊಳಿಸಿದ ಮಲಯ ಸರೋಂಗ್ ಕೆಬಯಾ ದ ಒಂದು ರೂಪವಾಗಿರುವ ದಿರಿಸಿನಲ್ಲಿ ಅವರು ಶೋಭಿಸುತ್ತಾರೆ. ಸಿಂಗಪುರ್ ಗರ್ಲ್ಸ್್ಗಳ ಸಮವಸ್ತ್ರ ಬಹುತೇಕ ಬದಲಾಗಿಯೇ ಇಲ್ಲ.[63] ಮೇಲ್ವಿಚಾರಕರು ಹಿಂದೆ ತಿಳಿ-ನೀಲಿ ಬಿಸಿನೆಸ್ ಜಾಕೆಟ್್ಗಳನ್ನು ಮತ್ತು ಬೂದುಬಣ್ಣದ ಟ್ರೌಸರ್್ಗಳನ್ನು ಧರಿಸುತ್ತಿದ್ದರು. 2008ರ ಜೂನ್್ದಿಂದ ಇದನ್ನುಬಲ್ಮೈನ್ ಯುನಿಫಾರ್ಮ್ಸ್್ನ ಕಲಾತ್ಮಕ ನಿರ್ದೇಶಕ ಕ್ರಿಸ್ಟೋಫೆ ಗಲಿಬರ್ಟ್ ಅದನ್ನು ಮರುವಿನ್ಯಾಸಗೊಳಿಸಿದರು. ಹೊಸ ಮೇಲ್ವಿಚಾರಕರ ಸಮವಸ್ತ್ರವು ಏಕ ಎದೆಯ ಕಡು ನೀಲಿ ಬಣ್ಣದ ಸೂಟ್ (ಜಾಕೆಟ್ ಮತ್ತು ಟ್ರೌಸರ್), ಆಕಾಶ ನೀಲಿ ಬಣ್ಣದ ಶರ್ಟ್ ಮತ್ತು ವಿವಿಧ ಬಣ್ಣದ ಪಟ್ಟಿಗಳ ಟೈ ಒಳಗೊಂಡಿದೆ. ಟೈ ಬಣ್ಣವು ಸಿಬ್ಬಂದಿಯ ನಾಲ್ಕು ಶ್ರೇಣಿಗಳನ್ನು ಪ್ರತ್ಯೇಕಿಸುತ್ತದೆ.
ಏರ್ಲೈನ್್ದ ಯಶಸ್ವಿ ಮಾರುಕಟ್ಟೆ ಪ್ರತಿಮೆಯಾಗಿ ಸಿಂಗಪುರ್್ ಗರ್ಲ್ಸ್ ಇದ್ದರೂ ಪುರುಷರಿಗೆ ಮಹಿಳೆಯರನ್ನು ಅಧೀನವಾಗಿರುವಂತೆ ಚಿತ್ರಿಸಿರುವುದಕ್ಕೆ ಟೀಕೆಗಳನ್ನೂ ಕೇಳಬೇಕಾಗಿ ಬಂತು. ಸಾಂಸ್ಕೃತಿಕ ಉಲ್ಲೇಖಗಳು ಗತಕಾಲದ್ದು ಮತ್ತು ಹೆಚ್ಚಿನ ಸಿಂಗಪುರ ಮಹಿಳೆಯರು ಇಂದು ಆಧುನಿಕರು ಮತ್ತು ಸ್ವತಂತ್ರರಾಗಿದ್ದಾರೆ ಎಂದು ಮಹಿಳಾವಾದಿಗಳು ಹೇಳಿದರು.[64]
ಬೇಟಿ ಆಡ್ಸ್ ಜೊತೆಗಿನ ಪ್ರಸ್ತುತ ಜಾಹೀರಾತು ಗುತ್ತಿಗೆಯನ್ನು ರದ್ದುಪಡಿಸುವುದಾಗಿ ಏರ್ಲೈನ್ 9 ಜನವರಿ 2007ರಂದು ಪ್ರಕಟಿಸಿತು. ಇಯಾನ್ ಬೇಟಿ ಪ್ರಾರಂಭಿಸಿ ಆತನೇ ಮುಖ್ಯಸ್ಥನಾಗಿದ್ದ ಸಿಂಗಪುರದ ಈ ಕಂಪನಿಯು ಸಿಂಗಪುರ್ ಗರ್ಲ್ಸ್ ಬ್ರಾಂಡ್ ನೇಮ್್ ಮಾಡಿದ್ದಕ್ಕೆ ಕಾರಣನಾದವನು, 1972ರಿಂದ ಅದರ ಪಾಲುದಾರ.[65] ಸಿಂಗಪುರ್ ಗರ್ಲ್ ಪ್ರತಿಮೆ ಇನ್ನೂ ಹಾಗೇ ಉಳಿದುಬಂದಿದೆ. ಅದರ ಬದಲಿಗೆ ಎಸ್ಐಎ ಈಗ ತನ್ನ ಆಧುನಿಕ ವಿಮಾನ ಪಡೆ ಮತ್ತು ತಾಂತ್ರಿಕತೆಯ ಕಡೆಗೆ ಬೆಳಕು ಚೆಲ್ಲಿ ಜಾಹೀರಾತು ಮತ್ತು ಪ್ರಚಾರ ಮಾಡುತ್ತಿದೆ. 2007 ಏಪ್ರಿಲ್ 16ರಂದು ಏರ್ಲೈನ್ ನ್ಯೂ ಯಾರ್ಕ್ ಮೂಲದ ಜಾಹೀರಾತು ಏಜೆಂಟ್ ಟಿಬಿಡಬ್ಲ್ಯೂಎ\ಯನ್ನು ಏರ್ಲೈನ್್ಗೆ ಸೃಜನಾತ್ಮಕ ಜಾಹೀರಾತು ನಿರ್ವಹಣೆಗೆ ನೇಮಿಸಿತು. ವಾರ್ಷಿಕ S$50 ದಶಲಕ್ಷ ಮೌಲ್ಯದ ಮುಂದಿನ ಐದು ವರ್ಷಗಳಿಗೆ ಈ ಗುತ್ತಿಗೆ ಇತ್ತು. ತಾವು ಹೊಸದಾಗಿ ಬ್ರಾಂಡ್ ಮಾಡುವ ಪ್ರಚಾರವನ್ನು "ಎಷ್ಟು ಬೇಗ ಕಾರ್ಯಸಾಧುವಾದ ಅವಕಾಶ ಲಭಿಸುವುದೋ ಆಗ" ಪ್ರಾರಂಭಿಸುವುದಾಗಿ ಎಸ್ಐಎದ ಸಾರ್ವಜನಿಕ ವ್ಯವಹಾರಗಳ ವೈಸ್- ಪ್ರೆಸಿಡೆಂಟ್ ಸ್ಟೀಫನ್ ಫೋರ್್ಶೋ ಹೇಳಿದ್ದಾರೆ. ಜಾಹೀರಾತು ಏಜೆನ್ಸಿಯ ಈ ಬದಲಾವಣೆಯು ಎಸ್ಐಎದ ಮಾಧ್ಯಮ ಏಜೆನ್ಸಿಯನ್ನು ಖರೀದಿಸುವುದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಸದ್ಯ ಅದು ಎಂಇಸಿ[66].
ಸಿಂಗಪುರ್ ಏರ್ಲೈನ್ಸ್್ನ ವಿಶಿಷ್ಟ ಬಣ್ಣವು ಟೇಲ್್ಫಿನ್ ಮೇಲಿನ "ಹಕ್ಕಿ" (ಇದು ಸಿಲ್ವರ್ ಕ್ರಿಸ್ ಎಂದೂ ಪ್ರಸಿದ್ಧ) ಲೋಗೋವನ್ನು ಒಳಗೊಂಡಿದೆ. ಸಿಂಗಪುರ್ ಏರ್ಲೈನ್ಸ್ ಆರಂಭವಾದ ದಿನದಿಂದಲೂ ಅದನ್ನು ಬದಲಿಸಿಲ್ಲ. 1972ರಿಂದ ಬಳಸುತ್ತ ಬಂದ ಲೋಗೋ ರೀತಿ ಮತ್ತು ಪಟ್ಟಿಗಳನ್ನು 1988ರಲ್ಲಿ ಬದಲಿಸಲಾಗಿದ್ದು ಅದನ್ನೇ ಇಂದಿಗೂ ಬಳಸಲಾಗುತ್ತಿದೆ. ವಿಶಿಷ್ಟ ಬಣ್ಣದಲ್ಲೂ ಇತ್ತೀಚೆಗೆ ಬದಲಾವಣೆ ಮಾಡಲಾಗಿದೆ. "ಸಿಂಗಪುರ್ ಏರ್ಲೈನ್ಸ್" ಲೋಗೋ ರೀತಿಯದು ದೊಡ್ಡದಾಗಿ ಮುಂಭಾಗಕ್ಕೆ ಚಲಿಸುವಂತೆ ರೂಪಿಸಲಾಗಿದೆ, ಅದೇ ರೀತಿಯಲ್ಲಿ ವಿಶಿಷ್ಟ ಬಣ್ಣ ವೈವಿಧ್ಯವನ್ನು ಏರ್್ ಬಸ್ ಎ380ದಲ್ಲಿ ಬಳಸಲಾಗಿದೆ. ಆದರೆ ಪಟ್ಟಿಗಳು ಮತ್ತು "ಹಕ್ಕಿ"ಯನ್ನು ಅದೇ ರೀತಿ ಉಳಿಸಿಕೊಳ್ಳಲಾಗಿದೆ.
ಸಿಂಗಪುರದಲ್ಲಿಯ ತನ್ನ ಮೂಲ ಕೇಂದ್ರದಿಂದ ಸಿಂಗಪುರ್ ಏರ್ಲೈನ್ಸ್ ಐದು ಖಂಡಗಳ 35 ದೇಶಗಳ 61 ಸ್ಥಳಗಳಿಗೆ ಹಾರಾಟ ನಡೆಸುತ್ತಿದೆ. ಇದು ಆಗ್ನೇಯ ಏಶಿಯಾದಲ್ಲಿ ಬಲವಾದ ಅಸ್ತಿತ್ವವನ್ನು ಹೊಂದಿದೆ. ತನ್ನ ಅಂಗಸಂಸ್ಥೆಯಾದ ಸಿಲ್ಕ್್ಏರ್ ಮೂಲಕ ಇತರ ಯಾವುದೇ ಆಗ್ನೇಯ ಏಶಿಯಾದ ಏರ್ಲೈನ್್ಗಳಿಗಿಂತ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಿಂಗಪುರವನ್ನು ಜೋಡಿಸುತ್ತದೆ.
ಕಾಂಗರೂ ಮಾರ್ಗದಲ್ಲಿ ೀ ಏರ್ಲೈನ್ ಮಹತ್ವದ ಪಾತ್ರವನ್ನು ಹೊಂದಿದೆ. 2008ರ ಮಾರ್ಚ್ ತಿಂಗಳ ಅಂತ್ಯದ ಲೆಕ್ಕಾಚಾರದಂತೆ ಆಸ್ಟ್ರೇಲಿಯಾಕ್ಕೆ ಬರುವ ಮತ್ತು ಹೊರಹೋಗುವ ಶೇ.11ರಷ್ಟು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಇದು ಸಾಗಿಸಿದೆ.[67]
ಸಿಂಗಪುರ್ ಮತ್ತು ಥೈಲ್ಯಾಂಡ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ನಡುವಿನ ಮುಕ್ತ ದ್ವಿಪಕ್ಷೀಯ ವಿಮಾನಯಾನ ಒಪ್ಪಂದದ ಲಾಭವನ್ನು ಎಸ್ಐಎ ಪಡೆದುಕೊಂಡಿದೆ. ಬ್ಯಾಂಕಾಕ್ ಮತ್ತು ದುಬೈನಿಂದ ಹೆಚ್ಚು ಸಂಪರ್ಕಗಳನ್ನು ಹೊರಗಡೆ ಒದಗಿಸುವುದು ಇದಕ್ಕೆ ಸಾಧ್ಯವಾಗಿದೆ. ಉದಾಹರಣೆಗೆ 2005ರ ಸೆಪ್ಟೆಂಬರ್ 1ರಂದು ಅದು ಬ್ಯಾಂಕಾಕ್ ಮತ್ತು ಟೋಕಿಯೋ ನಡುವೆ ವಾರಕ್ಕೆ ಆರು ಬಾರಿ ಹಾರಾಟವನ್ನು ನಡೆಸಿತು. ಚೀನ ಮತ್ತು ಭಾರತಗಳು ಪ್ರಮುಖ ಮಾರುಕಟ್ಟೆಯಾಗಿದ್ದ ಇವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಬಲವನ್ನು ಅದರ ಬೆಳವಣಿಗೆಗೆ ತುಂಬಿವೆ.[ಸೂಕ್ತ ಉಲ್ಲೇಖನ ಬೇಕು]
ಏರ್ಲೈನ್್ ಬಲವು ರಕ್ಷಣಾತ್ಮಕ ಕ್ರಮಗಳ ಕಾರಣದಿಂದ ಅದನ್ನು ಪ್ರಮುಖ ವಿದೇಶೀ ಮಾರುಕಟ್ಟೆಯಿಂದ ಹೊರಗಿಡುವುದಕ್ಕೆ ಕಾರಣವಾಗಿದೆ. ವಿಶೇಷವಾಗಿ ಆಸ್ಟ್ರೇಲಿಯಾದಿಂದ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಅಟ್ಲಾಂಟಿಕ್ ಸಾಗರದಾಚೆಯ ಮಾಗ್ರದಲ್ಲಿ ಅವಕಾಶವನ್ನು ಪಡೆಯುವ ಪ್ರಯತ್ನವು ಯಶಸ್ವಿಯಾಗಲಿಲ್ಲ. ಆಸ್ಟ್ರೇಲಿಯಾದಿಂದ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಅನುಮತಿ ನೀಡುವ ನಿರ್ಧಾರವನ್ನು ಆಸ್ಟ್ರೇಲಿಯಾದ ಅಧಿಕಾರಿಗಳು ಬದಲಿಸಿದರು.[68] ತಾನು ನಾಟಕೀಯವಾಗಿ ಕೆನಡಾಕ್ಕೆ ಸೇವೆಯನ್ನು ವಿಸ್ತರಿಸುವುದಾಗಿ ಮತ್ತು ವ್ಯಾಂಕೋವರ್್ಅನ್ನು ಉತ್ತರ ಅಮೆರಿಕದ ತನ್ನ ಕೇಂದ್ರವನ್ನಾಗಿ ಮಾಡಿಕೊಳ್ಳುವ ಉದ್ದೇಶವಿದೆ ಎಂದು ಎಸ್ಐಎ ಹೇಳಿತು. ಆದರೆ, ಕೆನಡಾದ ರಕ್ಷಣಾತ್ಮಕ ನೀತಿಗಳಿಂದಾಗಿ ಹಾಗೆ ಮಾಡುವುದು ಸಾಧ್ಯವಾಗಲಿಲ್ಲ ಅದು ದೂರಿತು.[69]
ಕಡಿಮೆ ವೆಚ್ಚದ ಏರ್ಲೈನ್ ಏರ್್ಏಶಿಯಾ ಮಲೇಶಿಯಾದಲ್ಲಿ ನೆಲೆಯನ್ನು ಹೊಂದಿದ್ದು, ಸಿಂಗಪುರ್ ಏರ್ಲೈನ್ಸ್ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿತು. ಸಿಂಗಪುರದ ಸರ್ಕಾರ ಸಿಂಗಪುರದ ಮಾರುಕಟ್ಟೆಯಿಂದ ತನ್ನನ್ನು ಹೊರಗಿಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿತು. ಹೀಗಿದ್ದರೂ ಸಿಂಗಪುರ ಏರ್ಲೈನ್ಸ್ ಏರ್್ಏಶಿಯಾದ ಪ್ರವೇಶಕ್ಕೆ ಅಡ್ಡಿಪಡಿಸುತ್ತದೆ ಎಂಬ ಬಗ್ಗೆ ಅಧಿಕೃತವಾಗಿ ಆಕ್ಷೇಪವನ್ನು ಸಲ್ಲಿಸಲಿಲ್ಲ. ಇದಕ್ಕೆ ಬದಲಾಗಿ ಸಿಂಗಪುರ್ ಏರ್ಲೈನ್ಸ್ ಸಿಂಗಪುರ್-ಕೌಲಾಲಂಪುರ ಮಾರ್ಗವನ್ನು ಮುಕ್ತಗೊಳಿಸುವುದನ್ನು ಸ್ವಾಗತಿಸಿತು[70][71]. ಅದು ಮಲೇಶಿಯನ್ ಏರ್ಲೈನ್ಸ್[72] ಜೊತೆಯಲ್ಲಿ ಆ ಮಾರ್ಗದಲ್ಲಿ ಮೂರು ದಶಕಗಳ[73] ವರೆಗೆ ಪ್ರಭುತ್ವ ಸಾಧಿಸಿತ್ತು. ಆಗ ಕಾರ್ಯಾಚರಣೆಯಲ್ಲಿದ್ದ 200ಕ್ಕೂ ಅಧಿಕ ವಿಮಾನ ಹಾರಾಟಗಳಲ್ಲಿ ಸುಮಾರು ಶೇ.85ರಷ್ಟನ್ನು ಇವು ಆಕ್ರಮಿಸಿದ್ದವು.[74] ಎಲ್್ಸಿಸಿಗೆ ಅತ್ಯಂತ ಆಕರ್ಷಕ ಮಾರ್ಗ ಏಕೆಂದರೆ ಅದು ದೂರ ಕಿರಿದು ಮತ್ತು ಅತ್ಯಂತ ದಟ್ಟಣೆಯ ಮಾರ್ಗ, ಏಶಿಯಾದಲ್ಲೇ ಅತ್ಯಂತ ಚಟುವಟಿಕೆಯಲ್ಲಿ ನಾಲ್ಕನೆಯದು.[75] 2008ರ ಫೆಬ್ರವರಿ 1ರಿಂದ ಭಾಗಶಃ ಮುಕ್ತವೆಂದು ಆಯಿತು. ಎಲ್್ಸಿಸಿಗೆ ಎರಡೂ ದೇಶಗಳಿಂದ ದಿನಕ್ಕೆ ಎರಡು ಹೆಚ್ಚುವರಿ ಹಾರಾಟಕ್ಕೆ ಅವಕಾಶ ನೀಡಲಾಯಿತು.[76][77] ಇದರಿಂದ ಆ ಮಾರ್ಗದಲ್ಲಿ ಸಿಂಗಪುರ ಏರ್ಲೈನ್ಸ್ ಸಾಮರ್ಥ್ಯ ಶೇ.46.7ಕ್ಕೆ ಕುಸಿಯಿತು. ಮಲೇಶಿಯನ್ ಏರ್ಲೈನ್ಸ್ ಸಾಮರ್ಥ್ಯ 25.3ಕ್ಕೆ ಕುಸಿಯಿತು. ಆ ಮಾರ್ಗದಲ್ಲಿ ಅನುಮತಿ ಪಡೆದ ಮೂರು ಎಲ್್ಸಿಸಿ ಪಾಲು 17.3ಕ್ಕೆ ಹೆಚ್ಚಿತು. ಉಳಿದವನ್ನು ಇತರ ಮೂರು ಏರ್ಲೈನ್್ಗಳು ಹಂಚಿಕೊಂಡವು. ಇದು 2009ರ ಫೆಬ್ರವರಿ 22ರ ವರೆಗಿನ ಲೆಕ್ಕ.[78][79] ಸಿಂಗಪುರ್ ಏರ್ಲೈನ್ಸ್ ಸಾಮರ್ಥ್ಯದ ಪಾಲು 2008 ಡಿಸೆಂಬರ್ 1ರಿಂದ ಮತ್ತೆ ಕುಸಿಯುವದು, ಏಕೆಂದರೆ ಉದಾರೀಕರಣಕ್ಕೆ ಮಾರ್ಗವನ್ನು ಸಂಪೂರ್ಣವಾಗಿ ತೆರೆಯಲಾಗುತ್ತದೆ ಮತ್ತು ತನ್ನ ಸಾಮರ್ಥ್ಯವನ್ನು ಸಹೋದರಿ ಏರ್ಲೈನ್ ಸಿಲ್ಕ್್ಏರ್ ಜೊತೆ ಹಂಚಿಕೊಳ್ಳುವ ಯೋಜನೆಯನ್ನು ಅದು ಪ್ರಕಟಿಸಿದೆ.[79] ಉದಾರೀಕರಣಕ್ಕೆ ಪ್ರಮುಖ ವಿರೋಧಿಯಾದ[80], ಮತ್ತು ಇರದಿಂದ ಹೆಚ್ಚಿನದನ್ನು ಕಳೆದುಕೊಳ್ಳಲಿದ್ದ ಮಲೇಶಿಯನ್ ಏರ್ಲೈನ್ ಮಾಗ್ರದಲ್ಲಿ ಸಿಂಗಪುರ್ ಏರ್ಲೈನ್ಸ್ ಮತ್ತು ಸಿಲ್ಕ್ ಏರ್ ಜೊತೆ ಸಂಕೇತ ಹಂಚಿಕೆಯನ್ನು ಹೊಂದಿರುವುದು ಮುಂದುವರಿಯುತ್ತದೆ.[81]
ಸ್ಟಾರ್ ಅಲಿಯನ್ಸ್ ಸದಸ್ಯ ಏರ್ಲೈನ್ಸ್ ಜೊತೆಗೆ ಅಷ್ಟೇ ಅಲ್ಲದೆ, ಸಿಂಗಪುರ್ ಏರ್ಲೈನ್ಸ್ ಈ ಮುಂದಿನ ಏರ್ಲೈನ್ಸ್ ಜೊತೆಗೂ ಸಂಕೇತಹಂಚಿಕೆ ಮಾಡಿಕೊಂಡಿದೆ[82]:
ಸಿಂಗಪುರ್ ಏರ್ಲೈನ್ಸ್ ಐದು ವಿಮಾನ ಕುಟುಂಬಗಳಿಂದ ಅಗಲ-ಶರೀರದ ವಿಮಾನಗಳ ಶ್ರೇಣಿಯನ್ನು ಹೊಂದಿದ್ದು ಅವುಗಳ ಮೂಲಕ ಕಾರ್ಯಾಚರಣೆಯನ್ನು ನಡೆಸುತ್ತದೆ: ಏರ್್ಬಸ್ ಎ330, ಏರ್್ಬಸ್ ಎ340, ಏರ್್ಬಸ್ ಎ380, ಬೋಯಿಂಗ್ 747 ಮತ್ತು ಬೋಯಿಂಗ್ 777. ಯುವ ಶ್ರೇಣಿಯನ್ನು ಕಾಯ್ದುಕೊಳ್ಳಬೇಕೆಂಬ ತನ್ನ ನೀತಿಗೆ ಅನುಗುಣವಾಗಿ ಅದರ ವಿಮಾನಗಳ ಸರಾಸರಿ ವಯಸ್ಸು 2010ರ ಜನವರಿ 24ಕ್ಕೆ 6 ವರ್ಷ 7 ತಿಂಗಳುಗಳು, ಅದು ತನ್ನ ಶ್ರೇಣಿಯನ್ನು ಮೇಲಿಂದಮೇಲೆ ಪರಿಷ್ಕರಿಸುತ್ತಲೇ ಇರುತ್ತದೆ.[60] ಸಿಂಗಪುರ್ ಏರ್ಲೈನ್್ದ ಬೋಯಿಂಗ್ ಕಸ್ಟಮರ್ ಕೋಡ್ 7x7-x12.
ವರ್ಷಗಳ ಹಿಂದೆ, ಏರ್ಲೈನ್ ತನ್ನ ವಿಮಾನ ಶ್ರೇಣಿಯನ್ನು ವಿಮಾನಗಳ ಮಾದರಿಗೆ ಅನುಗುಣವಾಗಿ ಹೆಸರಿಸಿತು. ಬೋಯಿಂಗ್ 747-400ಗಳನ್ನು "ಮೆಗಾಟಾಪ್" ಎಂದು, ಬೋಯಿಂಗ್ 777ಗಳನ್ನು "ಜುಬಿಲೀ"ಗಳೆಂದು ಮತ್ತು ಎರ್್ಬಸ್ ಎ340-500ಗಳನ್ನು "ಲೀಡರ್್ಶಿಪ್" ಎಂದು ಕರೆಯಿತು. ಏರ್ಲೈನ್ ಹಿಂದೆ ಹಾರಿಸುತ್ತಿದ್ದ ಏರ್ಲೈನರ್್ಗಳಿಗೆ ಹೆಸರುಗಳು: 8 ಏರ್್ಬಸ್ ಎ300ಗಳಿಗೆ "ಸುಪರ್್ಬಸ್", 17 ಏರ್್ಬಸ್ ಎ340-300ಗಳಿಗೆ "ಸೆಲೆಸ್ಟಾರ್", 23 ಬೋಯಿಂಗ್ 747-200ಗಳಿಗೆ "ಸುಪರ್ ಬಿ", 14 ಬೋಯಿಂಗ್ 747-300ಗಳಿಗೆ "ಬಿಗ್ ಟಾಪ್".[83] 2000ನೆ ದಶಕದ ಮಧ್ಯದಲ್ಲಿ ಚ್ಯೂ ಚೂನ್ ಸೆಂಗ್ ಸಿಇಓ ಆಗಿದ್ದಾಗ ಈ ಹೆಸರುಗಳಲ್ಲಿ ಹಲವನ್ನು ಅಧಿಕೃತವಾಗಿ ಹಿಂದಕ್ಕೆ ಪಡೆಯಲಾಯಿತು. 2007ರಲ್ಲಿ ಈ ಶ್ರೇಣಿಗೆ ಸೇರಿದ ಹೊಸದಾದ ಎ380ಗಳಿಗೆ ಯಾವುದೇ ಅಧಿಕೃತ ಹೆಸರನ್ನು ಇದುವರೆಗೆ ನೀಡಿಲ್ಲ..
ಸಿಂಗಪುರ್ ಏರ್ಲೈನ್ಸ್ ಯಾವುದೇ ವಿಮಾನಕ್ಕೆ ಬಾಲದ ವಿಶಿಷ್ಟ ವರ್ಣವಿಲ್ಲದೆ ಯಾವತ್ತೂ ಬಣ್ಣ ಬಳಿದದ್ದು ಇಲ್ಲವೇ ಇಲ್ಲ. ಟ್ರೋಪಿಕಲ್ ಮೆಗಾಟಾಪ್ ಮತ್ತು ಸ್ಟಾರ್ ಅಲಾಯನ್ಸ್್ಗಳಿಗೆ ವಿಶೇಷ ಬಣ್ಣಗಳಿದ್ದರೂ ಲಂಬಾಕಾರದ ಸ್ಟಬಿಲೈಜರ್್ಗಳ ಮೇಲೆ ಸಹಿ ರೂಪದ ಹಕ್ಕಿಯನ್ನು ಇನ್ನೂ ಉಳಿಸಿಕೊಳ್ಳಲಾಗಿದೆ.
ದಿ ಸಿಂಗಪುರ್ ಏರ್ಲೈನ್ಸ್ ವಿಮಾನ ಶ್ರೇಣಿಯು ಈ ಮುಂದಿನ ವಿಮಾನಗಳನ್ನು ಹೊಂದಿದೆ:[84]
ಏರ್್ಕ್ರಾಫ್ಟ್ | ಒಟ್ಟು | ಬೇಡಿಕೆಗಳು ಆಯ್ಕೆಗಳು |
ಪ್ರಯಾಣಿಕರು | ಎಂಜಿನ್್ಗಳು | ಟಿಪ್ಪಣಿಗಳು | ||||
---|---|---|---|---|---|---|---|---|---|
<ಎಬಿಬಿಆರ್ ಟೈಟಲ್="ಸೂಟ್"> ಆರ್</ಎಬಿಬಿಆರ್> | <ಎಬಿಬಿಆರ್ ಟೈಟಲ್="ಫಸ್ಟ್ ಕ್ಲಾಸ್"> ಪಿ</ಎಬಿಬಿಆರ್> | <ಎಬಿಬಿಆರ್ ಟೈಟಲ್="ಬಿಸಿನೆಸ್ ಕ್ಲಾಸ್"> ಜೆ</ಎಬಿಬಿಆರ್> | <ಎಬಿಬಿಆರ್ ಟೈಟಲ್="ಇಕಾನಮಿ ಕ್ಲಾಸ್">ವೈ</ಎಬಿಬಿಆರ್> | ಒಟ್ಟು | |||||
ಏರ್್ಬಸ್ ಎ330-300 | 17 | 2 | — | — | 30 | 255 | 285 | ರೋಲ್ಸ್-ರೊಯ್ಸ್ ಟ್ರೆಂಟ್ 700 | |
ಏರ್್ಬಸ್ ಎ340-500 | 5 | — | — | 100 | 0 | 100 | ರೋಲ್ಸ್ ರೊಯ್ಸ್ ಟ್ರೆಂಟ್ 553 | ||
ಏರ್್ಬಸ್ ಎ350-900 | 20 | 2014-2015 | ಟಿಬಿಎ | ||||||
ಏರ್್ಬಸ್ ಎ380-800 | 11 | 8/6 | 12 | — | 60 | 399 | 471 | ರೋಲ್ಸ್ ರೊಯ್ಸ್ ಟ್ರೆಂಟ್ 900 | |
ಬೋಯಿಂಗ್ 747-400 | 7 | — | 12 | 50 | 313 | 375 | ಪಿಡ್ಲ್ಯೂ4056 | 9ವಿಎಸ್್ಪಿಪಿ-ಎಸ್್ಪಿಪಿ ಪೇಂಟೆಡ್ ಇನ್ಸ್ಟಾರ್ ಅಲೈಯನ್ಸ್ ಲೈವ್ಲಿ | |
ಬೋಯಿಂಗ್ 777-200ಇಆರ್ | 36 | — — — |
12 0 0 |
42 30 30 |
234 255 293 |
288 285 323 |
ರೋಲ್ಸ್ ರೊಯ್ಸ್ ಟ್ರೆಂಟ್ 892 | 9ವಿ-ಎಸ್ಆರ್್ಇ ಪೇಂಟೆಡ್ ಇನ್ ಸ್ಟಾರ್ ಅಲೈಯನ್ಸ್ ಲೈವ್ಲಿ. | |
ಬೋಯಿಂಗ್ 777-300 | 12 | — | 18 | 49 | 265 | 332 | ರೋಲ್ಸ್ ರೊಯ್ಸ್ ಟ್ರೆಂಟ್ 892 | ||
ಬೋಯಿಂಗ್ 777-300ಇಆರ್ | 19 | 18(ಆಪ್ಶನ್) | — | 8 | 42 | 228 | 278 | ಜಿಇ90-115ಬಿ | |
ಬೋಯಿಂಗ್ 787-9 | 20 | ಟಿಬಿಎ | ರೋಲ್ಸ್ ರೊಯ್ಸ್ ಟ್ರೆಂಟ್ 1000 | ||||||
ಅದು ಒದಗಿಸುವ ಸೇವೆಗಾಗಿ ಸಿಂಗಪುರ್ ಏರ್ಲೈನ್ಸ್ ಅನೇಕ ಪ್ರಶಸ್ತಿಗಳನ್ನು ಸ್ವೀಕರಿಸಿದೆ. ತೀರ ಇತ್ತೀಚಿನ ಪ್ರಶಸ್ತಿಯೆಂದರೆ, 2010ರ ವಿಶ್ವ ಏರ್ಲೈನ್ಸ್ ಪ್ರಶಸ್ತಿಗಳಲ್ಲಿ ಪಡೆದ ವರ್ಲ್ಡ್ಸ್ ಬೆಸ್ಟ್ ಕ್ಯಾಬಿನ್ ಸ್ಟಾಫ್ ಪ್ರಶಸ್ತಿ.[85] "ಜಗತ್ತಿನ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಏರ್ಲೈನ್" ಎಂದು ಅದು ಹೇಳಿಕೊಳ್ಳುತ್ತದೆ.[86] 2007ರ ನವೆಂಬರ್್ನಲ್ಲಿ ಯು.ಎಸ್. ಪೋಲ್ಸ್ಚರ್ಸ್ ನಡೆಸಿದ 29ನೆ ವಾರ್ಷಿಕ ಝಗತ್ ಸರ್ವೆಯಲ್ಲಿ[87] ಎಸ್ಐಎ ಪ್ರೀಮಿಯಂ ಮತ್ತು ಇಕಾನಮಿ ಕ್ಲಾಸ್ ಎರಡರಲ್ಲೂ ಪ್ರಥಮ ಸ್ಥಾನದಲ್ಲಿದೆ. ಹೆಚ್ಚುವರಿಯಾಗಿ ಅದರ ವೆಬ್್ಸೈಟ್, ಅದರಲ್ಲಿ ದೊರೆಯುವ ನೆಮ್ಮದಿ, ಸೇವೆ ಮತ್ತು ಎಲ್ಲ ವರ್ಗಗಳಲ್ಲಿಯ ಆಹಾರಕ್ಕಾಗಿಯೂ ಮೊದಲ ಸ್ಥಾನದಲ್ಲಿದೆ.[88]
ಸಿಂಗಪುರ್ ಏರ್ಲೈನ್ಸ್ 2006ರ ಅಕ್ಟೋಬರ್ 17ರಂದು ತನ್ನ ಕ್ಯಾಬಿನ್ ಮತ್ತು ವಿಮಾನದೊಳಗಿನ ಸೇವೆಗಳನ್ನು ಅತ್ಯಂತ ಉನ್ನತ ದರ್ಜೆಗೆ ಏರಿಸಿ ಪ್ರಕಟಣೆಯನ್ನು ಹೊರಡಿಸಿತು.[89] ಅದರ 8 ವರ್ಷಗಳಲ್ಲಿ ಮೊದಲ ಪ್ರಮುಖ ಕೂಲಂಕಷ ಪ್ರಯತ್ನ ಇದು. ಏರ್ಲೈನ್ ಗೆ ಇದರಿಂದ ತಗುಲಿದ ವೆಚ್ಚ ಸುಮಾರು S$570 ದಶಲಕ್ಷ.[90] ತನ್ನ ಏರ್್ಬಸ್ ಎ380-800ಅನ್ನು 2006ರಲ್ಲಿ ಸೇವೆಗೆ ತೊಡಗಿಸಲು ಆರಂಭದಲ್ಲಿ ಯೋಜಿಸಿತ್ತು. ಅದರ ಬಳಿಕ ಬೋಯಿಂಗ್ 777-300ಇಆರ್. ಆದರೆ ಮೊದಲ ಎ380-೮೦೦ ಪೂರೈಕೆ ಮುಂದಕ್ಕೆ ಹೋಗಿದ್ದರಿಂದ ಬೋಯಿಂಗ್ 777-300ಇಆರ್ ಜೊತೆಯಲ್ಲೇ ಅದನ್ನೂ 5 ಡಿಸೆಂಬರ್ 2006ರಂದು ಸಿಂಗಪುರ ಮತ್ತು ಪ್ಯಾರಿಸ್ ನಡುವೆ ಹಾರಿಸಲಾಯಿತು.[91]
ಸಿಂಗಪುರ್ ಏರ್ಲೈನ್ಸ್ ಸೂಟ್ ಗಳು ಎರ್್ಬಸ್ ಎ380ದಲ್ಲಿ ಮಾತ್ರ ಲಭ್ಯವಿರುವ ಒಂದು ವರ್ಗ. ಎ380 ಹಾಂಗ್ ಕಾಂಗ್, ಲಂಡನ್, ಮೆಲ್ಬೋರ್ನ್, ಪ್ಯಾರಿಸ್, ಸಿಡ್ನಿ, ಟೋಕಿಯೋ ಮತ್ತು ಜೂರಿಚ್್ಗಳಿಗೆ ಹಾರುತ್ತವೆ.
ಈ ಉತ್ಪನ್ನವನ್ನು ವಿನ್ಯಾಸಗೊಳಿಸಿದ್ದು ಫ್ರೆಂಚ್ ಐಶಾರಾಮಿ ಹಡಗಿನ ಒಳಾಂಗಣ ವಿನ್ಯಾಸಕಾರ ಜೀನ್-ಜಾಕ್ವೆಸ್ ಕೋಸ್ಟೆ ಮತ್ತು ಇದರಲ್ಲಿ ಪ್ರತ್ಯೇಕ ಕಂಪಾರ್ಟ್್ಮೆಂಟುಗಳು ಇವೆ. ಇವುಗಳ ಗೋಡೆ ಮತ್ತು ಬಾಗಿಲುಗಳ ಎತ್ತರ 1.5 ಮೀ. ಚರ್ಮದ ಸೀಟುಗಳನ್ನು ಉಬ್ಬಿರುವಂತೆ ಮಾಡಿದವರು ಇಟಲಿಯ ಪೋಲ್ಟ್ರೋನಾ ಫ್ರೌ.ಟೆಂಪ್ಲೇಟು:In to cm ಅವು ಅಗಲವಾಗಿವೆ. (ಕೈಗಳನ್ನು ಇರಿಸಿಕೊಳ್ಳುವ ಆರ್ಮ್ ರೆಸ್ಟ್ ಮೇಲಿದ್ದಾಗಟೆಂಪ್ಲೇಟು:In to cm ಮತ್ತು ಆರ್ಮ್ ರೆಸ್ಟ್ ಕೆಳಗಿದ್ದಾಗ ಅಗಲವಾಗಿರುವುದು) ಮತ್ತು ಒಂದುಟೆಂಪ್ಲೇಟು:In to cm ಎಲ್್ಸಿಡಿ ಟೀವಿ ಮುಂದಿನ ಗೋಡೆಯ ಮೇಲೆ. ಟೆಂಪ್ಲೇಟು:In to cm ಬೆಡ್ ಸೀಟಿನಿಂದ ಪ್ರತ್ಯೇಕವಾಗಿದೆ ಮತ್ತು ಹಿಂದಿನ ಗೋಡೆಯಿಂದ ಅದನ್ನು ಮಡಚಿ ತೆಗೆಯಬಹುದು, ಸೂಟ್ ಒಳಗಿನ ಇತರ ಅನೇಕ ಭಾಗಗಳೊಂದಿಗೆ ಅದನ್ನು ಗಾದಿಯನ್ನು ಹಾಕುವುದಕ್ಕೆ ತಗ್ಗಿಸಬಹುದು. ಬಾಗಿಲುಗಳಿಗೆ ಕಿಟಕಿಗಳಿವೆ ಮತ್ತು ಖಾಸಗಿತನಕ್ಕಾಗಿ ಅವನ್ನು ಮುಚ್ಚಬಹುದು. ಮಧ್ಯದಲ್ಲಿರುವ ಸೂಟ್ ್ಗಳಲ್ಲಿ ಡಬ್ಬಲ್ ಬೆಡ್ ರೂಪಿಸುವ ಅವಕಾಶವಿದೆ. ಅವರ ನಡುವಿನ ಖಾಸಗಿ ಮರೆಯು ಛಾವಣಿಯ ವರೆಗೂ ತಲುಪಿರುತ್ತದೆ.
thumb|ಬೋಯಿಂಗ್ 747-300 ಇಆರ್ ಫಸ್ಟ್ ಕ್ಲಾಸ್
ಮೊದಲ ದರ್ಜೆ ಕ್ಯಾಬಿನ್್ನಲ್ಲಿ ನಾಲ್ಕು ವೈವಿಧ್ಯಗಳಿವೆ. ಹೀಗಿದ್ದರೂ ಸಿಂಗಪುರ್ ಏರ್ಲೈನ್ಸ್ ಸೂಟ್ಸ್ ಕ್ಲಾಸ್ ಸಿಂಗಪುರ್ ಏರ್ಲೈನ್ಸ್ ರೂಪಿಸಿದ್ದು "ಮೊದಲ ದರ್ಜೆಯ ಆಚೆಯದು"[92] ಮತ್ತು ಅದಕ್ಕೆ ವಿವಿಧ ದರ ಸಂಕೇತಗಳಿವೆ (ಆರ್) (ಮೇಲೆ ನೋಡಿ)
2006ರ ಅಕ್ಟೋಬರ್ 17ರಂದು ಪರಿಚಯಿಸಿದ "ಹೊಸ" ಪ್ರಥಮ ದರ್ಜೆ ಸಿಂಗಪುರ್ ಏರ್ಲೈನ್ಸ್್ನ ಹೊಸ ಬೋಯಿಂಗ್ 777-300ಇಆರ್ ವಿಮಾನದಲ್ಲಿ ಮಾತ್ರ ಒದಗಿಸಿದ್ದು. ಇದನ್ನು ವಿನ್ಯಾಸಗೊಳಿಸಿದ್ದು ಜೇಮ್ಸ್ ಪಾರ್ಕ್ ಅಸೋಸಿಯೇಟ್ಸ್, ಇದರಲ್ಲಿಟೆಂಪ್ಲೇಟು:In to cm ಅಗಲವಾದ ಸೀಟು ಚರ್ಮ ಮತ್ತು ಮಹಾಗನಿ ಮರ ಬಳಸಿ ಮಾಡಿದ್ದು ಮತ್ತು ಒಂದುಟೆಂಪ್ಲೇಟು:In to cm ಎಲ್್ಸಿಡಿ ಸ್ಕ್ರೀನ್ ಇರುತ್ತದೆ. ಸೀಟುಗಳನ್ನು ಸಪಾಟಾಗಿ ಮಾಡಿ ಹಾಸುಗೆಯನ್ನಾಗಿ ಮಾಡಬಹುದು. ಮತ್ತು ಅದನ್ನು 1-2-1 ವಿನ್ಯಾಸದಲ್ಲಿ ಅಳವಡಿಸಲಾಗಿದೆ. "ಹೊಸ" ಪ್ರಥಮ ದರ್ಜೆಯನ್ನು ನಿಧಾನವಾಗಿ ಬೋಯಿಂಗ್ 777-300 ವಿಮಾನ ಶ್ರೇಣಿಯಲ್ಲಿ ಪರಿಚಯಿಸಲಾಯಿತು. ಏಕೆಂದರೆ ಅವೆಲ್ಲ ಕ್ಯಾಬಿನ್ ಮರುಜೋಡಣೆಗೆ ಒಳಗಾಗಬೇಕಿತ್ತು. 2009ರ ಜುಲೈ 22ರಂದು ಕ್ಯಾಬಿನನ್ನು ನಿಧಾನವಾಗಿ ಸಿಂಗಪುರದಿಂದ ಸಿಡ್ನಿಗೆ ಹೋಗುವ ಎಲ್ಲ ಬೋಯಿಂಗ್ 777-300 ವಿಮಾನ ಶ್ರೇಣಿಗೆ ಪರಿಚಯಿಸಲಾಯಿತು. ಸೀಟುಗಳ ವಿನ್ಯಾಸವು 1-2-1ರಂತೆ ಇತ್ತು.
ಬೋಯಿಂಗ್ 747-400 ವಿಮಾನದ ಪ್ರಥಮ ದರ್ಜೆಯಲ್ಲಿ ಸ್ಕೈಸೂಟ್ ್ಗಳು ಇವೆ. ಇಲ್ಲಿಯ ಸೀಟುಗಳುಟೆಂಪ್ಲೇಟು:In to cm ಅಗಲವಾಗಿರುತ್ತವೆ ಮತ್ತು ಅವನ್ನು ಚಾಚಿ6 ft 6 in (1.98 m) ಹಾಸುಗೆಯನ್ನಾಗಿಯೂ ಮಾಡಿಕೊಳ್ಳಬಹುದು. ಇದರಲ್ಲಿ ಒಂದು ಟೆಂಪ್ಲೇಟು:In to cmಎಲ್್ಸಿಡಿ ಸ್ಕ್ರೀನ್ ಮತ್ತು ಸ್ಕೈ ಸೂಟ್ , ತಾನಾಗಿಯೇ ಮೇಲೇಳಬಲ್ಲಂಥದ್ದು, ಕೊನ್ನೊಲ್ಲಿ ಚರ್ಮದ್ದು ಮತ್ತು ಒರಟು ಕಟ್ಟಿಗೆಯನ್ನು ಓರಣಗೊಳಿಸಿದ್ದು.
ಆಯ್ದ ಬೋಯಿಂಗ್ 777-200ಗಳಲ್ಲಿ ಮತ್ತು ಎಲ್ಲ ಬೋಯಿಂಗ್ 777-300 ವಿಮಾನಗಳಲ್ಲಿ (ಮುಖ್ಯವಾಗಿ ಪ್ರಾದೇಶಿಕ ಹಾರಾಟದ ವಿಮಾನಗಳ್ಲಲಿ) ಮಲಗುವ ಸೀಟುಗಳನ್ನು ನೀಡಲಾಗಿದೆ.ಟೆಂಪ್ಲೇಟು:In to cm ಇವನ್ನು 2-2-೨ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಬೋಯಿಂಗ್ 777-300 ವಿಮಾನಗಳು ಕ್ಯಾಬಿನ್ ಮರುಜೋಡಣೆಗೆ ಹೋಗಲು ಸಿದ್ಧವಾಗಿವೆ ಮತ್ತು ಇದರ ಪ್ರಥಮ ದರ್ಜೆ ಸೀಟುಗಳನ್ನು ತೆಗೆದುಹಾಕಿ "ಹೊಸ" ಪ್ರಥಮ ದರ್ಜೆ ಸೀಟುಗಳನ್ನು ಜೋಡಿಸಲಾಗುವುದು.
ಸಿಂಗಪುರ್ ಏರ್ಲೈನ್ಸ್್ನ ಬಿಸಿನೆಸ್ ಕ್ಲಾಸನ್ನು 2006ರ ವರೆಗೂ ರಫ್ಲೀಸ್ ಕ್ಲಾಸ್ ಎಂದು ಕರೆಯುತ್ತಿದ್ದರು. ಎ380, ಎ340-500 ಮತ್ತು ಬೋಯಿಂಗ್ 777-300ಇಆರ್್ಗಳಲ್ಲಿ, ಪೂರ್ಣ ಸಪಾಟಾಗುವ ಬೆಡ್ 1-2-1 ವಿನ್ಯಾಸದಲ್ಲಿ ಮುಂಭಾಗದಲ್ಲಿ ಮುಖವಿರುವ ಸೀಟುಗಳು ಲಭ್ಯವಿವೆ. (ಓರೆಯಾಗಿ ಮಲಗುವ ವ್ಯವಸ್ಥೆ ಇದೆ) ಉಳಿದ ಅನೇಕ ಏರ್ಲೈನ್್ಗಳಲ್ಲಿ ಅಂಕುಡೊಂಕಾಗಿ ಬಿಸಿನೆಸ್ ಕ್ಲಾಸ್್ನಲ್ಲಿ ಸಪಾಟಾದ ಬೆಡ್ ವ್ಯವಸ್ಥೆ ಮಾಡಿರುವುದಕ್ಕೆ ಇದು ವಿರುದ್ಧ. 1-2-1 ವಿನ್ಯಾಸದಲ್ಲಿ ಅನುವುಗೊಳಿಸಿದ ಹೊಸ ಬಿಸಿನೆಸ್ ಕ್ಲಾಸ್ ಸಾಕಷ್ಟು ಅಗಲವಾಗಿದೆ.34 in (86 cm) ಚರ್ಮದ ಸೀಟುಗಳು 15.4 in (39.1 cm) ಕರ್ಣಾಕಾರದಲ್ಲಿ ಸ್ಕ್ರೀನ್ ಸೈಜ್ ಪರ್ಸನಲ್ ಟೆಲಿವಿಷನ್, ಸೀಟಿನೊಳಗೇ ವಿದ್ಯುತ್ ಪೂರೈಕೆ ಮತ್ತು 2 ಯುಎಸ್್ಬಿ ಪೋರ್ಟ್್ಗಳು ಇವೆ.[93]
ಒಂದು ಹೊಸ ಪ್ರಾದೇಶಿಕ ಬಿಸಿನೆಸ್ ಕ್ಲಾಸ್ 19 ಎ330-300ನಲ್ಲಿ ಆರಂಭವಾಯಿತು. ಅದನ್ನು ಸಿಂಗಪುರ್ ಏರ್ಲೈನ್ಸ್ ಪರ್ಥ್, ಬ್ರಿಸ್ಬೇನ್, ಅಡಿಲೇಡ್, ನಗೋಯ ಮತ್ತು ಇತರ ಮಧ್ಯಮ ಪ್ರಮಾಣದ ಮತ್ತು ಪ್ರಾದೇಶಿಕ ಮಾರ್ಗಗಳಲ್ಲಿ ಸೇವೆಗೆ ಬಳಸಿತು. ಎ330-300ನಲ್ಲಿ 2-2-2 ವಿನ್ಯಾಸದಲ್ಲಿ ಏಳವಡಿಸಿದ್ದು ಐಪೋಡ್ ಸಂಪರ್ಕವು ದೊರೆಯಲಿದೆ. ಬಿಸಿನೆಸ್ ಕ್ಲಾಸ್ ಸೀಟುಗಳನ್ನು 8 ಡಿಗ್ರಿಯಷ್ಟು ಕೆಳಕ್ಕೆ ಬಾಗಿಸಿ ಸಪಾಟಾಗಿ ಮಲಗಬಹುದು. ಬಿಸಿನೆಸ್ ಕ್ಲಾಸ್್ನಲ್ಲಿ ಹೊಸ ಕ್ರಿಸ್್ವರ್ಲ್ಡ್ 15.4 ಅಂಗುಲದ ಪರದೆಯ ಮೇಲೆ ಕಾಣಿಸುವುದು.[94] ಸಿಂಗಪುರ್ ಏರ್ಲೈನ್ಸ್ ಬೋಯಿಂಗ್ 777 ಮಾದರಿಗಳಿಗೆ ಕ್ಯಾಬಿನ್ ಮರುಜೋಡಣೆ ಕಾರ್ಯಕ್ರಮವನ್ನು ಆರಂಭಿಸಿದೆ. ಅದು ಸೀಟುಗಳಲ್ಲಿಯೂ ಕಂಡುಬರಲಿದೆ. ಬೋಯಿಂಗ್ 777-300 ವಿಮಾನ ಶ್ರೇಣಿಯು ಮೊದಲಿಗೆ ಮರುಜೋಡಣೆಗೆ ಒಳಗಾಗುವುದು. ಮತ್ತು ಬಹುತೇಕ ಎಲ್ಲ ವಿಮಾನಗಳೂ ಹೊರ ಬರುವವು. ಮರುಜೋಡಣೆಯಾದ ವಿಮಾನದ ಪಾರಾಟವು ಜುಲೈ 22 2009ರಂದು ಸಿಡ್ನಿಗೆ ತೆರಳುವುದು. ಬೋಯಿಂಗ್ 777-300ನಲ್ಲಿಯ ಸೀಟುಗಳು 2-2-2 ವಿನ್ಯಾಸದ ಮಾದರಿಯಲ್ಲಿಯೇ ಇರುವವು.
ಸ್ಪೇಸ್ ಬೆಡ್ ಸೀಟುಗಳು ಬೋಯಿಂಗ್ 777-200ಇಆರ್ ನಲ್ಲಿ 2-2-2 ವಿನ್ಯಾಸದ ಜೋಡಣೆಯಲ್ಲಿ ಮತ್ತು ಬಿ747-400 ವಿಮಾನದಲ್ಲಿ 2-3-2 ವಿನ್ಯಾಸದ ಜೋಡಣೆಯಲ್ಲಿ ದೊರೆಯಲಿವೆ. ಸ್ಪೇಸ್ ಬೆಡ್ ಸೀಟುಗಳು 27 in (69 cm) ಅಗಲವಾಗಿ 72 in (183 cm) ಮತ್ತು ಕೋನಾಕಾರದ ಚಪ್ಪಟೆ ಹಾಸುಗೆಯಾಗಿರುತ್ತವೆ. ಅವು ಒಳಕ್ಕೆಳೆದುಕೊಳ್ಳಬಲ್ಲ10.4 in (26.4 cm) ವೈಯಕ್ತಿಕ ಟೀವಿಗಳನ್ನು ಹೊಂದಿರುತ್ತವೆ.
ಸಾಂಪ್ರದಾಯಿಕವಾದ ಅಲ್ಟಿಮೋ ಬಿಸಿನೆಸ್ ಕ್ಲಾಸ್ ಸೀಟುಗಳನ್ನು ಬೆಡ್್ಗಳಾಗಿ ಬದಲಾಯಿಸಲು ಸಾಧ್ಯವಿಲ್ಲ, ಇವು ಎಲ್ಲ ಬೋಯಿಂಗ್ 777 ವಿಮಾನಗಳಲ್ಲಿ (ಬೋಯಿಂಗ್ 7-2000ಇಆರ್ ಮತ್ತು ಬೋಯಿಂಗ್ 777-300ಇಆರ್) ಹೊರತುಪಡಿಸಿ 2-3-2 ವಿನ್ಯಾಸದ ಮಾದರಿಯಲ್ಲಿ ಲಭ್ಯವಿವೆ.
ಬೋಯಿಂಗ್ 747 ಮತ್ತು ಬೋಯಿಂಗ್ 777ರಲ್ಲಿಯ (ಬೋಯಿಂಗ್ 777-300ರನ್ನು ಹೊರತುಪಡಿಸಿ) ಎಲ್ಲ ಮಿತವ್ಯಯಿ ದರ್ಜೆಯ ಸೀಟುಗಳು ವೈಯಕ್ತಿಕ ಟೀವಿಗಳ ಸ್ಕ್ರೀನ್್ಗಳು, ಪಾದ ವಿರಾಮಗಳು, ಸರಿಹೊಂದಿಸಬಹುದಾದ ಶಿರವಿರಾಮಗಳು, ಪಕ್ಕದ-ಅಗಲವಾದ "ಕಿವಿಗಳು"ಸೀಟುಗಳ ಬಾಗುವಿಕೆಯನ್ನು ಸರಿಹೊಂದಿಸಿಕೊಳ್ಳಬಹುದಾದ ವ್ಯವಸ್ಥೆಯನ್ನು ಹೊಂದಿರುತ್ತವೆ. ಕೆಲವು ವಿಮಾನಕೋಣೆ ಹಲಗೆಗಳಲ್ಲಿ ಮಕ್ಕಳ ತೊಟ್ಟಿಲು ಲಭ್ಯವಿರುತ್ತವೆ.[95]
ಬೋಯಿಂಗ್ 777-300ಇಆರ್, ಏರ್್ಬಸ್ ಎ380, ಮತ್ತು ಏರ್್ಬಸ್ ಎ330-300 ಗಳಲ್ಲಿಯ ಹೊಸ ಮಿತವ್ಯಯ ಕ್ಲಾಸ್ ಸೀಟುಗಳು ಟೆಂಪ್ಲೇಟು:In to cm ಅಗಲವಾಗಿವೆ, ಸೀಟಿನೊಳಗಿನಿಂದ ವಿದ್ಯುತ್, 10.6 ಅಂಗುಲದ ವೈಯಕ್ತಿಕ ಟೀವಿ ಪರದೆ, ಇದನ್ನು ಒಳಗೆ ತಳ್ಳದ ಓದುವ ದೀಪವನ್ನಾಗಿಯೂ ಬಳಸಿಕೊಳ್ಳಬಹುದು.[96] ಇವು ಕೂಡ 19 ಹೊಸ ಏರ್್ಬಸ್ ಎ330-300 ವಿಮಾನಗಳು ಹೊರಬರುತ್ತಿವೆ. ಇವನ್ನು ಸಿಂಗಪುರ್ ಏರ್ಲೈನ್ಸ್ ಪರ್ಥ್, ಬ್ರಿಸ್ಬೇನ್, ಅಡಿಲೇಡ್, ನಗೋಯಾ, ಒಸಾಕಾ ಮತ್ತು ಇತರ ಮಧ್ಯಮ ಪ್ರಮಾಣದ ಮತ್ತು ಪ್ರಾದೇಶಿಕ ಮಾರ್ಗಗಲ್ಲಿ ಸೇವೆಗೆ ಬಳಸುವುದು. ಎ330-300ರನ್ನು 2-4-2 ಮಾದರಿಯಲ್ಲಿ ವಿನ್ಯಾಸಗೊಳಿಸಲಾಗುವುದು. ಇವು ಐಪೋಡ್ ಸಂಪರ್ಕವನ್ನು ಹೊಂದಿರುತ್ತವೆ.[97] ಇದರಲ್ಲಿರುವ ಇತರ ಸೌಲಭ್ಯವೆಂದರೆ ಒಂದು ಸ್ವತಂತ್ರವಾದ ಕಪ್ ಹೋಲ್ಡರ್ ಇರುವುದು. (ಮಡಚಿ ಹೊರಗೆಳೆಯುವ ಟೇಬಲ್್ನಿಂದ ಇದು ಪ್ರತ್ಯೇಕ) ಮತ್ತು ಯುಎಸ್ಬಿ ಪೋರ್ಟ್. ಬೋಯಿಂಗ್ 777 ವಿಮಾನದಲ್ಲಿ ಇದೇ ರೀತಿಯ ವಿನ್ಯಾಸವನ್ನು ಅವುಗಳ ಕ್ಯಾಬಿನ್ ಮರು ಜೋಡಿಸುವಾಗ ಸಿಂಗಪುರ್ ಏರ್ಲೈನ್ಸ್ ಪರಿಚಯಿಸಲಿದೆ. ಮರು ಜೋಡಣೆಗೆ ಒಳಗಾಗುವ ಪ್ರಥಮ ಮಾದರಿ ಬೋಯಿಂಗ್ 777-300, ಅದನ್ನು ಮೊದಲಿಗೆ 2009ರ ಜುಲೈ 22ರಂದು ಸಿಂಗಪುರ್-ಸಿಡ್ನಿ ಮಾರ್ಗದಲ್ಲಿ ಪರಿಚಯಿಸಲಾಗುವುದು.[98]
ಸಿಂಗಪುರ್ ಏರ್ಲೈನ್ಸ್ ಜಗತ್ತಿನ ರಸಭಕ್ಷ್ಯಗಳ ಅಡುಗೆ ಯನ್ನು ಎಲ್ಲ ಮೂರು ವರ್ಗದವರಿಗೆ ನೀಡುವುದು. ಆಯಾ ವಿಮಾನಗಳಲ್ಲಿ ಪ್ರಾದೇಶಿಕ ಆಹಾರವನ್ನು ಆಗಾಗ ಪೂರೈಕೆಮಾಡುವರು. ಜಪಾನ್, ಚೀನ ಮತ್ತು ಭಾರತದ ಪ್ರಯಾಣಿಕರಿಗೆ ಕ್ರಮವಾಗಿ ಕ್ಯೋ-ಕೈಸೆಕಿ , ಶಿ ಕ್ವಾನಿ ಶಿ ಮೀ ಮತ್ತು ಶಾಹಿ ಥಾಲಿ ಗಳ ಊಟವನ್ನು ಪ್ರಥಮ ದರ್ಜೆಯಲ್ಲಿ ನೀಡಲಾಗುತ್ತದೆ.
ಎಸ್ಐಎ ಜನಪ್ರಿಯ ಸ್ಥಳೀಯ ಭಕ್ಷ್ಯ ದ ಅಡುಗೆ ಕಾರ್ಯಕ್ರಮವನ್ನು ಪ್ರಯಾಣಿಕರಿಗೆ ಸ್ಥಳೀಯ ಅಚ್ಚುಮೆಚ್ಚನ್ನು ಆಯ್ದ ಪ್ರಮುಖ ಗಮ್ಯಸ್ಥಾನಗಳ ಎಲ್ಲ ವರ್ಗದ ಪ್ರಯಾಣಿಕರಿಗೆ ನೀಡುವುದನ್ನು ಪರಿಚಯಿಸಿದೆ.
ಬಿಸಿನೆಸ್ ಮತ್ತು ಫಸ್ಟ್್ಕ್ಲಾಸ್ ಪ್ರಯಾಣಿಕರು "ಬುಕ್ ದಿ ಕುಕ್" ಸೇವೆಯನ್ನು ಆಯ್ಕೆಯನ್ನು ಕೆಲವು ವಿಮಾನಗಳಲ್ಲಿ ಮಾಡಿಕೊಳ್ಳಬಹುದು. ದೊಡ್ಡ ಮೆನುವಿನಿಂದ ಮುಂದಾಗಿಯೇ ವಿಶಿಷ್ಟವಾದ ಆಹಾರವನ್ನು ಆಯ್ದು ಅದನ್ನು ಕೊಡುವಂತೆ ಕೇಳಬಹುದು[99][100]
ಸಿಂಗಪುರ್ ಏರ್ಲೈನ್ಸ್ ವಿಮಾನದೊಳಗಿನ ಮನರಂಜನೆ ವ್ಯವಸ್ಥೆ ಕ್ರಿಸ್್ವರ್ಲ್ಡ್ ಅನ್ನು 1997ರಲ್ಲಿ ಪರಿಚಯಿಸಲಾಯಿತು. ಬಿ747-400 ಮತ್ತು ಬೋಯಿಂಗ್ 777-200ಇಆರ್ ವೈಸ್್ಮನ್ 3000 ಸಿಸ್ಟಮನ್ನು ಬಳಸುತ್ತಿದ್ದವು. ಇದರಿಂದ ಬೇಡಿಕೆಯ ಮೇರೆಗೆ ಸಿನಿಮಾಗಳನ್ನು, ಆಡಿಯೋ ಮತ್ತು ನಿನ್ಟೆಂಡೋ ಗೇಮ್ಸ್್ಗಳನ್ನು ಎಲ್ಲ ವರ್ಗದವರು ಪಡೆಯಬಹುದಿತ್ತು. ಸಿಂಗಪುರ್ ಏರ್ಲೈನ್ಸ್ ಸೂಟ್ ್ಗಳಲ್ಲಿ, ಪ್ರಥಮ ದರ್ಜೆ ಯಲ್ಲಿ ಮತ್ತು ಬಿಸಿನೆಸ್ ಕ್ಲಾಸ್ ್ನಲ್ಲಿ ಹಾರಾಡುವ ಪ್ರಯಾಣಿಕರು ಆ್ಯಕ್ಟಿವ್ ನೋಯ್ಸ್ ಕ್ಯಾನ್ಸಲಿಂಗ್ ಹೆಡ್್ಫೋನ್ ಪಡೆಯುವರು.
ಮಾರ್ಚ್ 2005ರಲ್ಲಿ ಎಸ್ಐಎ ಕನೆಕ್ಷನ್ ಬೈ ಬೋಯಿಂಗ್ ವಿಮಾನದೊಳಗಿನ ಇಂಟರ್್ನೆಟ್ ಸೇವೆಯನ್ನು ಪರಿಚಯಿಸಿತು. ಮತ್ತು ಈ ವ್ಯವಸ್ಥೆಯನ್ನು ಜೂನ್್ನಲ್ಲಿ ನೇರ ಟೀವಿ ಸಂಪರ್ಕಕ್ಕೂ ವಿಸ್ತರಿಸಿತು.[101] ಈ ಸೇವೆಯು ಡಿಸೆಂಬರ್ 2006ರಲ್ಲಿ ಬೋಯಿಂಗ್ ಸಂಪರ್ಕವನ್ನು ಸ್ಥಗಿತಗೊಳಿಸಿದಾಗ ಅಂತ್ಯಗೊಂಡಿತು.
2005ರ ಅಕ್ಟೋಬರ್್ನಿಂದ ಎಸ್ಐಎಉಚಿತ ಭಾಷಾ ಪಾಠಗಳನ್ನು 22 ಭಾಷೆಗಳಲ್ಲಿ ಆರಂಭಿಸಿತು.[102] ಮತ್ತು ಡಿಸೆಂಬರ್ 2005ರಲ್ಲಿ ನೇರ ಸುದ್ದಿಗಳ ಸಾಲುಗಳನ್ನು ಒದಗಿಸಲು ಆರಂಭಿಸಿತು.[103]
ಪೆನಾಸೋನಿಕ್ ಎವಿಯೋನಿಕ್ಸ್ ಕಾರ್ಪೋರೇಷನ್ ತನ್ನ ಹೊಸದಾದ eX2 ಸಿಸ್ಟಮ್ ಮೂಲಕ ಹೊಸ ಕ್ರಿಸ್್ವರ್ಲ್ಡ್ ರಚಿಸಲು ಆಯ್ಕೆಮಾಡಲಾಗಿದೆ ಎಂದು ಎಸ್ಐಎ ಪ್ರಕಟಿಸಿತು.[104][105] ಹೊಸ ಕ್ರಿಸ್್ವರ್ಲ್ಡ್ ಎ380, ಎ330-300, ಎ340-500 ಗಳಲ್ಲಿ (ಬಿಸಿನೆಸ್ ಕ್ಲಾಸ್ ್ನಲ್ಲಿ ಉಪಕರಣಗಳನ್ನು ಸಜ್ಜುಗೊಳಿಸಲಾಗಿದೆ) ಮತ್ತು ಬೋಯಿಂಗ್ 777-300ಇಆರ್ಗಳಲ್ಲಿ ಲಭ್ಯವಿದೆ.
ಪ್ರಯಾಣಿಕರು ವಿಮಾನ ಹಾರುವುದಕ್ಕೆ ಎರಡರಿಂದ 48 ಗಂಟೆಗಳ ಮೊದಲು ಚೆಕ್-ಇನ್ ಆಗಬಹುದು. ಇದನ್ನು ವಿಮಾನ ನಿಲ್ದಾಣದ ಕೌಂಟರ್್ನಲ್ಲಿ ಅಥವಾ ಕಾಯುವ ಕೋಣೆಯಲ್ಲಿ ಇದನ್ನು ಮಾಡಬಹುದು. (ಫಸ್ಟ್ ಮತ್ತು ಬಿಸಿನೆಸ್ ಕ್ಲಾಸ್ ಪ್ರಯಾಣಿಕರಿಗೆ) ಸೆಲ್ಪ್-ಸರ್ವಿಸ್ ಕಿಯೋಸ್ಕಗಳೂ ಸಿಂಗಪುರ್ ಚಾಂಗಿ ಏರ್ಪೋರ್ಟ್್.ನಲ್ಲಿ ಲಭ್ಯವಿದೆ. ಪ್ರಥಮ ದರ್ಜೆ ಪ್ರಯಾಣಿಕರು ಕೂಡ ಸಮರ್ಪಿತ ಸಾಲನ್ನು ಚಾಂಗಿ ಏರ್ಪೋರ್ಟಲ್ಲಿ ಪಡೆಯುವರು. ಇಲ್ಲಿ ಸಿಬ್ಬಂದಿ ವೈಯಕ್ತಿಕವಾಗಿ ಸ್ವಾಗತಿಸಿ ಬೆಂಗಾವಲು ಒದಗಿಸುವರು.
ಪರ್ಯಾಯವಾಗಿ ಅವರು ಇನ್ಟರ್ನೆಟ್್ನಲ್ಲಿ ಶಾರ್ಟ್ ಮೆಸೇಜ್ ಸರ್ವಿಸ್ ಮೂಲಕವೂ ಚೆಕ್-ಇನ್ ಆಗಬಹುದು. ಇಂಟರ್ನೆಟ್ ಚೆಕ್-ಇನ್ ಮೂಲಕ ಬೋರ್ಡಿಂಗ್ ಪಾಸ್್ಗಳ ಆನ್್ಲೈನ್ ಪ್ರಿಂಟಿಂಗ್ ಲಭ್ಯವಿದೆ. ಕಡಿಮೆ ಅಂತರದ ಪ್ರಯಾಣಿಕರು ತಿರುಗಿ ಬರುವಾಗ ಮೂಲ ನಗರದಲ್ಲಿ ಚೆಕ್ ಇನ್ ಆಗುವ ಅವಕಾಶವಿದೆ.
ಏರ್ಲೈನ್ಸ್್ನ ಸಿಲ್ವರ್ ಕ್ರಿಸ್ ಕಾಯುವ ಕೋಣೆಗಳು ಸಿಂಗಪುರ್ ಏರ್ಲೈನ್ಸ್ ಸೂಟ್ಸ್ಸ್ ್ಗೆ, ಪ್ರಥಮ ದರ್ಜೆ ಯವರಿಗೆ ಮತ್ತು ಬಿಸಿನೆಸ್ ಕ್ಲಾಸ್ ಪ್ರಯಾಣಿಕರಿಗೆ ಮುಕ್ತವಿದೆ. ಇವರ ಜೊತೆಗೆ ಸೊಲಿಟೇರ್ ಪಿಪಿಎಸ್ ಕ್ಲಬ್, ಪಿಪಿಎಸ್ ಕ್ಲಬ್ ಮತ್ತು ಕ್ರಿಸ್ ಫ್ಲೈಯರ್ ಎಲೈಟ್ ಗೋಲ್ಡ್ ಮೆಂಬರ್್ಗಳಿಗೂ ಮುಕ್ತವಿದೆ. ಈ ಸದಸ್ಯರು ಏರ್ಲೈನ್ಸ್ ಪಾಲುದಾರರು ಕಾರ್ಯನಿರ್ವಹಿಸುವ ಕಾಯುವ ಕೋಣೆಗಳಲ್ಲೂ ಪ್ರವೇಶ ಪಡೆಯಬಹುದು. ಈ ಕಾಯುವ ಕೋಣೆಗಳು ಇಲ್ಲಿವೆ:[106]
ಸಿಂಗಪುರ್ ಏರ್ಲೈನ್ಸ್ ಪದೇಪದೇ ಹಾರಾಟದ ಕಾರ್ಯಕ್ರಮವು ಎರಡು [107][108] ವರ್ಗಗಳಲ್ಲಿದೆ:
ಸಿಂಗಪುರ್ ಏರ್ಲೈನ್ಸ್್ನ ಸ್ವಂತ ಸೇವೆ ಮತ್ತು ಕ್ರಿಸ್್ಪ್ಲೈಯರ್ ಪಾಲುದಾರರಿಂದ ಮೈಲುಗಳನ್ನು ಪಡೆಯಬಹುದು ಮತ್ತು ಮರಳಿ ಗಳಿಸಬಹುದು. ಪಾಲುದಾರರಲ್ಲಿ ಎಲ್ಲ ಸ್ಟಾರ್ ಅಲಿಯನ್ಸ್ ಸದಸ್ಯರು, ಸಿಲ್ಕ್ ಏರ್, ವರ್ಜಿನ್ ಅಟ್ಲಾಂಟಿಕ್, ಡೆಲ್ಟಾ ಏರ್್ಲೈನ್ಸ್,ಇತರ ಅಸಂಖ್ಯಾತ ಹೊಟೇಲ್ ಸರಪಣಿಗಳು ಮತ್ತು ಕಾರು-ಬಾಡಿಗೆ ಕಂಪನಿಗಳು ಸೇರಿವೆ.[109] ಕ್ರಿಸ್್ಫ್ಲೈಯರ್್ಅನ್ನು ಕ್ರಿಸ್್ಫ್ಲೈಯರ್, ಕ್ರಿಸ್್ಫ್ಲೈಯರ್ ಎಲೈಟ್ ಸಿಲ್ವರ್ ಮತ್ತು ಕ್ರಿಸ್್ಫ್ಲೈಯರ್ ಎಲೈಟ್ ಗೋಲ್ಡ್್ಗಳಾಗಿ ವಿಭಜಿಸಲಾಗಿದೆ, ಇದು ಕ್ರಮವಾಗಿ ಸ್ಟಾರ್ ಅಲಿಯನ್ಸ್ ಸಿಲ್ವರ್ ಮತ್ತು ಗೋಲ್ಡ್ ಜೊತೆ ಸಂಪರ್ಕಿಸುತ್ತದೆ. ಎಲೈಟ್ ಸಿಲ್ವರ್[110] ಮತ್ತು ಎಲೈಟ್ ಗೋಲ್ಡ್[111] ಸ್ಥಾನಮಾನವನ್ನು ಹನ್ನೆರಡು ತಿಂಗಳ ಅವಧಿಯಲ್ಲಿ 25,000 ಸಂಗ್ರಹಿಸಿದ ಪ್ರಯಾಣಿಕರಿಗೆ ನೀಡಲಾಗುವುದು.50,000 miles (80,000 km) ನೀವು ಯಾವಾಗ ಕ್ರಿಸ್್ಫ್ಲೈಯರ್ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದ್ದೀರಿ ಎನ್ನುವುದರ ಮೇಲಿಂದ 12 ತಿಂಗಳ ಅವಧಿ ಮೊದಲೇ ನಿಗದಿ ಪಡಿಸಿರಲಾಗುತ್ತದೆ25,000 miles (40,000 km). ಸಿಂಗಪುರ್ ಏರ್ಲೈನ್ಸ್್ಗೆ ನೀವು 12 ತಿಂಗಳ ಮೊದಲೇ ವ್ಯವಹರಿಸದೇ ಹೋದಲ್ಲಿ ಸಿಲ್ವರ್ ಸ್ಥಾನಮಾನಕ್ಕೆ ಅರ್ಹತೆ ನಿಮಗೆ 12 ತಿಂಗಳ ಕಾಲ ಹಾರಾಟ ನಡೆಸಿದ ಬಳಿಕವೂ ದೊರೆಯದೆ ಹೋಗಬಹುದು. ಸಿಂಗಪುರ್ ಏರ್ಲೈನ್ಸ್ ಫ್ಲೈಟ್್ಗಳ ಬುಕಿಂಗ್ ಕ್ಲಾಸ್್ಗಳು ವಿ. ಕ್ಯೂ, ಜಿ, ಎನ್ ಮತ್ತು ಟಿ ( ಗ್ರುಪ್ ಮತ್ತು ಪ್ರಚಾರದ ದರಗಳು) ಮತ್ತು ಸಿಲ್ಕ್್ಏರ್ ಫ್ಲೈಟ್್ಗಳ ಬುಕಿಂಗ್ ಕ್ಲಾಸ್್ಗಳು ಡಬ್ಲ್ಯೂ ಮತ್ತು ಎಲ್ ಮೈಲುಗಳನ್ನು ಗಳಿಸುವುದಿಲ್ಲ.[112]
ಒಂದು ವರ್ಷದ ಅವಧಿಯಲ್ಲಿ S$ 25,000 ಪಿಪಿಎಸ್ ಮೌಲ್ಯವನ್ನು ಸಂಗ್ರಹ ಮಾಡಿದ ಪ್ರಯಾಣಿಕರಿಗಾಗಿ ಪ್ರಿಯಾರಿಟಿ ಪ್ಯಾಸೆಂಜರ್ ಸರ್ವಿಸ್ (ಪಿಪಿಎಸ್)[113] ರೂಪಿಸಲಾಗಿದೆ[114]. ಸಿಂಗಪುರ್ ಏರ್ಲೈನ್ಸ್ ಸೂಟ್ ್ಗಳಲ್ಲಿ, ಸಿಂಗಪುರ್ ಏರ್ಲೈನ್ಸ್್ನ ಫಸ್ಟ್್ಕ್ಲಾಸ್ ಅಥವಾ ಬಿಸಿನೆಸ್ ಕ್ಲಾಸ್್ನಲ್ಲಿ ಅಥವಾ ಸಿಲ್ಕ್್ಏರ್್ನ ಬಿಸಿನೆಸ್್ ಕ್ಲಾಸ್ ್ನಲ್ಲಿ ಪ್ರಯಾಣಿಸಿದಾಗ ಪಿಪಿಎಸ್ ಮೌಲ್ಯ ಸಂಗ್ರಹವಾಗುತ್ತದೆ. ಈ ಪಿಪಿಎಸ್್ಅನ್ನು ಪಿಪಿಎಸ್ ಕ್ಲಬ್, ಸೊಲಿಟೇರ್ ಪಿಪಿಎಸ್ ಕ್ಲಬ್ ಮತ್ತು ಸೊಲಿಟೇರ್ ಪಿಪಿಎಸ್ ಕ್ಲಬ್ ಲೈಫ್್ನಲ್ಲಿ ವಿಭಾಗಿಸುತ್ತಾರೆ.[115]
ಪಿಪಿಎಸ್ ಕ್ಲಬ್ ಸ್ಥಾನಮಾನದ ಒಬ್ಬ ಸದಸ್ಯರು ಐದು ವರ್ಷದ ಅವಧಿಯಲ್ಲಿ S$ 2,25,000 ಪಿಪಿಎಸ್ ಮೌಲ್ಯವನ್ನು ಸಂಗ್ರಹಿಸಿದರೆ ಅವರು ಸೊಲಿಟೇರ್ ಪಿಪಿಎಸ್ ಕ್ಲಬ್್ಗೆ ಅರ್ಹತೆ ಪಡೆಯುತ್ತಾರೆ.[115] ಸೋಲಿಟೇರ್ ಲೈಫ್ ಪಿಪಿಎಸ್ ಕ್ಲಬ್ ಸ್ಥಾನಮಾನವನ್ನು ಹಿಂದೆ ಯಾವ ಸದಸ್ಯರು ಒಟ್ಟೂ1,875,000 miles (3,018,000 km) ಅಥವಾ 1000 ಪಿಪಿಎಸ್ ಸೆಕ್ಟರುಗಳನ್ನು ಸಂಗ್ರಹ ಮಾಡಿದವರಿಗೆ ನೀಡಲಾಗುತ್ತಿತ್ತು. ಸೌಲಭ್ಯಗಳೆಲ್ಲ ಸೊಲಿಟೇರ್ ಪಿಪಿಎಸ್ ಕ್ಲಬ್ ಸದಸ್ಯರಿಗೆ ಇರುವ ಹಾಗೇ ಇರುತ್ತದೆ. ಆದರೆ ಅವರಿಗೆ ಮರು-ಅರ್ಹತೆ ಪ್ರಮಾಣ ಇರುವುದಿಲ್ಲ.[115] ಸಿಂಗಪುರ್ ಏರ್ಲೈನ್ಸ್ ಹೊಸ ಸೊಲಿಟೇರ್ ಲೈಫ್ ಪಿಪಿಎಸ್ ಕ್ಲಬ್ ಸದಸ್ಯರನ್ನು ಅಂಗೀಕರಿಸುವುದನ್ನು ನಿಲ್ಲಿಸಿದೆ.[116]
ಎಲ್ಲ ಪಿಪಿಎಸ್ ಸದಸ್ಯರಿಗೆ ಆದ್ಯತೆಯ ಮೇಲೆ ಚೆಕ್-ಇನ್ ಆಗುವ ಸಾಮಾನು ಬ್ಯಾಗ್್ಗಳ ನಿರ್ವಹಣೆ, ಬಿಸಿನೆಸ್ ಕ್ಲಾಸ್ ಮತ್ತು ಫಸ್ಟ್್ಕ್ಲಾಸ್್ನಲ್ಲಿ ವೇಟ್-ಲಿಸ್ಟ್್ನಲ್ಲಿದ್ದವರು ಸಿಲ್ವರ್ ಕ್ರಿಸ್ ಲಾಂಜ್್ನಲ್ಲಿ ಬಿಸಿನೆಸ್್ ಕ್ಲಾಸ್ ವಿಭಾಗದಲ್ಲಿ ಹೆಚ್ಚಾದವರಿಗೆ ಎಕಾನಮಿ ಕ್ಲಾಸ್ ಸೀಟುಗಳಂತೂ ಗ್ಯಾರಂಟಿಯಾಗಿರುತ್ತವೆ. ಸೊಲಿಟೇರ್ ಪಿಪಿಎಸ್ ಸದಸ್ಯರು ಮತ್ತು ಅವರು ಪತ್ನಿಯರು ಕೂಡ ಫಸ್ಟ್್ ಕ್ಲಾಸ್ ಚೆಕ್-ಇನ್ ಮತ್ತು ಸಿಲ್ವರ್ ಕ್ರಿಸ್ ಲಾಂಜ್್ನಲ್ಲಿ ಫಸ್ಟ ಕ್ಲಾಸ್ ವಿಭಾಗಗಳನ್ನು ಬಳಸಿಕೊಳ್ಳಬಹುದು.
ಇದು ಸಿಂಗಪುರ್ ಏರ್ಲೈನ್ಸ್ ವಿಮಾನಗಳಿಗೆ ಸಂಬಂಧಿಸಿದ್ದನ್ನು ಒಳಗೊಂಡಿವೆ; ಸಿಲ್ಕ್್ಏರ್್ಗೆ ಸಂಬಂಧಿಸಿದ ಘಟನೆಗಳಿಗೆ ಆ ಲೇಖವನ್ನು ನೋಡಿ.
ಟೆಂಪ್ಲೇಟು:Portal box
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.