ಸರ್ ಜಾರ್ಜ್ ಗಿಲ್ಬರ್ಟ್ ಸ್ಕಾಟ್
From Wikipedia, the free encyclopedia
ಸರ್ ಜಾರ್ಜ್ ಗಿಲ್ಬರ್ಟ್ ಸ್ಕಾಟ್, [1] ಒಬ್ಬ ಹೆಸರಾಂತ 'ವಿಕ್ಟೋರಿಯನ್ ಯುಗದಕಾಲ'ದ ಇಂಗ್ಲೀಷ್ ವಾಸ್ತು ಶಿಲ್ಪಿ. ಜಾರ್ಜ್ ಗಿಲ್ಬರ್ಟ್ ಸ್ಕಾಟ್ ರವರು ಸನ್, ೧೮೬೬ ರಲ್ಲಿ, ಆಗಿನ ಬೊಂಬಾಯಿನಗರದ ವಿಶ್ವವಿದ್ಯಾಲಯದ ಕಾನ್ವೊಕೇಶನ್ ಹಾಲ್ ಹಾಗೂ ಪ್ರಖ್ಯಾತ ರಾಜಾಬಾಯಿ ಟವರ್ ನ್ನು, ಮತ್ತು ಹಾರ್ನಿಮನ್ ಸರ್ಕಲ್ ನ ಹತ್ತಿರದಲ್ಲಿರುವ 'ಸೇಂಟ್ ಥಾಮಸ್ ಕೆಥೆಡ್ರಲ್' ನ 'ಹೊರಾಂಗಣದ ನೀರಿನ ಚಿಲುಮೆ'ಯನ್ನೂ ನಿರ್ಮಿಸಿದ ಮಹಾವಾಸ್ತುಶಿಲ್ಪಿ. ಭಾರತದಲ್ಲಿ ಅವರು ಹೆಚ್ಚು ಕೆಲಸಮಾಡಲಾಗಲಿಲ್ಲ. ಬ್ರಿಟನ ದೇಶದ ಮಹಾನ್ ಮುತ್ಸದ್ದಿ ಶಿಲ್ಪಕಾರ. ಜಾರ್ಜ್, ಹೆಚ್ಚಾಗಿ ಕಟ್ಟಡಗಳ ಸಂರಚನೆ, ದುರಸ್ತಿ, ನಿರ್ಮಾಣದ ಕೆಲಸಗಳು, ಚರ್ಚ್ ಗಳು, ಸುಂದರವಾದ ಕ್ಯಾಥೆಡ್ರೆಲ್ ಗಳು, ಮತ್ತು ಕಾರ್ಯಸೌಧಗಳನ್ನು ನಿರ್ಮಿಸಿ, ವಿಶಿಷ್ಠ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅವರು ಸುಮಾರು ೮೦೦ ಕ್ಕಿಂತಾ ಮಿಗಿಲಾದ ಭವ್ಯ ಭವನಗಳನ್ನು ನಿರ್ಮಿಸಿದ್ದಾರೆ. ಇಲ್ಲವೇ ಅವುಗಳನ್ನು ತಮ್ಮ ಅನುಪಮ ಕಲಾಗರಿಮೆಯಿಂದ ಸುಧಾರಿಸಿದ್ದಾರೆ.
It has been suggested that [[:ಸರ್ ಗಿಲ್ ಬರ್ಟ್ ಸ್ಕಾಟ್|ಸರ್ ಗಿಲ್ ಬರ್ಟ್ ಸ್ಕಾಟ್]] be merged into this article. (Discuss) |
Quick Facts Sir George Gilbert Scott, ಜನನ ...
Close