ಸಮುರಾಯ್
From Wikipedia, the free encyclopedia
Samurai (侍?) ಸಮುರಾಯ್ ಎಂಬುದು ಕೈಗಾರಿಕಾ ಪೂರ್ವ ಜಪಾನ್ನ ಸೇನಾ ಪದವಿಗೆ ಸಂಬಂಧಿಸಿದಂತೆ ಇದ್ದ ಒಂದು ಪದವಾಗಿದೆ. ವಿಲಿಯಂ ಸ್ಕಾಟ್ ವಿಲ್ಸನ್ ಎಂಬ ಭಾಷಾಂತರಕಾರನ ಅಭಿಪ್ರಾಯದ ಪ್ರಕಾರ: "ಚೀನೀ ಭಾಷೆಯಲ್ಲಿ, 侍 ಎಂಬ ಅಕ್ಷರವು ಮೂಲತಃ ಒಂದು ಕ್ರಿಯಾಪದವಾಗಿದ್ದು, ಒಬ್ಬನ ಅನುಕೂಲಕ್ಕಾಗಿ ಕಾದಿರುವುದು ಅಥವಾ ಸಮಾಜದ ಉನ್ನತವರ್ಗದಲ್ಲಿನ ಗಣ್ಯವ್ಯಕ್ತಿಯೊಬ್ಬನಿಗೆ ಗೌರವಸೂಚಕ ಭೇಟಿ ನೀಡುವುದು ಅಥವಾ ಅವನ ಜೊತೆಗಿರುವುದು ಎಂಬ ಅರ್ಥವನ್ನು ಇದು ಕೊಡುತ್ತದೆ. ಜಪಾನೀ ಭಾಷೆಯಲ್ಲಿನ ಸಬುರಾವು ಎಂಬ ಮೂಲ ಪದವೂ ಇದೇ ಅರ್ಥವನ್ನು ಕೊಡುತ್ತದೆ. ಎರಡೂ ದೇಶಗಳಲ್ಲಿ ಈ ಪದಗಳಿಗೆ "ಶ್ರೀಮಂತ ವರ್ಗದವರ ಸನಿಹದಲ್ಲಿ ಜೊತೆಗಿದ್ದು ಸೇವೆ ಮಾಡುವವರು ಅಥವಾ ಅವರನ್ನು ನೋಡಿಕೊಳ್ಳುವವರು" ಎಂಬ ಅರ್ಥಬರುವಂತೆ ನಾಮವಾಚಕವನ್ನು ರೂಪಿಸಲಾಯಿತು. ಅಷ್ಟೇ ಅಲ್ಲ ಜಪಾನೀ ಭಾಷೆಯಲ್ಲಿನ ಉಚ್ಚಾರಣೆಯನ್ನು ಸಬುರಾಯ್ ಎಂದು ಬದಲಿಸಲಾಯಿತು." ವಿಲ್ಸನ್ ಪ್ರಕಾರ, "ಸಮುರಾಯ್" ಎಂಬ ಪದಕ್ಕೆ ಸಂಬಂಧಿಸಿದ ಒಂದು ಮುಂಚಿನ ಉಲ್ಲೇಖವು ಕೊಕಿನ್ ವಕಾಶೂ (905-914) ಎಂಬ ಕೃತಿಯಲ್ಲಿ ಕಂಡುಬರುತ್ತದೆ. ಇದು ಮೊತ್ತಮೊದಲ ಸಾಮ್ರಾಜ್ಯಶಾಹಿ ಕವನ ಸಂಗ್ರಹವಾಗಿದ್ದು, ಒಂಬತ್ತನೇ ಶತಮಾನದ ಪ್ರಥಮಾರ್ಧದಲ್ಲಿ ಸಂಪೂರ್ಣಗೊಳಿಸಲ್ಪಟ್ಟಿತು.
12ನೇ ಶತಮಾನದ ಅಂತ್ಯದ ವೇಳೆಗೆ, ಸಮುರಾಯ್ ಎಂಬುದು ಹೆಚ್ಚೂಕಮ್ಮಿ ಸಂಪೂರ್ಣವಾಗಿ ಬುಷಿ ಯೊಂದಿಗೆ (武士) ಸಮಾನಾರ್ಥಕವಾಗಿಹೋಗಿತ್ತು, ಮತ್ತು ಈ ಪದವು ಯೋಧರ ವರ್ಗದ ಮಧ್ಯದ ಮತ್ತು ಮೇಲಿನ ಅಂತಸ್ತುಗಳೊಂದಿಗೆ ನಿಕಟವಾದ ಸಂಬಂಧವನ್ನು ಬೆಳೆಸಿಕೊಂಡಿತ್ತು. ಬುಷಿಡೋ ಎಂಬ ಹೆಸರಿನ ಬರಹರೂಪದ ನಿಯಮಗಳ ಒಂದು ಸಂಗ್ರಹವನ್ನು ಸಮುರಾಯ್ ಅನುಸರಿಸಿತು. ಜಪಾನಿನ ಜನಸಂಖ್ಯೆಯ 10%ಗಿಂತ ಕಡಿಮೆ ಮಟ್ಟಕ್ಕೆ ಅವುಗಳ ಸಂಖ್ಯೆ ಮುಟ್ಟಿತು .[1] ಕತ್ತಿವರಸೆಯ ವಿಧಾನ (ದಿ ವೇ ಆಫ್ ದಿ ಸ್ವೋರ್ಡ್) ಎಂಬ ಅರ್ಥವನ್ನು ಕೊಡುವ ಎರಡೂ ಕೈನ ಕತ್ತಿವರಸೆ ಕದನ ಕಲೆಯೊಂದಿಗೆ ಸಮುರಾಯ್ ಬೋಧನೆಗಳನ್ನು ಇಂದಿನ ಆಧುನಿಕ ದಿನದ ಸಮಾಜದಲ್ಲಿ ಇನ್ನೂ ಕಾಣಬಹುದಾಗಿದೆ.