ಸಾಧನ
ಶಿಸ್ತುಬದ್ಧ ಹಾಗೂ ಮೀಸಲಾದ ಅಭ್ಯಾಸ / From Wikipedia, the free encyclopedia
ಸಾಧನ ಶಬ್ದವು "ಏನನ್ನಾದರೂ ಸಾಧಿಸುವ ವಿಧಾನ" ಎಂದು ಅರ್ಥಕೊಡುವ ಸಾಮೂಹಿಕ ಪದವಾಗಿದೆ. ಈ ಪದವು ಯೋಗಿಕ ಸಂಪ್ರದಾಯದಿಂದ ಬಂದಿದೆ ಮತ್ತು ಈ ವಾಸ್ತವದಲ್ಲಿ ಅವನ/ಅವಳ ಜೀವನದ ಪರಮ ಅಭಿವ್ಯಕ್ತಿಯೆಡೆಗೆ ಸಾಧಕನನ್ನು ಮುನ್ನಡೆಸುವ ಗುರಿಹೊಂದಿರುವ ಯಾವುದೇ ಆಧ್ಯಾತ್ಮಿಕ ಅಭ್ಯಾಸವನ್ನು ಸೂಚಿಸುತ್ತದೆ.[1] ಇದು ವಿವಿಧ ಆಧ್ಯಾತ್ಮಿಕ ಅಥವಾ ಆಚರಣಾ ಸಂಬಂಧಿ ಉದ್ದೇಶಗಳನ್ನು ಸಾಧಿಸಲು ಅನುಸರಿಸಲಾದ ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಸಂಪ್ರದಾಯಗಳಲ್ಲಿನ ಅನೇಕ ವಿಭಾಗಗಳನ್ನು ಒಳಗೊಂಡಿದೆ.
ಸಮಕಾಲೀನ ಆಧ್ಯಾತ್ಮಿಕ ಶಿಕ್ಷಕ ಮತ್ತು ಯೋಗಿಯಾಗಿರುವ ಜಗ್ಗಿ ವಾಸುದೇವ್ ಸಾಧನವನ್ನು ಹೀಗೆ ವ್ಯಾಖ್ಯಾನಿಸುತ್ತಾರೆ:[2]
ಎಲ್ಲವೂ ಸಾಧನವಾಗಿರಬಹುದು. ನೀವು ತಿನ್ನುವ ರೀತಿ, ಕುಳಿತುಕೊಳ್ಳುವ ರೀತಿ, ನಿಂತುಕೊಳ್ಳುವ ರೀತಿ, ಉಸಿರಾಡುವ ರೀತಿ, ನಿಮ್ಮ ದೇಹ, ಮನಸ್ಸು ಮತ್ತು ಶಕ್ತಿಗಳು ಹಾಗೂ ಭಾವನೆಗಳನ್ನು ನಡೆಸಿಕೊಳ್ಳುವ ರೀತಿ – ಇದು ಸಾಧನ. ಸಾಧನವೆಂದರೆ ಯಾವುದೇ ನಿರ್ದಿಷ್ಟ ಬಗೆಯ ಚಟುವಟಿಕೆಯಲ್ಲ, ಸಾಧನವೆಂದರೆ ನೀವು ನಿಮ್ಮ ಯೋಗಕ್ಷೇಮಕ್ಕಾಗಿ ಎಲ್ಲವನ್ನೂ ಉಪಕರಣವಾಗಿ ಬಳಸಿಕೊಳ್ಳುತ್ತಿದ್ದೀರಿ ಎಂದಾಗಿದೆ. |