ಸಾಯಿಕೋಮ್ ಮೀರಾಬಾಯಿ ಚಾನು
From Wikipedia, the free encyclopedia
ಸಾಯಿಖೋಮ್ ಮೀರಾಬಾಯಿ ಚಾನು (ಜನನ 8 ಆಗಸ್ಟ್ 1994) ಒಬ್ಬ ಭಾರತೀಯ ವೇಟ್ಲಿಫ್ಟರ್ . ಮಹಿಳೆಯರ 49 ಕೆಜಿ ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದರು, ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟರು. [2] [3] [4] 48 ಕೆ.ಜಿ ವಿಭಾಗದಲ್ಲಿ 2014 ರಿಂದ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದಾರೆ. 48 ಕೆಜಿ ವಿಭಾಗದಲ್ಲಿ, ಚಾನು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮತ್ತು ವಿಶ್ವ ಚಾಂಪಿಯನ್ಶಿಪ್ ಗಳಲ್ಲಿ ಮತ್ತು ಹಲವಾರು ಪದಕಗಳನ್ನು ಗೆದ್ದಿದ್ದಾರೆ. ಕ್ರೀಡೆಯಲ್ಲಿ ಅವರು ನೀಡಿದ ಕೊಡುಗೆಗಳಿಗಾಗಿ ಅವರಿಗೆ ಭಾರತ ಸರ್ಕಾರದಿಂದ ಪದ್ಮಶ್ರೀ ನೀಡಲಾಯಿತು. ಅವರಿಗೆ 2018 ರಲ್ಲಿ ಭಾರತ ಸರ್ಕಾರದಿಂದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಗಿದೆ.
ಚಿತ್ರ:Mirabai Silver Tokyo 2020.jpg ೨೦೨೧ ರ ಟೋಕಿಯೋ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ | |||||||||||||||||||||||||||||||||||
ವೈಯುಕ್ತಿಕ ಮಾಹಿತಿ | |||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ರಾಷ್ರೀಯತೆ | ಭಾರತೀಯ | ||||||||||||||||||||||||||||||||||
ಜನನ | (1994-08-08) ೮ ಆಗಸ್ಟ್ ೧೯೯೪ (ವಯಸ್ಸು ೨೯) ನಾಂಗ್ ಪೋಂಕ್ ಕಕ್ಚಿಂಗ್ Nongpok Kakching, ಇಂಫಾಲ್, ಮಣಿಪುರ, ಭಾರತ | ||||||||||||||||||||||||||||||||||
ಎತ್ತರ | 1.50 m (4 ft 11 in) | ||||||||||||||||||||||||||||||||||
ತೂಕ | 49 kg (108 lb) | ||||||||||||||||||||||||||||||||||
Sport | |||||||||||||||||||||||||||||||||||
ದೇಶ | India | ||||||||||||||||||||||||||||||||||
ಕ್ರೀಡೆ | ಭಾರ ಎತ್ತುವ ಸ್ಪರ್ಧೆ | ||||||||||||||||||||||||||||||||||
ಸ್ಪರ್ಧೆಗಳು(ಗಳು) | 49 kg | ||||||||||||||||||||||||||||||||||
ತರಬೇತುದಾರರು | ವಿಜಯ ಶರ್ಮಾ, ಆರನ್ ಹಾರ್ಸಿಂಗ್[1] | ||||||||||||||||||||||||||||||||||
ಪದಕ ದಾಖಲೆ
|
ಗ್ಲ್ಯಾಸ್ಗೋದ 2014 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಾನು ಮಹಿಳೆಯರ 48 ಕೆಜಿ ತೂಕದ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು; ಗೋಲ್ಡ್ ಕೋಸ್ಟ್ನಲ್ಲಿ ನಡೆದ ಕ್ರೀಡಾಕೂಟದಲ್ಲಿಹಲವು ವಿಶ್ವದಾಖಲೆಗಳನ್ನು ಸ್ಥಾಪಿಸಿದ್ದರು. ಯುನೈಟೆಡ್ ಸ್ಟೇಟ್ಸ್ನ ಅನಾಹೈಮ್ನಲ್ಲಿ 2017 ರಲ್ಲಿ ನಡೆದ ವಿಶ್ವ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದರು.