ಸಲಾರ್ ಡಿ ಉಯುನಿ
From Wikipedia, the free encyclopedia
ಸಲಾರ್ ಡಿ ಉಯುನಿ, ದಕ್ಷಿಣ ಅಮೆರಿಕದ ಬೊಲುವಿಯದೇಶದಲ್ಲಿರುವ ಜಗತ್ತಿನ ಅತಿ ಬೃಹತ್ ಉಪ್ಪಿನ ಸರೋವರದಲ್ಲಿ ಅತಿ ದೊಡ್ಡ ಪ್ರಮಾಣದ ಉಪ್ಪಿನ ಭಂಡಾರವಿದೆ. ಭೂಗರ್ಭ ಶಾಸ್ತ್ರಜ್ಞರ ಅಂದಾಜಿನಂತೆ, ೪,೦೮೬ ಚದರ ಮೈಲಿ ವಿಸ್ತಾರವಿರುವ ಈ ಉಪ್ಪುನೀರಿನ ಜಲಾಶಯ, ಹತ್ತು ಶತಕೋಟಿ ಟನ್ ಗಳಷ್ಟು ಉಪ್ಪಿನ ಸಂಗ್ರಹವಿದೆ. ಬೊಲುವಿಯಾದೇಶದಲ್ಲಿರುವ ಉಪ್ಪಿನ ಸರೋವರ, ಸಮುದ್ರಮಟ್ಟದಿಂದ ೧೧,೯೯೫ ಅಡಿ ಎತ್ತರದಲ್ಲಿದೆ. ಇದು, ನೈರುತ್ಯ ಬಲ್ಗೇರಿಯಕ್ಕೆ ಹತ್ತಿರದಲ್ಲಿದೆ. ಪೆರುದೇಶದ ಗಡಿಭಾಗದಲ್ಲಿರುವ ೩೦ ರಿಂದ ೪೦ ಸಹಸ್ತ್ರ ವರ್ಷಗಳ ಹಿಂದೆ ನಿರ್ಮಾಣವಾಗಿದೆ ಎಂದು ಊಹಿಸಲಾಗಿದೆ. ಉಪ್ಪಿನ ಮರುಭೂಮಿಯ ಎರಡು ಭಾಗದಲ್ಲಿದ್ದ 'ಪೋಪೋ ಲೇಕ್' ಮಾತ್ತು 'ಉರುಉರು' ಎನ್ನುವ ಎರಡು ಸರೋವರಗಳ ಸತತವಾಗಿ ಉಪ್ಪಿನ ಭೂಕೊರೆತ ಪರಿಣಾಮದಿಂದಾಗಿ ಇದರ ಉಗಮವಾಯಿತೆಂದು ಊಹೆ ಮಾಡಲಾಗಿದೆ.[1]
![Thumb image](http://upload.wikimedia.org/wikipedia/commons/3/30/LocationSalarUyuni.png)